Tomorrow Horoscope: ಆರ್ಥಿಕ ಲಾಭದಿಂದ ಹಳೆಯ ಸಾಲ ತೀರಿಸುತ್ತೀರಿ, ಆರೋಗ್ಯದ ಕಡೆ ಗಮನ ಹರಿಸಬೇಕು; ನಾಳಿನ ದಿನ ಭವಿಷ್ಯ
September 2nd Horoscope: ಸೆಪ್ಟೆಂಬರ್ 2ರ ಸೋಮವಾರ ಹಲವು ರಾಶಿಯವರಿಗೆ ಭವಿಷ್ಯ ಉತ್ತಮವಾಗಿದೆ. ಆರ್ಥಿಕ ಲಾಭವಿದ್ದು, ಹಳೆಯ ಸಾಲವನ್ನು ತೀರಿಸುತ್ತೀರಿ. ಇದು ಖುಷಿಯನ್ನು ನೀಡುತ್ತೆ. ದ್ವಾದಶ ರಾಶಿಗಳ ನಾಳೆಯ ಭವಿಷ್ಯ ತಿಳಿಯಿರಿ.
(1 / 14)
ಪ್ರತಿಯೊಂದು ರಾಶಿಗೂ ಅದರದ್ದೇ ಆದ ಅಧಿಪತಿ ಇದ್ದು, ಪಾಪ-ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ಕರ್ಮ ಫಲಗಳನ್ನು ನೀಡುತ್ತಾರೆ. ನಾಳೆ ಯಾವ ರಾಶಿಯವರಿಗೆ ಶುಭ? ಯಾರಿಗೆ ಅಶುಭ? ಎಂಬುದನ್ನು ನೋಡೋಣ. ನಾಳೆಯ (ಸೆಪ್ಟೆಂಬರ್ 2, ಸೋಮವಾರ) ದಿನ ಭವಿಷ್ಯ ಹೀಗಿದೆ.
(2 / 14)
ಕಠಿಣ ಪರಿಶ್ರಮಕ್ಕೆ ತಕ್ಕ ಆರ್ಥಿಕ ಲಾಭ ಇರುತ್ತದೆ. ಹಠಾತ್ ಸಣ್ಣ ಪ್ರವಾಸ ಹೋಗುವ ಸಾಧ್ಯತೆ ಇದ್ದು, ಸ್ವಲ್ಪ ಆಯಾಸಕರವಾಗಿರುತ್ತೆ. ಸಮಾಜ ಸೇವೆ ಮಾಡುವುದರಿಂದ ಒಂದಿಷ್ಟು ಭಾವನಾತ್ಮಕ ತೃಪ್ತಿ ಸಿಗಲಿದೆ. ಸಮುದಾಯದಲ್ಲಿ ಮನ್ನಣೆ ಮತ್ತು ಗೌರವ ಪ್ರಶಸ್ತಿಗಳನ್ನು ಸ್ವೀಕರಿಸುತ್ತೀರಿ. ಆರೋಗ್ಯದ ಬಗ್ಗೆ ಕಾಳಜಿ ಹೆಚ್ಚಾಗಲಿದೆ.
(3 / 14)
ವೃಷಭ ರಾಶಿ: ಮನಸ್ಸಿನ ಆಸೆಗಳು ಸ್ವಲ್ಪ ಮಟ್ಟಿಗೆ ಈಡೇರುತ್ತವೆ. ಉತ್ಸುಕರಾಗಿರುತ್ತೀರಿ. ಹೊಸ ನಿರ್ಧಾರಗಳನ್ನು ಕೈಗೊಳ್ಳುತ್ತೀರಿ. ಟೀಕೆ, ಸಂಸಾರದಲ್ಲಿ ಸಣ್ಣಪುಟ್ಟ ಖರ್ಚು-ವೆಚ್ಚಗಳಿಗೆ ಅವಕಾಶ ಕೊಡಬೇಡಿ, ಭಾವುಕರಾಗಬೇಡಿ, ಯೋಚಿಸಿ ಮುನ್ನಡೆಯುವುದು ಒಳಿತು. ಸ್ಥಿರ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೀರಿ.
(4 / 14)
ಮಿಥುನ ರಾಶಿ: ನಿಮ್ಮಲ್ಲಿ ಪರಾಕ್ರಮ ಹೆಚ್ಚುತ್ತದೆ. ವೃತ್ತಿಪರವಾಗಿ ಹೊಸ ವಿಷಯಗಳನ್ನು ಕಲಿಯಲು ಪ್ರಯತ್ನಿಸಲಾಗುತ್ತೀರಿ. ತಾಯಿಯ ಬೆಂಬಲ ಇರುತ್ತೆ. ವಿದ್ಯಾರ್ಥಿಗಳು ಶೈಕ್ಷಣಿಕ ವಿಷಯಗಳಲ್ಲಿ ಸಂಪೂರ್ಣ ಗಮನವನ್ನು ತೋರಿಸಬೇಕು. ಆರ್ಥಿಕವಾಗಿ ಸ್ವಲ್ಪ ಮಟ್ಟಿಗೆ ಉತ್ತಮವಾಗಿರುತ್ತೀರಿ.
