ಐಸಿಸಿ ಟಿ20 ನೂತನ ರ‍್ಯಾಂಕಿಂಗ್ ಪ್ರಕಟ; ಐಪಿಎಲ್ಗೂ ಮುನ್ನ ಭಾರತೀಯ ಆಟಗಾರರ ಶ್ರೇಯಾಂಕ ಹೇಗಿದೆ ನೋಡಿ
- ICC T20 Ranking: ಐಸಿಸಿ ಟಿ20 ರ್ಯಾಂಕಿಂಗ್ ಪ್ರಕಟಗೊಂಡಿದೆ. ಬಾಬರ್ ಅಜಮ್ ಅಗ್ರ 4 ಸ್ಥಾನದಲ್ಲಿದ್ದರೆ, ವಿರಾಟ್ ಕೊಹ್ಲಿ 48ನೇ ಸ್ಥಾನದಲ್ಲಿದ್ದಾರೆ. ಐಪಿಎಲ್ 2024ಗೂ ಮುನ್ನ ಭಾರತೀಯ ತಾರೆಗಳ ವೈಯಕ್ತಿಕ ವಿಶ್ವ ಶ್ರೇಯಾಂಕಗಳ ನೋಟ ಇಲ್ಲಿದೆ.
- ICC T20 Ranking: ಐಸಿಸಿ ಟಿ20 ರ್ಯಾಂಕಿಂಗ್ ಪ್ರಕಟಗೊಂಡಿದೆ. ಬಾಬರ್ ಅಜಮ್ ಅಗ್ರ 4 ಸ್ಥಾನದಲ್ಲಿದ್ದರೆ, ವಿರಾಟ್ ಕೊಹ್ಲಿ 48ನೇ ಸ್ಥಾನದಲ್ಲಿದ್ದಾರೆ. ಐಪಿಎಲ್ 2024ಗೂ ಮುನ್ನ ಭಾರತೀಯ ತಾರೆಗಳ ವೈಯಕ್ತಿಕ ವಿಶ್ವ ಶ್ರೇಯಾಂಕಗಳ ನೋಟ ಇಲ್ಲಿದೆ.
(1 / 5)
ಗಾಯದಿಂದ ಚೇತರಿಸಿಕೊಂಡು ಮೈದಾನಕ್ಕೆ ಮರಳಿದ ನಂತರ ರಶೀದ್ ಖಾನ್, ಐಸಿಸಿ ಟಿ20 ಬೌಲರ್ಗಳ ಶ್ರೇಯಾಂಕದಲ್ಲಿ ಮೇಲೇರಿದ್ದಾರೆ. ಅಫ್ಘನ್ ಸ್ಪಿನ್ನರ್ ಐರ್ಲೆಂಡ್ ವಿರುದ್ಧ 3 ಪಂದ್ಯಗಳ ಟಿ20 ಸರಣಿಯಲ್ಲಿ 8 ವಿಕೆಟ್ ಪಡೆದು ಸರಣಿ ಶ್ರೇಷ್ಠ ಪ್ರಶಸ್ತಿ ಗೆದ್ದರು. ಐಪಿಎಲ್ ಅಖಾಡಕ್ಕೆ ಧುಮುಕುವ ಮುನ್ನ ರಶೀದ್, ಉತ್ತಮ ಪ್ರದರ್ಶನ ನೀಡುವ ಮೂಲಕ ಗಮನ ಸೆಳೆದಿದ್ದು, ಐಸಿಸಿ ಶ್ರೇಯಾಂಕದಲ್ಲಿ ದೊಡ್ಡ ಜಿಗಿತ ಕಂಡಿದ್ದಾರೆ. ಟಿ20 ಬೌಲರ್ಗಳ ಪಟ್ಟಿಯಲ್ಲಿ 4 ಸ್ಥಾನ ಮೇಲೆರಿದ ರಶೀದ್, ನ್ಯೂಜಿಲೆಂಡ್ನ ಮಿಚೆಲ್ ಸ್ಯಾಂಟ್ನರ್ ಜೊತೆ 9ನೇ ಸ್ಥಾನದಲ್ಲಿದ್ದಾರೆ.
