Rats in Car: ನಿಮ್ಮ ಕಾರಿನ ವೈರ್‌ಗಳನ್ನು ಇಲಿ ಕಟ್‌ ಮಾಡುತ್ತದೆಯೇ? ಈ 8 ವಿಧಾನಗಳನ್ನು ಅನುಸರಿಸಿದರೆ ವಾಹನಗಳಿಗೆ ಇಲಿ-ಹೆಗ್ಗಣ ಕಾಟವಿರದು
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Rats In Car: ನಿಮ್ಮ ಕಾರಿನ ವೈರ್‌ಗಳನ್ನು ಇಲಿ ಕಟ್‌ ಮಾಡುತ್ತದೆಯೇ? ಈ 8 ವಿಧಾನಗಳನ್ನು ಅನುಸರಿಸಿದರೆ ವಾಹನಗಳಿಗೆ ಇಲಿ-ಹೆಗ್ಗಣ ಕಾಟವಿರದು

Rats in Car: ನಿಮ್ಮ ಕಾರಿನ ವೈರ್‌ಗಳನ್ನು ಇಲಿ ಕಟ್‌ ಮಾಡುತ್ತದೆಯೇ? ಈ 8 ವಿಧಾನಗಳನ್ನು ಅನುಸರಿಸಿದರೆ ವಾಹನಗಳಿಗೆ ಇಲಿ-ಹೆಗ್ಗಣ ಕಾಟವಿರದು

  • Rat protection for car: ಬೆಂಗಳೂರಿನಂತಹ ನಗರಗಳಲ್ಲಿ ಕಾರು ಹೊಂದಿರುವವರು ಇಲಿ ಎಂದರೆ ಬೆಚ್ಚಿ ಬೀಳಬಹುದು. ಇಲಿಗಳು ಕಾರಿನ ಬಾನೆಟ್‌ನೊಳಗೆ ಪ್ರವೇಶಿಸಿ ವೈರ್‌ ಕಟ್‌ ಮಾಡುವುದು, ಏಸಿ ಕಿಂಡಿಯೊಳಗೆ ನುಸುಳಿ ಹಾನಿ ಮಾಡುವುದು ಸಾಮಾನ್ಯ. ಇಲಿಗಳಿಂದ ಕಾರುಗಳನ್ನು ರಕ್ಷಿಸಲು ಬಯಸುವವರಿಗೆ ಒಂದಿಷ್ಟು ಐಡಿಯಾಗಳನ್ನು ಇಲ್ಲಿ ನೀಡಲಾಗಿದೆ.

Rat protection for car: ನಗರ, ಪಟ್ಟಣ ಮಾತ್ರವಲ್ಲದೆ ಹಳ್ಳಿಗಳಲ್ಲಿಯೂ ಕಾರುಗಳಿಗೆ ಇಲಿಗಳ ಕಾಟ ಇರುತ್ತದೆ. ಎಲ್ಲೋ ಅವಸರವಾಗಿ ಹೋಗಬೇಕೆಂದು ಕಾರು ಸ್ಟಾರ್ಟ್‌ ಮಾಡಿದರೆ ಕಾರು ಸ್ಟಾರ್ಟ್‌ ಆಗೋದಿಲ್ಲ. ಏನಾಯ್ತೆಂದು ನೋಡಿದರೆ ಇಲಿ ವೈರ್‌ಗಳನ್ನು ಕಟ್‌ ಮಾಡಿರುತ್ತದೆ. ಬೆಂಗಳೂರಿನಂತಹ ನಗರಗಳಲ್ಲಿ ಮನೆಯ ಹೊರಗಡೆ ಕಾರು ಪಾರ್ಕಿಂಗ್‌ ಮಾಡುವವರು ಇಲಿ ಎಂದರೆ ಬೆಚ್ಚಿ ಬೀಳುತ್ತಾರೆ. ಕೆಲವೊಂದು ಕ್ರಮಗಳ ಮೂಲಕ ಕಾರಿಗೆ ಇಲಿ ಬರದಂತೆ ನೋಡಿಕೊಳ್ಳಬಹುದು. 
icon

