ICC T20I Ranking: ಭಾರತೀಯರದ್ದೇ ಹವಾ, ಟಾಪ್-10ರಲ್ಲಿ ನಮ್ಮವರೇ ಮೂವರು
- ICC T20 Ranking: ಜಿಂಬಾಬ್ವೆ ವಿರುದ್ಧದ ಟಿ20ಐ ಸರಣಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಭಾರತದ ಆಟಗಾರರು ಚುಟುಕು ಕ್ರಿಕೆಟ್ ರ್ಯಾಂಕಿಂಗ್ನಲ್ಲಿ ಉತ್ತಮ ಏರಿಕೆ ಕಂಡಿದ್ದಾರೆ.
- ICC T20 Ranking: ಜಿಂಬಾಬ್ವೆ ವಿರುದ್ಧದ ಟಿ20ಐ ಸರಣಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಭಾರತದ ಆಟಗಾರರು ಚುಟುಕು ಕ್ರಿಕೆಟ್ ರ್ಯಾಂಕಿಂಗ್ನಲ್ಲಿ ಉತ್ತಮ ಏರಿಕೆ ಕಂಡಿದ್ದಾರೆ.
(1 / 6)
ICC T20 Ranking: ಜಿಂಬಾಬ್ವೆ ವಿರುದ್ಧ ಭಾರತ 4-1 ಅಂತರದಲ್ಲಿ ಸರಣಿ ಜಯಿಸಿದೆ. ಮೊದಲ ಪಂದ್ಯವನ್ನು ಸೋತ ನಂತರ ಅವರು ಪುಟಿದೇಳಿದ್ದ ಭಾರತ, ಸತತ ನಾಲ್ಕು ಪಂದ್ಯಗಳನ್ನು ಗೆದ್ದು ಸರಣಿಗೆ ಮುತ್ತಿಕ್ಕಿತು. ಈ ಸರಣಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಆಟಗಾರರು ಐಸಿಸಿ ಟಿ20ಐ ಶ್ರೇಯಾಂಕದಲ್ಲಿ ಜಿಗಿತ ಕಂಡಿದ್ದಾರೆ. ಟಾಪ್-10ರಲ್ಲೇ ಮೂವರು ಸ್ಥಾನ ಪಡೆದಿದ್ದಾರೆ.
(2 / 6)
ICC T20 Ranking: ಭಾರತದ ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್ ಐಸಿಸಿ ಟಿ20 ರ್ಯಾಂಕಿಂಗ್ನಲ್ಲಿ 6ನೇ ಸ್ಥಾನಕ್ಕೆ ಜಿಗಿದಿದ್ದಾರೆ. ಈ ಸರಣಿಯಲ್ಲಿ ಅವರು ಆಡಿದ ಮೂರು ಪಂದ್ಯಗಳಲ್ಲಿ 70.5ರ ಬ್ಯಾಟಿಂಗ್ ಸರಾಸರಿಯಲ್ಲಿ 141 ರನ್ ಗಳಿಸಿದ್ದಾರೆ. ಅವರು ಅರ್ಧ ಶತಕ ಗಳಿಸಿದ್ದಾರೆ. ಗರಿಷ್ಠ ಸ್ಕೋರ್ ಔಟಾಗದೆ 93 ರನ್ ಆಗಿದೆ. ಈ ಪ್ರದರ್ಶನದೊಂದಿಗೆ ಅವರು ನಾಲ್ಕು ಸ್ಥಾನ ಜಿಗಿದಿದ್ದಾರೆ.
(3 / 6)
ICC T20 Ranking: ಭಾರತದ ಮೂವರು ಆಟಗಾರರು ಅಗ್ರ 10ರಲ್ಲಿ ಸ್ಥಾನ ಪಡೆದಿದ್ದಾರೆ. ಸೂರ್ಯಕುಮಾರ್ ಯಾದವ್ 2ನೇ ಸ್ಥಾನದಲ್ಲಿದ್ದರೆ, ಋತುರಾಜ್ ಗಾಯಕ್ವಾಡ್ 8ನೇ ಸ್ಥಾನದಲ್ಲಿದ್ದಾರೆ.
(4 / 6)
ICC T20 Ranking: ಜಿಂಬಾಬ್ವೆ ಪ್ರವಾಸದಲ್ಲಿ ಭಾರತದ ನಾಯಕರಾಗಿದ್ದ ಶುಭ್ಮನ್ ಗಿಲ್ 5 ಪಂದ್ಯಗಳಲ್ಲಿ 170 ರನ್ ಗಳಿಸಿದರು. ಈ ಶ್ರೇಯಾಂಕದಲ್ಲಿ ಅವರು 36 ಸ್ಥಾನ ಜಿಗಿದು 37ನೇ ಸ್ಥಾನ ಪಡೆದಿದ್ದಾರೆ. ರಿಂಕು ಸಿಂಗ್ 46ನೇ ಸ್ಥಾನದಲ್ಲಿದ್ದರೆ, ಶಿವಂ ದುಬೆ 73ನೇ ಸ್ಥಾನದಲ್ಲಿದ್ದಾರೆ.
(5 / 6)
ICC T20 Ranking: ಜಿಂಬಾಬ್ವೆ ಸರಣಿಯಲ್ಲಿ ಸರಣಿಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದ ಸ್ಪಿನ್ನರ್ ವಾಷಿಂಗ್ಟನ್ ಸುಂದರ್ ಐಸಿಸಿ ಟ್ವೆಂಟಿ-20 ರ್ಯಾಂಕಿಂಗ್ನಲ್ಲಿ 36 ಸ್ಥಾನ ಜಿಗಿದು 46ನೇ ಸ್ಥಾನಕ್ಕೇರಿದ್ದಾರೆ. ಆದರೆ, ಟಾಪ್ 10ರಲ್ಲಿ ಭಾರತದ ಯಾವೊಬ್ಬ ಬೌಲರ್ ಕೂಡ ಸ್ಥಾನ ಪಡೆದಿಲ್ಲ. ಅಕ್ಷರ್ ಪಟೇಲ್ ಟಾಪ್ 10ರಿಂದ ಹೊರಬಿದ್ದಿದ್ದಾರೆ.
ಇತರ ಗ್ಯಾಲರಿಗಳು