Krishna Cartoon films: ಮಕ್ಕಳಿಗೆ ಕೃಷ್ಣನ ಕಥೆ ಅರ್ಥ ಮಾಡಿಸಲು ಬಯಸಿದರೆ ಈ ಕಾರ್ಟೂನ್ ಸಿನಿಮಾಗಳನ್ನು ತೋರಿಸಿ
Krishna Cartoon films: ಆಗಸ್ಟ್ 26, 2024 ರಂದು ದೇಶಾದ್ಯಂತ ಜನ್ಮಾಷ್ಟಮಿ ಆಚರಣೆಗಳು ನಡೆಯುತ್ತಿದೆ. ಕೃಷ್ಣ ಜನ್ಮಾಷ್ಟಮಿಯನ್ನು ಭಗವಾನ್ ಕೃಷ್ಣನ ಜನ್ಮ ವಾರ್ಷಿಕೋತ್ಸವದ ಸಂದರ್ಭದಲ್ಲಿ ಆಚರಿಸಲಾಗುತ್ತದೆ. ನೀವು ನಿಮ್ಮ ಮಕ್ಕಳಿಗೆ ಕೃಷ್ಣನ ಲೀಲೆಗಳನ್ನು ಸುಲಭವಾಗಿ ಅರ್ಥ ಮಾಡಿಸಲು ಬಯಸಿದರೆ ಈ ಕಾರ್ಟೂನ್ ತೋರಿಸಿ
(1 / 8)
ಆಗಸ್ಟ್ 26, 2024 ರಂದು ದೇಶಾದ್ಯಂತ ಜನ್ಮಾಷ್ಟಮಿ ಆಚರಣೆಗಳು ನಡೆಯಲಿವೆ. ಭಗವಾನ್ ಕೃಷ್ಣನ ಜನ್ಮದಿನದ ಸಂದರ್ಭದಲ್ಲಿ, ನೀವು ನಿಮ್ಮ ಮಕ್ಕಳೊಂದಿಗೆ ಈ 6 ಅನಿಮೇಟೆಡ್ ಚಲನಚಿತ್ರಗಳನ್ನು ವೀಕ್ಷಿಸಬಹುದು.
(2 / 8)
ಕೃಷ್ಣ ದ ಬರ್ತ್: ಈ ಕಾರ್ಟೂನ್ ಕೃಷ್ಣನ ಜನನದ ರಹಸ್ಯದಿಂದ ಅವನ ಜನನದವರೆಗೆ ನಡೆದ ಎಲ್ಲವನ್ನೂ ಒಳಗೊಂಡಿದೆ. ಭಗವಾನ್ ಕೃಷ್ಣನ ಬಾಲ್ಯದ ಬಗ್ಗೆ ಅನೇಕ ಘಟನೆಗಳು ಇದರಲ್ಲಿದೆ.
(3 / 8)
ಲಿಟ್ಲ್ ಕೃಷ್ಣ - ವೃಂದಾವನದವರಿಗೆ ಪ್ರಿಯನಾದ ಕೃಷ್ಣನು ತನ್ನ ಬಾಲ್ಯದ ದಿನಗಳನ್ನು ಹೇಗೆ ಕಳೆದ ಮತ್ತು ಆ ದಿನಗಳಲ್ಲಿ ಅವನು ಯಾವ ಯಾವ ರಾಕ್ಷಸರನ್ನು ಕೊಂದ ಎಂಬ ಮಾಹಿತಿ ಇದರಲ್ಲಿದೆ.
(4 / 8)
ಕೃಷ್ಣ/ ಕಂಸ: ಇದು ಹಿಂದಿ ಕಾರ್ಟೂನ್ ಆಗಿದ್ದು, ಕನ್ನಡದಲ್ಲಿಯೂ ಲಭ್ಯವಿದೆ. ಕೃಷ್ಣನನ್ನು ಕೊಲ್ಲಲು ಕಂಸನು ಮಾಡಿದ ಪ್ರಯತ್ನಗಳು ಮತ್ತು ಕೃಷ್ಣನು ಬುದ್ಧಿವಂತಿಕೆಯಿಂದ ಹೋರಾಡಿದ ಘಟನೆಗಳನ್ನು ಕಾಣಬಹುದು.
(5 / 8)
ಕೃಷ್ಣ-ಕಂಸವಧಾ: ಈ ಕಾರ್ಟೂನ್‌ನಲ್ಲಿ ನೀವು ಕೃಷ್ಣ ಎಷ್ಟು ಪರಾಕ್ರಮಿಯಾಗಿದ್ದ ಎಂಬುದನ್ನು ನಿಮ್ಮ ಮಕ್ಕಳಿಗೆ ಸರಳವಾಗಿ ತಿಳಿಸಿಕೊಡಬಹುದು.
(6 / 8)
ಕಲ್ವಕ್ರ ದ ಡಾರ್ಕ್ ಎನಿಮಿ: ಇದರಲ್ಲಿ ನೀವು ಕೃಷ್ಣ ಮತ್ತು ಬಲರಾಮ ಇಬ್ಬರ ಸಾಹಸಗಳನ್ನು ಕಾಣಬಹುದು. ಇದರಲ್ಲಿ ಇಬ್ಬರನ್ನೂ ಸಹ ನಾಯಕರನ್ನಾಗಿ ಬಿಂಬಿಸಲಾಗಿದೆ.
(7 / 8)
ಪಾಟಲೀಪುತ್ರ- ಸಿಟಿ ಆಫ್ ಡೆಡ್ ಮತ್ತು ಛೋಟಾ ಭೀಮ್: ಎರಡು ಕಾರ್ಟೂನ್‌ಗಳನ್ನು ಸಂಯೋಜಿಸುವ ಒಂದು ಕಾರ್ಟೂನ್ ಇದಾಗಿದೆ. ಛೋಟಾ ಭೀಮ್‌ನ ಸಾಹಸಗಳು ಮತ್ತು ಕೃಷ್ಣನ ಹೋರಾಟಗಳನ್ನು ಇದರಲ್ಲಿ ಕಾಣಬಹುದು
ಇತರ ಗ್ಯಾಲರಿಗಳು