ದಿನಕ್ಕೆ 6 ಹೊತ್ತು ಊಟ, ಮಜ್ಜಿಗೆ ಮತ್ತು ವಾಕಿಂಗ್; ನಟಿ ಖುಷ್ಬೂ ಸುಂದರ್ ತೂಕ ಇಳಿಕೆ ರಹಸ್ಯ ಬಹಿರಂಗ
ಖ್ಯಾತ ನಟಿ ಖುಷ್ಬೂ ತೂಕ ಕಳೆದುಕೊಂಡ ಕಥೆ ಎಲ್ಲರಿಗೂ ಗೊತ್ತು. ದಪ್ಪಗಿದ್ದ ಈಕೆ ಈಗ ತೆಳ್ಳಗಾಗಿ ಎಲ್ಲರನ್ನು ಅಚ್ಚರಿಗೊಳಿಸಿದ್ದರು. ಇತ್ತೀಚೆಗೆ ಯೂಟ್ಯೂಬ್ ಚಾನೆಲ್‌ವೊಂದಕ್ಕೆ ನೀಡಿದ ಸಂದರ್ಶನದಲ್ಲಿ ತನ್ನ ತೂಕ ಇಳಿಕೆಯ ರಹಸ್ಯವನ್ನು ಬಿಚ್ಚಿಟ್ಟಿದ್ದಾರೆ. ದಿನಕ್ಕೆ ಇವರು ಆರು ಬಾರಿ ಊಟ ಮಾಡುತ್ತಿದ್ದರು.
(1 / 7)
ನಟಿ ಖುಷ್ಬೂ ತೂಕ ಇಳಿಸುವ ಜರ್ನಿ ಆಸಕ್ತಿದಾಯಕವಾಗಿದೆ. ಇತ್ತೀಚಿನ ಸಂದರ್ಶನದಲ್ಲಿ ಅವರು ತೂಕ ಇಳಿಸಿಕೊಳ್ಳಲು ಏನು ಮಾಡಿದೆ ಎಂದು ತಿಳಿಸಿದ್ದಾರೆ. ತೂಕ ಇಳಿಸಲು ಬಯಸುವವರು ಇದನ್ನು ಸಲಹೆಯಾಗಿ ಪರಿಗಣಿಸುತ್ತಿದ್ದಾರೆ. ಖ್ಯಾತ ನಟಿ ಖುಷ್ಬೂ ಅವರು ತನ್ನ 54 ವರ್ಷ ವಯಸ್ಸಿನಲ್ಲಿ 20 ಕೆಜಿ ತೂಕ ಇಳಿಕೆ ಮಾಡಿಕೊಂಡಿದ್ದಾರೆ. ಏನೋ ಔಷಧ ತೆಗೆದುಕೊಂಡು ತೂಕ ಇಳಿಸಿಕೊಂಡಿದ್ದಾರೆ ಎಂದು ಎಲ್ಲರೂ ಆ ಸಮಯದಲ್ಲಿ ಟ್ರೋಲ್ ಮಾಡಿದ್ದರು.
(2 / 7)
ನಟಿ ಖುಷ್ಬೂ ನ್ಯೂ ಜನರೇಷನ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ತಮ್ಮ ತೂಕ ನಷ್ಟದ ಹಿಂದಿನ ಕಾರಣವನ್ನು ಬಹಿರಂಗಪಡಿಸಿದ್ದಾರೆ. "ನನಗೆ ಸಿಹಿತಿಂಡಿ ಇಷ್ಟ. ಭಾರತದಲ್ಲಿ ತಯಾರಿಸಿದ ಸಿಹಿತಿಂಡಿ ಎಲ್ಲಿ ಕಂಡರೂ ಅದನ್ನು ಬಾಯಿಗೆ ಹಾಕಿಕೊಳ್ಳುತ್ತೇನೆ. ಇದು ನನ್ನ ತೂಕ ಹೆಚ್ಚಲು ಕಾರಣವಾಗಿರಬಹುದು" ಎಂದು ಅವರು ಹೇಳಿದ್ದಾರೆ.
(3 / 7)
ಸಿಹಿತಿಂಡಿಗಳನ್ನು ತಿನ್ನುವುದರಿಂದ ತೂಕ ಹೆಚ್ಚಾಗುತ್ತದೆ ಮತ್ತು ಆರೋಗ್ಯ ತೊಂದರೆಗಳು ಉಂಟಾಗುತ್ತವೆ ಎಂದು ಖುಷ್ಬೂ ಹೇಳಿದ್ದಾರೆ. ಇದಾದ ಬಳಿಕ ಇವರು ತಮ್ಮ ದೇಹವನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿದರು.
