Shani Bhagwan: ಮನೆಯಲ್ಲಿ ಶನಿ ದೇವರ ವಿಗ್ರಹ ಯಾಕೆ ಇಡಬಾರದು; ದೇವಾಲಯದಲ್ಲೇ ಪೂಜಿಸುವ ಹಿಂದಿನ ಮಹತ್ವ ಹೀಗಿದೆ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Shani Bhagwan: ಮನೆಯಲ್ಲಿ ಶನಿ ದೇವರ ವಿಗ್ರಹ ಯಾಕೆ ಇಡಬಾರದು; ದೇವಾಲಯದಲ್ಲೇ ಪೂಜಿಸುವ ಹಿಂದಿನ ಮಹತ್ವ ಹೀಗಿದೆ

Shani Bhagwan: ಮನೆಯಲ್ಲಿ ಶನಿ ದೇವರ ವಿಗ್ರಹ ಯಾಕೆ ಇಡಬಾರದು; ದೇವಾಲಯದಲ್ಲೇ ಪೂಜಿಸುವ ಹಿಂದಿನ ಮಹತ್ವ ಹೀಗಿದೆ

ಮನೆಯ ಪೂಜಾ ಕೋಣೆಯಲ್ಲಿ ಎಲ್ಲ ದೇವರ ವಿಗ್ರಹಗಳಿರುತ್ತವೆ. ಆದರೆ ಶನಿ ದೇವರ ಮೂರ್ತಿ ಮಾತ್ರ ಇಡುವುದಿಲ್ಲ ಯಾಕೆ, ಯಾವ ದಿಕ್ಕಿನಲ್ಲಿ ನಿಂತು ಪೂಜಿಸಬೇಕು ಎಂಬುದರ ವಿವರ ಇಲ್ಲಿದೆ.

ಶನಿ ದೇವರನ್ನು ನ್ಯಾಯ ದೇವರು ಅಂತ ಕರೆಯುತ್ತಾರೆ. ಶನಿಯನ್ನು ಆರಾಧಿಸುವುದರಿಂದ ಎಲ್ಲಾ ಸಮಸ್ಯೆಗಳು ದೂರವಾಗುತ್ತವೆ. ಶನಿ ಭಗವಾನ್ ಅನುಗ್ರಹ ಹೊಂದಿದವರಿಗೆ ಜೀವನದಲ್ಲಿ ಯಾವುದೇ ಕೊರತೆ ಇರುವುದಿಲ್ಲ ಎಂಬ ನಂಬಿಕೆ ಇದೆ. ಆದರೆ ಶನಿ ದೋಷ ಇರುವವರು ಕೆಟ್ಟ ದಿನಗಳನ್ನ ಎದುರಿಸುತ್ತಾರೆ. 
icon

(1 / 9)

ಹಿಂದೂ ಧರ್ಮದಲ್ಲಿ ಮೂರ್ತಿ ಪೂಜೆಗೆ ವಿಶೇಷ ಮಹತ್ವವಿದೆ. ಪ್ರತಿ ಮನೆಯಲ್ಲೂ ದೇವರ ಮೂರ್ತಿಗಳನ್ನು ಪೂಜಿಸಲಾಗುತ್ತದೆ. ಶಿವ-ಪಾರ್ವತಿ, ರಾಧಾ-ಕೃಷ್ಣ, ರಾಮ-ಸೀತೆ, ವಿನಾಯ, ವಿಷ್ಣು, ಲಕ್ಷ್ಮಿ, ದುರ್ಗಾ ಮಾತೆಯಂತಹ ಅನೇಕ ದೇವತೆಗಳ ವಿಗ್ರಹಗಳನ್ನು ದೇವರ ಕೋಣೆಯಲ್ಲಿ ಇಟ್ಟು ಪೂಜಿಸುತ್ತಾರೆ.
icon

(2 / 9)

ಕೆಲ ದೇವರುಗಳ ವಿಗ್ರಹಗಳನ್ನು ಮನೆಯಲ್ಲಿ ಇಟ್ಟು ಪೂಜೆ ಮಾಡುವುದಿಲ್ಲ. ಅವರಲ್ಲಿ ಶನಿದೇವರು ಕೂಡ ಒಬ್ಬರು. ಶನಿ ಮೂರ್ತಿಯನ್ನು ಮನೆಯಲ್ಲಿ ಏಕೆ ಇಡಬಾರದು ಅನ್ನೋದನ್ನು ತಿಳಿಯಿರಿ. 
icon

(3 / 9)

ಮನೆಗಳಲ್ಲಿ ಅನೇಕರು ದೇವರ ವಿಗ್ರಹಗಳನ್ನು ಇಟ್ಟು ಪೂಜಿಸುತ್ತಾರೆ. ಆದರೆ ಶನಿ ದೇವರಿಗೆ ಪೂಜೆ ಮಾಡಬೇಕಾದರೆ ದೇವಾಲಯಕ್ಕೆ ಹೋಗಬೇಕು. ಶನಿ ದೇವರನ್ನು ಶನಿ ದೇವಾಲಯದಲ್ಲಿ ಮಾತ್ರ ಪೂಜಿಸಲಾಗುತ್ತದೆ. ಶಾಸ್ತ್ರಗಳ ಪ್ರಕಾರ ಮನೆಯಲ್ಲಿ ಶನಿ ದೇವರ ವಿಗ್ರಹ ಅಥವಾ ಫೋಟೊಗಳನ್ನು ಇಡುವುದು ಸರಿಯಲ್ಲ. 
icon

(4 / 9)

