ಕನ್ನಡ ಸುದ್ದಿ  /  Photo Gallery  /  I Am Hurt Mohammed Shami Over Mitchell Marsh For Putting His Feet On Cricket World Cup Trophy 2023 Ind Vs Aus Mgb

'ನನಗೆ ನೋವಾಗಿದೆ, ತಲೆ ಮೇಲೆ ಹೊತ್ತು ತಿರುಗುವ ಟ್ರೋಫಿ ಮೇಲೆ ಕಾಲಿಡುವುದು ಸರಿಯಲ್ಲ'; ಶಮಿ ಬೇಸರ

  • Mohammed Shami over Mitchell Marsh: ವಿಶ್ವಕಪ್ ಟ್ರೋಫಿ ಮೇಲೆ ಕಾಲಿಟ್ಟಿದ್ದಕ್ಕೆ ಸಾಕಷ್ಟು ಟೀಕೆಗೆ ಗುರಿಯಾಗಿರುವ ಆಸ್ಟ್ರೇಲಿಯಾದ ಕ್ರಿಕೆಟಿಗ ಮಿಚೆಲ್ ಮಾರ್ಷ್ ವಿರುದ್ಧ ಟೀಂ ಇಂಡಿಯಾದ ಸ್ಟಾರ್ ಬೌಲರ್​ ಮೊಹಮ್ಮದ್ ಶಮಿ ಕೂಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

2023ರ ಏಕದಿನ ವಿಶ್ವಕಪ್​ ಗೆದ್ದು ಬೀಗುತ್ತಿರುವ ಆಸ್ಟ್ರೇಲಿಯಾವನ್ನು ಹೊಗಳಿದವರಿಗಿಂತ ತೆಗಳಿದವರೆ ಹೆಚ್ಚು. ಇದಕ್ಕೆ ಕಾರಣವಾಗಿದ್ದು ಮಿಚೆಲ್ ಮಾರ್ಷ್ ನಡೆ. ವಿಶ್ವಕಪ್ ಟ್ರೋಫಿ ಮೇಲೆ ಕಾಲಿಟ್ಟು ದರ್ಪ ಮೆರೆದ ಮಿಚೆಲ್ ಮಾರ್ಷ್ ನಡೆ ಬಗ್ಗೆ ಟೀಂ ಇಂಡಿಯಾದ ಸ್ಟಾರ್ ವೇಗಿ ಮೊಹಮ್ಮದ್ ಶಮಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.  
icon

(1 / 5)

"ನನಗೆ ನೋವಾಗಿದೆ. ವಿಶ್ವದ ಎಲ್ಲಾ ತಂಡಗಳು ಈ ಟ್ರೋಫಿಗಾಗಿ ಹೋರಾಡುತ್ತಾರೆ, ತಮ್ಮ ತಲೆಯ ಮೇಲೆ ಹೊತ್ತುಕೊಳ್ಳಲು ಬಯಸುತ್ತಾರೆ. ಆದರೆ ಅದೇ ಟ್ರೋಫಿಯ ಮೇಲೆ ಕಾಲು ಇಡುವುದು ನನಗೆ ಸಂತೋಷವನ್ನು ನೀಡಲಿಲ್ಲ" ಎಂದು ಶಮಿ ಹೇಳಿದ್ದಾರೆ. 
icon

(2 / 5)

ಮೊಹಮ್ಮದ್ ಶಮಿ ವಿಶ್ವಕಪ್‌ನಲ್ಲಿ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ನೀಡಿದರು. ವಿಶ್ವಕಪ್​​​ನಲ್ಲಿ ಕೇವಲ 7 ಪಂದ್ಯಗಳನ್ನಾಡಿದ ಮೊಹಮ್ಮದ್ ಶಮಿ 24 ವಿಕೆಟ್​​ಗಳನ್ನು ಕಬಳಿಸಿ 2023ರ ವಿಶ್ವಕಪ್​​ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿ ಹೊರಹೊಮ್ಮಿದರು. 
icon

(3 / 5)

ವಾಂಖೆಡೆಯಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಶಮಿ 57 ರನ್‌ಗಳಿಗೆ 7 ವಿಕೆಟ್ ಪಡೆದರು.   
icon

(4 / 5)

ಈ ಬಾರಿಯ ವಿಶ್ವಕಪ್​​ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದಿದ್ದಕ್ಕೆ ಗೋಲ್ಡನ್ ಬಾಲ್ (ಪ್ರಶಸ್ತಿ) ಕೂಡ ಗೆದ್ದರು. ಆದರೆ 2023ರ ವಿಶ್ವಕಪ್ ಟ್ರೋಫಿ​ ಆಸ್ಟ್ರೇಲಿಯಾ ಪಾಲಾಯಿತು.  
icon

(5 / 5)

ಇತರ ಗ್ಯಾಲರಿಗಳು