Venus Transit 2025: ಸಂತೋಷ, ಸಮೃದ್ಧಿ ನೀಡುವ ಶುಕ್ರನು ಮೀನ ರಾಶಿಗೆ ಪ್ರವೇಶ; ಈ ರಾಶಿಯವರಿಗೆ ತೆರೆಯಲಿದೆ ಅದೃಷ್ಟದ ಬಾಗಿಲು
- ಶುಕ್ರನು 2025ರ ಜನವರಿ 28 ರಂದು ಬೆಳಗ್ಗೆ ಗುರುವಿನ ರಾಶಿಚಕ್ರ ಮೀನದಲ್ಲಿ ಸಾಗಲಿದ್ದಾನೆ. ಶುಕ್ರನ ಈ ಸಂಕ್ರಮಣದಿಂದ ಕೆಲವು ರಾಶಿಚಕ್ರ ಚಿಹ್ನೆಗಳು ಉತ್ತಮ ಲಾಭವನ್ನು ಪಡೆಯುತ್ತವೆ. ಯಾವೆಲ್ಲಾ ರಾಶಿಯವರಿಗೆ ಹೆಚ್ಚು ಪ್ರಯೋಜನಗಳಿವೆ ಎಂಬುದನ್ನು ತಿಳಿಯೋಣ.
- ಶುಕ್ರನು 2025ರ ಜನವರಿ 28 ರಂದು ಬೆಳಗ್ಗೆ ಗುರುವಿನ ರಾಶಿಚಕ್ರ ಮೀನದಲ್ಲಿ ಸಾಗಲಿದ್ದಾನೆ. ಶುಕ್ರನ ಈ ಸಂಕ್ರಮಣದಿಂದ ಕೆಲವು ರಾಶಿಚಕ್ರ ಚಿಹ್ನೆಗಳು ಉತ್ತಮ ಲಾಭವನ್ನು ಪಡೆಯುತ್ತವೆ. ಯಾವೆಲ್ಲಾ ರಾಶಿಯವರಿಗೆ ಹೆಚ್ಚು ಪ್ರಯೋಜನಗಳಿವೆ ಎಂಬುದನ್ನು ತಿಳಿಯೋಣ.
(1 / 6)
ಜ್ಯೋತಿಷ್ಯದಲ್ಲಿ, ಶುಕ್ರ ಗ್ರಹವನ್ನು ಸಂತೋಷ, ವೈಭವ, ಸೌಂದರ್ಯ ಹಾಗೂ ಐಷಾರಾಮಿ ಸಂಕೇತವೆಂದು ಪರಿಗಣಿಸಲಾಗಿದೆ. ಜಾತಕದಲ್ಲಿ ಶುಕ್ರನಿಂದ ಬಲಶಾಲಿಯಾಗಿರುವ ಜನರ ಜೀವನದಲ್ಲಿ ಎಲ್ಲಾ ರೀತಿಯ ಸೌಕರ್ಯಗಳು ಮತ್ತು ಶ್ರೀಮಂತಿಕೆಯನ್ನು ಆನಂದಿಸುತ್ತಾರೆ. ಶುಕ್ರನ ಸಂಕ್ರಮಣವು ಎಲ್ಲಾ ರಾಶಿಯವರ ಮೇಲೆ ಪ್ರಭಾವ ಬೀರುತ್ತದೆ.
(2 / 6)
ಶುಕ್ರನು 2025ರ ಜನವರಿ 28 ರಂದು ಬೆಳಗ್ಗೆ ಗುರುವಿನ ರಾಶಿಚಕ್ರ ಆಗಿರುವ ಮೀನ ರಾಶಿ ಪ್ರವೇಶಿಸಲಿದ್ದಾನೆ. ಶುಕ್ರನ ಸಂಚಾರದಿಂದಾಗಿ ಕೆಲವು ರಾಶಿಯವರು ಉತ್ತಮ ಲಾಭಗಳನ್ನು ಪಡೆಯುತ್ತಾರೆ. ಯಾವೆಲ್ಲಾ ರಾಶಿಯವರಿಗೆ ಹೆಚ್ಚಿನ ಪ್ರಯೋಜನಗಳಿವೆ ಎಂಬುದನ್ನು ತಿಳಿಯೋಣ.
