ವಿಶ್ವಕಪ್‌ನಲ್ಲಿ ಭಾರತದ ಅಜೇಯ ಓಟ; ಕಿವೀಸ್ ಹಿಂದಿಕ್ಕಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ಲಗ್ಗೆ
- ICC World Cup 2023 Point Table: ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ವಿಶ್ವಕಪ್ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ಭಾರತ ತಂಡ 7 ವಿಕೆಟ್‌ಗಳ ಭರ್ಜರಿ ಜಯ ದಾಖಲಿಸಿದೆ. ಆ ಬಳಿಕ ಏಕದಿನ ವಿಶ್ವಕಪ್ 2023ರ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.
- ICC World Cup 2023 Point Table: ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ವಿಶ್ವಕಪ್ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ಭಾರತ ತಂಡ 7 ವಿಕೆಟ್‌ಗಳ ಭರ್ಜರಿ ಜಯ ದಾಖಲಿಸಿದೆ. ಆ ಬಳಿಕ ಏಕದಿನ ವಿಶ್ವಕಪ್ 2023ರ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.
(1 / 8)
ವಿಶ್ವಕಪ್ ಅಂಕಪಟ್ಟಿಯಲ್ಲಿ ಭಾರತವು ಅಗ್ರಸ್ಥಾನಕ್ಕೆ ಎಂಟ್ರಿ ಕೊಡುವುದರೊಂದಿಗೆ ನ್ಯೂಜಿಲ್ಯಾಂಡ್ ತಂಡ ಎರಡನೇ ಸ್ಥಾನಕ್ಕೆ ಇಳಿದಿದೆ. ಭಾರತ ಮತ್ತು ನ್ಯೂಜಿಲ್ಯಾಂಡ್ ತಂಡಗಳು ಈಗಾಗಲೇ ಪಂದ್ಯಾವಳಿಯ ಮೊದಲ ಮೂರು ಪಂದ್ಯಗಳನ್ನು ಗೆದ್ದಿವೆ. ಉಭಯ ತಂಡಗಳು ತಲಾ ಆರು ಪಾಯಿಂಟ್‌ಗಳನ್ನು ಸಂಪಾದಿಸಿವೆ.(PTI)
(2 / 8)
ಉತ್ತಮ ನೆಟ್ ರನ್ ರೇಟ್‌ನಿಂದಾಗಿ ಭಾರತವು ಮೂರನೇ ಸ್ಥಾನದಿಂದ ಅಗ್ರಸ್ಥಾನಕ್ಕೆ ಏರಿದೆ. ರೋಹಿತ್ ಶರ್ಮಾ ಬಳಗದ ಪ್ರಸ್ತುತ ನಿವ್ವಳ ರನ್ ರೇಟ್ +1.821 ಆಗಿದ್ದರೆ, ನ್ಯೂಜಿಲ್ಯಾಂಡ್ ತಂಡ +1.604 ರನ್ ರೇಟ್ ಹೊಂದಿದೆ.(PTI)
(3 / 8)
ಭಾರತ ಮತ್ತು ನ್ಯೂಜಿಲ್ಯಾಂಡ್ ಹೊರತುಪಡಿಸಿ ಈವರೆಗೆ ಆಡಿರುವ ಎಲ್ಲಾ ಪಂದ್ಯ ಗೆದ್ದಿರುವ ದಕ್ಷಿಣ ಆಫ್ರಿಕಾ ನಾಲ್ಕು ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದೆ. ತಂಡವು ಅತ್ಯುತ್ತಮ ನಿವ್ವಳ ರನ್ ರೇಟ್ ಅನ್ನು ಹೊಂದಿದ್ದು, ಮಂಗಳವಾರ ಧರ್ಮಶಾಲಾದಲ್ಲಿ ನೆದರ್ಲ್ಯಾಂಡ್ಸ್ ತಂಡದ ವಿರುದ್ಧ ಮುಂದಿನ ಪಂದ್ಯವನ್ನು ಗೆದ್ದರೆ, ವಿಶ್ವಕಪ್ ಪಾಯಿಂಟ್ ಪಟ್ಟಿಯಲ್ಲಿ ನಂಬರ್ ವನ್ ಸ್ಥಾನ ಪಡೆದುಕೊಳ್ಳಲಿದೆ.(PTI)
(4 / 8)
ಏಕದಿನ ವಿಶ್ವಕಪ್ ಇತಿಹಾಸದಲ್ಲಿ ಪಾಕ್ ಎದುರು ಭಾರತವು ಅಜೇಯ ಗೆಲುವಿನ ಓಟ ಮುಂದುವರೆಸಿದೆ. 1992ರಿಂದ ಇಲ್ಲಿಯವರೆಗೂ ವಿಶ್ವಕಪ್‌ನಲ್ಲಿ ಪಾಕ್ ವಿರುದ್ಧ ಸತತ 8ನೇ ಗೆಲುವು ದಾಖಲಿಸಿದೆ.(AFP)
(5 / 8)
ಮೊದಲು ಬ್ಯಾಟಿಂಗ್ ಮಾಡಿದ ಪಾಕ್, 42.5 ಓವರ್ಗಳಲ್ಲಿ 191 ರನ್ ಮಾತ್ರ ಗಳಿಸಿತು. ಈ ಗುರಿ ಬೆನ್ನಟ್ಟಿದ ಭಾರತ ತಂಡ, ಆಕ್ರಮಣಕಾರಿ ಆಟದ ಮೂಲಕ ಗೆಲುವಿನ ನಗೆ ಬೀರಿತು. ನಾಯಕ ರೋಹಿತ್ ಶರ್ಮಾ ಮತ್ತು ಶ್ರೇಯಸ್ ಅಯ್ಯರ್ ಆಕರ್ಷಕ ಶತಕ ಸಿಡಿಸಿದರು.(REUTERS)
(6 / 8)
ಡೆಂಗ್ಯು ಜ್ವರದ ಹಿನ್ನೆಲೆ ಕಳೆದ ಎರಡು ಪಂದ್ಯಗಳಿಗೆ ಅಲಭ್ಯರಾಗಿದ್ದ ಶುಭ್ಮನ್ ಗಿಲ್, ತಮ್ಮ ಚೊಚ್ಚಲ ಏಕದಿನ ವಿಶ್ವಕಪ್ ಪಂದ್ಯದಲ್ಲಿ 16 ರನ್ ಗಳಿಸಿ ಔಟಾದರು. ಬಳಿಕ ವಿರಾಟ್ ಕೊಹ್ಲಿ ಸಹ 16 ರನ್ ಗಳಿಸಿ ನಿರಾಸೆ ಮೂಡಿಸಿದರು. (PTI)
(7 / 8)
ರೋಹಿತ್ ಶರ್ಮಾ 63 ಎಸೆತಗಳಲ್ಲಿ 86 ರನ್ ಚಚ್ಚಿದರು. ಅವರ ಸ್ಪೋಟಕ ಇನ್ನಿಂಗ್ಸ್ನಲ್ಲಿ 6 ಬೌಂಡರಿ, 6 ಸಿಕ್ಸರ್ಗಳಿವೆ. (PTI)
ಇತರ ಗ್ಯಾಲರಿಗಳು