Hotel Things: ಹೋಟೆಲ್ ಕೊಠಡಿಯಿಂದ ಈ 7 ವಸ್ತುಗಳನ್ನು ನೀವು ಅಗತ್ಯವಿದ್ದರೆ ಮನೆಗೆ ಕೊಂಡೊಯ್ಯಬಹುದು, ಇದು ಕಳ್ಳತನವಲ್ಲ
Hotel Things to bring home: ಹೋಟೆಲ್‌ನಲ್ಲಿ ರೂಂ ಬುಕ್ ಮಾಡಿ ಅಲ್ಲಿಂದ ವಾಪಸ್ ಬರುವಾಗ ನಿಮ್ಮೊಂದಿಗೆ ಕೆಲವು ವಸ್ತುಗಳನ್ನು ತರಬಹುದು. ಹೋಟೆಲ್ ಕೊಟಡಿಯಿಂದ ಯಾವ ವಸ್ತುಗಳನ್ನು ನೀವು ಮನೆಗೆ ತೆಗೆದುಕೊಂಡುಹೋಗಬಹುದು? ತಿಳಿಯೋಣ ಬನ್ನಿ.
(1 / 8)
ಕೆಲವರು ಹೋಟೆಲ್ ರೂಂನಲ್ಲಿ ಉಳಿದು ವಾಪಸ್ ಬರುವಾಗ ಸೋಪ್, ಪೇಸ್ಟ್ ಇತ್ಯಾದಿಗಳನ್ನು ಮನೆಗೆ ತೆಗೆದುಕೊಂಡು ಹೋಗುತ್ತಾರೆ. ಈ ರೀತಿ ಏನಾದರೂ ವಸ್ತುವನ್ನು ತೆಗೆದುಕೊಂಡು ಹೋಗಬಹುದೇ? ಇದು ಕಳ್ಳತನಕ್ಕೆ ಸಮವಲ್ಲವೇ? ಎಂಬ ಪ್ರಶ್ನೆ ಸಾಕಷ್ಟು ಜನರಲ್ಲಿ ಇರಬಹುದು. ಹೋಟೆಲ್‌ನಿಂದ ಕೆಲವು ವಸ್ತುಗಳನ್ನು ನೀವು ಮನೆಗೆ ತೆಗೆದುಕೊಂಡು ಹೋಗಬಹುದು. ಈ ವಸ್ತುಗಳನ್ನು ತೆಗೆದುಕೊಂಡಿ ಹೋದರೆ ಯಾರೂ ನಿಮ್ಮನ್ನು ಕಳ್ಳರು ಎನ್ನುವಂತೆ ಇಲ್ಲ. ಅಂತಹ ವಸ್ತುಗಳ ವಿವರ ಇಲ್ಲಿದೆ.
(2 / 8)
ಸಾಬೂನು, ಶಾಂಪೂ, ಕಂಡಿಷನರ್: ಹೋಟೆಲ್ ಬಾತ್‌ರೂಂನಲ್ಲಿ ನಿಮಗಾಗಿ ಸಾಬೂನು, ಶಾಂಪೂ, ಕಂಡಿಷನರ್ ಇಟ್ಟಿರುತ್ತಾರೆ. ಕೆಲವೊಮ್ಮೆ ಒಂದು ಸೋಪ್ ಅನ್ನು ನೀವಿಬ್ಬರು ಬಳಸಿರಬಹುದು. ಮತ್ತೊಂದು ಸೋಪು, ಶಾಂಪೂ, ಕಂಡಿಷನರ್ ಅಲ್ಲೇ ಇರಬಹುದು. ಅದನ್ನು ಅಲ್ಲಿಯೇ ಬಿಟ್ಟು ಬಂದರೆ ಹೋಟೆಲ್‌ನವರು ಬೇರೆ ಗೆಸ್ಟ್‌ಗೆ ನೀಡಬಹುದು ಅಥವಾ ಬಿಸಾಕಬಹುದು. ನೀವು ಹೋಟೆಲ್ ರೂಂನಿಂದ ಸಾಬೂನು, ಶಾಂಪೂ, ಕಂಡಿಷನರ್‌ಗಳನ್ನು ನಿಮ್ಮ ಮನೆಗೆ ತೆಗೆದುಕೊಂಡು ಹೋಗಬಹುದು.
