ಕನ್ನಡ ಸುದ್ದಿ  /  Photo Gallery  /  How Sunscreen Lotion Help To Protect Your Skin From The Sun

Sunscreen Lotion: ಟ್ಯಾನ್​​​, ಸನ್​​ಬರ್ನ್​ನಿಂದ ನಿಮ್ಮ ಚರ್ಮವನ್ನು ರಕ್ಷಿಸುವ ಸನ್‌ಸ್ಕ್ರೀನ್ ಬಗ್ಗೆ ನಿಮಗೆಷ್ಟು ಗೊತ್ತು?

ಹೆಚ್ಚಿನ ಜನರು ಬಿಸಿಲಿನಲ್ಲಿ ಹೋಗುವಾಗ ಸನ್‌ಸ್ಕ್ರೀನ್ ಲೋಷನ್​ ಅಥವಾ ಕ್ರೀಮ್ ಬಳಸುತ್ತಾರೆ. ಸನ್‌ಸ್ಕ್ರೀನ್ ಟ್ಯಾನ್​​ ಮಾತ್ರವಲ್ಲದೇ ಹಾನಿಕಾರಕ ಯುವಿ ಕಿರಣಗಳ ಪರಿಣಾಮಗಳಿಂದ ನಿಮ್ಮ ಚರ್ಮವನ್ನು ರಕ್ಷಿಸುತ್ತದೆ. ಸೂರ್ಯನ ನೇರಳಾತೀತ ಕಿರಣಗಳು ನೇರವಾಗಿ ನಿಮ್ಮ ಚರ್ಮದ ಮೇಲೆ ಬಿದ್ದರೆ ಅಲರ್ಜಿ, ಸನ್‌ಬರ್ನ್, ಟ್ಯಾನ್​, ತುರಿಕೆಯಂತಹ ಸಮಸ್ಯೆಗಳನ್ನು ನೀವು ಎದುರಿಸಬೇಕಾಗುತ್ತದೆ. ಇದನ್ನು ತಡೆಗಟ್ಟಲು ಮನೆಯಿಂದ ಹೊರ ಹೋಗುವ ಮುನ್ನ ಸನ್‌ಸ್ಕ್ರೀನ್ ಲೋಷನ್​ ಅಥವಾ ಕ್ರೀಮ್ ಬಳಸಿ ಎನ್ನುತ್ತಾರೆ ತಜ್ಞರು.

ಮಾರುಕಟ್ಟೆಯಲ್ಲಿ ಅನೇಕ ಬಗೆಯ ಸನ್‌ಸ್ಕ್ರೀನ್ ಲೋಷನ್ ಲಭ್ಯವಿದ್ದು, ಅದನ್ನು ಬಳಸುವ ಬದಲು ಉತ್ತಮ ಗುಣಮಟ್ಟದ್ದು ಯಾವುದೆಂದು ತಿಳಿದುಕೊಂಡು ಬಳಸಿ. ಖರೀದಿಸುವ ಮೊದಲು ವಿವಿಧ ಇ-ಕಾಮರ್ಸ್ ಸೈಟ್‌ಗಳಲ್ಲಿ ಆ ಸನ್‌ಸ್ಕ್ರೀನ್‌ನ ಬಳಕೆದಾರರ ವಿಮರ್ಶೆಗಳನ್ನು ಪರಿಶೀಲಿಸಿ.
icon

(1 / 5)

ಮಾರುಕಟ್ಟೆಯಲ್ಲಿ ಅನೇಕ ಬಗೆಯ ಸನ್‌ಸ್ಕ್ರೀನ್ ಲೋಷನ್ ಲಭ್ಯವಿದ್ದು, ಅದನ್ನು ಬಳಸುವ ಬದಲು ಉತ್ತಮ ಗುಣಮಟ್ಟದ್ದು ಯಾವುದೆಂದು ತಿಳಿದುಕೊಂಡು ಬಳಸಿ. ಖರೀದಿಸುವ ಮೊದಲು ವಿವಿಧ ಇ-ಕಾಮರ್ಸ್ ಸೈಟ್‌ಗಳಲ್ಲಿ ಆ ಸನ್‌ಸ್ಕ್ರೀನ್‌ನ ಬಳಕೆದಾರರ ವಿಮರ್ಶೆಗಳನ್ನು ಪರಿಶೀಲಿಸಿ.(Pixabay)

ಕೆಲವರಿಗೆ ಒಣ ಚರ್ಮ ಇರುತ್ತದೆ. ಕೆಲವರಿಗೆ ಎಣ್ಣೆ ಚರ್ಮ ಇರುತ್ತದೆ. ಇನ್ನು ಕೆಲವರು ಹೆಚ್ಚು ಬೆವರುತ್ತಾರೆ. ಇದಕ್ಕೆ ಅನುಗುಣವಾಗಿ ಮಾರುಕಟ್ಟೆಯಲ್ಲಿ ಸನ್‌ಸ್ಕ್ರೀನ್ ಲೋಷನ್ ಲಭ್ಯವಿದೆ. ನಿಮ್ಮ ಚರ್ಮಕ್ಕೆ ಸೂಕ್ತವಾಗುವ ಸನ್‌ಸ್ಕ್ರೀನ್ ಬಳಸಿ.
icon

