ಕನ್ನಡ ಸುದ್ದಿ  /  Photo Gallery  /  How Harmful Is Dry Ice To Health 5 Injured After Eating Dry Ice As Mouth Freshener In Delhi Dry Ice Side Effects Mgb

Dry Ice: ರೆಸ್ಟಾರೆಂಟ್​ನಲ್ಲಿ ಮೌತ್​ ಫ್ರೆಶ್ನರ್ ಆಗಿ ಡ್ರೈ ಐಸ್ ಸೇವಿಸಿ ಐವರಿಗೆ ಗಾಯ; ಡ್ರೈ ಐಸ್ ಅಡ್ಡಪರಿಣಾಮಗಳನ್ನು ತಿಳಿಯಿರಿ

  • ಇತ್ತೀಚೆಗಷ್ಟೆ ದೆಹಲಿಯ ರೆಸ್ಟಾರೆಂಟ್​ವೊಂದರಲ್ಲಿ ಡ್ರೈ ಐಸ್​ ಅನ್ನು ಮೌತ್​ ಫ್ರೆಶ್ನರ್​ ಆಗಿ ಗ್ರಾಹಕರಿಗೆ ನೀಡಲಾಗಿದ್ದು, ಇದನ್ನು ಸೇವಿಸಿ ಐವರು ಗಾಯಗೊಂಡಿದ್ದಾರೆ. ಬಾಯಿ ಸುಟ್ಟಂತೆ ಉರಿ ತಾಳಲಾರದೆ ಒದ್ದಾಡಿದ್ದಾರೆ. ಡ್ರೈ ಐಸ್ ಬಳಸುವ ಮುನ್ನ ಅವುಗಳ ಅಡ್ಡ ಪರಿಣಾಮಗಳನ್ನು ಒಮ್ಮೆ ತಿಳಿಯೋಣ.

ಆಹಾರ ಮತ್ತು ಕೆಲವು ವಸ್ತುಗಳನ್ನು ಸಾಗಿಸಲು, ಮನರಂಜನಾ ಕ್ಷೇತ್ರದಲ್ಲಿ ಸ್ಪೆಷಲ್​ ಎಫೆಕ್ಟ್ ಸೃಷ್ಟಿಸಲು, ಮೀನು ಸೇರಿದಂತೆ ಆಹಾರ ಪದಾರ್ಥಗಳನ್ನು ಬೇಗ ಹಾಳಾಗದಂತೆ ಸಂಗ್ರಹಿಸಲು ಮತ್ತು ಪ್ರಯೋಗಾಲಯಗಳಲ್ಲಿ ಡ್ರೈ ಐಸ್ ಅನ್ನು ಹೆಚ್ಚು ಬಳಕೆ ಮಾಡಲಾಗುತ್ತದೆ.  
icon

(1 / 6)

ಇತ್ತೀಚೆಗಷ್ಟೆ ದೆಹಲಿಯ ರೆಸ್ಟಾರೆಂಟ್​ವೊಂದರಲ್ಲಿ ಡ್ರೈ ಐಸ್​ ಅನ್ನು ಮೌತ್​ ಫ್ರೆಶ್ನರ್​ ಆಗಿ ಗ್ರಾಹಕರಿಗೆ ನೀಡಲಾಗಿದ್ದು, ಇದನ್ನು ಸೇವಿಸಿ ಐವರು ಗಾಯಗೊಂಡಿದ್ದಾರೆ. ಬಾಯಿ ಸುಟ್ಟಂತೆ ಉರಿ ತಾಳಲಾರದೆ ಒದ್ದಾಡಿದ್ದಾರೆ. ಡ್ರೈ ಐಸ್ ಬಳಸುವ ಮುನ್ನ ಅವುಗಳ ಅಡ್ಡ ಪರಿಣಾಮಗಳನ್ನು ಒಮ್ಮೆ ತಿಳಿಯೋಣ. 
icon

(2 / 6)

