ಪೂರ್ವಭಾದ್ರಪದ ನಕ್ಷತ್ರದಲ್ಲಿ ಶುಕ್ರ ಸಂಕ್ರಮಣ; ಫೆಬ್ರವರಿ 1 ರವರಿಗೆ 4 ರಾಶಿಯವರಿಗೆ ಅದೃಷ್ಟವೋ ಅದೃಷ್ಟ, ಕಷ್ಟದ ದಿನಗಳು ದೂರವಾಗುತ್ತವೆ
- Venus Transit 2025: ಶುಕ್ರನ ಪ್ರಸ್ತುತ ಸ್ಥಾನದಿಂದಾಗಿ, ನಾಲ್ಕು ರಾಶಿಚಕ್ರ ಚಿಹ್ನೆಗಳು ಇನ್ನ 9 ದಿನಗಳಲ್ಲಿ ತಮ್ಮ ಅದೃಷ್ಟವನ್ನು ಪಡೆಯಲಿದ್ದಾರೆ. ಈ ರಾಶಿಯವರು ಸಂಪತ್ತು ಮತ್ತು ಸಂತೋಷ ಸೇರಿದಂತೆ ಹೆಚ್ಚಿನ ಪ್ರಯೋಜನಗಳನ್ನು ಪಡೆಯುತ್ತಾರೆ. ಫೆಬ್ರವರಿ 1 ರಿಂದ ಯಾವೆಲ್ಲಾ ರಾಶಿಯವರಿಗೆ ಹೆಚ್ಚು ಲಾಭಗಳಿವೆ ಎಂಬುದನ್ನು ನೋಡೋಣ.
- Venus Transit 2025: ಶುಕ್ರನ ಪ್ರಸ್ತುತ ಸ್ಥಾನದಿಂದಾಗಿ, ನಾಲ್ಕು ರಾಶಿಚಕ್ರ ಚಿಹ್ನೆಗಳು ಇನ್ನ 9 ದಿನಗಳಲ್ಲಿ ತಮ್ಮ ಅದೃಷ್ಟವನ್ನು ಪಡೆಯಲಿದ್ದಾರೆ. ಈ ರಾಶಿಯವರು ಸಂಪತ್ತು ಮತ್ತು ಸಂತೋಷ ಸೇರಿದಂತೆ ಹೆಚ್ಚಿನ ಪ್ರಯೋಜನಗಳನ್ನು ಪಡೆಯುತ್ತಾರೆ. ಫೆಬ್ರವರಿ 1 ರಿಂದ ಯಾವೆಲ್ಲಾ ರಾಶಿಯವರಿಗೆ ಹೆಚ್ಚು ಲಾಭಗಳಿವೆ ಎಂಬುದನ್ನು ನೋಡೋಣ.
(1 / 7)
ಶುಕ್ರನು ಇತ್ತೀಚೆಗೆ ಪೂರ್ವ ಭಾದ್ರಪದ ನಕ್ಷತ್ರವನ್ನು ಪ್ರವೇಶಿಸಿದ್ದಾನೆ. ಫೆಬ್ರವರಿ 1 ರಂದು ಬೆಳಿಗ್ಗೆ 8.37 ರವರೆಗೆ ಅದೇ ನಕ್ಷತ್ರದಲ್ಲಿರುತ್ತಾನೆ. ಇದು ಮುಂದಿನ 9 ದಿನಗಳವರೆಗೆ ನಾಲ್ಕು ರಾಶಿಚಕ್ರ ಚಿಹ್ನೆಗಳಿಗೆ ಅದೃಷ್ಟವಾಗಿ ಮುಂದುವರಿಯುತ್ತದೆ.
(2 / 7)
ಪೂರ್ವಭಾದ್ರಪದ ನಕ್ಷತ್ರದಲ್ಲಿ ಶುಕ್ರನ ಸಂಚಾರವು ಪ್ರಮುಖವಾಗಿ ನಾಲ್ಕು ರಾಶಿಯವರಿಗೆ ಹೆಚ್ಚಿನ ಪ್ರಯೋಜಗಳನ್ನು ತಂದಿದೆ. ಅದರಲ್ಲೂ ಆರ್ಥಿಕವಾಗಿ ಸಾಕಷ್ಟು ಪ್ರಗತಿ ಮತ್ತು ಲಾಭಗಳಿವೆ. ಮುಂದಿನ 9 ದಿನಗಳಲ್ಲಿ ಏನೆಲ್ಲಾ ಶುಭಫಲಗಳಿವೆ ಎಂಬುದನ್ನು ಇಲ್ಲಿ ನೀಡಲಾಗಿದೆ.
