ನಾಳಿನ ದಿನ ಭವಿಷ್ಯ: ಹಣ ಗಳಿಸುವುದೇ ನಿಮ್ಮ ಚಿಂತನೆಗೆ ಕಾರಣವಾಗಿರುತ್ತೆ, ವಾಹನ ಚಾಲನೆ ವೇಳೆ ಎಚ್ಚರಿಕೆ ಇರಲಿ
- ಸೆಪ್ಟೆಂಬರ್ 21ರ ಶನಿವಾರ ಹಲವು ರಾಶಿಯವರಿಗೆ ಉತ್ತಮ ಫಲಗಳಿವೆ. ಹಣ ಗಳಿಸುವುದೇ ನಿಮ್ಮ ಚಿಂತನೆಗೆ ಕಾರಣವಾಗಿರುತ್ತೆ, ವಾಹನ ಚಾಲನೆ ವೇಳೆ ಎಚ್ಚರಿಕೆ ಇರಲಿ. ದ್ವಾದಶ ರಾಶಿಗಳ ನಾಳೆಯ ಭವಿಷ್ಯ ತಿಳಿಯಿರಿ.
- ಸೆಪ್ಟೆಂಬರ್ 21ರ ಶನಿವಾರ ಹಲವು ರಾಶಿಯವರಿಗೆ ಉತ್ತಮ ಫಲಗಳಿವೆ. ಹಣ ಗಳಿಸುವುದೇ ನಿಮ್ಮ ಚಿಂತನೆಗೆ ಕಾರಣವಾಗಿರುತ್ತೆ, ವಾಹನ ಚಾಲನೆ ವೇಳೆ ಎಚ್ಚರಿಕೆ ಇರಲಿ. ದ್ವಾದಶ ರಾಶಿಗಳ ನಾಳೆಯ ಭವಿಷ್ಯ ತಿಳಿಯಿರಿ.
(1 / 14)
ಸೆಪ್ಟೆಂಬರ್ 21 ರ ಶನಿವಾರದ ರಾಶಿ ಭವಿಷ್ಯವನ್ನು ತಿಳಿಯೋಣ. ಶನಿವಾರವನ್ನು ಶನಿ ದೇವರಿಗೆ ಅರ್ಪಿಸಲಾಗಿದೆ. ಈ ದಿನ ಶನಿ ದೇವರನ್ನು ಪೂಜಿಸಲಾಗುತ್ತದೆ. ಶನಿ ದೇವರನ್ನು ಪೂಜಿಸಿದರೆ ಜೀವನದ ಎಲ್ಲಾ ಅಡೆತಡೆಗಳಿಂದ ಮುಕ್ತಿ ಪಡೆಯಲಾಗುತ್ತೆ. ಸಂತೋಷ ಮತ್ತು ಸಮೃದ್ಧಿ ಇರುತ್ತೆ. ಮೇಷದಿಂದ ಮೀನದವರಿಗೆ ನಾಳಿನ ದಿನ ಭವಿಷ್ಯ ಇಲ್ಲಿದೆ.
(2 / 14)
ಮೇಷ ರಾಶಿ: ಆರ್ಥಿಕವಾಗಿ ನಿಮಗೆ ಉತ್ತಮವಾಗಿರುತ್ತದೆ. ಮೊದಲಿಗೆ ಹೋಲಿಸಿದರೆ ಆರೋಗ್ಯ ಸುಧಾರಿಸುತ್ತದೆ. ಕಚೇರಿಯಲ್ಲಿ ಹಿರಿಯರ ಸಹಾಯದಿಂದ ಪ್ರಮುಖ ಕಾರ್ಯಗಳನ್ನು ಪೂರ್ಣಗೊಳಿಸುತ್ತೀರಿ. ಕುಟುಂಬದೊಂದಿಗೆ ಪ್ರವಾಸಕ್ಕೆ ಹೋಗುವ ಅವಕಾಶವಿದೆ. ನಿಮ್ಮ ಪತ್ನಿಗೆ ಆಶ್ಚರ್ಯಕರ ಉಡುಗೊರೆ ನೀಡುತ್ತೀರಿ. ವ್ಯಾಪಾರಿಗಳಿಗೆ ಅನುಕೂಲಕರ ದಿನವಾಗಲಿದೆ.