(1 / 11)

ಕಾರನ್ನು ಎಲ್ಲಿ ಪಾರ್ಕಿಂಗ್‌ ಮಾಡುವಿರಿ?: ಕಾರನ್ನು ನೀವು ಎಲ್ಲಿ ಪಾರ್ಕ್‌ ಮಾಡುವಿರಿ ಎನ್ನುವುದು ಇಲಿಗಳಿಂದ ರಕ್ಷಿಸಿಕೊಳ್ಳಲು ನೆರವಾಗುವ ಪ್ರಮುಖ ಅಂಶವಾಗಿದೆ. ಮನೆಯಲ್ಲಿ ಉತ್ತಮ ಪಾರ್ಕಿಂಗ್‌ ವ್ಯವಸ್ಥೆ ಇದ್ದರೆ ಮಾತ್ರ ಹೊಸ ಕಾರು ಖರೀದಿಸಿ. ಬೆಂಗಳೂರಿನ ಬೀದಿಬದಿಗಳಲ್ಲಿ ಅಥವಾ ಅಕ್ಕಪಕ್ಕದ ಖಾಲಿ ಸೈಟ್‌ಗಳಲ್ಲಿ ಕಾರು ನಿಲ್ಲಿಸುವುದಾದರೆ ಹೊಸ ಕಾರು ಖರೀದಿ ಬೇಡ. ಕಡಿಮೆ ಬಜೆಟ್‌ನಲ್ಲಿ ಸೆಕೆಂಡ್‌ ಹ್ಯಾಂಡ್‌ ಕಾರು ಖರೀದಿಸಿ ತೃಪ್ತಿಪಡಿ. ಕಾರು ಪಾರ್ಕ್‌ ಮಾಡುವ ಸ್ಥಳ ಸ್ವಚ್ಛವಾಗಿರಲಿ. ಇಲಿಗಳ ಉಪಟಳವಿಲ್ಲ ಎನ್ನುವುದನ್ನು ಖಾತ್ರಿಪಡಿಸಿಕೊಳ್ಳಿ.
icon

(2 / 11)

ಕಾರಿನೊಳಗೆ ಆಹಾರ ಚೆಲ್ಲಬೇಡಿ: ರಾತ್ರಿ ಹೊತ್ತು ಇಲಿಗಳು ಬಿಲದಿಂದ ಹೊರಗೆ ಬಂದು ಆಹಾರ ಹುಡುಕುತ್ತ ಇರುತ್ತವೆ.  ಕಾರಿನೊಳಗೆ ತಿಂಡಿ ತಿನಿಸುಗಳನ್ನು ಚೆಲ್ಲಿದ್ದರೆ ಅದರ ವಾಸನೆಗೆ ಇಲಿಗಳು ಬರಬಹುದು. ಹೀಗಾಗಿ, ಕಾರಿನೊಳಗೆ ತಿನ್ನುವುದನ್ನು ಅವಾಯ್ಡ್‌ ಮಾಡಿ. ಕಾರಿನೊಳಗೆ ಆಹಾರ ತುಣುಕುಗಳು ಚೆಲ್ಲಿದ್ದರೆ ಸ್ವಚ್ಛಗೊಳಿಸಲು ಮರೆಯಬೇಡಿ. 
icon

(3 / 11)

ಕಾರಿಗೆ ಬಾಡಿ ಮೆಷ್‌ ಅಳವಡಿಸಿ: ಕಾರಿನೊಳಗೆ ಇಲಿಗಳು ಪ್ರವೇಶಿಸಲು ಹಲವು ಕಿಂಡಿಗಳು ಇವೆ. ಏಸಿ ಅಥವಾ ಇತರೆ ಕಿಂಡಿಗಳು ಇರುವಲ್ಲಿ ಗಟ್ಟಿ ತಂತಿಯ ಬಾಡಿ ಮೆಷ್‌ಗಳನ್ನು ಅಳವಡಿಸಿ. car rat protection mesh ಅಥವಾ car rat protection net ಬಳಸಿ ಕಾರಿನೊಳಗೆ ಇಲಿಗಳು ಬರದಂತೆ ತಡೆಯಬಹುದು.
icon

