ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Bengaluru-mysuru Expressway: ರಮಣೀಯ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ಅನ್ನು ಫೋಟೋಗಳಲ್ಲಿ ನೋಡಿ..

Bengaluru-Mysuru expressway: ರಮಣೀಯ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ಅನ್ನು ಫೋಟೋಗಳಲ್ಲಿ ನೋಡಿ..

  • ಬೆಂಗಳೂರು ಮತ್ತು ಮೈಸೂರು ನಗರಗಳ ನಡುವಿನ ಸಂಚಾರ ಅವಧಿಯನ್ನು ಮೂರು ಗಂಟೆಗಳಿಂದ ಕೇವಲ 75 ನಿಮಿಷಗಳಿಗೆ ಕಡಿಮೆ ಮಾಡಲಿರುವ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ಅನ್ನು ನಿನ್ನೆ (ಮಾ.12) ಪ್ರಧಾನಿ ನರೇಂದ್ರ ಮೋದಿ ಲೋಕಾರ್ಪಣೆಗೊಳಿಸಿದ್ದಾರೆ. ರಮಣೀಯ ದಶಪಥ ರಸ್ತೆಯನ್ನು ಫೋಟೋಗಳಲ್ಲಿ ನೋಡಿ..

118 ಕಿಮೀ ಉದ್ದದ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ಅನ್ನು, ಒಟ್ಟು 8,480 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. 
icon

(1 / 9)

118 ಕಿಮೀ ಉದ್ದದ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ಅನ್ನು, ಒಟ್ಟು 8,480 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. (ANI Pic Service)

ಬೆಂಗಳೂರು ಮತ್ತು ಮೈಸೂರು ನಗರಗಳ ನಡುವಿನ ಸಂಚಾರ ಅವಧಿಯನ್ನು ಮೂರು ಗಂಟೆಗಳಿಂದ ಕೇವಲ 75 ನಿಮಿಷಗಳಿಗೆ ಕಡಿಮೆ ಮಾಡಲಿದೆ ಈ ಎಕ್ಸ್‌ಪ್ರೆಸ್‌ವೇ. 
icon

(2 / 9)

ಬೆಂಗಳೂರು ಮತ್ತು ಮೈಸೂರು ನಗರಗಳ ನಡುವಿನ ಸಂಚಾರ ಅವಧಿಯನ್ನು ಮೂರು ಗಂಟೆಗಳಿಂದ ಕೇವಲ 75 ನಿಮಿಷಗಳಿಗೆ ಕಡಿಮೆ ಮಾಡಲಿದೆ ಈ ಎಕ್ಸ್‌ಪ್ರೆಸ್‌ವೇ. (ANI Pic Service)

ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ಕಾಮಗಾರಿಯು ಎರಡು ಹಂತಗಳಲ್ಲಿ ನಡೆದಿತ್ತು. ಬೆಂಗಳೂರಿನಿಂದ ಮದ್ದೂರು ತಾಲೂಕಿನ ನಿಡಘಟ್ಟಕ್ಕೆ ಸುಮಾರು 56 ಕಿಲೋ ಮೀಟರ್​ ಕಾಮಗಾರಿ ಮೊದಲ ಹಂತದಲ್ಲಿ ನಡೆದರೆ, ನಿಡಘಟ್ಟದಿಂದ ಮೈಸೂರಿಗೆ 61 ಕಿ.ಮೀ ಕಾಮಗಾರಿ ನಡೆದಿತ್ತು. 
icon

(3 / 9)

ಬೆಂಗಳೂರು ಮತ್ತು ಮೈಸೂರು ನಡುವಿನ ಪ್ರಯಾಣದ ಅವಧಿ ಸುಮಾರು 75 ನಿಮಿಷಕ್ಕೆ ಇಳಿಯುವುದರಿಂದ, ಈ ಭಾಗದಲ್ಲಿ ವಾಣಿಜ್ಯ ಚುಟವಟಿಕೆಗಳು ವೇಗ ಪಡೆಯಲಿದೆ ಎಂದು ನಿರೀಕ್ಷಿಸಲಾಗಿದೆ. 
icon

(4 / 9)

ಬೆಂಗಳೂರು ಮತ್ತು ಮೈಸೂರು ನಡುವಿನ ಪ್ರಯಾಣದ ಅವಧಿ ಸುಮಾರು 75 ನಿಮಿಷಕ್ಕೆ ಇಳಿಯುವುದರಿಂದ, ಈ ಭಾಗದಲ್ಲಿ ವಾಣಿಜ್ಯ ಚುಟವಟಿಕೆಗಳು ವೇಗ ಪಡೆಯಲಿದೆ ಎಂದು ನಿರೀಕ್ಷಿಸಲಾಗಿದೆ. 

