ಚೊಚ್ಚಲ ಐಎಲ್ಟಿ20 ಟ್ರೋಫಿ ಗೆದ್ದ ದುಬೈ ಕ್ಯಾಪಿಟಲ್ಸ್; ಬಹುಮಾನ ಮೊತ್ತ, ಯಾರಿಗೆ ಯಾವ ಪ್ರಶಸ್ತಿ ಸಿಕ್ಕಿದೆ? ಇಲ್ಲಿದೆ ವಿವರ
- International League T20 2025: ಇಂಟರ್ನ್ಯಾಷನಲ್ ಲೀಗ್ ಟಿ20 ಟೂರ್ನಿಗೆ ತೆರೆ ಬಿದ್ದಿದೆ. ದುಬೈ ಕ್ಯಾಪಿಟಲ್ಸ್ ಮೊದಲ ಬಾರಿಗೆ ಚಾಂಪಿಯನ್ ಪಟ್ಟಕ್ಕೇರಿತು. ಹಾಗಿದ್ದರೆ ಯಾರಿಗೆ ಯಾವ ಪ್ರಶಸ್ತಿ, ಬಹುಮಾನ ಮೊತ್ತ ಎಷ್ಟು? ವಿವರ ಇಲ್ಲಿದೆ.
- International League T20 2025: ಇಂಟರ್ನ್ಯಾಷನಲ್ ಲೀಗ್ ಟಿ20 ಟೂರ್ನಿಗೆ ತೆರೆ ಬಿದ್ದಿದೆ. ದುಬೈ ಕ್ಯಾಪಿಟಲ್ಸ್ ಮೊದಲ ಬಾರಿಗೆ ಚಾಂಪಿಯನ್ ಪಟ್ಟಕ್ಕೇರಿತು. ಹಾಗಿದ್ದರೆ ಯಾರಿಗೆ ಯಾವ ಪ್ರಶಸ್ತಿ, ಬಹುಮಾನ ಮೊತ್ತ ಎಷ್ಟು? ವಿವರ ಇಲ್ಲಿದೆ.
(1 / 11)
ಯುನೈಟೆಡ್ ಅರಬ್ ಎಮಿರೇಟ್ಸ್ನಲ್ಲಿ ಜರುಗಿದ ಇಂಟರ್ನ್ಯಾಷನಲ್ ಲೀಗ್ ಟಿ20 ಟೂರ್ನಿಯ ಫೈನಲ್ನಲ್ಲಿ ಸ್ಯಾಮ್ ಕರಣ್ ನಾಯಕತ್ವದ ಡೆಸಾರ್ಟ್ ವೈಪರ್ಸ್ ತಂಡದ ವಿರುದ್ಧ 4 ವಿಕೆಟ್ಗಳ ಭರ್ಜರಿ ಗೆಲುವು ದಾಖಲಿಸಿದ ಸ್ಯಾಮ್ ಬಿಲ್ಲಿಂಗ್ಸ್ ಮುಂದಾಳತ್ವದ ದುಬೈ ಕ್ಯಾಪಿಟಲ್ಸ್ ಚೊಚ್ಚಲ ಟ್ರೋಫಿಗೆ ಮುತ್ತಿಕ್ಕುವಲ್ಲಿ ಯಶಸ್ವಿಯಾಗಿದೆ.
(2 / 11)
ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆದ ಫೈನಲ್ನಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಡೆಸಾರ್ಟ್ ವೈಪರ್ಸ್ ತನ್ನ ನಿಗದಿತ 20 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 189 ರನ್ ಪೇರಿತು. ಈ ಗುರಿ ಬೆನ್ನಟ್ಟಿದ ದುಬೈ ಕ್ಯಾಪಿಟಲ್ಸ್, 6 ವಿಕೆಟ್ ನಷ್ಟಕ್ಕೆ 19.2 ಓವರ್ಗಳಲ್ಲೇ ಚೇಸ್ ಮಾಡಿ ಟ್ರೋಫಿ ಗೆದ್ದು ಸಂಭ್ರಮಿಸಿತು.
(3 / 11)
ಐಎಲ್ಟಿ20 ಪ್ರಶಸ್ತಿ ದುಬೈ ಕ್ಯಾಪಿಟಲ್ಸ್, ಟ್ರೋಫಿಯ ಜತೆಗೆ 700,000 ಡಾಲರ್ ಬಹುಮಾನ ಮೊತ್ತವನ್ನೂ ಪಡೆಯಿತು. ಅಂದರೆ ಭಾರತೀಯ ಕರೆನ್ಸಿಯಲ್ಲಿ ಸುಮಾರು 6 ಕೋಟಿ 13 ಲಕ್ಷ ರೂಪಾಯಿ. ಇದು ಐಪಿಎಲ್ ಪ್ರೈಜ್ ಮನಿಗಿಂತ ಮೂರು ಪಟ್ಟು ಕಡಿಮೆ.
(4 / 11)
ಡೆಸಾರ್ಟ್ ವೈಪರ್ಸ್ ರನ್ನರ್ಅಪ್ ಆಗಿದ್ದು, 300,000 ಡಾಲರ್ ಪಡೆದಿದೆ. ಭಾರತೀಯ ಕರೆನ್ಸಿಯ ಮೊತ್ತ ಸುಮಾರು 2 ಕೋಟಿ 63 ಲಕ್ಷ ರೂಪಾಯಿ. ಐಪಿಎಲ್ ರನ್ನರ್ ಅಪ್ ತಂಡಕ್ಕೆ 12.5 ಕೋಟಿ ರೂಪಾಯಿ.
