Simhapriya Latest Photos: ಪ್ರೇಮಿಗಳ ದಿನಕ್ಕೆ ಸಿಂಹಪ್ರಿಯಾ ಜೋಡಿಯ ಪತ್ರ ಪ್ರೀತಿ.. ಒಂದಷ್ಟು ನಗು, ಹಳೇ ನೆನಪು ಮತ್ತು ಬರಹ.. PHOTOS
- Simhapriya Latest Photos: ಪ್ರೇಮಿಗಳ ದಿನ ಪ್ರೇಮಿಗಳಿಗೆ ವಿಶೇಷವಾದ ದಿನ. ಆ ದಿನದಂದೇ ಪ್ರೀತಿಸಿ ಈಗಷ್ಟೇ ಮದುವೆಯಾದ ಹರಿಪ್ರಿಯಾ ಮತ್ತು ವಸಿಷ್ಠ ಸಿಂಹ ಜೋಡಿ, ಮತ್ತೆ ಪ್ರೇಮ ನಿವೇದನೆ ಮಾಡಿಕೊಂಡಿದೆ. ಅದೂ ಪುಸ್ತಕ ಬಿಡುಗಡೆ ಮಾಡುವ ಮೂಲಕ. ‘ಪ್ರೇಮಪತ್ರದ ಆಫೀಸು ಮತ್ತು ಅವಳು’ ಪುಸ್ತಕ ಬಿಡುಗಡೆ ಮಾಡುತ್ತಲೇ ಹಳೆಯದನ್ನು ಮತ್ತೆ ರಿವೈಂಡ್ ಮಾಡಿಕೊಂಡಿದೆ. ಆ ಕ್ಷಣದ ಫೋಟೋಗಳು ಹೀಗಿವೆ..

(1 / 10)
ಪ್ರೇಮಿಗಳ ದಿನ ಪ್ರೇಮಿಗಳಿಗೆ ವಿಶೇಷವಾದ ದಿನ. ಆ ದಿನದಂದೇ ಪ್ರೀತಿಸಿ ಈಗಷ್ಟೇ ಮದುವೆಯಾದ ಹರಿಪ್ರಿಯಾ ಮತ್ತು ವಸಿಷ್ಠ ಸಿಂಹ ಜೋಡಿ, ಮತ್ತೆ ಪ್ರೇಮ ನಿವೇದನೆ ಮಾಡಿಕೊಂಡಿದೆ.
(2 / 10)
ಅದೂ ಪುಸ್ತಕ ಬಿಡುಗಡೆ ಮಾಡುವ ಮೂಲಕ. ‘ಪ್ರೇಮಪತ್ರದ ಆಫೀಸು ಮತ್ತು ಅವಳು’ ಪುಸ್ತಕ ಬಿಡುಗಡೆ ಮಾಡುತ್ತಲೇ ಹಳೆಯದನ್ನು ಮತ್ತೆ ರಿವೈಂಡ್ ಮಾಡಿಕೊಂಡಿದೆ.
(3 / 10)
ಮಾವಲಿ ಪಬ್ಲಿಕೇಶನ್ ನ ಮೊದಲ ಪುಸ್ತಕವಾದ ಶಿವಕುಮಾರ ಮಾವಲಿಯವರ ‘ಪ್ರೇಮಪತ್ರದ ಆಫೀಸು ಮತ್ತು ಅವಳು’ ಎಂಬ ಶೀರ್ಷಿಕೆಯ ಕಥಾ ಸಂಕಲನವನ್ನು ಈ ಜೋಡಿ ಬಿಡುಗಡೆ ಮಾಡಿದೆ. ಲೇಖಕ ಶಿವಕುಮಾರ ಮಾವಲಿ, ಪ್ರಕಾಶಕಿ ಪ್ರೇಮ ಶಿವಕುಮಾರ ಸಹ ಈ ವೇಳೆ ಜೊತೆಗಿದ್ದರು.
(4 / 10)
ಪ್ರೇಮಪತ್ರದ ಆಫೀಸು ಎಂಬ ಶೀರ್ಷಿಕೆಯೇ ಆಸಕ್ತಿ ಹುಟ್ಟಿಸುವಂತಿದೆ, ನಾವೂ ಪ್ರೇಮಪತ್ರಗಳನ್ನು ಬರೆದುಕೊಳ್ತಿದ್ವಿ ಎಂದು ನೆನಪು ಮಾಡಿಕೊಂಡು, ಪುಸ್ತಕದಲ್ಲಿದ್ದ ಎರಡು ಪತ್ರಗಳ ಸಾಲುಗಳನ್ನು ಪರಸ್ಪರರು ಪತ್ರದ ರೀತಿಯಲ್ಲಿ ಓದಿಕೊಂಡರು.
(5 / 10)
ಹರಿಪ್ರಿಯಾ, ಸಾವಿರ ಜನರ ಮಧ್ಯೆ ಇದ್ದರೂ ನಾನು ಏಕಾಂಗಿಯೇ, ನಿನ್ನ ನೆನಪಿನ ಭಾವವಿರದಿದ್ದರೆ.. ಎಂದು ಹೇಳಿದರೆ, ವಸಿಷ್ಠ ಸಿಂಹ, ತನಗಾಗಿ ಏನನ್ನೂ ಮಾಡಿಕೊಳ್ಳದ ನೀರಿನಂತೆ ನಾನು ನಿನ್ನನ್ನು ಪ್ರೀತಿಸುತ್ತೇನೆ.. ಎಂದು ಹರಿಪ್ರಿಯಾರ ಮುಖದಲ್ಲಿ ನಗು ಮೂಡಿಸಿದರು.
ಇತರ ಗ್ಯಾಲರಿಗಳು