(3 / 6)
ವೃಷಭ ರಾಶಿ: 2025ರ ಜನವರಿ 28 ರಂದು ಶುಕ್ರ ಸಂಕ್ರಮಣವು ವೃಷಭ ರಾಶಿಯವರಿಗೆ ಉತ್ತಮ ಲಾಭವನ್ನು ನೀಡುತ್ತದೆ. ಶುಕ್ರನು ಮೀನ ರಾಶಿಯಲ್ಲಿ ಸಾಗಿದಾಗ, ಅದು ನಿಮ್ಮ ರಾಶಿಚಕ್ರದ 11ನೇ ಮನೆಗೆ ಪ್ರವೇಶಿಸುತ್ತದೆ. ಜಾತಕದ ಹನ್ನೊಂದನೇ ಮನೆಯನ್ನು ಆದಾಯ ಹೆಚ್ಚಿಸುವ ಮತ್ತು ಆಸೆ ಈಡೇರಿಸಲಿದೆ ಎಂದು ಪರಿಗಣಿಸಲಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ನಿಮ್ಮ ಆದಾಯವು ಹೆಚ್ಚಾಗುತ್ತದೆ. ಎಲ್ಲಾ ರೀತಿಯ ಇಷ್ಟಾರ್ಥಗಳು ನೆರವೇರುತ್ತವೆ. ಉದ್ಯೋಗಸ್ಥರು ತಮ್ಮ ಕೆಲಸದ ಸ್ಥಳದಲ್ಲಿ ಉತ್ತಮ ಪ್ರಯೋಜನಗಳನ್ನು ಪಡೆಯುತ್ತಾರೆ.
(HT File Photo)(4 / 6)
ಮಿಥುನ ರಾಶಿ: ಶುಕ್ರನ ರಾಶಿ ಬದಲಾವಣೆಯು ಮಿಥುನ ರಾಶಿಯವರಿಗೆ ಫಲಕಾರಿಯಾಗಲಿದೆ. ನಿಮ್ಮ ರಾಶಿಚಕ್ರದಲ್ಲಿ ಶುಕ್ರನು ಹತ್ತನೇ ಮನೆಯಲ್ಲಿ ಸಾಗುತ್ತಾನೆ. ಅಂತಹ ಪರಿಸ್ಥಿತಿಯಲ್ಲಿ ನೀವು ವೃತ್ತಿ ಸಂಬಂಧಿತ ಕೆಲಸದಲ್ಲಿ ಯಶಸ್ಸನ್ನು ಪಡೆಯುತ್ತೀರಿ. ಉದ್ಯೋಗಸ್ಥರು ತಮ್ಮ ಕೆಲಸದಲ್ಲಿ ಮೇಲಾಧಿಕಾರಿಗಳಿಂದ ಸಂಪೂರ್ಣ ಬೆಂಬಲವನ್ನು ಪಡೆಯುತ್ತಾರೆ. ಉದ್ಯೋಗದ ನಿರೀಕ್ಷೆಯಲ್ಲಿರುವವರು ಉತ್ತಮ ಅವಕಾಶಗಳನ್ನು ಪಡೆಯುತ್ತಾರೆ. ಗೌರವ ಮತ್ತು ಸ್ಥಾನಮಾನದಲ್ಲಿ ಹೆಚ್ಚಳವಾಗಲಿದೆ. ವೈವಾಹಿಕ ಜೀವನದಲ್ಲಿ ಒಡನಾಟ, ಸಂತೋಷವನ್ನು ಕಾಣುತ್ತೀರಿ. ಅದೃಷ್ಟ ಇರುತ್ತೆ.
(5 / 6)
ಕಟಕ ರಾಶಿ: ಜನವರಿ 28 ರಂದು ಶುಕ್ರನ ಸಂಕ್ರಮಣವು ಕಟಕ ರಾಶಿಯವರಿಗೆ ಅದೃಷ್ಟವನ್ನು ತರಲಿದೆ. ಈ ರಾಶಿಯವರು ಸೌಕರ್ಯಗಳಲ್ಲಿ ಹೆಚ್ಚಳ ಮತ್ತು ಅಪೂರ್ಣ ಕೆಲಸಗಳನ್ನು ಪೂರ್ಣಗೊಳಿಸುತ್ತಾರೆ. ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ಹೆಚ್ಚಲಿದೆ. ವಾಹನ ಖರೀದಿಗೆ ಅವಕಾಶವಿದೆ. ಜಾಕತಕದ 9ನೇ ಮನೆಯಲ್ಲಿ ಶುಕ್ರನ ಸಂಚಾರದಿಂದಾಗಿ ಹೆಚ್ಚಿನ ಅದೃಷ್ಟವನ್ನು ಪಡೆಯುತ್ತಾರೆ.
ಇತರ ಗ್ಯಾಲರಿಗಳು