(3 / 14)
ವೃಷಭ ರಾಶಿ: ಯಾವುದೇ ಹಳೆಯ ಹೂಡಿಕೆಯಿಂದ ಉತ್ತಮ ಆದಾಯವನ್ನು ಪಡೆಯುತ್ತೀರಿ. ಹಣಕಾಸಿನ ಸ್ಥಿತಿ ಚೆನ್ನಾಗಿರುತ್ತೆ, ದುಬಾರಿ ವಸ್ತುಗಳನ್ನು ಖರೀದಿಸುವ ಹವ್ಯಾಸಕ್ಕೆ ಬ್ರೇಕ್ ಹಾಕುತ್ತೀರಿ. ಕುಟುಂಬದೊಂದಿಗೆ ರಜಾ ದಿನಗಳನ್ನು ಕಳೆಯುತ್ತೀರಿ. ಕೆಲವರು ಭೂಮಿ, ಕಟ್ಟಡ ಮತ್ತು ವಾಹನವನ್ನು ಖರೀದಿಸಲು ಪ್ಲಾನ್ ಮಾಡುತ್ತಾರೆ. ಆರೋಗ್ಯ ಉತ್ತಮವಾಗಿರುತ್ತದೆ.
(4 / 14)
ಮಿಥುನ ರಾಶಿ: ಹಣವನ್ನು ಉಳಿಸುವುದು ನಿಮ್ಮ ಚಿಂತೆಗೆ ಮುಖ್ಯ ಕಾರಣವಾಗಿದೆ. ಧಾರ್ಮಿಕ ಚಟುವಟಿಕೆಗಳಲ್ಲಿ ಭಾಗವಹಿಸುತ್ತೀರಿ. ಸ್ನೇಹಿತರು ಅಥವಾ ಸೋದರಸಂಬಂಧಿಗಳೊಂದಿಗೆ ಉತ್ತಮ ಸಮಯವನ್ನು ಕಳೆಯುತ್ತೀರಿ. ಉದ್ಯಮಿಗಳು ಹೊಸ ಉದ್ಯಮ ಪ್ರಾರಂಭಿಸಲು ಅವಕಾಶವನ್ನು ಪಡೆಯಬಹುದು. ಹಣದ ವಿಚಾರದಲ್ಲಿ ಎಚ್ಚರಿಕೆಯಿಂದ ಮುಂದುವರಿಯಬೇಕು.
(5 / 14)
ಕಟಕ ರಾಶಿ: ಆರ್ಥಿಕ ಸ್ಥಿರೆತ ಇರುತ್ತೆ. ಜೀವನಶೈಲಿಯಲ್ಲಿ ಕೆಲವು ಪ್ರಮುಖ ಬದಲಾವಣೆಗಳನ್ನು ಕಾಣುತ್ತೀರಿ. ಲಘು ವ್ಯಾಯಾಮದೊಂದಿಗೆ ದಿನವನ್ನು ಪ್ರಾರಂಭಿಸಿ. ಯಾವುದೇ ರೀತಿಯ ರಿಸ್ಕ್ ತೆಗೆದುಕೊಳ್ಳಬೇಡಿ. ಕಚೇರಿ ರಾಜಕೀಯದಿಂದ ದೂರವಿರಿ. ಒತ್ತಡವನ್ನು ಕಡಿಮೆ ಮಾಡಲು ಪ್ರಯತ್ನಿಸುತ್ತೀರಿ.
(6 / 14)
ಸಿಂಹ ರಾಶಿ: ಹೊಸ ಮೂಲಗಳಿಂದ ಹಣ ಬರಲಿದೆ. ಅವಿವಾಹಿತರು ಇಷ್ಟಪಟ್ಟವರಿಗೆ ಪ್ರಪೋಸ್ ಮಾಡಲು ಉತ್ತಮ ದಿನ. ಆಸ್ತಿ ಸಂಬಂಧಿತ ವಿವಾದಗಳನ್ನು ಬಗೆಹರಿಸಿಕೊಳ್ಳುತ್ತೀರಿ. ಸಂಗಾತಿಗೆ ಸಂಪೂರ್ಣ ಬೆಂಬಲ ನೀಡುತ್ತೀರಿ. ಪೋಷಕರ ಆರೋಗ್ಯದ ಮೇಲೆ ನಿಗಾ ಇಡುವುದು ಮುಖ್ಯ. ವ್ಯವಹಾರದಲ್ಲಿ ಎಚ್ಚರಿಕೆ ಅಗತ್ಯ. ಖರ್ಚು-ವೆಚ್ಚಗಳನ್ನು ನಿಯಂತ್ರಿಸಿ.
