ಡಾ ಬಿಆರ್ ಅಂಬೇಡ್ಕರ್ ಕುರಿತ ಸಚಿವ ಅಮಿತ್ ಶಾ ಹೇಳಿಕೆಗೆ ಖಂಡನೆ, ಅಂಬೇಡ್ಕರ್ ಅಭಿಮಾನಿಗಳ ಕರೆಗೆ ಹುಬ್ಬಳ್ಳಿ ಧಾರವಾಡ ಬಂದ್; ಚಿತ್ರನೋಟ
Hubballi Dharwad Bandh: ಡಾ ಬಿಆರ್ ಅಂಬೇಡ್ಕರ್ ಅವರ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ನೀಡಿದ ಹೇಳಿಕೆ ಖಂಡಿಸಿ ಅಂಬೇಡ್ಕರ್ ಅಭಿಮಾನಿಗಳು ನೀಡಿದ್ದ ಕರೆಗೆ ಹುಬ್ಬಳ್ಳಿ - ಧಾರವಾಡ ಬಂದ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇಂದು (ಜನವರಿ 9) ಹುಬ್ಬಳ್ಳಿ ಧಾರವಾಡ ಬಂದ್ ಆಗಿದ್ದು, ಚಿತ್ರನೋಟ ವಿವರ ಹೀಗಿದೆ.
(1 / 8)
ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ಅವರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಸಂಪುಟದಿಂದ ಕೈ ಬಿಡಬೇಕೆಂದು ಆಗ್ರಹಿಸಿ ಡಾ. ಬಿ ಆರ್ ಅಂಬೇಡ್ಕರ ಅವರ ಸ್ವಾಭಿಮಾನಿ ಅಭಿಮಾನಿ ಅನುಯಾಯಿಗಳ ಬಳಗ ಸಹಿತ 130ಕ್ಕೂ ಹೆಚ್ಚು ಸಂಘಟನೆಗಳು ಕರೆ ನೀಡಿದ್ದ ಹುಬ್ಬಳ್ಳಿ- ಧಾರವಾಡ ಬಂದ್‌ಗೆ ಸಂಪೂರ್ಣ ಬೆಂಬಲ ವ್ಯಕ್ತವಾಗಿದ್ದು ಅವಳಿನಗರ ಸಂಪೂರ್ಣ ಸ್ತಬ್ದಗೊಂಡಿದೆ.
(2 / 8)
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಸಂಪುಟದಿಂದ ಕೈ ಬಿಡಬೇಕೆಂದು ಆಗ್ರಹಿಸಿ ಕರೆ ನೀಡಿದ ಬಂದ್ ಹಿನ್ನೆಲೆಯಲ್ಲಿ ಬೆಳಗಿನಿಂದಲೇ ಪ್ರತಿಭಟನೆ ಆರಂಭಗೊಂಡಿದ್ದು, ಅವಳಿನಗರದ ಬಹುತೇಕ ಎಲ್ಲ ಚಟುವಟಿಕೆಗಳು ಬಂದ್ ಆಗಿದೆ. ಹುಬ್ಬಳ್ಳಿಯ ಚನ್ನಮ್ಮ ವರ್ತುಲದಲ್ಲಿ ಮತ್ತು ಧಾರವಾಡದ ಜುಬ್ಲಿ ವೃತ್ತದಲ್ಲಿ ಪ್ರತಿಭಟನಾಕಾರರು ದೊಡ್ಡ ಪ್ರಮಾಣದಲ್ಲಿ ಸೇರಿದ್ದರು. ಚೆನ್ನಮ್ಮ, ಜ್ಯುಬಿಲಿ ವೃತ್ತದಲ್ಲಿ ಜೈ ಭೀಮ್ ಘೋಷಣೆ ಮುಗಿಲು ಮುಟ್ಟಿತ್ತು.
(3 / 8)
ಪ್ರತಿಭಟನೆ ಸಂದರ್ಭದಲ್ಲಿ ಹುಬ್ಬಳ್ಳಿ - ಧಾರವಾಡದ ಹಲವೆಡೆ ಪ್ರತಿಭಟನಾಕಾರರು ಟೈರ್‌ಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು. ಅವಳಿನಗರದ ಬಹುತೇಕ ಅಂಗಡಿ-ಮುಗ್ಗಟ್ಟುಗಳು ಬಂದ್ ಆಗಿದ್ದು ಶಾಲೆಗಳಿಗೆ ರಜೆ ಕೊಟ್ಟಿದ್ದು, ಬಸ್ ಸಂಚಾರ ಸಂಪೂರ್ಣ ಬಂದ್ ಆಗಿದ್ದವು.
(4 / 8)
ಬೆಳಿಗ್ಗೆ 6 ಗಂಟೆಯಿಂದಲೇ ದಲಿತಪರ ಹಾಗೂ ವಿವಿಧ ಸಂಘಟನೆಗಳ ಕಾರ್ಯಕರ್ತರು ಮತ್ತು ಮುಖಂಡರು ರಸ್ತೆಗಿಳಿದು ಪ್ರತಿಭಟನೆ ನಡೆಸಿದರು.
(5 / 8)
ಅಲ್ಲಲ್ಲಿ ತೆರೆಯಲಾಗಿದ್ದ ಹೋಟೆಲ್‌ಗಳಿಗೆ ನುಗ್ಗಿದ ಪ್ರತಿಭಟನಾಕಾರರು ಅವುಗಳನ್ನು ಒತ್ತಾಯಾಪೂರ್ವಕವಾಗಿ ಬಂದ್ ಮಾಡಿಸಿದ ದೃಶ್ಯಗಳು ಕಂಡುಬಂದವು. ಹಲವು ಕಡೆ ಖಾಸಗಿ ಬಸ್, ವಾಹನಗಳ ಚಕ್ರಗಳ ಗಾಳಿ ತೆಗೆದಿದ್ದು, ಚನ್ನಮ್ಮ ವೃತ್ತದ ಬಳಿ ಟೈರ್ ಗೆ ಬೆಂಕಿ ಹಚ್ಚಿ ಪ್ರತಿಭಟಿಸಿದರು. ಕಾನೂನು ಸುವ್ಯವಸ್ಥೆ ಕಾಪಾಡುವ ಸಲುವಾಗಿ ಪೊಲೀಸರು ಬಿಗಿ ಪಹರೆ ನಡೆಸಿದರು.
(6 / 8)
ಹೋರಾಟಗಾರರು ತಂಡ, ತಂಡವಾಗಿ ವಿವಿಧ ಕಡೆ ತೆರಳಿ ಅಂಗಡಿ ಮುಗ್ಗಟ್ಟುಗಳನ್ನು ಮುಚ್ಚಿಸಿದರು. ಖಾಸಗಿ ಬಸ್, ಕ್ಯಾಬ್, ಆಟೋರಿಕ್ಷಾ ಇನ್ನಿತರ ವಾಹನಗಳ ಚಕ್ರಗಳ ಗಾಳಿ ತೆಗೆಯಲಾಯಿತು..ಚನ್ನಮ್ಮ ವೃತ್ತ, ಹೊಸೂರು ಸೇರಿದಂತೆ ಪ್ರಮುಖ ರಸ್ತೆ, ವೃತ್ತಗಳಲ್ಲಿ ಅಂಗಡಿ, ಮಳಿಗೆಗಳು ಮುಚ್ಚಿದ್ದವು.
ಇತರ ಗ್ಯಾಲರಿಗಳು