ಶನಿ ದೇವರನ್ನು ಪೂಜಿಸಲು ಭಕ್ತರು ದೇವಾಲಯಗಳಿಗೆ ಹೋಗುತ್ತಾರೆ. ಶನಿ ದೇವರ ಭಕ್ತರು ದೇವಾಲಯಗಳಿಗೆ ಹೋಗಿ ದೀಪ ಹಚ್ಚಿ ಪೂಜೆ ಮಾಡುತ್ತಾರೆ. ಮನೆಯಲ್ಲಿ ಶನಿ ಪೂಜೆ ಮಾಡಬಾರದೆಂದು ಪುರಾಣಗಳು ಕೇಳುತ್ತವೆ. ಇದಕ್ಕೆ ಕಾರಣ ಎಂದರೆ ಶನಿ ದೇವರ ದೃಷ್ಟಿ ಯಾರ ಮೇಲೆ ಬೀಳುತ್ತದೆಯೋ ಅವರಿಗೆ ಕೇಡು ತರುವಂತ ಶಾಪಗ್ರಸ್ತನಾಗಿದ್ದಾನೆ. 
icon

(5 / 9)

ಪುರಾಣಗಳ ಪ್ರಕಾರ ಶನಿಯು ಶ್ರೀ ಕೃಷ್ಣನ ಭಕ್ತ. ಸದಾ ಕೃಷ್ಣ ಭಕ್ತಿಯಲ್ಲಿ ಮಗ್ನರಾಗಿದ್ದಾಗ ಒಮ್ಮೆ ಶನಿ ದೇವರ ಹೆಂಡತಿ ಹೆರಿಗೆಯಾದ  ನಂತರ ಆತನ ಬಳಿಗೆ ಬಂದಿದ್ದಾಳೆ. ಆ ಸಮಯದಲ್ಲಿ ಶನಿ ದೇವರು ಶ್ರೀಕೃಷ್ಣನ ಧ್ಯಾನದಲ್ಲಿ ಮಗ್ನನಾಗಿದ್ದನು. ಆತನ ಗಮನವನ್ನು ಬೇರೆಡೆಗೆ ತಿರುಗಿಸುವ ಪ್ರಯತ್ನಿಸಿ ವಿಫಲವಾಗಿದ್ದಾಳೆ. ಇದರಿಂದ ಕೋಪಗೊಂಡ ಆಕೆ ಶಾಪವನ್ನು ನೀಡುತ್ತಾಳೆ. ಆ ನಂತರ ಶನಿ ಯಾರನ್ನ ನೋಡಿದರೂ ಕೇಡುಗಳಿಂದ ಶಾಪಗ್ರಸ್ತನಾಗುತ್ತಾನೆ.  
icon

(6 / 9)

ಬಳಿಕ ತನ್ನ ತಪ್ಪುಗಳನ್ನು ತಿಳಿದುಕೊಂಡು ಪತ್ನಿಗೆ ಕ್ಷಮೆ ಕೇಳಿದ್ದಾನೆ. ಆದರೆ ಶನಿಯ ಪತ್ನಿಗೆ ಶಾಪವನ್ನು ಹಿಂತೆಗೆದುಕೊಳ್ಳುವ ಅಥವಾ ರದ್ದು ಮಾಡುವ ಅಧಿಕಾರ ಇರಲಿಲ್ಲ. ಈ ಘಟನೆ ನಂತರ ಶನಿದೇವರು ತಲೆ ತಗ್ಗಿಸಿ ನಡೆದರು. ಏಕೆಂದರೆ ಅವರ ದೃಷ್ಟಿಯಿಂದ ಯಾರಿಗೂ ತೊಂದರೆಯಾಗಬಾರದು ಎಂಬ ಉದ್ದೇಶ ಅವರಲ್ಲಿತ್ತು.
icon

(7 / 9)

ಇದೇ ಕಾರಣಕ್ಕಾಗಿ ಯಾರು ಕೂಡ ಶನಿ ದೇವರನ್ನು ಮನೆಯಲ್ಲಿಟ್ಟು ಪೂಜಿಸುವುದಿಲ್ಲ. ಶನಿಯ ದೃಷ್ಟ ಕಣ್ಣಿನಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಜನರು ತಮ್ಮ ಮನೆಗಳ ದೇವರ ಕೋಣೆಯಲ್ಲಿ ಶನಿ ವಿಗ್ರಹ ಅಥವಾ ಫೋಟೊಗಳನ್ನು ಇಟ್ಟು ಪೂಜೆ ಮಾಡುವುದಿಲ್ಲ. ದೇವಾಲಯಕ್ಕೆ ಹೋಗಿ ಪೂಜಿಸುತ್ತಾರೆ. 
icon

(8 / 9)

ಶನಿ ದೇವರಿಗೆ ಪೂಜೆ ಮಾಡುವಾಗ ಆತನ ಪಾದಗಳನ್ನು ಮಾತ್ರ ನೋಡಬೇಕು. ಅವನ ಕಣ್ಣುಗಳನ್ನು  ನೋಡಬಾರದು ಎಂಬ  ನಂಬಿಕೆ ಇದೆ. ನೀವು ಆತನ ಕಣ್ಣುಗಳನ್ನು ನೋಡಿದರೆ ದೇವರ ದೃಷ್ಟಿ ನಿಮ್ಮ ಮೇಲೆ ಬೀಳುತ್ತದೆ. ಆ ನಂತರ ಸಮಸ್ಯೆಗಳು ಎದುರಾಗುತ್ತವೆ ಎಂಬ ನಂಬಿಕೆ ಇದೆ.
icon

(9 / 9)

ಇತರ ಗ್ಯಾಲರಿಗಳು