Black Pepper Benefits: 'ಅ'ದಿಂದ 'ಅಃ'ದವರೆಗೆ... ಕರಿಮೆಣಸಿನ ಪ್ರಯೋಜನ ಹೀಗಿದೆ ಎಣಿಸಿ
Black Pepper Benefits: ಬಹುತೇಕ ಎಲ್ಲರೂ, ತಮ್ಮ ಅಡುಗೆಯಲ್ಲಿ ಕರಿಮೆಣಸನ್ನು ಬಳಸುತ್ತಾರೆ. ಆಯುರ್ವೇದ ಪದ್ಧತಿಯಲ್ಲೇ ಇವುಗಳ ಆರೋಗ್ಯ ಪ್ರಯೋಜನಗಳ ಬಗ್ಗೆ ಮಾಹಿತಿ ಇದೆ. ದೇಹದ ಆರೋಗ್ಯಕ್ಕೆ ಅಪಾರ ಪ್ರಯೋಜನವಿರುವ ಮಸಾಲ ಪದಾರ್ಥವಾಗಿರುವ ಕರಿಮೆಣಸು ಅಥವಾ ಕಾಳುಮೆಣಸನ್ನು ಹೇಗೆ ಬಳಸುವುದು ಎಂಬುದನ್ನು ಇಲ್ಲಿ ತಿಳಿಯಿರಿ.
(1 / 7)
ಕರಿಮೆಣಸು ಬ್ಯಾಕ್ಟೀರಿಯಾ ವಿರೋಧಿ ಗುಣಲಕ್ಷಣಗಳನ್ನು ಹೊಂದಿದೆ. ಇದು ದೇಹವನ್ನು ವಿವಿಧ ಸೋಂಕುಗಳಿಂದ ರಕ್ಷಿಸಲು ಸಹಾಯ ಮಾಡುತ್ತದೆ.
(2 / 7)
ಕರಿಮೆಣಸಿನಲ್ಲಿ ವಿಟಮಿನ್ ಸಿ ಕೂಡ ಇದೆ. ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಕೆಲಸ ಮಾಡುತ್ತದೆ. ಅಲ್ಲದೆ ಇದು ದೇಹದಿಂದ ವಿಷವನ್ನು ತೆಗೆದುಹಾಕುತ್ತದೆ. ಕರಿಮೆಣಸನ್ನು ವಿವಿಧ ರೀತಿಯಲ್ಲಿ ಹೇಗೆ ಬಳಸಬಹುದು ಎಂಬುದನ್ನು ಇಲ್ಲಿ ತಿಳಿಯಿರಿ.
(3 / 7)
ಕರಿಮೆಣಸನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಅಗಿದು ತಿನ್ನಬಹುದು. ಮಧುಮೇಹ ಇರುವವರು ಸೇವಿಸಿದರೂ ಒಳ್ಳೆಯದು. ಹೀಗೆ ಮಾಡುವುದರಿಂದ ಹಾರ್ಮೋನುಗಳು ಸಮತೋಲನದಲ್ಲಿರಲಿವೆ. ಮಹಿಳೆಯರಲ್ಲಿ ನಿಯಮಿತ ಪಿರಿಯಡ್ಸ್‌ಗೂ ಇದು ಸಹಕಾರಿಯಾಗಲಿದೆ.
(4 / 7)
ಚೆನ್ನಾಗಿ ನಿದ್ರೆ ಬರಲು ಮತ್ತು ಕೀಲು ನೋವಿನಿಂದ ಪರಿಹಾರಕ್ಕಾಗಿ, ಮಲಗುವ ಮುನ್ನ ಒಂದು ಚಿಟಿಕೆ ಕಾಳುಮೆಣಸಿನ ಪುಡಿಯನ್ನು ಹಾಲಿನಲ್ಲಿ ಹಾಕಿ ಸೇವಿಸಬಹುದು. ಅಥವಾ, ಒಂದು ಚಮಚ ದೇಸಿ ತುಪ್ಪದ ಜತೆಗೆ ಬೆರೆಸಿ ಸೇವಿಸುವುದರಿಂದ ರೋಗನಿರೋಧಕ ಶಕ್ತಿ ಸುಧಾರಿಸುತ್ತದೆ. ಅಲ್ಲದೆ ಮಾನಸಿಕ ಆರೋಗ್ಯಕ್ಕೂ ಇದು ಉತ್ತಮ.
(5 / 7)
ಕರಿಮೆಣಸು ವಿಟಮಿನ್ ಮತ್ತು ಖನಿಜಗಳಲ್ಲಿ ಸಮೃದ್ಧವಾಗಿದೆ. ರೋಗನಿರೋಧಕ ಶಕ್ತಿ ಮತ್ತು ಉಸಿರಾಟದ ಸಮಸ್ಯೆಗಳಿಗೆ, 1 ಚಮಚ ಜೇನುತುಪ್ಪಕ್ಕೆ ಒಂದು ಚಿಟಿಕೆ ಅರಿಶಿನ ಮತ್ತು ಒಂದು ಚಿಟಿಕೆ ಕರಿಮೆಣಸಿನ ಪುಡಿಯನ್ನು ಬೆರೆಸಿ ಸೇವಿಸಬಹುದು.
(6 / 7)
ಸಂಧಿವಾತ ನಿವಾರಣೆ ಮತ್ತು ರೋಗನಿರೋಧಕ ಶಕ್ತಿಗಾಗಿ; ಒಂದು ಚಿಟಿಕೆ ಒಣ ಶುಂಠಿ, ಕರಿಮೆಣಸನ್ನು ಹಾಲಿನೊಂದಿಗೆ ಬೆರೆಸಿ ಮಲಗುವ ಮುನ್ನ ಕುಡಿಯಬಹುದು.
(7 / 7)
ಗ್ರೀನ್ ಟೀಗೆ ಒಂದು ಚಿಟಿಕೆ ಕರಿಮೆಣಸನ್ನು ಸೇರಿಸಿ ಮತ್ತು ದಿನಕ್ಕೆ ಎರಡರಿಂದ ಮೂರು ಬಾರಿ ಕುಡಿಯಿರಿ. ಇದನ್ನು ಕುಡಿದರೆ ಚಯಾಪಚಯ ಕ್ರಿಯೆ ಸುಧಾರಿಸುತ್ತದೆ ಮತ್ತು ಕೊಬ್ಬು ಕರಗುತ್ತದೆ.
ಇತರ ಗ್ಯಾಲರಿಗಳು