(7 / 14)
ಕನ್ಯಾ ರಾಶಿ: ಉದ್ಯಮಿಗಳಿಗೆ ಉತ್ತಮ ದಿನ. ಆರೋಗ್ಯಕ್ಕೆ ಸಂಬಂಧಿಸಿದ ಯಾವುದೇ ಪ್ರಮುಖ ಸಮಸ್ಯೆಗಳು ಇರುವುದಿಲ್ಲ. ಹಣಕ್ಕೆ ಸಂಬಂಧಿಸಿದ ಯಾವುದೇ ಪ್ರಮುಖ ನಿರ್ಧಾರ ತೆಗೆದುಕೊಳ್ಳುವ ಮೊದಲು ಎಚ್ಚರಿಕೆಯಿಂದ ಯೋಚಿಸಿ, ಅಗತ್ಯವಿದ್ದರೆ ನೀವು ಹಣಕಾಸು ತಜ್ಞರ ಸಲಹೆಯನ್ನು ಸಹ ತೆಗೆದುಕೊಳ್ಳಬಹುದು. ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತೀರಿ. ಆಸ್ತಿ ಖರೀದಿಸಲು ಉತ್ತಮ ದಿನ.
(8 / 14)
ತುಲಾ ರಾಶಿ: ನಿಮ್ಮ ಆರ್ಥಿಕ ಪರಿಸ್ಥಿತಿ ಸ್ಥಿರವಾಗಿರಲಿದೆ. ವಾಹನ ಬಳಕೆಯಲ್ಲಿ ಜಾಗರೂಕರಾಗಿರಿ, ಇಲ್ಲದಿದ್ದರೆ ನೀವು ಗಾಯಗೊಳ್ಳಬಹುದು. ಕಚೇರಿಯಲ್ಲಿ ಹೊಸ ಜವಾಬ್ದಾರಿಗಳು ಇರುತ್ತವೆ. ಹೊಸ ಕೆಲಸವನ್ನು ಪ್ರಾರಂಭಿಸುವುದು ಒಳ್ಳೆಯದು. ಮಕ್ಕಳಿಂದ ಶುಭ ಸುದ್ದಿ ಸಿಗಲಿದೆ.
(9 / 14)
ವೃಶ್ಚಿಕ ರಾಶಿ: ಅನಿರೀಕ್ಷಿತ ಮೂಲಗಳಿಂದ ಹಣ ಪಡೆಯುತ್ತೀರಿ. ಕೆಲವರಿಗೆ ವಿದೇಶಕ್ಕೆ ಹೋಗುವ ಅವಕಾಶ ಸಿಗಬಹುದು. ಸಂಪತ್ತು ಹೆಚ್ಚಿಸಲು ಗಮನ ಹರಿಸುತ್ತೀರಿ. ಮುಂಬರುವ ದಿನಗಳಲ್ಲಿ ನಿಮಗೆ ಸಾಕಷ್ಟು ಹಣ ಬೇಕಾಗಬಹುದು. ವ್ಯಾಪಾರಿಗಳಿಗೆ ಮಿಶ್ರ ಫಲಗಳಿರುತ್ತವೆ. ಮಗುವಿನ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಬಹಳ ಮುಖ್ಯ.
(10 / 14)
ಧನು ರಾಶಿ: ಅನೇಕ ಆಕರ್ಷಕ ಹೂಡಿಕೆಯ ಅವಕಾಶಗಳನ್ನು ಪಡೆಯುತ್ತೀರಿ, ಎಚ್ಚರಿಕೆಯಿಂದ ನಿರ್ವಹಿಸಿ. ಉದ್ಯೋಗವನ್ನು ಬದಲಾಯಿಸಲು ಬಯಸುವವರು ಹೊಸ ಅವಕಾಶಗಳನ್ನು ಪಡೆಯುತ್ತಾರೆ. ಕುಟುಂಬದ ಬೆಂಬಲ ಸಿಗಲಿದೆ. ನಿಮ್ಮ ಸ್ನೇಹಿತರನ್ನು ಭೇಟಿಯಾಗುತ್ತೀರಿ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವವರಿಗೆ ಒಳ್ಳೆಯ ಸುದ್ದಿ ಸಿಗಲಿದೆ.