(2 / 5)
ಅಂತಾರಾಷ್ಟ್ರೀಯ ಟಿ20 ಬೌಲರ್ಗಳ ಪಟ್ಟಿಯಲ್ಲಿ ಭಾರತದ ಅಕ್ಷರ್ ಪಟೇಲ್, 4ನೇ ಸ್ಥಾನದಲ್ಲಿದ್ದಾರೆ. ರವಿ ಬಿಷ್ಣೋಯ್ ಮತ್ತು ಶ್ರೀಲಂಕಾದ ಮಹೀಶಾ ತೀಕ್ಷಣ ಜಂಟಿ 5ನೇ ಸ್ಥಾನದಲ್ಲಿದ್ದಾರೆ. ಇಂಗ್ಲೆಂಡ್ ತಂಡದ ಆದಿಲ್ ರಶೀದ್ ನಂಬರ್ 1 ಸ್ಥಾನ ಉಳಿಸಿಕೊಂಡಿದ್ದಾರೆ. ಶ್ರೀಲಂಕಾದ ವನಿಂದು ಹಸರಂಗ, ವೆಸ್ಟ್ ಇಂಡೀಸ್ನ ಅಕಿಲ್ ಹೊಸೈನ್ ಕ್ರಮವಾಗಿ 2 ಮತ್ತು 3ನೇ ಸ್ಥಾನದಲ್ಲಿದ್ದಾರೆ. ಅರ್ಷ್ದೀಪ್ ಸಿಂಗ್ 21 ಮತ್ತು ಕುಲ್ದೀಪ್ ಯಾದವ್ 24ನೇ ಸ್ಥಾನದಲ್ಲಿದ್ದಾರೆ.
(3 / 5)
ಗಾಯದಿಂದ ಕೆಲವು ತಿಂಗಳಿಂದ ಕ್ರಿಕೆಟ್ ಸೇವೆಯಿಂದ ಹೊರಗುಳಿದಿದ್ದರೂ ಸೂರ್ಯಕುಮಾರ್ ಯಾದವ್ ಟಿ20ಯಲ್ಲಿ ಅಗ್ರ ಕಿರೀಟ ಉಳಿಸಿಕೊಂಡಿದ್ದಾರೆ. ಈ ಪಟ್ಟಿಯಲ್ಲಿ ಭಾರತದ ಯಶಸ್ವಿ ಜೈಸ್ವಾಲ್ 6, ಋತುರಾಜ್ ಗಾಯಕ್ವಾಡ್ 13, ರಿಂಕು ಸಿಂಗ್ ಒಂದು ಸ್ಥಾನ ಮೇಲಕ್ಕೇರಿ 34ನೇ ಸ್ಥಾನಕ್ಕೇರಿದ್ದಾರೆ. ವಿರಾಟ್ ಕೊಹ್ಲಿ 48ನೇ ಸ್ಥಾನ, ರೋಹಿತ್ ಶರ್ಮಾ 52ನೇ ಸ್ಥಾನ, ಇಶಾನ್ ಕಿಶನ್ 55ನೇ ಸ್ಥಾನದಲ್ಲಿದ್ದಾರೆ. ಇಲ್ಲಿ ಭಾರತದ ಆಟಗಾರರ ಶ್ರೇಯಾಂಕವನ್ನು ವಿವರಿಸಲಾಗಿದೆ.
(4 / 5)
ಟಿ20 ಆಲ್ರೌಂಡರ್ಗಳ ಪಟ್ಟಿಯಲ್ಲಿಭಾರತದ ಹಾರ್ದಿಕ್ ಪಾಂಡ್ಯ 7ನೇ ಸ್ಥಾನದಲ್ಲಿದ್ದಾರೆ. ಅಕ್ಷರ್ ಪಟೇಲ್ 19ನೇ ಸ್ಥಾನದಲ್ಲಿದ್ದಾರೆ. ಬಾಂಗ್ಲಾದೇಶದ ಶಕೀಬ್ ಅಲ್ ಹಸನ್ ಅಗ್ರಸ್ಥಾನ ಉಳಿಸಿಕೊಂಡಿದ್ದಾರೆ. ಶ್ರೀಲಂಕಾದ ವನಿಂದು ಹಸರಂಗ 2, ಅಫ್ಘಾನಿಸ್ತಾನದ ಮೊಹಮ್ಮದ್ ನಬಿ 3ನೇ ಸ್ಥಾನದಲ್ಲಿದ್ದಾರೆ.
ಇತರ ಗ್ಯಾಲರಿಗಳು