Jog Falls: ಜೋಗ ನೋಡಲು ಸಾರಿಗೆ ಸೇವೆ, ಹುಬ್ಬಳ್ಳಿಯಿಂದ ಭಾನುವಾರಗಳಂದು ವಿಶೇಷ ಬಸ್, ದರ ಎಷ್ಟು
- Nwkrtc bus to Jog falls ಜೋಗ ಜಲಪಾತದ ಸವಿ ಸವಿಯಲು ಈಗ ಒಳ್ಳೆಯ ಅವಕಾಶ. ಇದಕ್ಕಾಗಿ ಹುಬ್ಬಳ್ಳಿ ಕೇಂದ್ರಿತ ವಾಯುವ್ಯ ಸಾರಿಗೆಯು ಪ್ರತಿ ಭಾನುವಾರ ಜೋಗ ಜಲಪಾತಕ್ಕೆ ವಿಶೇಷ ಬಸ್ ಸೇವೆ ಒದಗಸಲಿದೆ.
- Nwkrtc bus to Jog falls ಜೋಗ ಜಲಪಾತದ ಸವಿ ಸವಿಯಲು ಈಗ ಒಳ್ಳೆಯ ಅವಕಾಶ. ಇದಕ್ಕಾಗಿ ಹುಬ್ಬಳ್ಳಿ ಕೇಂದ್ರಿತ ವಾಯುವ್ಯ ಸಾರಿಗೆಯು ಪ್ರತಿ ಭಾನುವಾರ ಜೋಗ ಜಲಪಾತಕ್ಕೆ ವಿಶೇಷ ಬಸ್ ಸೇವೆ ಒದಗಸಲಿದೆ.
(1 / 6)
ಮಾನವನಾಗಿ ಹುಟ್ಟಿದ ಮೇಲೆ ಏನೇನ್ ಕಂಡು. ಇರೋದ್ರೋಳಗೆ ಒಮ್ಮೆ ನೋಡಿ ಜೋಗ ಗುಂಡಿ ಎನ್ನುವ ಹಾಡು ಜನಜನಿತ. ಈಗ ಮಳೆಗಾಲದಲ್ಲಿ ಜೋಗ ನೋಡುವುದೇ ಚಂದ.
(2 / 6)
ಜೋಗವನ್ನು ಉತ್ತರ ಕರ್ನಾಟಕ ಭಾಗದವವರು ನೋಡಲು ಅನುಕೂಲವಾಗುವಂತೆ ವಾಯುವ್ಯ ಸಾರಿಗೆ ಸಂಸ್ಥೆ ಪ್ರತಿ ಭಾನುವಾರ ಹುಬ್ಬಳ್ಳಿಯಿಂದ ಶಿರಸಿ ಮಾರ್ಗವಾಗಿ ಸಾರಿಗೆ ಸೇವೆಯನ್ನು ಒದಗಸಿದೆ,
(3 / 6)
ಹುಬ್ಬಳ್ಳಿಯಿಂದ ಬೆಳಿಗ್ಗೆ 7:30ಕ್ಕೆ ಹೊರಡುವ ರಾಜಹಂಸ ಬಸ್ ಬೆಳಿಗ್ಗೆ 11:45ಕ್ಕೆ ಜೋಗ ಜಲಪಾತ ತಲುಪಲಿದೆ. ಸುಮಾರು ಐದು ತಾಸು ಜೋಗ ನೋಡಲು ಅವಕಾಶ ಇರಲಿದೆ.
(4 / 6)
ಜೋಗದಿಂದ ಸಂಜೆ 5ಕ್ಕೆ ಹೊರಡುವ ಬಸ್ ರಾತ್ರಿ 9:30 ಕ್ಕೆ ಹುಬ್ಬಳ್ಳಿ ತಲುಪಲಿದೆ. ಈ ಬಸ್ ದರವನ್ನು ಒಬ್ಬರಿಗೆ . 430. ರೂ. ನಿಗದಿ ಮಾಡಲಾಗಿದೆ.
(5 / 6)
ಹುಬ್ಬಳ್ಳಿಯಿಂದ ಬೆಳಿಗ್ಗೆ 8ಕ್ಕೆ ವೋಲ್ವೋ ಬಸ್ ಜೋಗ ಜಲಪಾತಕ್ಕೆ ಹೊರಡಲಿದೆ. ಅದು ಮಧ್ಯಾಹ್ನ ಜೋಗ ತಲುಪಲಿದೆ. ಸಂಜೆವರೆಗೂ ವೀಕ್ಷಣೆಗೆ ಅವಕಾಶವಿದೆ. ಸಂಜೆ 5ಕ್ಕೆ ಹೊರಟು ರಾತ್ರಿ 9ಕ್ಕೆ ಹುಬ್ಬಳ್ಳಿ ತಲುಪಲಿದೆ. ಈ ಬಸ್‌ಗೆ ಒಬ್ಬರಿಗೆ 600 ರೂ. ದರ ನಿಗದಿಪಡಿಸಲಾಗಿದೆ.
ಇತರ ಗ್ಯಾಲರಿಗಳು