ಮನೆಯಲ್ಲೇ ಸರಳವಾಗಿ ತಯಾರಿಸಿ ರೆಸ್ಟೋರೆಂಟ್ ಶೈಲಿಯ ಚಾಕೊಲೇಟ್ ಮಿಲ್ಕ್ ಶೇಕ್; ಇಲ್ಲಿದೆ ಪಾಕವಿಧಾನ
ರೆಸ್ಟೋರೆಂಟ್ ಶೈಲಿಯ ಚಾಕೊಲೇಟ್ ಮಿಲ್ಕ್ ಶೇಕ್ ಅನ್ನು ಮನೆಯಲ್ಲೇ ಸುಲಭವಾಗಿ ತಯಾರಿಸಬಹುದು. ಇಲ್ಲಿ ತಿಳಿಸಿರುವ ಪಾಕವಿಧಾನವನ್ನು ಅನುಸರಿಸಿದರೆ ರುಚಿ ಅದ್ಭುತವಾಗಿರುತ್ತದೆ. ಇಲ್ಲಿದೆ ಪಾಕವಿಧಾನ.
(1 / 10)
ಮಕ್ಕಳು, ವಯಸ್ಕರಿಗೆ ಚಾಕೋಲೇಟ್ ಮಿಲ್ಕ್ ಶೇಕ್ ಅಂದ್ರೆ ಬಹಳ ಅಚ್ಚುಮೆಚ್ಚು. ಇದಕ್ಕಾಗಿ ರೆಸ್ಟೋರೆಂಟ್‌ಗೆ ಹೋಗಿ ಕುಡಿಯಬೇಕಿಂದಿಲ್ಲ. ಮನೆಯಲ್ಲೇ ಸರಳವಾಗಿ ತಯಾರಿಸಬಹುದು. ಇದನ್ನು ತಯಾರಿಸುವುದು ತುಂಬಾ ಸುಲಭ. ಈ ಪ್ರೇಮಿಗಳ ದಿನಾಚರಣೆಯಂದು ನಿಮ್ಮ ಗೆಳೆಯ ಅಥವಾ ಗೆಳತಿಗೂ ಮಾಡಿ ಕೊಡಬಹುದು.
(2 / 10)
ರೆಸ್ಟೋರೆಂಟ್ ಶೈಲಿಯ ಚಾಕೊಲೇಟ್ ಮಿಲ್ಕ್ ಶೇಕ್ ಅನ್ನು ಮನೆಯಲ್ಲೇ ಸುಲಭವಾಗಿ ತಯಾರಿಸಬಹುದು. ಇಲ್ಲಿ ತಿಳಿಸಿರುವ ಪಾಕವಿಧಾನವನ್ನು ಅನುಸರಿಸಿದರೆ ರುಚಿ ಅದ್ಭುತವಾಗಿರುತ್ತದೆ. ಹಾಗಿದ್ದರೆ ಚಾಕೋಲೇಟ್ ಮಿಲ್ಕ್ ಶೇಕ್ ತಯಾರಿಸುವುದು ಹೇಗೆ ಅನ್ನೋದನ್ನು ಇಲ್ಲಿ ತಿಳಿದುಕೊಳ್ಳಿ.
(PC: Pexel)(3 / 10)
ಚಾಕೊಲೇಟ್ ಶೇಕ್ ತಯಾರಿಸಲು ಬೇಕಾಗುವ ಸಾಮಗ್ರಿಗಳು: ಒಂದು ಕಪ್ ಬಿಸಿ ನೀರು, ಕೋಕೋ ಪೌಡರ್, ಅರ್ಧ ಕಪ್ ಸಕ್ಕರೆ, ಎರಡೂವರೆ ಕಪ್ ಹಾಲು, ಒಂದು ಕಪ್ ಐಸ್ ಕ್ಯೂಬ್‌ಗಳು, ಚಾಕೊಲೇಟ್ ಐಸ್ ಕ್ರೀಮ್, 3 ಚಮಚ ಚಾಕೊಲೇಟ್ ಸಿರಪ್.
