Independence day 2024: ಹಿಂದೂಸ್ತಾನವೂ ಎಂದೂ ಮರೆಯದ; ಹೇಗಿತ್ತು ಕರ್ನಾಟಕದಲ್ಲಿ ಸ್ವಾತಂತ್ರ್ಯ ಸಡಗರ, ಮೈಸೂರಲ್ಲಿ ವಿದೇಶಿ ಮಹಿಳೆ ಸಂಭ್ರಮ
- I Day celebrations ಕರ್ನಾಟಕದ ನಾನಾ ಭಾಗಗಳಲ್ಲಿ ಈ ಬಾರಿಯ ಸ್ವಾತಂತ್ರೋತ್ಸವವನ್ನು (Independence day 2024) ಸಡಗರ, ಸಂಭ್ರಮದಿಂದ ಆಚರಿಸಲಾಯಿತು. ಇದರ ಚಿತ್ರನೋಟ ಇಲ್ಲಿದೆ.
- I Day celebrations ಕರ್ನಾಟಕದ ನಾನಾ ಭಾಗಗಳಲ್ಲಿ ಈ ಬಾರಿಯ ಸ್ವಾತಂತ್ರೋತ್ಸವವನ್ನು (Independence day 2024) ಸಡಗರ, ಸಂಭ್ರಮದಿಂದ ಆಚರಿಸಲಾಯಿತು. ಇದರ ಚಿತ್ರನೋಟ ಇಲ್ಲಿದೆ.
(1 / 11)
Foreigner at Mysore ಮೈಸೂರಿನ ಬನ್ನಿಮಂಟಪ ಮೈದಾನದಲ್ಲಿ ನಡೆದ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಜರ್ಮನಿ ಪ್ರವಾಸಿಗರಾದ ಎಲೆನಿಯಾ ಎಂಬುವವರು ಭಾಗಿಯಾಗಿ ಪಥ ಸಂಚಲವನ್ನು ಕುತೂಹಲದಿಂದ ವೀಕ್ಷಿಸಿದರು.
(2 / 11)
CM Siddaramaiah ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೆಂಗಳೂರಿನ ಮಾಣಿಕ್ ಶಾ ಮೈದಾನದಲ್ಲಿ ಸ್ವಾತಂತ್ರ್ಯ ದಿನ ಕಾರ್ಯಕ್ರಮಕ್ಕೆ ಆಗಮಿಸಿದಾಗ ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್, ಪೊಲೀಸ್ ಆಯುಕ್ತ ಬಿ.ದಯಾನಂದ, ಎಸ್ಪಿ ಕೆ.ಎ.ದಯಾನಂದ ಬರ ಮಾಡಿಕೊಂಡರು,
(3 / 11)
Ballari Program ಬಳ್ಳಾರಿಯಲ್ಲಿ ನಡೆದ ಸ್ವಾತಂತ್ರ್ಯ ದಿನ ಕಾರ್ಯಕ್ರಮದಲ್ಲಿ ಸಚಿವ ಕೃಷ್ಣಬೈರೇಗೌಡ ಧ್ವಜಾರೋಹಣ ನೆರವೇರಿಸಿದರು. ಶಾಸಕ ನಾರಾ ಭರತ್ ರೆಡ್ಡಿ, ಡಿಸಿ ಪ್ರಶಾಂತ್ ಕುಮಾರ್ ಮಿಶ್ರ, ಐಜಿಪಿ ಲೋಕೇಶ್ ಕುಮಾರ್, ಎಸ್ಪಿ ಸೌಖ್ಯಲತಾ ಮತ್ತಿತರರು ಹಾಜರಿದ್ದರು.
(4 / 11)
Bangalore Water Board ಬೆಂಗಳೂರಿನ ಜಲಮಂಡಳಿಯಲ್ಲಿ ನಡೆದ ಸ್ವಾತಂತ್ರ್ಯೋತ್ಸವದಲ್ಲಿ ಮಂಡಳಿ ಅಧ್ಯಕ್ಷ ರಾಮಪ್ರಸಾತ್ ಮನೋಹರ್ ಧ್ವಜಾರೋಹರಣ ನೆರವೇರಿಸಿದರು.