(3 / 8)
ಬಾಡಿ ಲೋಷನ್ ಅಥವಾ ಹ್ಯಾಂಡ್ ಕ್ರೀಮ್: ನಿಮಗೆ ಹೋಟೆಲ್‌ನವರು ಬಾಡಿ ಲೋಷನ್ ಅಥವಾ ಹ್ಯಾಂಡ್ ಕ್ರೀಮ್ ನೀಡಿದ್ದರೆ ಅದನ್ನೂ ಅಲ್ಲಿಂದ ನೀವು ಮನೆಗೆ ತೆಗೆದುಕೊಂಡು ಹೋಗಬಹುದು.
(4 / 8)
ಓರಲ್ ಕೇರ್ ಆಕ್ಸೆಸರಿ: ಇದೇ ರೀತಿ ಹೋಟೆಲ್‌ನಲ್ಲಿ ಅತಿಥಿಗಳಿಗೆ ಟೂತ್ ಬ್ರಷ್, ಪೇಸ್ಟ್ ಇತ್ಯಾದಿಗಳನ್ನು ನೀಡಿರುತ್ತಾರೆ. ಇದನ್ನು ನಿಮ್ಮ ಬ್ಯಾಗ್‌ನಲ್ಲಿ ಹಾಕಿಕೊಂಡು ಚೆಕೌಟ್ ಮಾಡಬಹುದು.
(5 / 8)
ಯೂಸ್ ಆಂಡ್ ಥ್ರೋ ಚಪ್ಪಲಿಗಳು: ಕೆಲವು ಹೋಟೆಲ್‌ನಲ್ಲಿ ಕೊಠಡಿಯಲ್ಲಿ ಬಳಸು ಯೂಸ್ ಆಂಡ್ ಥ್ರೋ ಚಪ್ಪಲಿಗಳನ್ನು ಇಟ್ಟಿರುತ್ತಾರೆ. ಅದನ್ನು ನೀವು ಬಳಸಿದರೂ, ಬಳಸದೆ ಇದ್ದರೂ ನಿಮ್ಮ ಬ್ಯಾಗ್‌ನಲ್ಲಿ ಹಾಕಿಕೊಳ್ಳಬಹುದು.
(6 / 8)
ಕಾಫಿ ಪ್ಯಾಕೆಟ್ ಗಳು ಅಥವಾ ಚಹಾ ಚೀಲಗಳು: ಹೋಟೆಲ್‌ಗಳಲ್ಲಿ ಮಗ್‌ನಲ್ಲಿ ಮಾಡಿಕೊಳ್ಳಲು ಟೀ ಬ್ಯಾಗ್ ಅಥವಾ ಕಾಫಿ ಪ್ಯಾಕೆಟ್‌ಗಳನ್ನು ಇಟ್ಟಿರುತ್ತಾರೆ. ಇದನ್ನು ನೀವು ಮನೆಗೆ ತೆಗೆದುಕೊಂಡು ಹೋಗಿ ಮನೆಯಲ್ಲಿ ಕಾಫಿ, ಟೀ ಮಾಡಬಹುದು.
(7 / 8)
ಹ್ಯಾಂಡ್ ಸ್ಯಾನಿಟೈಸರ್: ಹೋಟೆಲ್ ಕೊಠಡಿಯಲ್ಲಿ ನಿಮಗಾಗಿ ಸಣ್ಣ ಹ್ಯಾಂಡ್ ಸ್ಯಾಟಿಟೈಜರ್ ಇಟ್ಟಿದ್ದರೆ ಅದನ್ನೂ ಕೊಂಡೊಯ್ಯಬಹುದು.
ಇತರ ಗ್ಯಾಲರಿಗಳು