(5 / 14)
ಕಟಕ ರಾಶಿ: ಪ್ರಯಾಣ, ಶ್ರಮ ಮತ್ತು ವೆಚ್ಚಗಳು ಹೆಚ್ಚಾಗುತ್ತವೆ. ಹೆಚ್ಚಿದ ಖರ್ಚಿನ ನಡುವೆ ಆದಾಯ ಹೆಚ್ಚಾಗುತ್ತದೆ. ಸ್ಥಿರಾಸ್ತಿ ವಿಚಾರದಲ್ಲಿ ಸಂಬಂಧಿಗಳ ಸಲಹೆ ಪಡೆಯುತ್ತೀರಿ. ಕುಟುಂಬದ ಹಿರಿಯರ ಆಶೀರ್ವಾದ ಇರುತ್ತದೆ. ಮನೆಯಲ್ಲಿ ಶಾಂತತೆಯ ಕೊರತೆಯಿದ್ದರೂ, ಪ್ರಮುಖ ವಿಷಯಗಳನ್ನು ಬುದ್ಧಿವಂತಿಕೆಯಿಂದ ಸರಿಪಡಿಸಬಹುದು.
(6 / 14)
ಸಿಂಹ ರಾಶಿ: ವರ್ಗಾವಣೆಯ ಸಾಧ್ಯತೆ ಇರುತ್ತೆ. ಹೊಸ ಉದ್ಯಮಗಳಿಗೆ ಅವಕಾಶವಿದೆ. ನಿಮ್ಮ ಮಾತುಗಳಿಂದ ಹಠಾತ್ ಜಗಳಗಳು ಉಂಟಾಗದಂತೆ ಎಚ್ಚರವಹಿಸಿ. ಮಕ್ಕಳು ಶಿಕ್ಷಣ ಮತ್ತು ವೃತ್ತಿಯಲ್ಲಿ ದೂರದ ಸ್ಥಳಗಳಲ್ಲಿ ಹೊಸ ಅವಕಾಶಗಳನ್ನು ಪಡೆಯುತ್ತಾರೆ. ವೃತ್ತಿರಂಗದಲ್ಲಿ ಹೊಸ ಜವಾಬ್ದಾರಿಗಳು ಬಂದರೂ ಆಯಾಸ ಹೆಚ್ಚುತ್ತದೆ, ಗೌರವ, ಕೀರ್ತಿ ಹೆಚ್ಚುತ್ತದೆ.
(7 / 14)
ಕನ್ಯಾ ರಾಶಿ: ಹಣವನ್ನು ಉಳಿಸಲು ಹೊಸ ಐಡಿಯಾಗಳನ್ನು ಮಾಡುತ್ತೀರಿ. ಅನಾವಶ್ಯಕ ಖರ್ಚುಗಳಿಗೆ ಅವಕಾಶವಿಲ್ಲದೇ ಮುಂದುವರಿಯುತ್ತೀರಿ. ವೈಯಕ್ತಿಕ ವಿಷಯಗಳಲ್ಲಿ ಎಚ್ಚರಿಕೆಯಿಂದ ಯೋಚಿಸಿ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಉತ್ತಮ. ಆಯಾಸ ಹೆಚ್ಚಾಗುತ್ತದೆ. ವಿದೇಶದಲ್ಲಿ ಉನ್ನತ ಶಿಕ್ಷಣದಲ್ಲಿ ಪಡೆಯುವ ಆಸಕ್ತಿ ಹೆಚ್ಚಾಗುತ್ತದೆ.
(8 / 14)
ತುಲಾ ರಾಶಿ: ಸರ್ಕಾರಕ್ಕೆ ಸಂಬಂಧಿಸಿದ ವಿಷಯಗಳು ನಿಮಗೆ ಅನುಕೂಲಕರವಾಗಿವೆ. ವಿದ್ಯಾರ್ಥಿಗಳಿಗೆ ಎಲೆಕ್ಟ್ರಾನಿಕ್ ಉಪಕರಣಗಳು, ಲೇಖನ ಸಾಮಗ್ರಿಗಳನ್ನು ಖರೀದಿಸಲು ವೆಚ್ಚಗಳು ಹೆಚ್ಚಾಗುತ್ತವೆ. ಸಾಲದ ಸ್ವಲ್ಪ ಮೊತ್ತವನ್ನು ಮರು ಪಾವತಿ ಮಾಡುತ್ತೀರಿ.
