ನಟಿ ಶಕೀಲಾಗೆ ಕೇಳಿದ್ದಷ್ಟು ಸಂಬಳ: ಎರಡನೇ ಸಿನಿಮಾಕ್ಕೆ 25 ಸಾವಿರ, ಮೂರನೇ ಸಿನಿಮಾಕ್ಕೆ ದಿನಕ್ಕೆ 1 ಲಕ್ಷ ರೂ ಪಗಾರ
ಮಲಯಾಳಂ ನಟಿ ಶಕೀಲಾ ತನ್ನ ಸಿನಿ ಕರಿಯರ್‌ನ ಆರಂಭದಲ್ಲಿ ತ್ವರಿತವಾಗಿ ವೇತನ ಹೆಚ್ಚಿಸಿಕೊಂಡವರು. ಇವರ ವೇತನದ ಗ್ರಾಫ್ ಹೈಸ್ಪೀಡ್‌ನಲ್ಲಿ ಏರಿಕೆ ಕಾಣುತ್ತಿತ್ತು. ಮೊದಲ ಸಿನಿಮಾಕ್ಕೆ ಐದು ದಿನಕ್ಕೆ 25 ಸಾವಿರ ರೂಪಾಯಿ ವೇತನ ಪಡೆದಿದ್ದರು.
(1 / 12)
ಇವರ ವೇತನದ ಗ್ರಾಫ್ ಹೈಸ್ಪೀಡ್‌ನಲ್ಲಿ ಏರಿಕೆ ಕಾಣುತ್ತಿತ್ತು. ಮೊದಲ ಸಿನಿಮಾಕ್ಕೆ ಐದು ದಿನಕ್ಕೆ 25 ಸಾವಿರ ರೂಪಾಯಿ ವೇತನ ಪಡೆದಿದ್ದರು. ಎರಡನೇ ಸಿನಿಮಾಕ್ಕೆ ದಿನಕ್ಕೆ 10 ಸಾವಿರ ರೂಪಾಯಿ ವೇತನ ಪಡೆಯುತ್ತಿದ್ದರು. ಮೂರನೇ ಸಿನಿಮಾಕ್ಕೆ ದಿನಕ್ಕೆ 1 ಲಕ್ಷ ರೂ. ವೇತನ ಪಡೆದರು.
(Instagram/google photos)(2 / 12)
ಮಲಯಾಳಂ ಚಿತ್ರರಂಗವು ಶಕೀಲಾ ಎಂಬ ಪದವನ್ನು ಬ್ರ್ಯಾಂಡ್ ಆಗಿ ಮಾಡಿತ್ತು ಎಂದು ನಟಿ ಶಕೀಲಾ ಈ ಹಿಂದೆ ಮಲಯಾಳಂ ಮನೋರಮಾ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದರು. ಈಕೆ ಒಂದೊಂದು ಚಿತ್ರಕ್ಕೂ ಪಡೆದ ವೇತನ ಆ ಕಾಲಕ್ಕೆ ಅಗಾಧ ಎನ್ನಬಹುದು.
(Instagram/google photos)(3 / 12)
ನಾನು ನಟಿಸಿ ಗಳಿಸಿದ ಹಣವನ್ನು ಕುಟುಂಬಕ್ಕೆ ನೀಡಿದ್ದೇನೆ. ನನ್ನ ಬಳಿ ಹಣವಿಲ್ಲ. ಹೀಗಾಗಿ ನನಗೆ ಆದಾಯ ತೆರಿಗೆ ಇಲಾಖೆಯ ಭಯವಿಲ್ಲ ಎಂದು ಅವರು ಹೇಳಿದ್ದಾರೆ.
(Instagram/google photos)(4 / 12)
ಕಿನ್ನಾರ ತಂಬಿಗಲ್ ಚಿತ್ರದಲ್ಲಿ ಐದು ದಿನ ನಟಿಸಲು ಒಟ್ಟು 25 ಸಾವಿರ ರೂಪಾಯಿ ನೀಡಲಾಗಿತ್ತು. ಆ ಚಿತ್ರ ದೊಡ್ಡ ಹಿಟ್ ಆಯಿತು ಎಂದು ಶಕೀಲಾ ಹೇಳಿದ್ದಾರೆ.