(2 / 5)

ಕೆಲವರಿಗೆ ಒಣ ಚರ್ಮ ಇರುತ್ತದೆ. ಕೆಲವರಿಗೆ ಎಣ್ಣೆ ಚರ್ಮ ಇರುತ್ತದೆ. ಇನ್ನು ಕೆಲವರು ಹೆಚ್ಚು ಬೆವರುತ್ತಾರೆ. ಇದಕ್ಕೆ ಅನುಗುಣವಾಗಿ ಮಾರುಕಟ್ಟೆಯಲ್ಲಿ ಸನ್‌ಸ್ಕ್ರೀನ್ ಲೋಷನ್ ಲಭ್ಯವಿದೆ. ನಿಮ್ಮ ಚರ್ಮಕ್ಕೆ ಸೂಕ್ತವಾಗುವ ಸನ್‌ಸ್ಕ್ರೀನ್ ಬಳಸಿ.(pixabay)

ಸನ್‌ಸ್ಕ್ರೀನ್ ಹಚ್ಚುವ ಮೊದಲು ನಿಮ್ಮ ಮುಖವನ್ನು ಚೆನ್ನಾಗಿ ತೊಳೆಯಿರಿ. ಬಿಸಿಲಿಗೆ ಹೋಗುವ 15-20 ನಿಮಿಷಗಳ ಮುನ್ನ ಸನ್‌ಸ್ಕ್ರೀನ್ ಬಳಸಿ. ಮುಖ, ಕುತ್ತಿಗೆ, ಕಿವಿ, ಕೈಗಳ ಪ್ರತಿಯೊಂದು ಭಾಗಕ್ಕೂ ಸನ್‌ಸ್ಕ್ರೀನ್ ಅನ್ನು ಚೆನ್ನಾಗಿ ಅನ್ವಯಿಸಿ.
icon

(3 / 5)

ಸನ್‌ಸ್ಕ್ರೀನ್ ಹಚ್ಚುವ ಮೊದಲು ನಿಮ್ಮ ಮುಖವನ್ನು ಚೆನ್ನಾಗಿ ತೊಳೆಯಿರಿ. ಬಿಸಿಲಿಗೆ ಹೋಗುವ 15-20 ನಿಮಿಷಗಳ ಮುನ್ನ ಸನ್‌ಸ್ಕ್ರೀನ್ ಬಳಸಿ. ಮುಖ, ಕುತ್ತಿಗೆ, ಕಿವಿ, ಕೈಗಳ ಪ್ರತಿಯೊಂದು ಭಾಗಕ್ಕೂ ಸನ್‌ಸ್ಕ್ರೀನ್ ಅನ್ನು ಚೆನ್ನಾಗಿ ಅನ್ವಯಿಸಿ.(Pixabay)

ಕನಿಷ್ಠ SPF (Sun Protection Factor) 50 ಇರುವ ಸನ್‌ಸ್ಕ್ರೀನ್ ಅನ್ನು ಖರೀದಿಸಿ. ನೀವು ಹಚ್ಚಿದ ನಂತರ ಅದು 20-30 ಕ್ಕೆ ಇಳಿಯುತ್ತದೆ.
icon

(4 / 5)

ಕನಿಷ್ಠ SPF (Sun Protection Factor) 50 ಇರುವ ಸನ್‌ಸ್ಕ್ರೀನ್ ಅನ್ನು ಖರೀದಿಸಿ. ನೀವು ಹಚ್ಚಿದ ನಂತರ ಅದು 20-30 ಕ್ಕೆ ಇಳಿಯುತ್ತದೆ.(Pixabay)

ಹೊರಗಿನಿಂದ ಮನೆಗೆ ಮರಳಿದ ನಂತರ ಫೇಸ್ ವಾಶ್‌ನಿಂದ ಮುಖವನ್ನು ಚೆನ್ನಾಗಿ ತೊಳೆಯಬೇಕು. ಬೇಸಿಗೆಯಲ್ಲಿ ಮಾತ್ರವಲ್ಲದೆ ಚಳಿಗಾಲ, ಮಳೆಗಾಲದಲ್ಲಿಯೂ ಪ್ರತಿದಿನ ಸನ್‌ಸ್ಕ್ರೀನ್ ಬಳಸುವುದು ಉತ್ತಮ ಎನ್ನುತ್ತಾರೆ ತಜ್ಞರು.
icon

(5 / 5)

ಹೊರಗಿನಿಂದ ಮನೆಗೆ ಮರಳಿದ ನಂತರ ಫೇಸ್ ವಾಶ್‌ನಿಂದ ಮುಖವನ್ನು ಚೆನ್ನಾಗಿ ತೊಳೆಯಬೇಕು. ಬೇಸಿಗೆಯಲ್ಲಿ ಮಾತ್ರವಲ್ಲದೆ ಚಳಿಗಾಲ, ಮಳೆಗಾಲದಲ್ಲಿಯೂ ಪ್ರತಿದಿನ ಸನ್‌ಸ್ಕ್ರೀನ್ ಬಳಸುವುದು ಉತ್ತಮ ಎನ್ನುತ್ತಾರೆ ತಜ್ಞರು.(Pixabay)


ಇತರ ಗ್ಯಾಲರಿಗಳು