ಭಾರತ-ನ್ಯೂಜಿಲೆಂಡ್ ಸರಣಿ ನಂತರ ಟೆಸ್ಟ್ ರ‍್ಯಾಂಕಿಂಗ್‌; ಒಂದು ಸ್ಥಾನ ಮೇಲೇರಿದ ಕಿವೀಸ್, ಆದರೆ ಟೀಮ್ ಇಂಡಿಯಾ...
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಭಾರತ-ನ್ಯೂಜಿಲೆಂಡ್ ಸರಣಿ ನಂತರ ಟೆಸ್ಟ್ ರ‍್ಯಾಂಕಿಂಗ್‌; ಒಂದು ಸ್ಥಾನ ಮೇಲೇರಿದ ಕಿವೀಸ್, ಆದರೆ ಟೀಮ್ ಇಂಡಿಯಾ...

ಭಾರತ-ನ್ಯೂಜಿಲೆಂಡ್ ಸರಣಿ ನಂತರ ಟೆಸ್ಟ್ ರ‍್ಯಾಂಕಿಂಗ್‌; ಒಂದು ಸ್ಥಾನ ಮೇಲೇರಿದ ಕಿವೀಸ್, ಆದರೆ ಟೀಮ್ ಇಂಡಿಯಾ...

  • ICC Test Team Ranking Updates: ಭಾರತ ತಂಡವನ್ನು ಮೂರು ಪಂದ್ಯಗಳ ಸರಣಿಯಲ್ಲಿ ವೈಟ್​ವಾಶ್ ಮಾಡಿದ ನಂತರ ನ್ಯೂಜಿಲೆಂಡ್ ವಿಶ್ವ ಟೆಸ್ಟ್ ಶ್ರೇಯಾಂಕದಲ್ಲಿ ಮೇಲಕ್ಕೇರಿದೆ. ಹಾಗಾದರೆ ಟೀಮ್ ಇಂಡಿಯಾ ಯಾವ ಸ್ಥಾನದಲ್ಲಿದೆ? ಇಲ್ಲಿದೆ ವಿವರ.

ಭಾರತ ವಿರುದ್ಧದ ಐತಿಹಾಸಿಕ ಟೆಸ್ಟ್ ಸರಣಿಯನ್ನು ಗೆಲ್ಲುವ ಮೂಲಕ ನ್ಯೂಜಿಲೆಂಡ್ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ ಫೈನಲ್​ ಹಾದಿಯನ್ನು ಮತ್ತಷ್ಟು ಬಲಪಡಿಸಿಕೊಂಡಿದೆ. ಡಬ್ಲ್ಯುಟಿಸಿ ಅಂಕ ಪಟ್ಟಿಯಲ್ಲಿ ಮಾತ್ರವಲ್ಲ, ಟೆಸ್ಟ್ ಶ್ರೇಯಾಂಕದಲ್ಲೂ ಸುಧಾರಣೆ ಕಂಡಿದೆ. ಶ್ರೀಲಂಕಾ ತಂಡವನ್ನು ಹಿಂದಿಕ್ಕಿ ಒಂದು ಸ್ಥಾನ ಮೇಲೇರಿದೆ. ಹಾಗಾದರೆ ಭಾರತ ತಂಡದ ಸ್ಥಿತಿಯೇನು?
icon

(1 / 7)

ನ್ಯೂಜಿಲೆಂಡ್ ಐಸಿಸಿ ಟೆಸ್ಟ್ ಶ್ರೇಯಾಂಕದಲ್ಲಿ ಆರನೇ ಸ್ಥಾನದಿಂದ ಐದಕ್ಕೆ ಸ್ಥಾನಕ್ಕೆ ಜಿಗಿದಿದೆ. ಪ್ರಸ್ತುತ ಕಿವೀಸ್ 100 ರೇಟಿಂಗ್ ಪಾಯಿಂಟ್ಸ್ ಹೊಂದಿದೆ. 4ನೇ ಸ್ಥಾನದಲ್ಲಿರುವ ಇಂಗ್ಲೆಂಡ್​ಗಿಂತ ಕಿವೀಸ್ ರೇಟಿಂಗ್ ಪಾಯಿಂಟ್​ಗಳ ಅಂತರ ಬಹಳ ಕಡಿಮೆ. ಶೀಘ್ರವೇ ಕಿವೀಸ್, ಇಂಗ್ಲೆಂಡ್ ತಂಡವನ್ನು (103 ರೇಟಿಂಗ್) ಹಿಂದಿಕ್ಕಿ 3ನೇ ಸ್ಥಾನಕ್ಕೇರಿದರೂ ಅಚ್ಚರಿ ಇಲ್ಲ.
icon

