Hubli News:ರೊಟ್ಟಿಯೂರು ಹುಬ್ಬಳ್ಳಿಯಲ್ಲೂ ಹಲಸು ರುಚಿ, ಜನರನ್ನು ಸೆಳೆದ ಸಹಜ ಸಮೃದ್ದ ಹಲಸಿನ ಮೇಳ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Hubli News:ರೊಟ್ಟಿಯೂರು ಹುಬ್ಬಳ್ಳಿಯಲ್ಲೂ ಹಲಸು ರುಚಿ, ಜನರನ್ನು ಸೆಳೆದ ಸಹಜ ಸಮೃದ್ದ ಹಲಸಿನ ಮೇಳ

Hubli News:ರೊಟ್ಟಿಯೂರು ಹುಬ್ಬಳ್ಳಿಯಲ್ಲೂ ಹಲಸು ರುಚಿ, ಜನರನ್ನು ಸೆಳೆದ ಸಹಜ ಸಮೃದ್ದ ಹಲಸಿನ ಮೇಳ

  • Jackfruit mela ಉತ್ತರ ಕರ್ನಾಟಕದ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ( Hubli Jackfruit fair) ಸಹಜ ಸಮೃದ್ದ ಸಂಘಟನೆಯವರು ಆಯೋಜಿಸಿದ್ದ ಹಲಸಿನ ಹಣ್ಣಿನ ಮೇಳವು ಯಶಸ್ವಿಯಾಯಿತು.

ಕರ್ನಾಟಕದ ನಾನಾ ಭಾಗಗಳಲ್ಲಿ ಹಲಸಿನ ಹಣ್ಣಿನ ಮೇಳ ಆಯೋಜಿಸಿದ್ದ ಸಹಜ ಸಮೃದ್ದ ಸಂಘಟನೆ ಈ ಬಾರಿ ಹುಬ್ಬಳ್ಳಿಯ ಮೂರು ಸಾವಿರ ಮಠದಲ್ಲಿ ಹಲಸಿನ ಮೇಳವನ್ನು ಎರಡು ದಿನ ಕಾಲ ಹಮ್ಮಿಕೊಂಡಿತ್ತು, ಈ ವೇಳೆ ರೂಪಿಸಿದ ಹಲಸಿನ ರಂಗೋಲಿ ಗಮನ ಸೆಳೆಯಿತು.
icon

(1 / 8)

ಹಲಸಿನ ಹಬ್ಬದ ಅಂಗವಾಗಿ ರೂಪಿಸಿದ್ದ ವೇದಿಕೆಯ ಕಾರ್ಯಕ್ರಮದಲ್ಲೂ ಹಲಸಿನ ಘಮಲಿನ ಜತೆ ಆಕರ್ಷಕ ದೀಪಕ್ಕೂ ಹಲಸು ಬಳಸಿದ್ದು ವಿಶೇಷ,
icon

(2 / 8)

ಹುಬ್ಬಳ್ಳಿಯಲ್ಲಿ ಆಯೋಜನೆಗೊಂಡಿದ್ದ ಎರಡು ದಿನದ ಹಲಸಿನ ಹಬ್ಬದ ಮೇಳವನ್ನು ಮೂರುಸಾವಿರ ಮಠದ ಜಗದ್ಗುರುಗಳು ಉದ್ಘಾಟನೆ ಮಾಡಿ ಉತ್ಸಾಹ ತುಂಬಿದರು.
icon

(3 / 8)

ಕುಂದಗೋಳದ ಮಳಲಿಯ ಮಹಿಳಾ ಸಂಘದವರೇ ನರ್ಸರಿ ಮಾಡಿಕೊಂಡಿದ್ದಾರೆ. ಹಲಸಿನ‌ ಗಿಡಗಳನ್ನು ಅವರು ಮಾರಾಟ ಮಾಡಿದರು. ಗಿಡ ಮಾರಾಟ ಹೊಸ ಅನುಭವ ಅವರಿಗೆ.30 ಸಾವಿರ ಮೌಲ್ಯದ ಗಿಡ ಮಾರಿದರು.
icon

(4 / 8)

ಉತ್ತರ ಕರ್ನಾಟಕ ಭಾಗದಲ್ಲಿ ಭಿನ್ನ ಹಲಸು ಬೆಳೆಯುವ ಉತ್ಸಾಹದೊಂದಿಗೆ ಹಲವರು ಹಲಸಿನ ಸಸಿಗಳನ್ನು ಖರೀದಿ ಮಾಡಿದರು.
icon

(5 / 8)

ಹುಬ್ಬಳ್ಳಿ ಹಲಸಿನ ಮೇಳಕ್ಕೆ ಬಂದವರು ಹಲಸನ್ನು ಖರೀದಿಸಿದರು,ಹೆಗ್ಗಡ ದೇವನಕೋಟೆ ಯಿಂದ ಎರಡು ಟನ್ ಮತ್ತು ಚಿಕ್ಕನಾಯಕನಹಳ್ಳಿಯಿಂದ ಒಂದು ಟನ್ ಹಲಸಿನ ಹಣ್ಣು ನೇರ ರೈತರಿಂದ ಕೊಂಡು ತರಲಾಗಿತ್ತು. ಹತ್ತಾರು ಹಣ್ಣು ಬಿಟ್ಟರೆ ಎಲ್ಲ ಖಾಲಿ. ಚಿಕ್ಕನಾಯಕನಹಳ್ಳಿ‌ ಚಂದ್ರಹಲಸಿನ ರುಚಿಗೆ ಹುಬ್ಬಳ್ಳಿಗರು ಫಿದಾ ಆದರು.
icon

(6 / 8)

ಹುಬ್ಬಳ್ಳಿ ಹಲಸಿನ ಹಬ್ಬದ ಭಾಗವಾಗಿ ಹಮ್ಮಿಕೊಂಡಿದ್ದ ಹಲಸಿನ ಹಣ್ಣು ತಿನ್ನುವ ಸ್ಪರ್ಧೆ. ಈ ವೇಳೆ ತಿನ್ನಲು ಮಹಿಳೆಯರು ಸಜ್ಜಾಗಿದ್ದರು.
icon

(7 / 8)

ಹುಬ್ಬಳ್ಳಿ ಹಲಸಿನ ಹಬ್ಬದ ಭಾಗವಾಗಿ ಆಯೋಜಿಸಿದ್ದ ನಾ ಕಂಡ ಹಲಸು' ಸ್ಥಳದಲ್ಲೇ ಚಿತ್ರ ಬಿಡಿಸುವ ಸ್ಪರ್ಧೆಗೆ 80 ಮಕ್ಕಳು ಬಂದಿದ್ದರು. ವಿಜೇತರಿಗೆ ಬಹುಮಾನಗಳು ದೊರೆತವು,
icon

(8 / 8)

ಇತರ ಗ್ಯಾಲರಿಗಳು