(Instagram/google photos)(5 / 12)
ಕಿನ್ನಾರ ತಂಬಿಗಲ್ ಚಿತ್ರದ ಬಳಿಕ ಕಾಥರ ಸಿನಿಮಾ ಬಂತು. ಆ ಚಿತ್ರದಲ್ಲಿ ನಟಿಸಲು ನನಗೆ ದಿನಕ್ಕೆ ಹತ್ತು ಸಾವಿರ ರೂಪಾಯಿ ಸಿಗುತ್ತಿತ್ತು. ಒಟ್ಟು ಹತ್ತು ದಿನದ ಶೂಟಿಂಗ್ ಇತ್ತು ಎಂದು ಅವರು ಹೇಳಿದ್ದಾರೆ.
(Instagram/google photos)(6 / 12)
ಆಗ ನನಗೆ ಹಣದ ಮೌಲ್ಯ ಗೊತ್ತಿರಲಿಲ್ಲ. ಆಲಪ್ಪುಳದಲ್ಲಿ ಒಂದು ಸಿನಿಮಾದಲ್ಲಿ ಶೂಟಿಂಗ್ ನಡೆಯುತ್ತಿತ್ತು. ನನಗೆ ಅಲ್ಲಿನ ಆಹಾರ ಇಷ್ಟವಾಗಲಿಲ್ಲ. ಚೆನ್ನೈಗೆ ಹೋಗುವೆ ಎಂದು ಹೇಳಿದೆ.
(Instagram/google photos)(7 / 12)
ಆ ಸಮಯದಲ್ಲಿ ಹೊಸ ಸಿನಿಮಾದಲ್ಲಿ ನಟಿಸಲು ದಿನಕ್ಕೆ 1 ಲಕ್ಷ ರೂಪಾಯಿ ನೀಡಬಹುದೇ ಎಂದು ಕೇಳಿದೆ. ಅವರು ಆಕ್ಷೇಪಣೆಯಿಲ್ಲದೆ ಒಪ್ಪಿಕೊಂಡರು. ಮೂರು ದಿನಗಳ ಕಾಲ ಶೂಟಿಂಗ್ ಮಾಡಿದೆವು.
(8 / 12)
ನಾಲ್ಕನೇ ದಿನ ನನಗೆ ವಿಮಾನದ ಟಿಕೆಟ್ ನೀಡಿದರು. ಹೆಚ್ಚುವರಿಯಾಗಿ ಎರಡು ಲಕ್ಷ ನೀಡಿದರು. ಅಂದರೆ ದಿನಕ್ಕೆ ಒಂದು ಲಕ್ಷ ರೂಪಾಯಿ ದುಡಿದೆ ಎಂದು ಶಕೀಲಾ ನೆನಪಿಸಿಕೊಂಡಿದ್ದಾರೆ.
(Instagram/google photos)(10 / 12)
ನನಗೆ ಮಲಯಾಳಂ ಅರ್ಥವಾಗುತ್ತಿರಲಿಲ್ಲ. ಕೊನೆಕೊನೆಗೆ ನನಗೆ ಅವರೆಲ್ಲರೂ ಮೋಸ ಮಾಡುತ್ತಾರೆ ಎಂಬ ಫೀಲ್ ಬಂತು. ಸುಮಾರು ಅರುವತ್ತು ಚೆಕ್‌ಗಳು ಬೌನ್ಸ್ ಆಗಿದ್ದವು ಎಂದು ತನ್ನ ಕಥೆಯನ್ನು ಮಲಯಾಳಂ ಮನೋರಮಾಗೆ ಹೇಳಿದ್ದರು.
(Instagram/google photos)(11 / 12)
ಇದಾದ ಬಳಿಕ ನಾನು ನಗದು ರೂಪದಲ್ಲಿ ವೇತನ ಪಡೆಯಲು ಆರಂಭಿಸಿದೆ. ನನ್ನ ಕುಟುಂಬ ನನ್ನ ಕೈಬಿಟ್ಟಿತ್ತು. ನನ್ನನ್ನು ಪ್ರೀತಿಸುವ ಅಭಿಮಾನಿಗಳೇ ನನ್ನ ಆಸ್ತಿ ಎಂದು ನಟಿ ಶಕೀಲಾ ಹೇಳಿದ್ದರು.
(Instagram/google photos)ಇತರ ಗ್ಯಾಲರಿಗಳು