(2 / 7)

ಟೆಸ್ಟ್ ಶ್ರೇಯಾಂಕದಲ್ಲಿ ಆಸ್ಟ್ರೇಲಿಯಾ ಅಗ್ರಸ್ಥಾನದಲ್ಲಿದ್ದು, 124 ರೇಟಿಂಗ್ ಪಾಯಿಂಟ್ ಹೊಂದಿದೆ. ಸದ್ಯದ ಪರಿಸ್ಥಿತಿಯಲ್ಲಿ ಆಸೀಸ್ ಸಿಂಹಾಸನವನ್ನು ಕಳೆದುಕೊಳ್ಳುವ ಸಾಧ್ಯತೆ ತೀರಾ ಕಡಿಮೆ.
icon

(3 / 7)

ನ್ಯೂಜಿಲೆಂಡ್ ವಿರುದ್ಧ ಸರಣಿ ಸೋತರೂ ಭಾರತ ತಂಡ ಟೆಸ್ಟ್ ಶ್ರೇಯಾಂಕದಲ್ಲಿ 2ನೇ ಸ್ಥಾನದಲ್ಲೇ ಮುಂದುವರೆದಿದೆ. ಭಾರತ 111 ರೇಟಿಂಗ್ ಅಂಕ ಹೊಂದಿದೆ. ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಉತ್ತಮ ಪ್ರದರ್ಶನ ನೀಡದಿದ್ದರೆ, ಭಾರತ ಟೆಸ್ಟ್ ಶ್ರೇಯಾಂಕದಲ್ಲಿ ಕುಸಿಯುವ ಸಾಧ್ಯತೆ ಇದೆ.
icon

(4 / 7)

ಬಾಂಗ್ಲಾದೇಶ ತಂಡವನ್ನು ತಮ್ಮ ತವರು ನೆಲದಲ್ಲಿ 2 ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ವೈಟ್​ವಾಶ್ ಮಾಡಿದ ದಕ್ಷಿಣ ಆಫ್ರಿಕಾ ತಂಡ ಮೂರನೇ ಶ್ರೇಯಾಂಕ ಪಡೆದಿದೆ. ದಕ್ಷಿಣ ಆಫ್ರಿಕಾ 105 ರೇಟಿಂಗ್ ಅಂಕಗಳನ್ನು ಹೊಂದಿದೆ. ಉಳಿದ ಪಂದ್ಯಗಳಲ್ಲಿ ಗೆದ್ದರೆ ಎರಡನೇ ಸ್ಥಾನಕ್ಕೇರುವ ಸಾಧ್ಯತೆ ಇದೆ. ಒಂದು ವೇಳೆ ಸೋತರೆ ನಾಲ್ಕು ಅಥವಾ 5ನೇ ಸ್ಥಾನಕ್ಕೆ ಕುಸಿಯುವ ಭೀತಿ ಇದೆ.
icon

(5 / 7)

ನ್ಯೂಜಿಲೆಂಡ್ 5ನೇ ಸ್ಥಾನಕ್ಕೇರಿದ ಹಿನ್ನೆಲೆ ಶ್ರೀಲಂಕಾ ಆರನೇ ಸ್ಥಾನಕ್ಕೆ ಕುಸಿದಿದೆ. ಲಂಕಾ 91 ರೇಟಿಂಗ್ ಪಾಯಿಂಟ್ಸ್ ಹೊಂದಿದೆ. ಪಾಕಿಸ್ತಾನ 7ನೇ ಸ್ಥಾನದಲ್ಲಿದ್ದು, 86 ರೇಟಿಂಗ್ ಪಾಯಿಂಟ್ಸ್ ಹೊಂದಿದೆ.
icon

(6 / 7)

ಎಂಟನೇ ಸ್ಥಾನದಲ್ಲಿರುವ ವೆಸ್ಟ್ ಇಂಡೀಸ್, 77 ರೇಟಿಂಗ್ ಪಾಯಿಂಟ್ಸ್ ಹೊಂದಿದೆ. ಬಾಂಗ್ಲಾದೇಶ 9ನೇ ಸ್ಥಾನದಲ್ಲಿದ್ದು, 64 ಅಂಕ ಪಡೆದಿದೆ. ಐರ್ಲೆಂಡ್ (26), ಜಿಂಬಾಬ್ವೆ (4) ಮತ್ತು ಅಫ್ಘಾನಿಸ್ತಾನ (0) ಕ್ರಮವಾಗಿ 10 ರಿಂದ 12 ನೇ ಸ್ಥಾನದಲ್ಲಿವೆ.
icon

(7 / 7)

ಇತರ ಗ್ಯಾಲರಿಗಳು