Gold and Silver: ಹುಬ್ಬಳ್ಳಿಯಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 1 ಕೆಜಿ ಚಿನ್ನ, 1 ಕೆಜಿ ಬೆಳ್ಳಿ; ಓರ್ವ ಬಂಧನ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Gold And Silver: ಹುಬ್ಬಳ್ಳಿಯಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 1 ಕೆಜಿ ಚಿನ್ನ, 1 ಕೆಜಿ ಬೆಳ್ಳಿ; ಓರ್ವ ಬಂಧನ

Gold and Silver: ಹುಬ್ಬಳ್ಳಿಯಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 1 ಕೆಜಿ ಚಿನ್ನ, 1 ಕೆಜಿ ಬೆಳ್ಳಿ; ಓರ್ವ ಬಂಧನ

  • Hubballi Crime: ಹುಬ್ಬಳ್ಳಿಯಲ್ಲಿ ಅಕ್ರಮವಾಗಿ 1 ಕೆಜಿಗೂ ಹೆಚ್ಚು ಚಿನ್ನ, 1 ಕೆಜಿಗೂ ಅಧಿಕ ಬೆಳ್ಳಿಯನ್ನು ಸಾಗಿಸುತ್ತಿದ್ದ ವ್ಯಕ್ತಿಯನ್ನು ಸಿಸಿಬಿ ಮತ್ತು ವಿದ್ಯಾಗಿರಿ ಪೊಲೀಸರು ಬಂಧಿಸಿದ್ದಾರೆ.

ಹುಬ್ಬಳ್ಳಿ: ಖಾಸಗಿ ಬಸ್‌ನಲ್ಲಿ ಯಾವುದೇ ದಾಖಲೆಗಳಿಲ್ಲದೇ ಸಾಗಾಟ ಮಾಡುತ್ತಿದ್ದ ಲಕ್ಷಾಂತರ ಮೌಲ್ಯದ ಚಿನ್ನ ಮತ್ತು ಬೆಳ್ಳಿಯನ್ನು ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಸಿಸಿಬಿ ಮತ್ತು ವಿದ್ಯಾಗಿರಿ ಪೊಲೀಸರು ವಶಪಡಿಸಿಕೊಂಡಿದ್ದಾರೆ.
icon

(1 / 5)

ಅಕ್ಟೋಬರ್​ 16ರಂದು ಧಾರವಾಡ ಎಸ್​ಡಿಎಂ ಕಾಲೇಜ್ ಹತ್ತಿರ ಖಾಸಗಿ ಬಸ್ ಪರಿಶೀಲನೆ ನಡೆಸಲಾಯಿತು. ಅಭಿಷೇಕ್ ಎಂಬವರನ್ನು ಬಂಧಿಸಿ 1 ಕೆಜಿ 101 ಗ್ರಾಂ ಚಿನ್ನ, 1 ಕೆಜಿ 463 ಗ್ರಾಂ ಬೆಳ್ಳಿ ವಶಪಡಿಸಿಕೊಂಡರು. ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಡಿಸಿಪಿ ಮಹಾನಿಂಗ ನಂದಗಾಂವಿ ಮಾಹಿತಿ ನೀಡಿದರು.
icon

(2 / 5)

ಮುಂಬಯಿಂದ ಹುಬ್ಬಳ್ಳಿಯ ಕೆಲವು ಬಂಗಾರದ ಅಂಗಡಿಯವರಿಗೆ ಬಿಲ್ ಮತ್ತು ಜಿಎಸ್‌ಟಿ ಇಲ್ಲದೇ ಬಂಗಾರದ ಆಭರಣಗಳನ್ನು ತಯಾರಿಸಿ ಹುಬ್ಬಳ್ಳಿಗೆ ಅಕ್ರಮವಾಗಿ ಸಾಗಾಟ ಮಾಡಲಾಗುತ್ತಿತ್ತು ಎಂದು ನಂದಗಾವಿ ಹೇಳಿದರು. 
icon

(3 / 5)

ಈ ಬಗ್ಗೆ ಧಾರವಾಡ ವಿದ್ಯಾಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಈ ಬಗ್ಗೆ ಇನ್ನೂ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದರು. ಈ ಸಂದರ್ಭದಲ್ಲಿ ಹಿರಿಯ ಅಧಿಕಾರಿಗಳು ಇದ್ದರು.
icon

(4 / 5)

ವಶಪಡಿಸಿಕೊಂಡ ಚಿನ್ನ ಮತ್ತು ಬೆಳ್ಳಿಯ ಮೌಲ್ಯವು ಅಂದಾಜು 88 ಲಕ್ಷ ಇರಬಹುದು ಎಂದು ಹೇಳಲಾಗಿದೆ.
icon

(5 / 5)

ವಶಪಡಿಸಿಕೊಂಡ ಚಿನ್ನ ಮತ್ತು ಬೆಳ್ಳಿಯ ಮೌಲ್ಯವು ಅಂದಾಜು 88 ಲಕ್ಷ ಇರಬಹುದು ಎಂದು ಹೇಳಲಾಗಿದೆ.(Canva)

ಇತರ ಗ್ಯಾಲರಿಗಳು