ಮೃಗಶಿರಾ ನಕ್ಷತ್ರದಲ್ಲಿ ಗುರು ಸಂಕ್ರಮಣ; 3 ರಾಶಿಯವರ ಜೀವನದಲ್ಲಿ ಹಣಕಾಸಿನ ಸಮಸ್ಯೆ, ಸಂಬಂಧಗಳಲ್ಲಿ ಮನಸ್ತಾಪ
Guru Nakshatra Transit 2024 : ಗುರು ಸಂಕ್ರಮಣ: ಕೆಲವೇ ದಿನಗಳಲ್ಲಿ ಗುರುವು ನಕ್ಷತ್ರ ಬದಲಾವಣೆ ಮಾಡಲಿದ್ದಾನೆ. ಈ ಬದಲಾವಣೆಯು ಕೆಲವು ರಾಶಿಚಕ್ರದವರಿಗೆ ಖುಷಿ, ಕೆಲವರಿಗೆ ಸಮಸ್ಯೆ ತರುತ್ತದೆ. ಗುರುವಿನ ಸಂಚಾರದಿಂದ ಯಾವ ರಾಶಿಚಕ್ರದ ಚಿಹ್ನೆಗಳಿಗೆ ಯಾವ ರೀತಿ ಪರಿಣಾಮ ಬೀರುತ್ತದೆ ನೋಡೋಣ.
(1 / 6)
ಆಗಸ್ಟ್ 20 ರಂದು ಮೃಗಶಿರಾ ನಕ್ಷತ್ರದಲ್ಲಿ ಗುರು ನಕ್ಷತ್ರ ಬದಲಾವಣೆಯಾಗಿಲಿದೆ. ಇದರಿಂದ ದ್ವಾದಶ ರಾಶಿಗಳ ಮೇಲೆ ಮಿಶ್ರ ಪರಿಣಾಮ ಉಂಟಾಗಲಿದೆ.
(2 / 6)
ನವೆಂಬರ್ 28ರವರೆಗೂ ಗುರುವು ಇದೇ ನಕ್ಷತ್ರದಲ್ಲಿರುತ್ತಾನೆ. ಈ ವರ್ಷ ಆಗಸ್ಟ್ 19 ರಂದು ರಕ್ಷಾ ಬಂಧನ ಆಚರಿಸಲಾಗುತ್ತದೆ. ರಕ್ಷಾ ಬಂಧನದ ಮರುದಿನ ಗುರುವು ನಕ್ಷತ್ರ ಬದಲಾವಣೆ ಮಾಡಲಿದ್ಧಾನೆ.
(3 / 6)
ಮೃಗಶಿರಾ ನಕ್ಷತ್ರದಲ್ಲಿ ಗುರುವಿನ ಸಂಚಾರ ವೃಷಭ ರಾಶಿಯವರಿಗೆ ಸಮಸ್ಯೆಗಳನ್ನು ಹೆಚ್ಚಿಸುತ್ತದೆ. ಈ ಅವಧಿಯಲ್ಲಿ ನೀವು ಆರ್ಥಿಕ ಸಮಸ್ಯೆಗಳನ್ನು ಎದುರಿಸಬಹುದು. ಕಚೇರಿಯಲ್ಲಿ ಹಿರಿಯರು ನಿಮ್ಮ ಕೆಲಸದಿಂದ ಅತೃಪ್ತರಾಗಬಹುದು. ಈ ಅವಧಿಯಲ್ಲಿ ನೀವು ಮಾನಸಿಕ ಒತ್ತಡವನ್ನು ಅನುಭವಿಸಬಹುದು. ಕಠಿಣ ಪರಿಶ್ರಮವಿದ್ದರೂ ನಿಮಗೆ ಯಶಸ್ಸು ದೊರೆಯುವುದಿಲ್ಲ.
(4 / 6)
ತುಲಾ ರಾಶಿಯವರಿಗೆ ಗುರುವಿನ ನಕ್ಷತ್ರ ಬದಲಾವಣೆಯು ಒತ್ತಡವನ್ನು ಹೆಚ್ಚಿಸುತ್ತದೆ. ಗುರು ಸಂಕ್ರಮಣದ ಸಮಯದಲ್ಲಿ, ಹಣಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ನೀವು ವಿಶೇಷವಾಗಿ ಜಾಗರೂಕರಾಗಿರಬೇಕು. ಕೌಟುಂಬಿಕ ಜೀವನದಲ್ಲಿ ಏರಿಳಿತಗಳಿರಬಹುದು. ಮಾನಸಿಕ ಒತ್ತಡ ಹೆಚ್ಚಾಗಬಹುದು. ನೀವು ಆರ್ಥಿಕವಾಗಿ ದುರ್ಬಲರಾಗಬಹುದು. ವಿಪರೀತ ಖರ್ಚುಗಳಿಂದ ಮನಸ್ಸು ವಿಚಲಿತವಾಗುತ್ತದೆ. ಅಪರಿಚಿತರ ಭಯ ನಿಮ್ಮನ್ನು ಕಾಡುತ್ತದೆ. ನಿಮ್ಮ ಕುಟುಂಬದವರು ಕೂಡಾ ನಿಮಗೆ ಬೆಂಬಲ ನೀಡುವುದಿಲ್ಲ.
(5 / 6)
ಕುಂಭ ರಾಶಿಯವರು ಗುರು ನಕ್ಷತ್ರದ ಸಂಚಾರದಿಂದ ಆರ್ಥಿಕವಾಗಿ ತೊಂದರೆ ಅನುಭವಿಸಬಹುದು. ಈ ಅವಧಿಯಲ್ಲಿ ಯಾರಿಗೂ ಸಾಲ ನೀಡಬೇಡಿ ಅಥವಾ ಹೂಡಿಕೆ ಮಾಡಬೇಡಿ. ಸದ್ಯಕ್ಕೆ ಪ್ರಮುಖ ನಿರ್ಧಾರಗಳನ್ನು ಮುಂದೂಡಿ. ಉದ್ಯೋಗದಲ್ಲಿ ಕೆಲಸ ಮಾಡುವ ಕುಂಭ ರಾಶಿಯವರಿಗೆ ಇದು ಉತ್ತಮ ಸಮಯವಲ್ಲ. ಆರೋಗ್ಯದ ಬಗ್ಗೆ ಜಾಗರೂಕರಾಗಿರಿ. ಸಂಬಂಧಗಳಲ್ಲಿ ಮನಸ್ತಾಪ ಉಂಟಾಗಬಹುದು.
ಇತರ ಗ್ಯಾಲರಿಗಳು