(4 / 11)

ಬೆಳಕಿನಲ್ಲಿ ಪಾರ್ಕ್‌ ಮಾಡಿ: ಇಲಿಗೆ ಕತ್ತಲು ಇಷ್ಟ. ಕಾರು ಪಾರ್ಕ್‌ ಮಾಡುವ ಸ್ಥಳದಲ್ಲಿ ರಾತ್ರಿಯೂ ಬೆಳಕು ಇದ್ದರೆ ಉತ್ತಮ. ಉದಾಹರಣೆಗೆ ಸ್ಟ್ರೀಟ್‌ ಲೈಟ್‌ ಬೆಳಕು ಇದ್ದರೆ ಅಲ್ಲಿ ಇಲಿಗಳ ಉಪಟಳ ಕಡಿಮೆ ಇರಬಹುದು. ಕಾರು ಪಾರ್ಕಿಂಗ್‌ ಮಾಡುವ ಗ್ಯಾರೇಜ್‌ನಲ್ಲಿ ಲೈಟ್‌ ಹಾಕಿರಿ. ಮನೆಯ ಪಾರ್ಕಿಂಗ್‌ ಸ್ಥಳದಲ್ಲಿ ಲೈಟ್‌ ಹಾಕಿಡಬಹುದು. 
icon

(5 / 11)

ಪೆಪ್ಪರ್‌ಮಿಂಟ್‌ ಆಯಿಲ್‌: ಇಲಿಗಳಿಗೆ ಇಷ್ಟವಾಗದ ಪೆಪ್ಪರ್‌ಮಿಂಟ್‌ ಆಯಿಲ್‌ ಅನ್ನು ಹತ್ತಿಯ ಉಂಡೆಗಳಿಗೆ ಅದ್ದಿ ಕಾರಿನ ಬಾನೆಟ್‌ನೊಳಗೆ ಹಲವು ಕಡೆಗಳಲ್ಲಿ ಇಡಬಹುದು. 
icon

(6 / 11)

ತಂಬಾಕು: ಸಾಕಷ್ಟು ಕಾರು ಮಾಲೀಕರ ಪ್ರಕಾರ ಇಲಿಗಳಿಂದ ಪಾರಾಗಲು ತಂಬಾಕಿಗಿಂತ ಉತ್ತಮ ಮದ್ದು ಇನ್ನೊಂದಿಲ್ಲ. ತಂಬಾಕು ಸೇವನೆ ಆರೋಗ್ಯಕ್ಕೆ ಹಾನಿಕರ ಎಂದು ಇಲಿಗಳಿಗೆ ಚೆನ್ನಾಗಿ ಗೊತ್ತು. ತಂಬಾಕಿನ ಸ್ಮೆಲ್‌ ಇದ್ದರೆ ಇಲಿಗಳು ಕಾರಿನೊಳಗೆ ಸುಳಿಯದು. ಆದರೆ, ತಂಬಾಕು ಬೇಗ ಒಣಗಿ ಬಿಡುತ್ತದೆ. ಅದಕ್ಕಾಗಿ ಒದ್ದೆ ಬಟ್ಟೆ, ಒದ್ದೆ ಡೈಪರ್‌ನೊಳಗೆ (ಮಕ್ಕಳು ಬಳಸುವ) ತಂಬಾಕು ಇಡುವಂತಹ ಐಡಿಯಾಗಳನ್ನು ಮಾಡಿದರೆ ಒಳ್ಳೆಯದು. ಆಗಾಗ ತಂಬಾಕು ಬದಲಾಯಿಸುತ್ತ ಇರಬೇಕು.
icon

(7 / 11)

(stampedepestcontrol.com)

