ಬಾನೆತ್ತರದಿಂದ ಭುವಿಗೆ ಧುಮುಕುತ್ತಿದ್ದಾಳೆ ಬಾದಾಮಿಯ ಈ ಮಳೆಗಾಲದ ಸುಂದರಿ, ಹುಲಿಗೆಮ್ಮ ಕೊಳ್ಳ ಜಲಪಾತದ ಚಿತ್ರನೋಟ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಬಾನೆತ್ತರದಿಂದ ಭುವಿಗೆ ಧುಮುಕುತ್ತಿದ್ದಾಳೆ ಬಾದಾಮಿಯ ಈ ಮಳೆಗಾಲದ ಸುಂದರಿ, ಹುಲಿಗೆಮ್ಮ ಕೊಳ್ಳ ಜಲಪಾತದ ಚಿತ್ರನೋಟ

ಬಾನೆತ್ತರದಿಂದ ಭುವಿಗೆ ಧುಮುಕುತ್ತಿದ್ದಾಳೆ ಬಾದಾಮಿಯ ಈ ಮಳೆಗಾಲದ ಸುಂದರಿ, ಹುಲಿಗೆಮ್ಮ ಕೊಳ್ಳ ಜಲಪಾತದ ಚಿತ್ರನೋಟ

ಬಾಗಲಕೋಟೆ ಜಿಲ್ಲೆಯಲ್ಲಿ ಮುಂಗಾರು ಪೂರ್ವ ಮಳೆಗೆ ವಿವಿಧ ಜಲಪಾತಗಳು ಮೈದುಂಬಿ ಹರಿಯಲಾರಂಭಿಸಿವೆ. ಈ ಪೈಕಿ ಬಾದಾಮಿ ತಾಲೂಕಿನ ಈ ಸುಂದರ ಜಲಪಾತವೂ ಒಂದು. ಇಲ್ಲಿ ಜನಕಾರ್ಷಣೆಗೆ ಒಳಗಾಗಿರುವ ಈ ಸುಂದರಿಯೇ ಹುಲಿಗೆಮ್ಮ ಕೊಳ್ಳ ಜಲಪಾತ.

ಸತತ ಮಳೆಯ ಕಾರಣ ಬಾಗಲಕೋಟೆ ಜಿಲ್ಲೆ ಪ್ರಮುಖ ಐತಿಹಾಸಿಕ ತಾಣಗಳಲ್ಲಿ ಜಲಪಾತಗಳು ಮೈದುಂಬಿ ಹರಿಯತೊಡಗಿವೆ. ಮುಂಗಾರು ಪೂರ್ವದಲ್ಲೇ ಅಂದರೆ ಬೇಸಿಗೆಯಲ್ಲೇ ಪ್ರವಾಸಿಗರಿಗೆ ಜಲಪಾತ ದರ್ಶನವಾಗಿದೆ. ಬಾನೆತ್ತರದಿಂದ ಭುವಿಗೆ ಧುಮುಕುತ್ತಿರುವಂತೆ ಭಾಸವಾಗುವ ಈ ಜಲಸುಂದರಿಯೇ ಹುಲಿಗೆಮ್ಮ ಕೊಳ್ಳ ಜಲಪಾತ.
icon

(1 / 9)

ಬಾದಾಮಿ ತಾಲೂಕು ಬಿಎನ್‌ ಜಾಲಿಹಾಳ ಗ್ರಾಮದಿಂದ 2 ಕಿಮೀ ದೂರ ಇರುವ ಬೆಟ್ಟದ ಬಳಿ ಇದೆ ಹುಲಿಗೆಮ್ಮ ಕೊಳ್ಳ ಜಲಪಾತ.
icon

(2 / 9)

ಬಾದಾಮಿಯಿಂದ‌ 20 ಕೀ ಮೀಟರ್ ದೂರದಲ್ಲಿರುವ ಈ ಪ್ರದೇಶವು ಇತಿಹಾಸ ಪ್ರಸಿದ್ಧ ಕ್ಷೇತ್ರವೂ ಹೌದು.
icon

(3 / 9)

ಸತತ ಮಳೆಯ ಕಾರಣ ಬೆಟ್ಟದ ಮೇಲೆ ಮಳೆ ನೀರು ತುಂಬಿಕೊಂಡು ಅಲ್ಲಿಂದ 100 ಅಡಿ ಕೆಳಕ್ಕೆ ದುಮ್ಮಿಕ್ಕುವ ದೃಶ್ಯ ಮನೋಹರವಾಗಿದ್ದು, ಪ್ರವಾಸಿಗರ ನೋಟ ಸೆಳೆದಿದೆ.
icon