ಡ್ರೈ ಐಸ್ ಎಂದರೇನು?: ಇದು ಘನೀಕೃತ ಇಂಗಾಲದ ಡೈಆಕ್ಸೈಡ್ ಆಗಿದ್ದು, ಸುಮಾರು -78.5 ಡಿಗ್ರಿ ಸೆಲ್ಸಿಯಸ್ ಅಥವಾ -109.3 ಡಿಗ್ರಿ ಫ್ಯಾರನ್‌ಹೀಟ್ ತಾಪಮಾನದಲ್ಲಿ ರೂಪುಗೊಳ್ಳುತ್ತದೆ. 
icon

(3 / 6)

ಡ್ರೈ ಐಸ್ ಅನ್ನು ಸರಿಯಾದ ರೀತಿಯಲ್ಲಿ ಬಳಸದೆ ಇದ್ದರೆ ಅದು ಆರೋಗ್ಯಕ್ಕೆ ತುಂಬಾ ಹಾನಿಕಾರಕವಾಗಿದೆ.  ಇದು ಕಾರ್ಬನ್​  ಡೈಆಕ್ಸೈಡ್ (CO2) ಬಿಡುಗಡೆ ಮಾಡುವುದರಿಂದ, ಗಾಳಿ ಕಡಿಮೆ ಇರುವ ಪ್ರದೇಶಗಳಲ್ಲಿ ಬಳಸುವಾಗ ಹುಷಾರಾಗಿ ಇರಬೇಕು. ಇಲ್ಲವಾದಲ್ಲಿ  ಉಸಿರುಕಟ್ಟುವಿಕೆಗೆ ಕಾರಣವಾಗುತ್ತದೆ.
icon

(4 / 6)

ಡ್ರೈ ಐಸ್ ಅನ್ನು ಸೇವಿಸಿದಾಗ ಬಾಯಿ ಮಾತ್ರವಲ್ಲದೆ ದೇಹದ ಆಂತರಿಕ ಭಾಗಗಳು ಹಾನಿಗೊಳಗಾಗುವ ಸಾಧ್ಯತೆ ಹೆಚ್ಚು. ಏಕೆಂದರೆ ಬಾಯಿ ಅಥವಾ ಜೀರ್ಣಾಂಗದಲ್ಲಿ ತೇವಾಂಶದ ಸಂಪರ್ಕಕ್ಕೆ ಬಂದಾಗ ವೇಗವಾಗಿ ದೊಡ್ಡ ಪ್ರಮಾಣದಲ್ಲಿ ಇಂಗಾಲದ ಡೈಆಕ್ಸೈಡ್ ಅನಿಲವನ್ನು ಬಿಡುಗಡೆ ಮಾಡುತ್ತದೆ. ಇದರಿಂದ ಹೊಟ್ಟೆ ಉಬ್ಬುವುದು,  ಹೊಟ್ಟೆ ನೋವು, ವಾಂತಿ ಮಾತ್ರವಲ್ಲದೆ ಕರುಳಿನ ರಂಧ್ರಗಳಂತಹ ಜೀವಕ್ಕೆ ಅಪಾಯಕಾರಿ ತೊಡಕುಗಳು ಎದುರಾಗಬಹುದು.  
icon

(5 / 6)

ಹೀಗಾಗಿ ಶೋಕಿಗೆ ಬಾಯಲ್ಲಿ ಹೊಗೆ ತುಂಬಿಕೊಂಡಂತೆ ಮಾಡಲು, ಮೌತ್​ ಫ್ರೆಶ್ನರ್​ ಆಗಿ ಡ್ರೈ ಐಸ್​ ಬಳಸಬೇಡಿ. 
icon

(6 / 6)

ಹೀಗಾಗಿ ಶೋಕಿಗೆ ಬಾಯಲ್ಲಿ ಹೊಗೆ ತುಂಬಿಕೊಂಡಂತೆ ಮಾಡಲು, ಮೌತ್​ ಫ್ರೆಶ್ನರ್​ ಆಗಿ ಡ್ರೈ ಐಸ್​ ಬಳಸಬೇಡಿ. 

IPL_Entry_Point

ಇತರ ಗ್ಯಾಲರಿಗಳು