(PC: Canva)(4 / 10)
ತಯಾರಿಸುವ ವಿಧಾನ: ಚಾಕೊಲೇಟ್ ಮಿಲ್ಕ್ ಶೇಕ್ ಮಾಡುವ ಮೊದಲು ಸಣ್ಣ ಬಟ್ಟಲಿನಲ್ಲಿ ಬಿಸಿ ನೀರನ್ನು ತೆಗೆದುಕೊಳ್ಳಿ. ಇದಕ್ಕೆ ಕೋಕೋ ಪೌಡರ್ ಬೆರಿಸಿ ಚೆನ್ನಾಗಿ ಮಿಶ್ರಣ ಮಾಡಿ.
(5 / 10)
ಹಂತ-2: ಈಗ ಈ ಮಿಶ್ರಣಕ್ಕೆ ಸಕ್ಕರೆ ಬೆರಿಸಿ. ರುಚಿಗೆ ಅನುಗುಣವಾಗಿ ನೀವು ಸಕ್ಕರೆ ಪ್ರಮಾಣವನ್ನು ಕಡಿಮೆ ಮಾಡಬಹುದು ಅಥವಾ ಹೆಚ್ಚಿಸಬಹುದು.
(PC: Pixabay )(6 / 10)
ಹಂತ-3: ಸಕ್ಕರೆ ಮತ್ತು ಕೋಕೋ ಪೌಡರ್ ಬಿಸಿ ನೀರಿನಲ್ಲಿ ಸಂಪೂರ್ಣವಾಗಿ ಕರಗುವವರೆಗೆ ಚೆನ್ನಾಗಿ ಮಿಶ್ರಣ ಮಾಡಿ.
(PC: Pixabay )(7 / 10)
ಹಂತ-4: ಈಗ ಕೋಕೋ ಮಿಶ್ರಣವನ್ನು ಮಿಕ್ಸಿಯಲ್ಲಿ ಹಾಕಿ. ಇದಕ್ಕೆ ಸ್ವಲ್ಪ ಐಸ್ ಕ್ಯೂಬ್‌ಗಳು, 2.5 ಕಪ್ ಹಾಲು ಬೆರೆಸಿ ಚೆನ್ನಾಗಿ ಮಿಶ್ರಣ ಮಾಡಿ.
(PC: Canva)(8 / 10)
ಹಂತ-5: ಈ ಮಿಶ್ರಣ ಮೃದುವಾಗಿರಬೇಕು. ಹಾಗೆಯೇ ತೆಳುವಾಗಿರಬಾದು. ಸ್ವಲ್ಪ ದಪ್ಪ ಸಿರಪ್ ಆಗಿರುವಂತೆ ನೋಡಿಕೊಳ್ಳಿ. ಇದಕ್ಕಾಗಿ ಕೆನೆಭರಿತ ಹಾಲನ್ನು ಆರಿಸಿಕೊಳ್ಳಬೇಕು. ಈ ಮಿಶ್ರಣವನ್ನು ಒಂದು ಪಾತ್ರೆಗೆ ಹಾಕಿ.
(PC: Canva)(9 / 10)
ಹಂತ-6: ಈಗ ಮಿಶ್ರಣಕ್ಕೆ ಸ್ವಲ್ಪ ಚಾಕೊಲೇಟ್ ಸಿರಪ್ ಬೆರಿಸಿ ಚೆನ್ನಾಗಿ ಮಿಶ್ರಣ ಮಾಡಿದರೆ ರುಚಿಕರ ಮತ್ತು ಆರೋಗ್ಯಕರ ಚಾಕೊಲೇಟ್ ಮಿಲ್ಕ್ ಶೇಕ್ ಸಿದ್ಧ. ಇದನ್ನು ಸುಂದರವಾದ ಗಾಜಿನ ಲೋಟಗಳಲ್ಲಿ ಹಾಕಿ, ಐಸ್ ಕ್ರೀಮ್ ಬೆರೆಸಿ ಕುಡಿಯಿರಿ. ಇದನ್ನು ಮಕ್ಕಳಿಗೆ, ಅತಿಥಿಗಳಿಗೆ ಅಥವಾ ಮನೆಮಂದಿಗೆ ಮಾಡಿಕೊಡಿ. ಖಂಡಿತ ಇಷ್ಟಪಡುತ್ತಾರೆ.
(PC: Canva)ಇತರ ಗ್ಯಾಲರಿಗಳು