(5 / 11)
Mysore Railways ಮೈಸೂರಿನ ರೈಲ್ವೆ ಮೈದಾನದಲ್ಲಿ ಸ್ವಾತಂತ್ರೋತ್ಸವ ಪಥ ಸಂಚಲನದ ವಂದನೆಯನ್ನು ಮೈಸೂರು ರೈಲ್ವೆ ಡಿಆರ್‌ಎಂ ಶಿಲ್ಪಿ ಅಗರವಾಲ್ ಸ್ವೀಕರಿಸಿದರು.
(6 / 11)
Udupi Programme ಉಡುಪಿಯ ಅಜ್ಜರಕಾಡು ಮೈದಾನದಲ್ಲ ನಡೆದ ಸ್ವಾತಂತ್ರ್ಯೋತ್ಸವದಲ್ಲಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ಅವರು ಡಾ.ಅಂಬೇಡ್ಕರ್, ಮಹಾತ್ಮಗಾಂಧಿ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಸಲ್ಲಿಸಿದರು. ಶಾಸಕ ಯಶಪಾಲ ಸುವರ್ಣ ಡಿಸಿ ವಿದ್ಯಾಕುಮಾರಿ ಇದ್ದರು.
(7 / 11)
Mysore Bannimantap ಮೈಸೂರಿನ ಬನ್ನಿಮಂಟಪದಲ್ಲಿ ನಡೆದ ಸ್ವಾತಂತ್ರೋತ್ಸವದಲ್ಲಿ ಸಚಿವ ಡಾ.ಎಚ್.ಸಿ.ಮಹದೇವಪ್ಪ, ನಗರ ಪೊಲೀಸ್ ಆಯುಕ್ತರಾದ ಸೀಮಾ ಲಾಟ್ಕರ್, ಡಿಸಿ ಲಕ್ಷ್ಮಿಕಾಂತ ರೆಡ್ಡಿ. ಎಸ್ಪಿ ವಿಷ್ಣುವರ್ಧನ, ಸಿಇಒ ಕೆ.ಎಂ.ಗಾಯತ್ರಿ ಮತ್ತಿತರರು ಭಾಗಿಯಾದರು,
(8 / 11)
Mandya March Fast ಮಂಡ್ಯದಲ್ಲಿ ನಡೆದ ಸ್ವಾತಂತ್ರೋತ್ಸವದಲ್ಲಿ ಸಚಿವ ಎನ್.ಚಲುವರಾಯಸ್ವಾಮಿ, ಡಿಸಿ ಡಾ.ಕುಮಾರ, ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ, ಸಿಇಒ ಶೇಖ್ ಆಸೀಫ್ ತನ್ವೀರ್ ಪಥಸಂಚಲನ ವಂದನೆ ಸ್ವೀಕರಿಸಿದರು.
(9 / 11)
Mysore Suttur Mutt ಮೈಸೂರಿನ ಚಾಮುಂಡಿಬೆಟ್ಟ ತಪ್ಪಲಿನ ಸುತ್ತೂರು ಮಠದಲ್ಲಿ ಶಾಸಕ ಟಿ.ಎಸ್.ಶ್ರೀವತ್ಸ ಧ್ವಜಾರೋಹಣ ನೆರವೇರಿಸಿದರು. ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಹಾಜರಿದ್ದರು.
(10 / 11)
Vijayapura Felicitation ವಿಜಯಪುರ ಜಿಲ್ಲಾಡಳಿತದಿಂದ ನಡೆದ ಸ್ವಾತಂತ್ರೋತ್ಸವದಲ್ಲಿ ಸಾಧಕರನ್ನು ಸಚಿವ ಎಂ.ಬಿ.ಪಾಟೀಲ ಗೌರವಿಸಿದರು. ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಡಿಸಿ ಭೂಬಾಲನ್ ಸಹಿತ ಹಲವರು ಇದ್ದರು.
ಇತರ ಗ್ಯಾಲರಿಗಳು