(4 / 7)
ಸಂದರ್ಶನದಲ್ಲಿ ಖುಷ್ಬೂ ಹೇಳಿದ್ದೇನು?: "ಅದೃಷ್ಟವಶಾತ್ ನನಗೆ ಮಧುಮೇಹ ಅಥವಾ ಅಧಿಕ ರಕ್ತದೊತ್ತಡ ಇರಲಿಲ್ಲ. ಆದರೆ, ನನ್ನ ಮೊಣಕಾಲಿನ ಸಮಸ್ಯೆ ಇತ್ತು ಮತ್ತು ಮೊಣಕಾಲು ಗಾಯಕ್ಕೆ ನಾನು ಸುಮಾರು ಮೂರು ಶಸ್ತ್ರಚಿಕಿತ್ಸೆಗಳನ್ನು ಮಾಡಿದ್ದೇನೆ. ಈ ನೋವು ಸರಿಯಾಗಲು ನೀವು ನೀವು ತೂಕ ಇಳಿಸಿಕೊಳ್ಳಬೇಕು ಎಂದು ವೈದ್ಯರು ಸಲಹೆ ನೀಡಿದರು. ಬಳಿಕ ನಾನು ಪ್ರತಿದಿನ ವಾಕಿಂಗ್ ಹೋಗಲು ಪ್ರಾರಂಭಿಸಿದೆ. ಬಳಿಕ ನಾನು ಊಟದ ಮೇಲೆ ನಿಯಂತ್ರಣ ಇಟ್ಟುಕೊಂಡೆ. ಸಿಹಿತಿಂಡಿ ಸೇರಿದಂತ ಇತರೆ ಆಹಾರಗಳನ್ನು ತಿನ್ನುವುದನ್ನು ನಿರ್ಬಂಧಿಸಿದ್ದೇನೆ" ಎಂದು ಅವರು ಹೇಳಿದ್ದಾರೆ.
(5 / 7)
ತೂಕ ಇಳಿಸಿಕೊಳ್ಳಲು ಅವರು ತೆಗೆದುಕೊಂಡ ಇತರ ಕೆಲವು ಕ್ರಮಗಳ ಬಗ್ಗೆಯೂ ಮಾಹಿತಿ ನೀಡಿದ್ದಾರೆ. "ಈ ಮೊದಲು ನಾನು ಆರರಿಂದ ಏಳು ಕಪ್ ಚಹಾ ಕುಡಿಯುತ್ತಿದ್ದೆ. ನಾನು ಅದನ್ನೂ ಕಡಿಮೆ ಮಾಡಿದ್ದೇನೆ. ಒಂದೇ ಬಾರಿ ಭರ್ಜರಿ ಊಟ ಮಾಡುವ ಬದಲು ಅದೇ ಊಟವನ್ನು ಹಂಚಿಕೊಂಡು ಆರು ಬಾರಿ ತಿನ್ನಲು ಆರಂಭಿಸಿದೆ. ನಾನು ಸಾಕಷ್ಟು ಮಜ್ಜಿಗೆ ಮತ್ತು ಎಳನೀರು ಕುಡಿದೆ" ಎಂದು ಅವರು ಹೇಳಿದ್ದಾರೆ.
(6 / 7)
ಜೀವನಶೈಲಿ ಬದಲಾಯಿಸುವ ಮೂಲಕ ದೇಹದ ತೂಕ ಕಡಿಮೆ ಮಾಡಿಕೊಂಡೆ ಎಂದು ಅವರು ಹೇಳಿದ್ದಾರೆ. ಇವರು ಕೊರೊನಾ ಸಮಯದಿಂದಲೇ ತೂಕ ಇಳಿಕೆ ಮಾಡಲು ಆರಂಭಿಸಿದ್ದರು. ಆಗ ಅವರು 93 ಕೆಜಿ ತೂಕ ಇದ್ದರು. ಯೋಗ, ವ್ಯಾಯಾಮ ಮತ್ತು ಡಯೆಟ್ ಮೂಲಕ ತೂಕ ಇಳಿಕೆ ಮಾಡಿಕೊಂಡಿದ್ದಾರೆ.
ಇತರ ಗ್ಯಾಲರಿಗಳು