(3 / 7)
ಕುಂಭ ರಾಶಿ: ಫೆಬ್ರವರಿ 1ರ ವರಿಗೆ ಅಂದರೆ ಉಳಿದ ಈ 9 ದಿನಗಳಲ್ಲಿ, ಕಂಭ ರಾಶಿಯವರಿಗೆ ಶುಕ್ರನ ಪ್ರಯೋಜನಗಳು ಉತ್ತಮವಾಗಿರುತ್ತದೆ. ಅದೃಷ್ಟವು ಹೆಚ್ಚು ನಿಮ್ಮ ಪರವಾಗಿರುತ್ತದೆ. ವ್ಯಾಪಾರಿಗಳಿಗೆ ಹಣ ಗಳಿಸುವ ಅವಕಾಶವಿರುತ್ತದೆ. ಸಂತೋಷದ ಪ್ರಯಾಣಗಳು ಇರುತ್ತವೆ. ಲಾಭದಾಯಕವಾಗಿರುತ್ತೀರಿ. ಕುಟುಂಬದಲ್ಲಿ ಸಂತೋಷ ಹೆಚ್ಚಾಗುತ್ತದೆ.
(4 / 7)
ವೃಷಭ ರಾಶಿ: ಪೂರ್ವ ಭಾದ್ರಪದದಲ್ಲಿ ಶುಕ್ರನ ಸಂಚಾರವು ವೃಷಭ ರಾಶಿಯವರಿಗೆ ಪ್ರಯೋಜನಕಾರಿಯಾಗಲಿದೆ. ಈ ಅವಧಿಯಲ್ಲಿ, ನಿಮ್ಮ ಆದಾಯ ಹೆಚ್ಚಾಗುತ್ತದೆ, ಕುಟುಂಬದಲ್ಲಿ ಶಾಂತಿಯುತ ವಾತಾವರಣವಿರುತ್ತದೆ, ಸಂತೋಷ ಹೆಚ್ಚಾಗುತ್ತದೆ, ಆತ್ಮವಿಶ್ವಾಸ ತುಂಬಿರುತ್ತದೆ, ಉದ್ಯೋಗವನ್ನು ಹುಡುಕುತ್ತಿರುವವರು ಫಲಿತಾಂಶಗಳನ್ನು ಪಡೆಯುತ್ತಾರೆ ಮತ್ತು ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ.
(5 / 7)
ವೃಶ್ಚಿಕ ರಾಶಿ: ನಕ್ಷತ್ರದಲ್ಲಿ ಶುಕ್ರ ಸಂಚಾರವು ವೃಶ್ಚಿಕ ರಾಶಿಯವರಿಗೆ ಫೆಬ್ರವರಿ 1 ರವರೆಗೆ ಸಾಕಷ್ಟು ಶುಭಫಲಗಳನ್ನು ತಂದಿದೆ. ದೀರ್ಘಕಾಲದಿಂದ ವಿಳಂಬವಾಗಿರುವ ಕೆಲವು ಕಾರ್ಯಗಳು ಪೂರ್ಣಗೊಳ್ಳುತ್ತವೆ, ಹೂಡಿಕೆಗಳಿಂದ ಬರುವ ಆದಾಯವು ಉತ್ತಮವಾಗಿರುತ್ತದೆ. ಉದ್ಯಮಿಗಳು ಮತ್ತು ಉದ್ಯೋಗಿಗಳು ಆರ್ಥಿಕವಾಗಿ ಲಾಭವನ್ನು ಕಾಣುತ್ತಾರೆ.
(6 / 7)
ಮಕರ ರಾಶಿ: ಪೂರ್ವ ಭಾದ್ರಪದ ನಕ್ಷತ್ರದಲ್ಲಿ ಶುಕ್ರನು ಇರುವ ಅವಧಿಯು ಮಕರ ರಾಶಿಯವರಿಗೆ ಶುಭವಾಗಿರುತ್ತದೆ. ಉದ್ಯಮಿಗಳಿಗೆ ಲಾಭದಲ್ಲಿ ಹೆಚ್ಚಳವಾಗುವ ಸಾಧ್ಯತೆಗಳಿವೆ. ಉದ್ಯೋಗಿಗಳು ಮೇಲಧಿಕಾರಿಗಳಿಂದ ಮೆಚ್ಚುಗೆಯನ್ನು ಪಡೆಯುತ್ತಾರೆ, ಸಹೋದ್ಯೋಗಿಗಳಿಂದ ಬೆಂಬಲ ಹೆಚ್ಚಾಗುತ್ತದೆ, ಆರ್ಥಿಕವಾಗಿ ಅನುಕೂಲಕರವಾಗಿರುತ್ತದೆ. ಕುಟುಂಬದೊಂದಿಗೆ ಕಳೆಯುವ ಸಮಯ ನಿಮ್ಮ ಸಂತೋಷವನ್ನು ಹೆಚ್ಚಿಸುತ್ತದೆ.
ಇತರ ಗ್ಯಾಲರಿಗಳು