(11 / 14)
ಮಕರ ರಾಶಿ: ಆರ್ಥಿಕವಾಗಿ ಮತ್ತು ದೈಹಿಕವಾಗಿ ಉತ್ತಮ ದಿನವಾಗಲಿದೆ. ನಿಮ್ಮ ಸಂಗಾತಿಯ ಆಸೆಯನ್ನು ಪೂರೈಸುತ್ತೀರಿ. ದಾನ ಮಾಡುವ ಅವಕಾಶವನ್ನು ಪಡೆಯುತ್ತೀರಿ. ಕಚೇರಿಯಲ್ಲಿ ಕೆಲಸದ ಒತ್ತಡ ಹೆಚ್ಚಾಗಬಹುದು, ಆದರೆ ಅದನ್ನು ಬುದ್ಧಿವಂತಿಕೆಯಿಂದ ನಿರ್ವಹಿಸಿ. ಕೆಲಸದ ಒತ್ತಡವನ್ನು ಮನೆಗೆ ತರಬೇಡಿ. ಸಂಗಾತಿಗೆ ಸಂಪೂರ್ಣ ಬೆಂಬಲ ಸಿಗಲಿದೆ.
(12 / 14)
ಕುಂಭ ರಾಶಿ: ಹಿರಿಯರ ಆಶೀರ್ವಾದವನ್ನು ಪಡೆಯುತ್ತೀರಿ. ಹಳೆಯ ಸ್ನೇಹಿತನನ್ನು ಭೇಟಿಯಾಗಲು ಸಾಧ್ಯವಾಗುತ್ತೆ. ಆರೋಗ್ಯ ಮತ್ತು ಸಂಗಾತಿಯ ಆರೋಗ್ಯದ ಮೇಲೆ ನಿಗಾ ಇಡಿ. ಆರ್ಥಿಕವಾಗಿ ಜಾಗರೂಕರಾಗಿರಿ. ನಿಮ್ಮ ಖರ್ಚುಗಳನ್ನು ಬುದ್ಧಿವಂತಿಕೆಯಿಂದ ನಿರ್ವಹಿಸಿ. ಪ್ರಯಾಣದ ಸಮಯದಲ್ಲಿ ವೈದ್ಯಕೀಯ ಕಿಟ್ ಜೊತೆಗಿರಲಿ. ಚರ್ಚೆಗಳಿಂದ ದೂರವಿರಿ. ಕಚೇರಿಯಲ್ಲಿ ನಿಮ್ಮ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಿ.
(13 / 14)
ಮೀನ ರಾಶಿ: ಹಣಕ್ಕೆ ಸಂಬಂಧಿಸಿದ ಯಾವುದೇ ಪ್ರಮುಖ ಸಮಸ್ಯೆಯನ್ನು ಎದುರಿಸುವುದಿಲ್ಲ. ಮಾನಸಿಕ ಒತ್ತಡದಿಂದ ಪರಿಹಾರ ಪಡೆಯಬಹುದು. ಕೆಲವರಿಗೆ ಮದುವೆ ಫಿಕ್ಸ್ ಆಗುತ್ತೆ. ಕುಟುಂಬದೊಂದಿಗೆ ಉತ್ತಮ ಸಮಯವನ್ನು ಕಳೆಯುತ್ತೀರಿ. ವ್ಯಾಪಾರಿಗಳು ಲಾಭ ಗಳಿಸುವ ಸಾಧ್ಯತೆಯಿದೆ. ಪ್ರಯಾಣದ ಅವಕಾಶಗಳನ್ನು ಕಲ್ಪಿಸಲಾಗುತ್ತಿದೆ. ಮಕ್ಕಳ ಆರೋಗ್ಯದ ಮೇಲೆ ನಿಗಾ ಇಡಿ.
ಇತರ ಗ್ಯಾಲರಿಗಳು