(5 / 11)
ಡೆಸಾರ್ಟ್ ವೈಪರ್ಸ್ ನಾಯಕ ಸ್ಯಾಮ್ ಕರನ್ ಐಎಲ್ಟಿ20ಯಲ್ಲಿ ಅತ್ಯಂತ ಮೌಲ್ಯಯುತ ಆಟಗಾರ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಅವರು ಕೆಂಪು ಬೆಲ್ಟ್ ಗೆದ್ದಿದ್ದು, ಕರನ್ 15,000 ಡಾಲರ್ ಬಹುಮಾನ ಪಡೆದಿದ್ದಾರೆ. ಭಾರತೀಯ ಕರೆನ್ಸಿಯಲ್ಲಿ ಇದರ ಮೊತ್ತ ಸುಮಾರು 13 ಲಕ್ಷ ರೂಪಾಯಿ. ಈ ಟೂರ್ನಿಯಲ್ಲಿ 387 ರನ್, 7 ವಿಕೆಟ್ ಪಡೆದಿದ್ದಾರೆ.
(6 / 11)
ಎಂಐ ಎಮಿರೇಟ್ಸ್ನ ಫಜಲ್ಹಕ್ ಫಾರೂಕಿ ಈ ವರ್ಷದ ಐಎಲ್ಟಿ20 ಯಲ್ಲಿ ಅತ್ಯುತ್ತಮ ಬೌಲರ್ ಪ್ರಶಸ್ತಿ ಗೆದ್ದಿದ್ದಾರೆ. ಅದಕ್ಕಾಗಿ ಅವರಿಗೆ ವೈಟ್ ಬೆಲ್ಟ್ ನೀಡಲಾಗಿದೆ. 15,000 ಡಾಲರ್ ಅಂದರೆ ಭಾರತೀಯ ಕರೆನ್ಸಿಯಲ್ಲಿ ಸುಮಾರು 13 ಲಕ್ಷ ರೂಪಾಯಿ.
(7 / 11)
ದುಬೈ ಕ್ಯಾಪಿಟಲ್ಸ್ನ ಶಾಯ್ ಹೋಪ್ ಟೂರ್ನಿಯ ಅತ್ಯುತ್ತಮ ಬ್ಯಾಟರ್ ಎಂಬ ಪ್ರಶಸ್ತಿ ಗೆದ್ದಿದ್ದಾರೆ. ಅವರಿಗೆ ಗ್ರೀನ್ ಬೆಲ್ಟ್ ಸಿಕ್ಕಿದೆ. 15,000 ಡಾಲರ್ ಅಂದರೆ ಭಾರತೀಯ ಕರೆನ್ಸಿಯಲ್ಲಿ ಸುಮಾರು 13 ಲಕ್ಷ ರೂಪಾಯಿ ಬಹುಮಾನ ಸಿಕ್ಕಿದೆ.
(8 / 11)
ಎಂಐ ಎಮಿರೇಟ್ಸ್ ತಂಡದ ಮೊಹಮ್ಮದ್ ವಾಸಿಮ್ ಯುಎಇಯ ಅತ್ಯುತ್ತಮ ಆಟಗಾರ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಐಎಲ್ಟಿ20ಯಲ್ಲಿ ತಮ್ಮ ದೇಶದ ಕ್ರಿಕೆಟಿಗರಿಗೆ ಈ ವಿಶೇಷ ಪ್ರಶಸ್ತಿ ನೀಡಲಾಗುತ್ತದೆ. ವಾಸಿಮ್ 15,000 ಡಾಲರ್ ಅಂದರೆ ಭಾರತೀಯ ಕರೆನ್ಸಿಯಲ್ಲಿ ಸುಮಾರು 13 ಲಕ್ಷ ರೂಪಾಯಿ ಬಹುಮಾನ ಪಡೆದಿದ್ದಾರೆ.
(9 / 11)
ದುಬೈ ಕ್ಯಾಪಿಟಲ್ಸ್ನ ಶಾಯ್ ಹೋಪ್ ಟೂರ್ನಿಯಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಪ್ರಶಸ್ತಿ ಪಡೆದಿದ್ದಾರೆ. ಅವರಿಗೆ 15 ಸಾವಿರ ಡಾಲರ್ ಅಂದರೆ ಭಾರತೀಯ ಕರೆನ್ಸಿಯಲ್ಲಿ ಸುಮಾರು 13 ಲಕ್ಷ ರೂಪಾಯಿ ಸಿಕ್ಕಿದೆ.
(10 / 11)
ದುಬೈ ಕ್ಯಾಪಿಟಲ್ಸ್ನ ಸಿಕಂದರ್ ರಾಜಾ ಫೈನಲ್ನಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಆಟಗಾರನಾಗಿದ್ದಾರೆ. ಅವರಿಗೆ 1,500 ಡಾಲರ್ ಬಹುಮಾನ ಮೊತ್ತವಾಗಿ ಸಿಕ್ಕಿದೆ. ಭಾರತೀಯ ಕರೆನ್ಸಿಯ ಮೊತ್ತ ಸುಮಾರು 1 ಲಕ್ಷ 31 ಸಾವಿರ ರೂಪಾಯಿ. ಇದಲ್ಲದೆ, ಫೈನಲ್ನಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ ದುಬೈ ಕ್ಯಾಪಿಟಲ್ಸ್ನ ರೋವ್ಮನ್ ಪೊವೆಲ್ಗೂ ಇಷ್ಟೇ ಮೊತ್ತ ಸಿಕ್ಕಿದೆ.
ಇತರ ಗ್ಯಾಲರಿಗಳು