ಅಲ್ಲದೇ ಈ ಪ್ರದೇಶದ ಸಾಮಾಜಿಕ-ಆರ್ಥಿಕ ಅಭಿವೃದ್ಧಿಗೆ ವೇಗವರ್ಧಕವಾಗಿ ಕಾರ್ಯನಿರ್ವಹಿಸುವಂತಹ ಇತರ ಉದ್ದೇಶಗಳಿಗಾಗಿ ಎಕ್ಸ್‌ಪ್ರೆಸ್‌ವೇ ಕಾರ್ಯನಿರ್ವಹಿಸುತ್ತದೆ ಎಂದು ನಿರೀಕ್ಷಿಸಲಾಗಿದೆ.
icon

(5 / 9)

ಅಲ್ಲದೇ ಈ ಪ್ರದೇಶದ ಸಾಮಾಜಿಕ-ಆರ್ಥಿಕ ಅಭಿವೃದ್ಧಿಗೆ ವೇಗವರ್ಧಕವಾಗಿ ಕಾರ್ಯನಿರ್ವಹಿಸುವಂತಹ ಇತರ ಉದ್ದೇಶಗಳಿಗಾಗಿ ಎಕ್ಸ್‌ಪ್ರೆಸ್‌ವೇ ಕಾರ್ಯನಿರ್ವಹಿಸುತ್ತದೆ ಎಂದು ನಿರೀಕ್ಷಿಸಲಾಗಿದೆ.

ಈ ದಶಪಥ ರಸ್ತೆಯನ್ನು ನಿನ್ನೆ (ಮಾ.12) ಪ್ರಧಾನಿ ನರೇಂದ್ರ ಮೋದಿ ಲೋಕಾರ್ಪಣೆಗೊಳಿಸಿದ್ದಾರೆ. 
icon

(6 / 9)

ಈ ದಶಪಥ ರಸ್ತೆಯನ್ನು ನಿನ್ನೆ (ಮಾ.12) ಪ್ರಧಾನಿ ನರೇಂದ್ರ ಮೋದಿ ಲೋಕಾರ್ಪಣೆಗೊಳಿಸಿದ್ದಾರೆ. (ANI Pic Service)

ಎಕ್ಸ್‌ಪ್ರೆಸ್‌ವೇ ನಾಲ್ಕು ರೈಲು ಮೇಲ್ಸೇತುವೆಗಳು, ಒಂಬತ್ತು ದೊಡ್ಡ ಸೇತುವೆಗಳು, 40 ಸಣ್ಣ ಸೇತುವೆಗಳು ಮತ್ತು 89 ಅಂಡರ್‌ಪಾಸ್‌ಗಳು ಮತ್ತು ಓವರ್​​ಪಾಸ್​​ಗಳನ್ನು ಹೊಂದಿದೆ.
icon

(7 / 9)

ಎಕ್ಸ್‌ಪ್ರೆಸ್‌ವೇ ನಾಲ್ಕು ರೈಲು ಮೇಲ್ಸೇತುವೆಗಳು, ಒಂಬತ್ತು ದೊಡ್ಡ ಸೇತುವೆಗಳು, 40 ಸಣ್ಣ ಸೇತುವೆಗಳು ಮತ್ತು 89 ಅಂಡರ್‌ಪಾಸ್‌ಗಳು ಮತ್ತು ಓವರ್​​ಪಾಸ್​​ಗಳನ್ನು ಹೊಂದಿದೆ.(PTI)

ಗಂಟೆಗೆ 100 ರಿಂದ 120 ಕಿಲೋ ಮೀಟರ್ ವೇಗದಲ್ಲಿ ವಾಹನಗಳು ಚಲಿಸುವಂತೆ ಎಕ್ಸ್‌ಪ್ರೆಸ್‌ವೇ ವಿನ್ಯಾಸಗೊಳಿಸಲಾಗಿದೆ.
icon

(8 / 9)

ಗಂಟೆಗೆ 100 ರಿಂದ 120 ಕಿಲೋ ಮೀಟರ್ ವೇಗದಲ್ಲಿ ವಾಹನಗಳು ಚಲಿಸುವಂತೆ ಎಕ್ಸ್‌ಪ್ರೆಸ್‌ವೇ ವಿನ್ಯಾಸಗೊಳಿಸಲಾಗಿದೆ.(ANI Pic Service)

ಸುರಕ್ಷತಾ ಉದ್ದೇಶದಿಂದ ಟೋಲ್ ಶುಲ್ಕವನ್ನು ಜಾರಿಗೊಳಿಸಿದ ನಂತರ ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳಿಗೆ ಎಕ್ಸ್‌ಪ್ರೆಸ್‌ವೇ ಬಳಸುವುದನ್ನು  NHAI ನಿಷೇಧಿಸಿದೆ. ಈ ರಸ್ತೆಯಲ್ಲಿ ಸಂಚರಿಸುವ ವಾಹನಗಳಿಗೆ 135 ರೂ. ಟೋಲ್​ ಶುಲ್ಕ ನಿಗದಿಪಡಿಸುವ ಸಾಧ್ಯತೆಯಿದೆ. 
icon

(9 / 9)

ಟಿ20 ವರ್ಲ್ಡ್‌ಕಪ್ 2024

ಇತರ ಗ್ಯಾಲರಿಗಳು