ನಿಮ್ಮ ಮನೆಯಲ್ಲೂ ಇದೆಯಾ ಅಂಬೆಗಾಲಿಡುವ ಮಗು? ಹಾಗಾದ್ರೆ ಈ ಕೃಷ್ಣ ಜನ್ಮಾಷ್ಟಮಿಯಂದು ಮುದ್ದಾಗಿ ರೆಡಿ ಮಾಡಲು ಇಲ್ಲಿದೆ ಐಡಿಯಾ
- Krishna Janmashtami: ಮನೆಯಲ್ಲಿರುವ ಪುಟ್ಟ ಮಕ್ಕಳು ದೇವರ ಸಮಾನ ಎಂದು ಹೇಳಲಾಗುತ್ತದೆ. ಆದರೆ ಅವರನ್ನು ದೇವರ ರೂಪದಲ್ಲಿ ಕಾಣಲು ಕೆಲವು ದಿನಗಳು ಇರುತ್ತದೆ. ಅದರಲ್ಲಿ ಕೃಷ್ಣ ಜನ್ಮಾಷ್ಟಮಿ ಕೂಡ ಒಂದು.
- Krishna Janmashtami: ಮನೆಯಲ್ಲಿರುವ ಪುಟ್ಟ ಮಕ್ಕಳು ದೇವರ ಸಮಾನ ಎಂದು ಹೇಳಲಾಗುತ್ತದೆ. ಆದರೆ ಅವರನ್ನು ದೇವರ ರೂಪದಲ್ಲಿ ಕಾಣಲು ಕೆಲವು ದಿನಗಳು ಇರುತ್ತದೆ. ಅದರಲ್ಲಿ ಕೃಷ್ಣ ಜನ್ಮಾಷ್ಟಮಿ ಕೂಡ ಒಂದು.
(1 / 8)
ಸಾಂಪ್ರದಾಯಿಕ ಭಾರತೀಯ ಉಡುಗೆಯಾದ ಧೋತಿಯನ್ನು ಮಗುವಿಗೆ ಹಾಕಿ. ಬಿಳಿ, ನೀಲಿ ಮತ್ತು ಕೆಂಪು ಬಣ್ಣ ತುಂಬಾ ಚೆನ್ನಾಗಿ ಮಕ್ಕಳಿಗೆ ಒಪ್ಪುತ್ತದೆ. ಇವುಗಳಲ್ಲಿ ಯಾವುದಾದರೂ ಒಂದು ಬಣ್ಣವನ್ನು ಆಯ್ಕೆ ಮಾಡಿಕೊಳ್ಳಿ.
(2 / 8)
ಕಿರೀಟವು ಕೃಷ್ಣನ ಅಂದವನ್ನು ಹೆಚ್ಚಿಸುತ್ತದೆ. ಈ ಕಾರಣದಿಂದ ನೀವು ನವಿಲು ಗರಿ ಇರುವ ಒಂದು ಕಿರೀಟವನ್ನು ತಯಾರಿಸಿ ನಿಮ್ಮ ಮಕ್ಕಳ ತಲೆಗೆ ಕಟ್ಟಿ. ತುಂಬಾ ಚಿಕ್ಕ ಮಕ್ಕಳಾಗಿದ್ದರೆ ತಲೆಗೆ ಬಟ್ಟೆ ಕಟ್ಟಿ ಅದಕ್ಕೆ ನವಿಲು ಗರಿ ಸಿಕ್ಕಿಸಿ.
(3 / 8)
ಒಂದು ಮಡಿಕೆ ಇಡಿ: ಮಣ್ಣಿನ ಮಡಿಕೆ ತಂದು ಅದನ್ನು ಸುಂದರವಾಗಿ ಅಲಂಕಾರ ಮಾಡಿ. ಅದಕ್ಕೆ ಒಂದಷ್ಟು ಬೆಣ್ಣೆ ಅಥವಾ ಬೆಣ್ಣೆಯಂತೆ ಕಾಣುವ ಹತ್ತಿಯನ್ನು ತುಂಬಿ ನಿಮ್ಮ ಮಕ್ಕಳ ಬಳಿ ಇಡಿ. ಅವರು ಇದರೊಂದಿಗೆ ಆಡುವಾಗ ಫೋಟೊ ಕ್ಲಿಕ್ ಮಾಡಿ.
(4 / 8)
ಕೊಳಲು: ಕೃಷ್ಣ ಎಂದರೆ ಕೊಳಲು ಇರಲೇಬೇಕು. ಒಂದು ಸುಂದರವಾದ ಬಿದಿರಿನ ಕೊಳಲು ತನ್ನಿ ಅದನ್ನು ನಿಮ್ಮ ಮಕ್ಕಳ ಸೊಂಟಕ್ಕೆ ಸಿಕ್ಕಿಸಿ. ಅಥವಾ ಅವರ ಕೈಯ್ಯಲ್ಲಿ ಹಿಡಿದುಕೊಳ್ಳುವಂತೆ ಮಾಡಿ.
(5 / 8)
ಹೊರಾಂಗಣ: ಕೇವಲ ಮನೆಯ ಒಳಗಡೆ ಅಲ್ಲ. ಮನೆಯ ಹೊರಾಂಗಣದಲ್ಲಿ ನೀವು ನಿಮ್ಮ ಮಕ್ಕಳ ಫೋಟೋ ಕ್ಲಿಕ್ ಮಾಡಿ. ಇದು ಸಹಜ ಮತ್ತು ಸುಂದರವಾಗಿ ಕಾಣುತ್ತದೆ. ಮನೆಯ ಒಳಗಡೆ ಏನೇ ಕ್ರಿಯೇಟ್ ಮಾಡಿದರು ಅದು ಇಷ್ಟು ಸಹಜವಾಗಿರುವುದಿಲ್ಲ.
(6 / 8)
ಮುತ್ತಿನ ಹಾರ ಹಾಕಿ: ಬಂಗಾರದ ಬಣ್ಭದ ಹಾರಕ್ಕಿಂತಲೂ ಮುತ್ತಿನ ಹಾರ ತುಂಬಾ ಎದ್ದು ಕಾಣುತ್ತದೆ. ಮತ್ತಿದು ಮಕ್ಕಳಿಗೆ ಚುಚ್ಚುವುದಿಲ್ಲ. ಆ ಕಾರಣಕ್ಕಾಗಿ ಹೆಚ್ಚಾಗಿ ಮುತ್ತಿನ ಹಾರವನ್ನು ಆಯ್ಕೆ ಮಾಡಿ. ಹಣೆಗೊಂದು ತಿಲಕ ಇಡಿ.
(7 / 8)
ನವಿಲುಗರಿ: ನಿಮ್ಮ ಮಗು ತುಂಬಾ ಚಿಕ್ಕಮಗು ಎಂದಾದರೆ ಅವರನ್ನು ಒಂದು ನೀಲಿ ಬಣ್ಣದ ಬಟ್ಟೆ ಮೇಲೆ ಮಲಗಿಸಿ. ಪಕ್ಕದಲ್ಲಿ ನವಿಲುಗರಿ ಇಡಿ. ಕಿರೀಟ ಹಾಕಿ ಒಂದು ಬಟ್ಟೆಯನ್ನು ಮೈಗೆ ಸುತ್ತಿ. ಇಷ್ಟೇ ಮಾಡಿದರೂ ಸಾಕು ಮಗು ಮುದ್ದಾಗಿ ಕಾಣುತ್ತದೆ.
ಇತರ ಗ್ಯಾಲರಿಗಳು