How to quit smoking: ಸಿಗರೇಟ್ ಚಟದಿಂದ ಮುಕ್ತಿ ಬೇಕಾ: ಈ ಆರು ಸಿಂಪಲ್ ಸ್ಟೆಪ್ಸ್ ನಿಮ್ಮ ಲೈಫ್ ಬದಲಿಸಬಹುದು..
- ಧೂಮಪಾನ ತ್ಯಜಿಸುವ ನಿರ್ಧಾರವನ್ನು ತೆಗೆದುಕೊಳ್ಳುವುದು ನಿಮ್ಮ ಆರೋಗ್ಯದ ಅತ್ಯಂತ ಪ್ರಮುಖ ಹಂತವಾಗಿದೆ. ಹಾನಿಕಾರಕ ವ್ಯಸನವನ್ನು ತೊರೆಯುವ ಪ್ರಕ್ರಿಯೆಯು ದೃಢ ನಿರ್ಧಾರವನ್ನು ತೆಗೆದುಕೊಳ್ಳುವುದರೊಂದಿಗೆ ಪ್ರಾರಂಭವಾಗುತ್ತದೆ. ಹಾಗಾದರೆ ಸಿಗರೇಟ್ ಸೇವನೆಯಿಂದ ಮುಕ್ತಿ ಪಡೆಯಲು ನೀವು ಅನುಸರಿಸಬಹುದಾದ ಸಿಂಪಲ್ ಕ್ರಮಗಳ ಬಗ್ಗೆ ನೋಡುವುದಾದರೆ..
- ಧೂಮಪಾನ ತ್ಯಜಿಸುವ ನಿರ್ಧಾರವನ್ನು ತೆಗೆದುಕೊಳ್ಳುವುದು ನಿಮ್ಮ ಆರೋಗ್ಯದ ಅತ್ಯಂತ ಪ್ರಮುಖ ಹಂತವಾಗಿದೆ. ಹಾನಿಕಾರಕ ವ್ಯಸನವನ್ನು ತೊರೆಯುವ ಪ್ರಕ್ರಿಯೆಯು ದೃಢ ನಿರ್ಧಾರವನ್ನು ತೆಗೆದುಕೊಳ್ಳುವುದರೊಂದಿಗೆ ಪ್ರಾರಂಭವಾಗುತ್ತದೆ. ಹಾಗಾದರೆ ಸಿಗರೇಟ್ ಸೇವನೆಯಿಂದ ಮುಕ್ತಿ ಪಡೆಯಲು ನೀವು ಅನುಸರಿಸಬಹುದಾದ ಸಿಂಪಲ್ ಕ್ರಮಗಳ ಬಗ್ಗೆ ನೋಡುವುದಾದರೆ..
(1 / 7)
ಧೂಮಪಾನವು ಹಾನಿಕಾರಕ ಅಭ್ಯಾಸವಾಗಿದೆ. ಕಾಲಾನಂತರದಲ್ಲಿ ಇದು ಕೆಟ್ಟ ಹವ್ಯಾಸಕ್ಕೆ ತಿರುಗುತ್ತದೆ. ಸಿಗರೇಟ್ ಸೇವನೆ ಜೀವನದಲ್ಲಿ ಗಂಭೀರವಾದ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಕ್ಯಾನ್ಸರ್ ಅಪಾಯವನ್ನು ತರುವುದರಿಂದ, ಶ್ವಾಸಕೋಶದ ಕಾಯಿಲೆಗಳಿಗೆ ಕಾರಣವಾಗುವವರೆಗೆ, ಧೂಮಪಾನವು ಅನೇಕ ಆರೋಗ್ಯ ಅಪಾಯಗಳನ್ನು ತರುತ್ತದೆ. ಆದ್ದರಿಂದ, ವ್ಯಸನವನ್ನು ಬಿಡುವುದು ಮತ್ತು ಹಾನಿಕಾರಕ ಅಭ್ಯಾಸವನ್ನು ಬಿಡುವುದು ಮುಖ್ಯ. ಆದರೆ ಆಗಾಗ್ಗೆ ಜನರು ಈ ಚಟವನ್ನು ಬಿಡಲು ಹೆಣಗಾಡುತ್ತಾರೆ. ಯಾವುದೇ ಅಭ್ಯಾಸವನ್ನು ಬದಲಾಯಿಸುವುದು ಒಂದು ಸವಾಲಿನ ಕೆಲಸವೇ ಸರಿ. ಆದರೆ ಹಾಗೆ ಮಾಡಲು ನಮಗೆ ಪ್ರೇರಣೆ ಸಿಕ್ಕಾಗ ಖಂಡಿತ ನಾವು