(9 / 14)
ವೃಶ್ಚಿಕ ರಾಶಿ: ಆತ್ಮಸ್ಥೈರ್ಯ ಹೆಚ್ಚಾಗುತ್ತದೆ. ಶತ್ರುಗಳ ವಿರುದ್ಧ ಗೆಲುವು ನಿಮ್ಮದಾಗುತ್ತೆ. ನಾಯಕತ್ವದ ಗುಣಗಳು ಅಧಿಕವಾಗಿರುತ್ತವೆ. ವ್ಯವಾಹರದಲ್ಲಿ ಎಚ್ಚರಿಕೆ ವಹಿಸಬೇಕು. ಪ್ರಮುಖ ಕಾರ್ಯಗಳು ಮುಂದೂಡಲ್ಪಡುತ್ತವೆ. ಮನೆಯ ನಿರ್ಮಾಣಕ್ಕೆ ತಾತ್ಕಾಲಿಕ ತೊಂದರೆಗಳು ಇರಲಿವೆ,
(10 / 14)
ಧನು ರಾಶಿ: ವೃತ್ತಿಪರ ಜವಾಬ್ದಾರಿಗಳು ಹೆಚ್ಚಾಗುತ್ತವೆ. ಪೋಷಕರ ಸಮಸ್ಯೆಗಳ ಕುರಿತು ನಿಮ್ಮ ಪ್ರಯತ್ನಗಳು ಮತ್ತು ಸಲಹೆಗಳಲ್ಲಿ ಯಶಸ್ಸು ಕಾಣುತ್ತೀರಿ. ವೃತ್ತಿಪರ ಗೌರವ ಮತ್ತು ಖ್ಯಾತಿ ಹೆಚ್ಚಾಗುತ್ತದೆ. ಔತಣಕೂಟಗಳು ಮತ್ತು ಸಭೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತೀರಿ. ಸಂಬಂಧಿಕರಿಂದ ಸಲಹೆ ಪಡೆಯುತ್ತೀರಿ. ನೆನಪಿನ ಶಕ್ತಿ ಚೆನ್ನಾಗಿರುತ್ತೆ.
(11 / 14)
ಮಕರ ರಾಶಿ: ವೃತ್ತಿಪರವಾಗಿ ಹೊಸ ಅವಕಾಶಗಳನ್ನು ಪಡೆಯುತ್ತೀರಿ. ಅಧಿಕಾರಿಗಳು ಮತ್ತು ರಾಜಕಾರಣಿಗಳೊಂದಿಗೆ ಭಿನ್ನಾಭಿಪ್ರಾಯಗಳನ್ನು ತಪ್ಪಿಸಬೇಕು. ಪ್ರಮುಖ ವಿಷಯಗಳಲ್ಲಿ ವಿಳಂಬಗಳು ಅಡಚಣೆಗಳಾಗಿವೆ. ಸೋಮಾರಿತನ ಬಿಡಿ. ಇದರ ಹೊರತಾಗಿ ಯೋಗ ಪ್ರಣಾಮ್ಯಮ ಮಾಡುವುದು ಉತ್ತಮ.
(12 / 14)
ಕುಂಭ ರಾಶಿ: ಕುಟುಂಬದಲ್ಲಿ ಖರ್ಚುಗಳು ಅಧಿಕವಾಗಿರುತ್ತವೆ. ಮಾತಿನಲ್ಲಿ ತಪ್ಪು ತಿಳುವಳಿಕೆ ಬರದಂತೆ ಎಚ್ಚರಿಕೆ ವಹಿಸಬೇಕು. ಹಣಕಾಸಿನ ವಿಷಯಗಳಲ್ಲಿ, ಪ್ರಮುಖ ಕೆಲಸಗಳಲ್ಲಿ ಅಡೆತಡೆಗಳನ್ನು ಜಯಿಸಲು ಪ್ರಯತ್ನಿಸುತ್ತೀರಿ. ಭೂಮಿಗೆ ಸಂಬಂಧಿಸಿದ ಹೂಡಿಕೆಗಳು, ಸ್ಪರ್ಧೆಗಳು ಮತ್ತು ಆದಾಯವನ್ನು ಎಚ್ಚರಿಕೆಯಿಂದ ಪರಿಗಣಿಸಬೇಕು.
(13 / 14)
ಮೀನ ರಾಶಿ: ಸಮಯೋಚಿತ ಮತ್ತು ಮೃದುವಾದ ಮಾತು, ಬಯಸಿದ ಕೆಲಸವನ್ನು ಸಾಧಿಸಲು ಶ್ರಮಿಸುತ್ತೀರಿ. ಕೌಟುಂಬಿಕ ಖರ್ಚು ಭರಿಸಲು ತುಂಬಾ ಕಷ್ಟ ಪಡುತ್ತೀರಿ. ಒಂದು ಪ್ರಮುಖ ಕೆಲಸದಲ್ಲಿ ತೊಡಗಿರುವುದರಿಂದ ಆಹಾರ ಮತ್ತು ವಿಶ್ರಾಂತಿಯನ್ನು ನಿರ್ಲಕ್ಷಿಸಬಾರದು.
ಇತರ ಗ್ಯಾಲರಿಗಳು