India Exit Polls: ನರೇಂದ್ರ ಮೋದಿಗೆ ಹ್ಯಾಟ್ರಿಕ್ ಗೆಲುವು; ಎಲ್ಲಾ ಸಮೀಕ್ಷೆಗಳಲ್ಲೂ 350 ದಾಟಿದೆ ಎನ್ಡಿಎ ಒಕ್ಕೂಟ, ಕಾಂಗ್ರೆಸ್ ಕಥೆ ಏನು?
- India Exit Polls : ಏಳು ಹಂತಗಳಲ್ಲಿ ಲೋಕಸಭಾ ಚುನಾವಣೆ ಮುಕ್ತಾಯಗೊಂಡ ಬೆನ್ನಲ್ಲೇ ಚುನಾವಣೋತ್ತರ ಸಮೀಕ್ಷೆಗಳು ಬಿಡುಗಡೆಗೊಂಡಿದ್ದು, ಮತ್ತೊಮ್ಮೆ ಬಿಜೆಪಿಯೇ ಬಹುಮತ ಪಡೆಯಲಿದೆ ಎಂದು ಹೇಳುತ್ತಿವೆ.
- India Exit Polls : ಏಳು ಹಂತಗಳಲ್ಲಿ ಲೋಕಸಭಾ ಚುನಾವಣೆ ಮುಕ್ತಾಯಗೊಂಡ ಬೆನ್ನಲ್ಲೇ ಚುನಾವಣೋತ್ತರ ಸಮೀಕ್ಷೆಗಳು ಬಿಡುಗಡೆಗೊಂಡಿದ್ದು, ಮತ್ತೊಮ್ಮೆ ಬಿಜೆಪಿಯೇ ಬಹುಮತ ಪಡೆಯಲಿದೆ ಎಂದು ಹೇಳುತ್ತಿವೆ.
(1 / 6)
7 ಹಂತಗಳಲ್ಲಿ ಲೋಕಸಭಾ ಚುನಾವಣೆ ಮುಕ್ತಾಯಗೊಂಡ ಬೆನ್ನಲ್ಲೇ ಬಿಜೆಪಿ 3ನೇ ಬಾರಿ ಸರ್ಕಾರ ರಚಿಸಲಿದೆ ಎಂದು ಚುನಾವಣೋತ್ತರ ಸಮೀಕ್ಷೆಗಳು ಭವಿಷ್ಯ ನುಡಿದಿವೆ. ಎಲ್ಲಾ ಸಮೀಕ್ಷೆಗಳು ಸಹ 350+ ಸೀಟ್ಗಳಲ್ಲಿ ಎನ್ಡಿಎ ಮೈತ್ರಿಕೂಟ ಗೆಲುವು ಸಾಧಿಸಬಹುದು ಎಂದು ಹೇಳುತ್ತಿವೆ. 2019ರಲ್ಲಿ ಎನ್ಡಿಎ ಒಕ್ಕೂಟ 352 ಸೀಟ್ಗಳಲ್ಲಿ ಗೆಲುವು ಸಾಧಿಸಿತ್ತು. ಆದರೆ ಕಾಂಗ್ರೆಸ್ ಕೇವಲ 52ರಲ್ಲಿ ಜಯಿಸಿತ್ತು. ಸರ್ಕಾರ ರಚಿಸಲು ಬೇಕಿರುವ ಮ್ಯಾಜಿಕ್ ನಂಬರ್ 272, ಹಾಗಾದರೆ 2024ರ ಚುನಾವಣೋತ್ತರ ಸಮೀಕ್ಷೆಗಳು ಏನು ಹೇಳುತ್ತಿವೆ ಎಂಬುದರ ನೋಟ ಇಲ್ಲಿದೆ.
(2 / 6)
ಜನ್ ಕೀ ಬಾತ್ ಸಮೀಕ್ಷೆ ಪ್ರಕಾರ ಮತ್ತೊಮ್ಮೆ ಎನ್ಡಿಎ ಅಧಿಕಾರಕ್ಕೇರಲಿದೆ. ಎನ್ಡಿಎ ಒಕ್ಕೂಟ 362 ರಿಂದ 392 ಸೀಟ್ಗಳನ್ನು ಗೆದ್ದುಕೊಳ್ಳಲಿದೆ. ಐಎನ್ಡಿಐಎ ಒಕ್ಕೂ 141 ರಿಂದ 161 ಸ್ಥಾನಗಳಲ್ಲಿ ಗೆಲ್ಲೋ ಸಾಧ್ಯತೆ ಇದೆ. 10 ಇತರೆ ಸ್ಥಾನಗಳು ಗೆಲ್ಲಲಿವೆ.
(3 / 6)
ನ್ಯೂಸ್ ನೇಷನ್ ಸಮೀಕ್ಷೆ ಪ್ರಕಾರ ಎನ್ಡಿಎ ಮೈತ್ರಿಕೂಟವೇ ಮತ್ತೊಮ್ಮೆ ಗದ್ದುಗೆಗೇರಲಿದೆ. ಎನ್ಡಿಎ ಒಕ್ಕೂಟ 342 ರಿಂದ 378 ಕ್ಷೇತ್ರಗಳಲ್ಲಿ ಗೆಲ್ಲುವ ಸಾಧ್ಯತೆ ಇದೆ. ಐಎನ್ಡಿಐಎ ಒಕ್ಕೂಟ 153 ರಿಂದ 169 ಸೀಟ್ಗಳಲ್ಲಿ ಗೆಲ್ಲಬಹುದು. ಮತ್ತೊಂದೆಡೆ ಇತರೆ 21 ರಿಂದ 23 ಸ್ಥಾನಗಳಲ್ಲಿ ಜಯಭೇರಿ ಬಾರಿಸಲಿದೆ.
(4 / 6)
ಡೈನಾಮಿಕ್ಸ್ ಸಮೀಕ್ಷೆ ಪ್ರಕಾರವೂ ಬಿಜೆಪಿ ಸರ್ಕಾರವೇ ಮೂರನೇ ಬಾರಿಗೆ ಸರ್ಕಾರ ರಚನೆಯಾಗಲಿದೆ. ಎನ್ಡಿಎ ಮೈತ್ರಿಕೂಟ 371ರಲ್ಲಿ ಜಯಿಸಿದರೆ, ಐಎನ್ಡಿಐಎ ಮೈತ್ರಿಕೂಟ 125 ಸ್ಥಾನಗಳಲ್ಲಿ ಗೆಲ್ಲಲಿದೆ. ಇತರೆ 47 ಸ್ಥಾನ ಗಳಿಸಲಿದೆ.
(5 / 6)
ಪಿ ಮಾರ್ಕ್ ಸಮೀಕ್ಷೆಯೂ ಬಿಜೆಪಿಯೇ ಅಧಿಕಾರಕ್ಕೆ ಬರಲಿದೆ ಎಂದು ಹೇಳುತ್ತಿದೆ. ಎನ್ಡಿಎ ಒಕ್ಕೂಟ 359 ಸ್ಥಾನ, ಕಾಂಗ್ರೆಸ್ 154, ಇತರೆ 30 ಸ್ಥಾನ ಗೆಲ್ಲಲಿದೆ.
ಇತರ ಗ್ಯಾಲರಿಗಳು