ಕನ್ನಡ ಸುದ್ದಿ  /  Photo Gallery  /  In Pics Rachita Ram At The Birthday Celebration

Rachita Ram Birthday: ಹುಟ್ಟುಹಬ್ಬದ ಸಂಭ್ರಮದಲ್ಲಿ ‘ಡಿಂಪಲ್​’ ಬೆಡಗಿ; ರಚಿತಾ ಮನೆ ಮುಂದೆ ಅಭಿಮಾನಿಗಳ ದಂಡು..

  • ಸ್ಯಾಂಡಲ್‌ವುಡ್‌ ನಟಿ ರಚಿತಾ ರಾಮ್‌ ಇದೀಗ ಬರ್ತ್‌ಡೇ ಖುಷಿಯಲ್ಲಿದ್ದಾರೆ. ಅಕ್ಟೋಬರ್‌ 3 ರಚಿತಾ ಜನ್ಮದಿನ ಈ ಹಿನ್ನೆಲೆಯಲ್ಲಿ ಡಿಂಪಲ್‌ ಕ್ವೀನ್‌ ಫ್ಯಾನ್ಸ್‌ ನೆಚ್ಚಿನ ನಟಿಗೆ ಶುಭಾಶಯಗಳನ್ನು ರವಾನಿಸುತ್ತಿದ್ದಾರೆ. ಈ ನಡುವೆ ಅವರ ರಾಜರಾಜೇಶ್ವರಿ ನಗರದಲ್ಲಿನ ಮನೆ ಮುಂದೆಯೂ ಅಭಿಮಾನಿಗಳು ನೆರೆದಿದ್ದಾರೆ.

ಬುಲ್‌ ಬುಲ್‌ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಸಿಕ್ಕ ನಟಿ ರಚಿತಾ ರಾಮ್. ಡಿಂಪಲ್‌ ಕ್ವೀನ್‌ ಎಂದೇ ಖ್ಯಾತರಾದ ಈ ನಟಿ, ಕಡಿಮೆ ಸಮಯದಲ್ಲಿಯೇ ಸ್ಯಾಂಡಲ್‌ವುಡ್‌ನ ಎಲ್ಲ ನಟರ ಜತೆಗೆ ತೆರೆಹಂಚಿಕೊಂಡಿದ್ದಾರೆ.
icon

(1 / 6)

ಬುಲ್‌ ಬುಲ್‌ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಸಿಕ್ಕ ನಟಿ ರಚಿತಾ ರಾಮ್. ಡಿಂಪಲ್‌ ಕ್ವೀನ್‌ ಎಂದೇ ಖ್ಯಾತರಾದ ಈ ನಟಿ, ಕಡಿಮೆ ಸಮಯದಲ್ಲಿಯೇ ಸ್ಯಾಂಡಲ್‌ವುಡ್‌ನ ಎಲ್ಲ ನಟರ ಜತೆಗೆ ತೆರೆಹಂಚಿಕೊಂಡಿದ್ದಾರೆ.(Instagram/ Rachita ram)

ಕೇವಲ ಸಿನಿಮಾ ಮಾತ್ರವಲ್ಲ ಕಿರುತೆರೆಯಲ್ಲಿಯೂ ರಚಿತಾ ರಾಮ್‌ ಮಿಂಚಿದ್ದಾರೆ. ರಿಯಾಲಿಟಿ ಶೋಗಳಲ್ಲಿ ತೀರ್ಪುಗಾರರಾಗಿ ಕಾಣಿಸಿಕೊಂಡಿದ್ದಾರೆ. ಮುದ್ದಾದ ಮಾತು, ಅವರ ನಗುವಿನ ಮೂಲಕವೇ ನೋಡುಗರ ಹೃದಯ ಕದ್ದಿದ್ದಾರೆ.
icon

(2 / 6)

ಕೇವಲ ಸಿನಿಮಾ ಮಾತ್ರವಲ್ಲ ಕಿರುತೆರೆಯಲ್ಲಿಯೂ ರಚಿತಾ ರಾಮ್‌ ಮಿಂಚಿದ್ದಾರೆ. ರಿಯಾಲಿಟಿ ಶೋಗಳಲ್ಲಿ ತೀರ್ಪುಗಾರರಾಗಿ ಕಾಣಿಸಿಕೊಂಡಿದ್ದಾರೆ. ಮುದ್ದಾದ ಮಾತು, ಅವರ ನಗುವಿನ ಮೂಲಕವೇ ನೋಡುಗರ ಹೃದಯ ಕದ್ದಿದ್ದಾರೆ.(Instagram/ Rachita ram)

ಇಂದು (ಅಕ್ಟೋಬರ್‌ 3) ಅವರ ಬರ್ತ್‌ಡೇ. ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಆರ್‌ಆರ್‌ನಗರದ ಮನೆಯ ಬಳಿ ಅಭಿಮಾನಿಗಳ ಸಂಭ್ರಮ ಜೋರಾಗಿದೆ. ನೆಚ್ಚಿನ ನಟಿಯನ್ನು ಕಣ್ತುಂಬಿಕೊಳ್ಳಲು ಸಾಕಷ್ಟು ಅಭಿಮಾನಿಗಳು ಅವರ ಮನೆ ಬಳಿ ಜಮಾಯಿಸಿದ್ದಾರೆ.
icon