(4 / 9)

ಬಾನೆತ್ತರದಿಂದ ಭುವಿಗೆ ಧುಮುಕುವ ಜಲಧಾರೆ ನೋಡುವಾಗ ಅದರ ನೊರೆ ದೂರಕ್ಕೆ ಹಾಲಿನ ನೊರೆಯಂತೆ ಭಾಸವಾಗುತ್ತದೆ. ಸ್ವಲ್ಪ ಬಿಸಿಲು ಬಿದ್ದರಂತೂ ಕಾಮನ ಬಿಲ್ಲಿನ ದರ್ಶನವೂ ಉಂಟು.
icon

(5 / 9)

ಹುಲಿಗೆಮ್ಮ ಕೊಳ್ಳವು ಚಾಲುಕ್ಯರ ಕಾಲದಲ್ಲಿ ಖಜಾನೆ ಕೇಂದ್ರವಾಗಿತ್ತು ಎಂಬ ಉಲ್ಲೇಖವೂ ದಾಖಲೆಗಳಲ್ಲಿದೆ ಎಂದು ಸ್ಥಳೀಯರು ಹೇಳುತ್ತಾರೆ.
icon

(6 / 9)

ಸಾಧು ಸಂತರು ತಪಸ್ಸು ಮಾಡುವ ಸ್ಥಳವಾಗಿತ್ತು. ಹೀಗಾಗಿ ಅಲ್ಲಿ ದೇವರ ಸಾನ್ನಿಧ್ಯವಿದೆ ಎಂದು ಪುರಾಣಕಥೆಗಳು ಹೇಳುತ್ತವೆ.
icon

(7 / 9)

ಹುಲಿಗೆಮ್ಮ ದೇವಿ ಸೇರಿ ಸಪ್ತ ಮಾತೃಕೆಯರು ಮತ್ತು ಶಿವ ಲಿಂಗ ಇರುವಂತಹ ಸಣ್ಣ ಸಣ್ಣ ದೇವಾಲಯಗಳೂ ಈ ಬೆಟ್ಟದ ತಪ್ಪಲಲ್ಲಿದೆ. ಮಳೆಗಾಲ ಬಂತೆಂದರೆ ಈ ಕ್ಷೇತ್ರದ ಭಕ್ತರಿಗೆ ಸಂಭ್ರಮ.
icon

(8 / 9)

ಪ್ರತಿ ವರ್ಷ ಮಳೆಗಾಲದಲ್ಲಿ ಹುಲಿಗೆಮ್ಮ ಕೊಳ್ಳಕ್ಕೆ ಬಹಳಷ್ಟು ಭಕ್ತರು, ಪ್ರವಾಸಿಗರು ಬಂದು ಪುಣ್ಯ ಸ್ನಾನ ಮಾಡಿ ದೇವರ ದರ್ಶನ ಮಾಡಿಕೊಂಡು ಹೋಗುವುದು ವಾಡಿಕೆ. ಈ ಬಾರಿ ಮುಂಗಾರು ಪೂರ್ವದಲ್ಲೇ ಹುಲಿಗೆಮ್ಮ ಕೊಳ್ಳ ತುಂಬಿ ಹರಿಯುತ್ತಿರುವುದು ಭಕ್ತರಲ್ಲಿ ಸಂಭ್ರಮ ಮೂಡಿಸಿದೆ
icon

(9 / 9)

ಉಮೇಶ್ ಕುಮಾರ್ ಶಿಮ್ಲಡ್ಕ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದ ಸುದ್ದಿ ಸಂಪಾದಕ. ಜೀವನದ ಕಲಿಕಾರ್ಥಿ. ದೇಶ, ವಿದೇಶಗಳ ಪ್ರಸಕ್ತ ವಿದ್ಯಮಾನ, ವಾಣಿಜ್ಯ, ವಿಜ್ಞಾನ ತಂತ್ರಜ್ಞಾನ ಕುರಿತು ಕುತೂಹಲಿ. ಹೊಸ ದಿಗಂತ, ಉದಯವಾಣಿ, ವಿಜಯ ಕರ್ನಾಟಕ, ವಿಜಯವಾಣಿ ಪತ್ರಿಕೆಗಳು. ಏಷ್ಯಾನೆಟ್ ಸುವರ್ಣ, ಸಮಯ ಸುದ್ದಿವಾಹಿನಿಗಳ ವಿವಿಧ ವಿಭಾಗಗಳು ಸೇರಿ 20 ವರ್ಷಗಳಿಗೂ ಹೆಚ್ಚಿನ ಅನುಭವ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ನಿವಾಸಿ.

ಇತರ ಗ್ಯಾಲರಿಗಳು