Team India: ಸೋಲಿನೊಂದಿಗೆ ವಿಶ್ವದಾಖಲೆ ನಿರ್ಮಿಸಿದ ಟೀಮ್ ಇಂಡಿಯಾ; ಅತಿ ಹೆಚ್ಚು ಪಂದ್ಯಗಳನ್ನು ಸೋತ ಟಾಪ್-5 ತಂಡಗಳಿವು
- ಅಂತಾರಾಷ್ಟ್ರೀಯ ಪಂದ್ಯಗಳನ್ನು ಸೋತ ವಿಶ್ವದ ಮೂರನೇ ದೇಶ ಎಂಬ ಹೆಗ್ಗಳಿಕೆಗೆ ಭಾರತ ತಂಡ ಪಾತ್ರವಾಗಿದೆ. ಗರಿಷ್ಠ ಪಂದ್ಯಗಳಲ್ಲಿ ಸೋತಿರುವ ಅಗ್ರ-5 ತಂಡಗಳು ಯಾವುವು? ಇಲ್ಲಿದೆ ವಿವರ.
- ಅಂತಾರಾಷ್ಟ್ರೀಯ ಪಂದ್ಯಗಳನ್ನು ಸೋತ ವಿಶ್ವದ ಮೂರನೇ ದೇಶ ಎಂಬ ಹೆಗ್ಗಳಿಕೆಗೆ ಭಾರತ ತಂಡ ಪಾತ್ರವಾಗಿದೆ. ಗರಿಷ್ಠ ಪಂದ್ಯಗಳಲ್ಲಿ ಸೋತಿರುವ ಅಗ್ರ-5 ತಂಡಗಳು ಯಾವುವು? ಇಲ್ಲಿದೆ ವಿವರ.
(1 / 7)
ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮೂರು ಸ್ವರೂಪಗಳಲ್ಲಿ ಆಡುತ್ತಿರುವ ಭಾರತ ತಂಡ, ಇದೀಗ ಮುಜುಗರದ ದಾಖಲೆಯೊಂದಕ್ಕೆ ಪಾತ್ರವಾಗಿದೆ. ಇಂಗ್ಲೆಂಡ್ ವಿರುದ್ಧದ ಮೂರನೇ ಟಿ20 ಪಂದ್ಯವನ್ನು ಕಳೆದುಕೊಂಡ ಬಳಿಕ ಈ ಕೆಟ್ಟ ದಾಖಲೆಗೆ ಒಳಗಾಗಿದೆ.
(BCCI X)(2 / 7)
ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 700 ಅಥವಾ ಅದಕ್ಕಿಂತ ಹೆಚ್ಚು ಪಂದ್ಯ ಸೋತಿರುವ ದೇಶಗಳಲ್ಲಿ ಭಾರತ ಸೇರಿ ಕೇವಲ ಮೂರು ಮಾತ್ರ. ಇದೀಗ ಈ ಪಟ್ಟಿಗೆ ಭಾರತ ತಂಡ ಹೊಸದಾಗಿ ಸೇರ್ಪಡೆಯಾಗಿದೆ. ರಾಜ್‌ಕೋಟ್ ಪಂದ್ಯದ ಸೋಲು ಭಾರತದ 700ನೇ ಸೋಲಾಗಿದೆ.
(Surjeet Yadav)(3 / 7)
ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಪಂದ್ಯಗಳನ್ನು ಆಡಿದ ಮತ್ತು ಅತಿ ಹೆಚ್ಚು ಪಂದ್ಯಗಳನ್ನು ಸೋತ ತಂಡವೆಂದರೆ ಇಂಗ್ಲೆಂಡ್. ಇದು 2090 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದು, 777 ಪಂದ್ಯಗಳಲ್ಲಿ (ಟೆಸ್ಟ್, ಏಕದಿನ ಮತ್ತು ಟಿ20 ಸೇರಿ) ಪರಾಭವಗೊಂಡಿದೆ.
(REUTERS)(4 / 7)
ವೆಸ್ಟ್ ಇಂಡೀಸ್ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಪಂದ್ಯಗಳನ್ನು ಸೋತ ವಿಶ್ವದ 2ನೇ ತಂಡ. ಕೆರಿಬಿಯನ್ನರುಇದುವರೆಗೆ ಆಡಿರುವ 1682 ಪಂದ್ಯಗಳಲ್ಲಿ 740 ಪಂದ್ಯಗಳಲ್ಲಿ ಸೋತಿದೆ.
(AFP)(5 / 7)
ಜನವರಿ 28ರ ಮಂಗಳವಾರ ಟೀಮ್ ಇಂಡಿಯಾ ತನ್ನ 1686ನೇ ಅಂತಾರಾಷ್ಟ್ರೀಯ ಪಂದ್ಯವನ್ನಾಡಿತು. ಆದರೆ, ಈ ಪಂದ್ಯದಲ್ಲಿ ಸೋಲು ಅನುಭವಿಸಿತು. ಇದರೊಂದಿಗೆ ಭಾರತ ತಂಡ, ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 700ನೇ ಸೋಲಿಗೆ ಶರಣಾಯಿತು. ಭಾರತವು 700 ಪಂದ್ಯಗಳಲ್ಲಿ ಸೋತ ಮೂರನೇ ದೇಶವಾಗಿದೆ.
(6 / 7)
ಶ್ರೀಲಂಕಾ ಇದುವರೆಗೆ ಆಡಿರುವ 1456 ಪಂದ್ಯಗಳಲ್ಲಿ 686 ಪಂದ್ಯಗಳಲ್ಲಿ ಸೋತಿದೆ. ಗರಿಷ್ಠ ಪಂದ್ಯಗಳನ್ನು ಸೋತ ಪಟ್ಟಿಯಲ್ಲಿ ಶ್ರೀಲಂಕಾ ನಾಲ್ಕನೇ ಸ್ಥಾನದಲ್ಲಿದೆ.
(AP)ಇತರ ಗ್ಯಾಲರಿಗಳು