(3 / 6)

ಇಂದು (ಅಕ್ಟೋಬರ್‌ 3) ಅವರ ಬರ್ತ್‌ಡೇ. ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಆರ್‌ಆರ್‌ನಗರದ ಮನೆಯ ಬಳಿ ಅಭಿಮಾನಿಗಳ ಸಂಭ್ರಮ ಜೋರಾಗಿದೆ. ನೆಚ್ಚಿನ ನಟಿಯನ್ನು ಕಣ್ತುಂಬಿಕೊಳ್ಳಲು ಸಾಕಷ್ಟು ಅಭಿಮಾನಿಗಳು ಅವರ ಮನೆ ಬಳಿ ಜಮಾಯಿಸಿದ್ದಾರೆ.(Instagram/ Rachita ram)

ಕೇವಲ ಕರ್ಮಷಿಯಲ್‌ ಸಿನಿಮಾಗಳಿಗಷ್ಟೇ ಅಂಟಿಕೊಳ್ಳದ ರಚಿತಾ, ಈವರೆಗೂ ಎಲ್ಲ ಶೈಲಿಯ ಸಿನಿಮಾಗಳಲ್ಲಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದಾರೆ. ಅಷ್ಟೇ ಅಲ್ಲ ಆಫ್‌ ಬೀಟ್‌ ಸಿನಿಮಾಗಳಲ್ಲಿ, ನಾಯಕಿ ಪ್ರಧಾನ ಚಿತ್ರಗಳಲ್ಲಿಯೂ ನಟಿಸಿದ್ದಾರೆ.
icon

(4 / 6)

ಕೇವಲ ಕರ್ಮಷಿಯಲ್‌ ಸಿನಿಮಾಗಳಿಗಷ್ಟೇ ಅಂಟಿಕೊಳ್ಳದ ರಚಿತಾ, ಈವರೆಗೂ ಎಲ್ಲ ಶೈಲಿಯ ಸಿನಿಮಾಗಳಲ್ಲಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದಾರೆ. ಅಷ್ಟೇ ಅಲ್ಲ ಆಫ್‌ ಬೀಟ್‌ ಸಿನಿಮಾಗಳಲ್ಲಿ, ನಾಯಕಿ ಪ್ರಧಾನ ಚಿತ್ರಗಳಲ್ಲಿಯೂ ನಟಿಸಿದ್ದಾರೆ.(Instagram/ Rachita ram)

ಸದ್ಯ ವೀರಂ, ಮ್ಯಾಟ್ನಿ, ಬ್ಯಾಡ್‌ ಮಾನರ್ಸ್‌, ಲವ್‌ ಮೀ ಆರ್‌ ಹೇಟ್‌ ಮೀ ಮತ್ತು ದರ್ಶನ್‌ ಜತೆಗೆ ಕ್ರಾಂತಿ ಸಿನಿಮಾದಲ್ಲಿಯೂ ನಟಿಸುತ್ತಿದ್ದಾರೆ. ಇಂದು ಅವರ ಬರ್ತಡೇ ಪ್ರಯುಕ್ತ ಹೊಸ ಸಿನಿಮಾಗಳೂ ಘೋಷಣೆ ಆಗುವ ಸಾಧ್ಯತೆ ಇವೆ.
icon

(5 / 6)

ಸದ್ಯ ವೀರಂ, ಮ್ಯಾಟ್ನಿ, ಬ್ಯಾಡ್‌ ಮಾನರ್ಸ್‌, ಲವ್‌ ಮೀ ಆರ್‌ ಹೇಟ್‌ ಮೀ ಮತ್ತು ದರ್ಶನ್‌ ಜತೆಗೆ ಕ್ರಾಂತಿ ಸಿನಿಮಾದಲ್ಲಿಯೂ ನಟಿಸುತ್ತಿದ್ದಾರೆ. ಇಂದು ಅವರ ಬರ್ತಡೇ ಪ್ರಯುಕ್ತ ಹೊಸ ಸಿನಿಮಾಗಳೂ ಘೋಷಣೆ ಆಗುವ ಸಾಧ್ಯತೆ ಇವೆ.(Instagram/ Rachita ram)

ಹುಟ್ಟುಹಬ್ಬದ ಸಂಭ್ರಮದಲ್ಲಿ ‘ಡಿಂಪಲ್​’ ಬೆಡಗಿ
icon

(6 / 6)

ಹುಟ್ಟುಹಬ್ಬದ ಸಂಭ್ರಮದಲ್ಲಿ ‘ಡಿಂಪಲ್​’ ಬೆಡಗಿ(Instagram/ Rachita ram)


IPL_Entry_Point

ಇತರ ಗ್ಯಾಲರಿಗಳು