Independence day 2024: ಭಾರತದ ಭೂಪಟ ಹೋಲುವ ಈ ಜಲಾಶಯ ಯಾವುದು, ಇದು ಕರ್ನಾಟಕದಲ್ಲಿಯೇ ಇದೆ -photos
- ಒಮ್ಮೆಲೇ ನೋಡಿದರೆ ಇದು ಭಾರತದ ಭೂಪಟದಂತೆಯೇ( Indian Map) ಕಾಣುತ್ತದೆ. ಕರ್ನಾಟಕದ ಚಿತ್ರದುರ್ಗ ಜಿಲ್ಲೆಯಲ್ಲಿರುವ ಈ ಜಲಾಶಯದ ವಿಶೇಷ ಗೊತ್ತೆ. ಇಲ್ಲಿದೆ ಚಿತ್ರವಿವರ.
- ಒಮ್ಮೆಲೇ ನೋಡಿದರೆ ಇದು ಭಾರತದ ಭೂಪಟದಂತೆಯೇ( Indian Map) ಕಾಣುತ್ತದೆ. ಕರ್ನಾಟಕದ ಚಿತ್ರದುರ್ಗ ಜಿಲ್ಲೆಯಲ್ಲಿರುವ ಈ ಜಲಾಶಯದ ವಿಶೇಷ ಗೊತ್ತೆ. ಇಲ್ಲಿದೆ ಚಿತ್ರವಿವರ.
(1 / 6)
ಥಟ್ಟನೇ ನೋಡಿದರೆ ಒಮ್ಮೆಗೆ ಇದು ಭಾರತದ ಭೂಪಟವೇ ಇರಬೇಕು ಎನ್ನಿಸದೇ ಇರದು. ಕೊಂಚ ವ್ಯತ್ಯಾಸವಿದ್ದರೂ ಅದನ್ನೇ ಹೋಲುತ್ತದೆ. ಇದು ಕರ್ನಾಟಕದ ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕಿನ ವಾಣಿ ವಿಲಾಸ ಸಾಗರ. ಇದು ಕರ್ನಾಟಕ ಪ್ರವಾಸೋದ್ಯಮ ಇಲಾಖೆ ಹಂಚಿಕೊಂಡಿದೆ.
(2 / 6)
ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕು ವ್ಯಾಪ್ತಿಯಲ್ಲಿ ವಾಣಿ ವಿಲಾಸ ಸಾಗರ ಜಲಾಶಯವಿದ್ದು, ಇದು ಜಲಸಂಪನ್ಮೂಲ ಇಲಾಖೆಯ ಕಾರ್ಯವ್ಯಾಪ್ತಿಗೆ ಒಳಪಟ್ಟಿದೆ. ಕೃಷ್ಣಾ ಜಲಭಾಗ್ಯ ಯೋಜನೆಯಡಿ ಇದನ್ನು ಸೇರಿಸಲಾಗಿದೆ.
(3 / 6)
ವಾಣಿ ವಿಲಾಸ ಸಾಗರ ಜಲಾಶಯ ಯೋಜನೆಯನ್ನು “ಮೈಸೂರು ಸಂಸ್ಥಾನ”ದ ಅರಸರಾದ “ನಾಲ್ವಡಿ ಕೃಷ್ಣರಾಜ ಒಡೆಯರ್” ರವರ ತಾಯಿಯಾದ “ಕೆಂಪ ನಂಜಮ್ಮಣಿ ವಾಣಿ ವಿಲಾಸ” ಸನ್ನಿಧಾನ ಇವರ ಹೆಸರಿನಲ್ಲಿ 1898 ರಿಂದ 1907 ರಲ್ಲಿ ವಿ.ವಿ.ಪುರ ಗ್ರಾಮದ ಬಳಿ ವೇದಾವತಿ ನದಿಗೆ ಅಡ್ಡಲಾಗಿ ನಿರ್ಮಾಣ ಮಾಡಲಾಗಿದೆ.
(4 / 6)
ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕು ಸಂಪೂರ್ಣ ಬರದನಾಡು ಆಗಿದ್ದು, ನೀರಾವರಿ ಕಲ್ಪಿಸುವುದು ಈ ಯೋಜನೆಯ ಪ್ರಮುಖ ಉದ್ದೇಶವಾಗಿದೆ. ಚಿತ್ರದುರ್ಗ ಜಿಲ್ಲೆಗೆ ಈ ಜಲಾಶಯದಿಂದ ನೀರು ಹರಿಸಲಾಗುತ್ತದೆ.
(5 / 6)
1907ರಲ್ಲಿ ವಿ.ವಿ ಸಾಗರ ಜಲಾಶಯ ನಿರ್ಮಿಸಿದ ನಂತರ 1933 ರಲ್ಲಿ ಮೊದಲ ಬಾರಿಗೆ ಗರಿಷ್ಟ ಮಟ್ಟ 130 ಅಡಿ ತಲುಪಿ 30 ಟಿಎಂಸಿ ನೀರು ಸಂಗ್ರಹವಾಗಿದೆ. ಇತ್ತೀಚಿನ ವರ್ಷಗಳಲ್ಲಿ ಅತಿ ಹೆಚ್ಚು ಅಂದರೆ 22.00 ಟಿ.ಎಂ.ಸಿ ನೀರು 2000 ಇಸವಿಯಲ್ಲಿ ಸಂಗ್ರಹವಾಗಿರುವುದು ದಾಖಲೆಯಾಗಿದೆ. ಉಳಿದಂತೆ ಕಳೆದ 10 ವರ್ಷಗಳಲ್ಲಿ (2019-20ರ ಹಿಂದಿನ) ಮಳೆಯ ಕೊರತೆಯಿಂದ ಜಲಾಶಯಕ್ಕೆ ಗಣನೀಯವಾಗಿ ಒಳಹರಿವು ಕ್ಷೀಣಿಸಿದೆ. ಎರಡು ವರ್ಷದ ಹಿಂದೆ ಜಲಾಶಯವು ಎಂಟು ದಶಕದ ಬಳಿಕ ತುಂಬಿತ್ತು ಈ ಬಾರಿ ಉತ್ತಮ ಮಳೆಯಾಗಿ ನೀರು ಹರಿದು ಬಂದಿದೆ.
ಇತರ ಗ್ಯಾಲರಿಗಳು