ಮೈಸೂರು: ಕೆಆರ್‌ನಗರ ತಾಲೂಕು ಮಂಚನಹಳ್ಳಿ ಬಳಿ ಭೀಕರ ರಸ್ತೆ ಅಪಘಾತ; ಕೆಎಸ್‌ಆರ್‌ಟಿಸಿ ಬಸ್, ಕಾರು ಮುಖಾಮುಖಿ ಡಿಕ್ಕಿಯ ಚಿತ್ರನೋಟ
ಮೈಸೂರು: ಕೆಆರ್‌ನಗರ ತಾಲೂಕು ಮಂಚನಹಳ್ಳಿ ಸಮೀಪ ಇಂದು (ಮೇ 14) ಕೆಎಸ್‌ಆರ್‌ಟಿಸಿ ಬಸ್ ಮತ್ತು ಕಾರು ಮುಖಾ ಮುಖಿ ಡಿಕ್ಕಿಯಾಗಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಈ ಭೀಕರ ರಸ್ತೆ ದುರಂತದ ಚಿತ್ರನೋಟ ಇಲ್ಲಿದೆ.
(1 / 9)
ಮಂಚನಹಳ್ಳಿ ಸಮೀಪ ಇಂದು (ಮೇ 14) ಕೆಎಸ್‌ಆರ್‌ಟಿಸಿ ಬಸ್ ಮತ್ತು ಕಾರು ಮುಖಾ ಮುಖಿ ಡಿಕ್ಕಿಯಾಗಿ ಭೀಕರ ರಸ್ತೆ ದುರಂತ ಸಂಭವಿಸಿದೆ. ಈ ರಸ್ತೆ ಅಪಘಾತದಲ್ಲಿ ಕಾರು ಚಾಲಕ ಸ್ಥಳದಲ್ಲೇ ದುರ್ಮರಣಕ್ಕೀಡಾದ ಹೃದಯ ವಿದ್ರಾವಕ ಘಟನೆ ನಡೆದಿದೆ.
(2 / 9)
ರಸ್ತೆ ಅಪಘಾತದಲ್ಲಿ ಮತ್ತೊಬ್ಬ ವ್ಯಕ್ತಿ ಗಂಭೀರ ಗಾಯಗೊಂಡಿದ್ದು, ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
(3 / 9)
ಅಪಘಾತದ ತೀವ್ರತೆ ಯಾವ ಪ್ರಮಾಣದಲ್ಲಿತ್ತು ಎಂದರೆ ಕೆಎಸ್‌ಆರ್‌ಟಿಸಿ ಬಸ್ ರಸ್ತೆಯಿಂದಾಚೆಗೆ ಬಲಬದಿಗೆ ಹಾರಿ ಬಿದ್ದಿದ್ದು, ಅದರ ಮುಂಭಾಗದ ಚಕ್ರದಡಿಗೆ ಕಾರು ಸಿಲುಕಿಕೊಂಡಿತ್ತು.
(4 / 9)
ಕೆಎಸ್‌ಆರ್‌ಟಿಸಿ ಬಸ್‌ನ ಮುಂಭಾಗ ಚಾಲಕನ ಬದಿ ಮಣ್ಣಿನೊಳಗೆ ಹೂತು ಹೋದ ರೀತಿ ಆಗಿತ್ತು. ಅದರ ಎಡಬದಿಗೆ ಕಾರು ಸಿಲುಕಿ ನಜ್ಜುಗುಜ್ಜಾಗಿತ್ತು.
(5 / 9)
ಮೃತ ಕಾರು ಚಾಲಕನನ್ನು ಮೈಸೂರಿನ ಕನಕದಾಸನಗರದ ನಿವಾಸಿ ಸುನೀಲ್ (34) ಎಂದು ಗುರುತಿಸಲಾಗಿದೆ. ಗಾಯಗೊಂಡ ವ್ಯಕ್ತಿ ರಮೇಶ್.
(6 / 9)
ಮೂಲತಃ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆಯ ನಿವಾಸಿ ಸುನೀಲ್. ಮೈಸೂರಿನಿಂದ ಹಾಸನದ ಕಡೆಗೆ ತೆರಳುತ್ತಿದ್ದ ವೇಳೆ ಚಿಕ್ಕಮಗಳೂರು ಕಡೆಯಿಂದ ಮೈಸೂರಿಗೆ ಹೋಗುತ್ತಿದ್ದ ಬಸ್ ಏಕಾಕಿಯಾಗಿ ಕಾರಿನ ಮೇಲೇರಿ ಈ ಭೀಕರ ದುರಂತ ಸಂಭವಿಸಿದೆ.
(7 / 9)
ಭೀಕರ ರಸ್ತೆ ದುರಂತ ನಡೆದಾಗ ಬಸ್‌ನಲ್ಲಿದ್ದ ಪ್ರಯಾಣಿಕರು ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಇತರ ಗ್ಯಾಲರಿಗಳು