ರಾಟ್‌ ಕಾರ್‌ ಸ್ಪ್ರೇಗಳು: ಆನ್‌ಲೈನ್‌ ಅಥವಾ ಆಫ್‌ಲೈನ್‌ ಅಂಗಡಿಗಳಲ್ಲಿ rat car sprayಗಳು ದೊರಕುತ್ತವೆ. ಇವುಗಳನ್ನು ಬಳಸಿ ನೋಡಬಹುದು. ಇಂತಹ ಸ್ಪ್ರೇ ಬಳಸುವ ಮುನ್ನ ಅದರಲ್ಲಿ ನೀಡಿದ ಸಲಹೆಗಳನ್ನು ಎಚ್ಚರಿಕೆಯಿಂದ ಪಾಲಿಸಬೇಕು. ಅಂದರೆ, ಮಾಸ್ಕ್‌ ಇತ್ಯಾದಿ ಧರಿಸಿ ಸ್ಪ್ರೇ ಮಾಡಬೇಕು.
icon

(8 / 11)

ಇಲಿ ಬೋನು: ಕೆಲವೊಮ್ಮೆ ಕಾರುಗಳಿಗೆ ನಿರ್ದಿಷ್ಟ ಇಲಿಗಳು ಮಾತ್ರ ಹಾನಿ ಮಾಡುತ್ತವೆ. ಯಾವುದೋ ಒಂದು ಇಲಿ ಹೆಚ್ಚಾಗಿ ನಿಮ್ಮ ಕಾರನ್ನು ಟಾರ್ಗೆಟ್‌ ಮಾಡಿರುತ್ತದೆ. ಇಲಿ ಬೋನು ಅಥವಾ ಇಲಿಯನ್ನು ಹಿಡಿಯುವ, ಸಾಯಿಸುವ ವ್ಯವಸ್ಥೆಗಳ ಮೂಲಕ ಅಂತಹ ಇಲಿಗಳಿಂದ ಕಾರನ್ನು ರಕ್ಷಿಸಬಹುದು. ಒಂದು ಇಲಿ ನಿಮ್ಮ ಕಾರನ್ನು ಒಂದು ದಿನ ಪ್ರವೇಶಿಸಿದರೆ ಪ್ರತಿದಿನ ಪ್ರವೇಶಿಸಲು ಆರಂಭಿಸುತ್ತದೆ. 
icon

(9 / 11)

ಸೌಂಡ್‌ ಸಾಧನಗಳು: ಈಗ ಆನ್‌ಲೈನ್‌ನಲ್ಲಿ ಇಲಿಗಳನ್ನು ಓಡಿಸಲು ಆಲ್ಟ್ರಾಸೋನಿಕ್‌ ಸೌಂಡ್‌ನ ಸಾಧನಗಳು ದೊರಕುತ್ತವೆ. ಆ ಸೌಂಡ್‌ಗೆ ಇಲಿಗಳು ಬರುವುದಿಲ್ಲ. Ultrasonic Rat Repellent for Carನಂತಹ ಸಾಧನಗಳನ್ನು ಬಳಸಿ ನೋಡಬಹುದು.
icon

(10 / 11)

ನಿಮ್ಮ ಕಾರಿಗೆ ಇಲಿಗಳ ಉಪಟಳವಿದ್ದರೆ ಮೇಲಿನ ಪ್ರಯೋಗಗಳನ್ನು ಮಾಡಬಹುದು. ಎಷ್ಟೇ ಪ್ರಯತ್ನ ಪಟ್ಟರೂ ಇಲಿಗಳ ಕಾಟ ಕಡಿಮೆಯಾಗದೆ ಇದ್ದರೆ ಪಾರ್ಕಿಂಗ್‌ ಸ್ಥಳ ಬದಲಾಯಿಸುವುದೇ ಉಳಿದಿರುವ ದಾರಿಯಾಗಿದೆ.  ಕಾರನ್ನು  ಸಾಕಷ್ಟು ದಿನ ಪಾರ್ಕಿಂಗ್‌ ಸ್ಥಳದಲ್ಲಿಯೇ ಬಿಡಬೇಡಿ. ಆಗಾಗ ಓಡಿಸುತ್ತ ಇರಿ.  
icon

(11 / 11)

(pixabay )

ಇತರ ಗ್ಯಾಲರಿಗಳು