ಬದಲಾವಣೆ ತರುತ್ತೇವೆ. ಏಕೆಂದರೆ ಎಲ್ಲಾ ವ್ಯಸನಗಳು ಅಂತಿಮವಾಗಿ ಸ್ವಯಂ-ವಿನಾಶಕಾರಿಯಾಗಿರುತ್ತವೆ. ನಿಮ್ಮ ವ್ಯಸನವನ್ನು ತೊಡೆದುಹಾಕಲು ಅಥವಾ ಧೂಮಪಾನವನ್ನು ತೊರೆಯಲು 6-ಹಂತದ ಸುಲಭ ಕ್ರಮವನ್ನು ಪೌಷ್ಠಿಕ ತಜ್ಞೆ ಅಂಜಲಿ ಮುಖರ್ಜಿ ತಿಳಿಸಿದ್ದಾರೆ. (ಸಾಂದರ್ಭಿಕ ಚಿತ್ರ)(Unsplash)
(2 / 7)
ಧೂಮಪಾನ ತ್ಯಜಿಸುವ ನಿರ್ಧಾರವನ್ನು ತೆಗೆದುಕೊಳ್ಳುವುದು ಅತ್ಯಂತ ಪ್ರಮುಖ ಹಂತವಾಗಿದೆ. ಹಾನಿಕಾರಕ ವ್ಯಸನವನ್ನು ತೊರೆಯುವ ಪ್ರಕ್ರಿಯೆಯು, ದೃಢ ನಿರ್ಧಾರವನ್ನು ತೆಗೆದುಕೊಳ್ಳುವುದರೊಂದಿಗೆ ಪ್ರಾರಂಭವಾಗುತ್ತದೆ. (ಸಾಂದರ್ಭಿಕ ಚಿತ್ರ)(Unsplash)
(3 / 7)
ಕಳೆದುಹೋದ ಆರೋಗ್ಯವನ್ನು ಮರಳಿ ಪಡೆಯಲು ತಾಜಾ ಹಣ್ಣುಗಳು ಮತ್ತು ತರಕಾರಿಗಳಲ್ಲಿ ಇರುವಂತಹ ಆ್ಯಂಟಿಆಕ್ಸಿಡೆಂಟ್‌ಗಳಾದ ಬೀಟಾ-ಕ್ಯಾರೋಟಿನ್, ವಿಟಮಿನ್ ಎ, ವಿಟಮಿನ್ ಸಿ ಮತ್ತು ವಿಟಮಿನ್ ಇಗಳ ಸೇವನೆಯನ್ನು ಹೆಚ್ಚಿಸಬೇಕು. (ಸಾಂದರ್ಭಿಕ ಚಿತ್ರ)(Unsplash)
(4 / 7)
ಧೂಮಪಾನವು ಚರ್ಮಕ್ಕೂ ಹಾನಿ ಮಾಡುತ್ತದೆ. ಪ್ರತಿದಿನ ಒಂದು ಲೋಟ ಹಸಿ ತರಕಾರಿ ರಸವನ್ನು ಸೇವಿಸುವುದರಿಂದ ಚರ್ಮವನ್ನು ಪೋಷಿಸಲು ಸಹಾಯ ಮಾಡುತ್ತದೆ. (ಸಾಂದರ್ಭಿಕ ಚಿತ್ರ)(Unsplash)
(5 / 7)
ಧೂಮಪಾನದ ಹಂಬಲವನ್ನು ಕಡಿಮೆ ಮಾಡಲು ಮತ್ತು ಹೆಚ್ಚಿನ ಫೈಬರ್ ಕ್ಷಾರೀಯ ಆಹಾರಕ್ಕೆ ಹೊಂದಿಕೊಳ್ಳಲು ಗೋಧಿ ಹೊಟ್ಟು, ಸಂಪೂರ್ಣ ಬೇಳೆಕಾಳುಗಳು, ಜೋಳ ಮತ್ತು ಇತರ ಆರೋಗ್ಯಕರ ಆಹಾರಗಳನ್ನು ಹೆಚ್ಚು ಸೇವಿಸಬೇಕು. (ಸಾಂದರ್ಭಿಕ ಚಿತ್ರ)(Unsplash)
(6 / 7)
ತ್ವಚೆಯನ್ನು ಪೋಷಿಸಲು ಮೀನು, ಬೀಜಗಳು, ಕಡು ಹಸಿರು ಹಣ್ಣುಗಳು ಮತ್ತು ತರಕಾರಿಗಳಂತ ಉತ್ತಮ ಆಹಾರ ಪದಾರ್ಥಗಳನ್ನು ಪ್ರತಿದಿನ ಸೇವಿಸಬೇಕು. (ಸಾಂದರ್ಭಿಕ ಚಿತ್ರ(Unsplash)
ಇತರ ಗ್ಯಾಲರಿಗಳು