ಕನ್ನಡ ಸುದ್ದಿ  /  Photo Gallery  /  In Pics World Famous Kalaghatagi Cradle Gift To Prime Minister Modi

Kalaghatagi Cradle: ಪ್ರಧಾನಿ ಮೋದಿ ಕೈ ಸೇರಲಿದೆ ವಿಶ್ವವಿಖ್ಯಾತ ಕಲಘಟಗಿಯ ತೊಟ್ಟಿಲು!; ಅಂದದ ತೊಟ್ಟಿಲ ಫೋಟೋಸ್‌ ನೋಡಿ..

  • Kalaghatagi Cradle: ರಾಜಕಾರಣಿಗಳಿಗೂ ಇದು ಬೇಕು, ಸಿನಿಮಾ ಮಂದಿಗೂ ಇದು ಇಷ್ಟ.. ಉಡುಗೊರೆ ರೂಪದಲ್ಲಿ ವಿದೇಶಕ್ಕೂ ಹೋಗಿದೆ ಕಲಘಟಗಿಯ ತೊಟ್ಟಿಲು! ತೊಟ್ಟಿಲು ನಗರಿಯೆಂದೇ ಕರೆಸಿಕೊಳ್ಳುವ ಕಲಘಟಗಿಯ ಕಲರ್‌ಫುಲ್‌ ತೊಟ್ಟಿಲು ಈ ಸಲ ದೇಶದ ಪ್ರಧಾನಿ ಮೋದಿಯ ಕೈ ಸೇರುವ ಕ್ಷಣ ಬಂದಿದೆ. ಇನ್ನೇನು ನಾಳೆ (ಮಾ. 12) ಧಾರವಾಡಕ್ಕೆ ಬರುವ ನರೇಂದ್ರ ಮೋದಿಯವರಿಗೆ ಕಲಘಟಗಿಯ ಬಣ್ಣದ ತೊಟ್ಟಿಲು ಉಡುಗೊರೆ ರೂಪದಲ್ಲಿ ನೀಡಲಾಗುತ್ತಿದೆ. ಇಲ್ಲಿವೆ ನೋಡಿ ಆ ತೊಟ್ಟಿಲ ಫೋಟೋಗಳು...

ಹಲವು ಕಾರ್ಯಕ್ರಮಗಳ ನಿಮಿತ್ತ ಕರ್ನಾಟಕ ಪ್ರವಾಸ ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋಡಿ, ಮಾ. 12ರಂದು ಧಾರವಾಡಕ್ಕೆ ಆಗಮಿಸುತ್ತಿದ್ದಾರೆ.
icon

(1 / 8)

ಧಾರವಾಡದ ಐಐಟಿ ಉದ್ಘಾಟನೆ ಮತ್ತು ಹುಬ್ಬಳ್ಳಿಯ ವಿಶ್ವದ ಅತಿದೊಡ್ಡ ರೈಲ್ವೆ ಪ್ಲಾಟ್ ಫಾರಂ ಲೋಕಾರ್ಪಣೆಗೊಳಿಸಲಿದ್ದಾರೆ.
icon

(2 / 8)

ಈ ಕಾರ್ಯಕ್ರಮಕ್ಕೆ ಆಗಮಿಸುತ್ತಿರುವ ಅವರಿಗೆ ಈ ಸಲ ತೊಟ್ಟಿಲು ನಗರಿ ಕಲಘಟಗಿಯಿಂದ ವಿಶೇಷ ಕಿರು ತೊಟ್ಟಿಲು ಉಡುಗೊರೆ ರೂಪದಲ್ಲಿ ಅವರ ಕೈ ಸೇರುತ್ತಿದೆ.
icon

(3 / 8)

ಕಲಘಟಗಿಯ ಈ ಬಣ್ಣದ ತೊಟ್ಟಿಲು ಹೀಗೆ ವಿಶೇಷ ಅತಿಥಿಗಳ ಕೈ ಸೇರುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆ ಅದೆಷ್ಟೋ ರಾಜಕಾರಣಿಗಳಿಗೆ ಇದು ಉಡುಗೊರೆಯಾಗಿ ತಲುಪಿದೆ.  
icon

(4 / 8)

ಸ್ಯಾಂಡಲ್‌ವುಡ್‌ನ ನಟ, ನಟಿಯರೂ ಇದನ್ನು ಉಡುಗೊರೆ ರೂಪದಲ್ಲಿ ಸ್ವೀಕರಿಸಿದ್ದಾರೆ. ರೆಬಲ್‌ಸ್ಟಾರ್‌ ಅಂಬರೀಶ್‌, ಯಶ್‌ ಮಗಳಿಗೆ ಕಲಘಟಗಿ ತೊಟ್ಟಿಲನ್ನು ಉಡುಗೊರೆ ನೀಡಿದ್ದರು.  
icon

(5 / 8)

ಕಲಘಟಗಿ ಪಟ್ಟಣದಲ್ಲಿ ಕಳೆದ ಹಲವು ದಶಕಗಳಿಂದ ಈ ಕಸುಬನ್ನು ಮಾಡಿಕೊಂಡು ಬಂದಿರುವ ಮಾರುತಿ ಬಡಿಗೇರ, ತಿಪ್ಪಣ್ಣ ಬಡಿಗೇರ, ಹರೀಶ್‌, ಶ್ರೀ ಶೈಲ ಬಡಿಗೇರ ಒಟ್ಟಿಗೆ ಸೇರಿ ತೊಟ್ಟಿಲು ತಯಾರಿಸಿದ್ದಾರೆ.  
icon

(6 / 8)

ನೈಸರ್ಗಿಕ ಬಣ್ಣವನ್ನೇ ಬಳಸಿ ತಯಾರಿಸಲಾದ ಈ ತೊಟ್ಟಿಲಿನ ಬಣ್ಣ ನೂರು ವರ್ಷಗಳ ವರೆಗೂ ಹೋಗದು. ತೊಟ್ಟಿಲನ ಮೇಲೆ ಕೃಷ್ಣನ ಲೀಲೆ, ಗಣೇಶನ ಚಿತ್ರಗಳಿವೆ.  
icon

(7 / 8)

ಕೇವಲ ತೊಟ್ಟಿಲು ಮಾತ್ರವಲ್ಲದೆ ಹಾವೇರಿಯ ಏಲಕ್ಕಿ ಮಾಲೆ, ಹುಬ್ಬಳ್ಳಿಯ ಸಿದ್ಧಾರೂಢರ ಮೂರ್ತಿ, ಕಸೂತಿಯ ಶಾಲು ಸೇರಿ ಹಲವು ಬಗೆಯ ಉಡುಗೊರೆಗಳನ್ನು ಮೋದಿಯವರಿಗೆ ನೀಡಲು ಜಿಲ್ಲಾಡಳಿತ ನಿರ್ಧರಿಸಿದೆ.
icon

(8 / 8)

IPL_Entry_Point

ಇತರ ಗ್ಯಾಲರಿಗಳು