ಭಾರತ vs ಶ್ರೀಲಂಕಾ ನಡುವಿನ ಏಕದಿನ ಸರಣಿಯನ್ನು ಎಲ್ಲಿ, ಹೇಗೆ ವೀಕ್ಷಿಸಬೇಕು? ಇಲ್ಲಿದೆ ಲೈವ್​ಸ್ಟ್ರೀಮ್ ವಿವರ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಭಾರತ Vs ಶ್ರೀಲಂಕಾ ನಡುವಿನ ಏಕದಿನ ಸರಣಿಯನ್ನು ಎಲ್ಲಿ, ಹೇಗೆ ವೀಕ್ಷಿಸಬೇಕು? ಇಲ್ಲಿದೆ ಲೈವ್​ಸ್ಟ್ರೀಮ್ ವಿವರ

ಭಾರತ vs ಶ್ರೀಲಂಕಾ ನಡುವಿನ ಏಕದಿನ ಸರಣಿಯನ್ನು ಎಲ್ಲಿ, ಹೇಗೆ ವೀಕ್ಷಿಸಬೇಕು? ಇಲ್ಲಿದೆ ಲೈವ್​ಸ್ಟ್ರೀಮ್ ವಿವರ

  • India vs Sri Lanka Live Streaming: ಭಾರತ ಮತ್ತು ಶ್ರೀಲಂಕಾ ನಡುವಿನ ಏಕದಿನ ಕ್ರಿಕೆಟ್ ಸರಣಿಯನ್ನು ಯಾವಾಗ ಮತ್ತು ಎಲ್ಲಿ ವೀಕ್ಷಿಸಬಹುದು? ಇಲ್ಲಿದೆ ವಿವರ.

ಶ್ರೀಲಂಕಾ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಯನ್ನು ವೈಟ್​​ವಾಶ್ ಮಾಡಿರುವ ಭಾರತ, ಏಕದಿನ ಸರಣಿಗೆ ಸಜ್ಜಾಗಿದೆ. ಭಾರತ ಹಾಗೂ ಶ್ರೀಲಂಕಾ ನಡುವಿನ ಮೊದಲ ಏಕದಿನ ಪಂದ್ಯಕ್ಕೆ ಇಂದು (ಆಗಸ್ಟ್​ 2) ಆರಂಭವಾಗಲಿದ್ದು, ಈ ಸರಣಿಯನ್ನು ಯಾವಾಗ, ಎಲ್ಲಿ ವೀಕ್ಷಿಸಬಹುದು? ಇಲ್ಲಿದೆ ವಿವರ.
icon

(1 / 6)

ಭಾರತ-ಶ್ರೀಲಂಕಾ ನಡುವಿನ ಮೊದಲ ಏಕದಿನ ಕೊಲಂಬೊದ ಆರ್ ಪ್ರೇಮದಾಸ ಮೈದಾನದಲ್ಲಿ ನಡೆಯಲಿದೆ. ಪಂದ್ಯ ಮಧ್ಯಾಹ್ನ 2.30ಕ್ಕೆ ಆರಂಭವಾಗಲಿದೆ. ಟಾಸ್ ಪ್ರಕ್ರಿಯೆ ಮಧ್ಯಾಹ್ನ 2 ಗಂಟೆಗೆ ನಡೆಯಲಿದೆ.
icon

(2 / 6)

ಇಂಡೋ-ಲಂಕಾ ಓಡಿಐ ಸರಣಿಯನ್ನು ಸೋನಿ ಸ್ಪೋರ್ಟ್ಸ್ ನೆಟ್ವರ್ಕ್​​​ನಲ್ಲಿ ನೇರ ಪ್ರಸಾರ ಮಾಡಲಾಗುತ್ತದೆ (Sony Sports 3, Sony Sports 4, Sony Sports 5, Sony Sports 3 HD, Sony Sports 4 HD ಮತ್ತು Sony Sports 5 HD). ಭಾರತದಲ್ಲಿ ಪಂದ್ಯವನ್ನು ಸೋನಿ ಲೈವ್ ಅಪ್ಲಿಕೇಶನ್ ಮತ್ತು ವೆಬ್​ಸೈಟ್​ನಲ್ಲಿ ಲೈವ್​ ಸ್ಟ್ರೀಮ್ ಮಾಡಲಾಗುತ್ತದೆ.
icon

(3 / 6)

ಸೋನಿ ಲೈವ್​​ ವೆಬ್​ಸೈಟ್​ನಲ್ಲೂ ಉಚಿತವಾಗಿ ವೀಕ್ಷಿಸಲು ಸಾಧ್ಯವಿಲ್ಲ. ಉಚಿತವಾಗಿ ವೀಕ್ಷಿಸಲು ಬಯಸಿದರೆ, ನೀವು ಅದನ್ನು ಜಿಯೋ ಟಿವಿ ಅಪ್ಲಿಕೇಶನ್‌ನಿಂದ ವೀಕ್ಷಿಸಬಹುದು.
icon

(4 / 6)

ಏಕದಿನ ಕ್ರಿಕೆಟ್​​ನಲ್ಲಿ ಭಾರತ-ಶ್ರೀಲಂಕಾ ಒಟ್ಟು 168 ಬಾರಿ ಮುಖಾಮುಖಿಯಾಗಿವೆ. ಭಾರತ 99 ಪಂದ್ಯಗಳನ್ನು ಗೆದ್ದಿದೆ. ಶ್ರೀಲಂಕಾ 57 ಪಂದ್ಯಗಳನ್ನು ಗೆದ್ದಿದೆ. ಉಭಯ ದೇಶಗಳ ನಡುವಿನ ಒಂದು ಏಕದಿನ ಪಂದ್ಯ ಟೈನಲ್ಲಿ ಕೊನೆಗೊಂಡಿದೆ. 11 ಪಂದ್ಯ ರದ್ದಾಗಿವೆ. ಇದೀಗ ಶ್ರೀಲಂಕಾ ವಿರುದ್ಧ 100ನೇ ಏಕದಿನ ಪಂದ್ಯದ ಗೆಲುವಿಗೆ ಭಾರತ ಸಜ್ಜಾಗಿದೆ.
icon

(5 / 6)

ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್ (ಉಪನಾಯಕ), ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ರಿಷಭ್ ಪಂತ್ (ವಿಕೆಟ್ ಕೀಪರ್), ಕೆಎಲ್ ರಾಹುಲ್ (ವಿಕೆಟ್ ಕೀಪರ್), ಶಿವಂ ದುಬೆ, ರಿಯಾನ್ ಪರಾಗ್, ಅಕ್ಷರ್ ಪಟೇಲ್, ಕುಲ್ದೀಪ್ ಯಾದವ್, ಖಲೀಲ್ ಅಹ್ಮದ್, ಹರ್ಷಿತ್ ರಾಣಾ, ಮೊಹಮ್ಮದ್ ಸಿರಾಜ್.
icon

(6 / 6)

ಇತರ ಗ್ಯಾಲರಿಗಳು