ಏಷ್ಯನ್ ಕಪ್ 2023: ಮೊದಲ ಪಂದ್ಯದಲ್ಲೇ ಮುಗ್ಗರಿಸಿದ ಛೆಟ್ರಿ ಪಡೆ; ಭಾರತ ವಿರುದ್ಧ ಆಸ್ಟ್ರೇಲಿಯಾಗೆ ಗೆಲುವು
- India vs Australia AFC Asian Cup 2023: AFC ಏಷ್ಯನ್ ಕಪ್ 2023ರಲ್ಲಿ ಭಾರತ ಫುಟ್ಬಾಲ್ ತಂಡವು ಸೋಲಿನ ಆರಂಭ ಪಡೆದಿದೆ. ಬಿ ಗುಂಪಿನ ಆರಂಭಿಕ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತವು 0-2 ಅಂತರದಿಂದ ಸೋಲಿಗೆ ಶರಣಾಯಿತು.
- India vs Australia AFC Asian Cup 2023: AFC ಏಷ್ಯನ್ ಕಪ್ 2023ರಲ್ಲಿ ಭಾರತ ಫುಟ್ಬಾಲ್ ತಂಡವು ಸೋಲಿನ ಆರಂಭ ಪಡೆದಿದೆ. ಬಿ ಗುಂಪಿನ ಆರಂಭಿಕ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತವು 0-2 ಅಂತರದಿಂದ ಸೋಲಿಗೆ ಶರಣಾಯಿತು.
(1 / 6)
ಜನವರಿ 12ರ ಶನಿವಾರ ಕತಾರ್‌ನ ಅಹ್ಮದ್ ಬಿನ್ ಅಲಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಬಲಿಷ್ಠ ಆಸ್ಟ್ರೇಲಿಯಾ ವಿರುದ್ಧ ಭಾರತವು 2023ರ ಏಷ್ಯನ್ ಕಪ್ ಅಭಿಯಾನ ಆರಂಭಿಸಿತು. ಮೊದಲ ಪಂದ್ಯದಲ್ಲಿ ಸೋತು ಮುಗ್ಗರಿಸಿತು.(REUTERS)
(2 / 6)
ಪಂದ್ಯದ ಮೊದಲಾರ್ಧವು ಯಾವುದೇ ಗೋಲುಗಳಿಲ್ಲ ಮುಕ್ತಾಯಗೊಂಡಿತು. ನಾಯಕ ಸುನಿಲ್ ಛೆಟ್ರಿ ಸ್ವಲ್ಪದರಲ್ಲೇ ಗೋಲು ಗಳಿಸುವ ಅವಕಾಶ ಕಳೆದುಕೊಂಡರು.(AP)
(3 / 6)
ಪಂದ್ಯದ ದ್ವಿತೀಯಾರ್ಧವು ರೋಚಕವಾಗಿತ್ತು. ಆಸ್ಟ್ರೇಲಿಯಾ ಆಕ್ರಮಣಕಾರಿ ಆಟಕ್ಕೆ ಮುಂದಾಯ್ತು. ಜಾಕ್ಸನ್ ಇರ್ವಿನ್ ಪಂದ್ಯದ 50ನೇ ನಿಮಿಷದಲ್ಲಿ ಮೊದಲ ಗೋಲು ಗಳಿಸಿ, ತಂಡಕ್ಕೆ 1-0 ಮುನ್ನಡೆ ತಂದುಕೊಟ್ಟರು.(AFP)
(4 / 6)
ಜೋರ್ಡಾನ್ ಬಾಸ್ ಪಂದ್ಯದ 73ನೇ ನಿಮಿಷದಲ್ಲಿ ಆಸ್ಟ್ರೇಲಿಯಾ ಪರ ಎರಡನೇ ಗೋಲು ಗಳಿಸಿದರು. 2-0 ಗೋಲುಗಳೊಂದಿಗೆ ತಂಡವು ಭಾರತದ ವಿರುದ್ಧ 2-0 ಅಂತರದಿಂದ ಗೆಲುವು ಸಾಧಿಸಿತು.(REUTERS)
(5 / 6)
ಕತಾರ್‌ನಲ್ಲಿ ಭಾರತೀಯ ಅಭಿಮಾನಿಗಳ ಸಂಖ್ಯೆ ಹೆಚ್ಚಿದೆ. ಆತಿಥೇಯ ರಾಷ್ಟ್ರದಲ್ಲಿ ಟೂರ್ನಿಯುದ್ದಕ್ಕೂ ಛೆಟ್ರಿ ಪಡೆಗೆ ಭಾರಿ ಬೆಂಬಲ ಸಿಗಲಿದೆ. ಭಾರತ ಮುಂದೆ ಎರಡನೇ ಪಂದ್ಯದಲ್ಲಿ ಕಂಬ್ಯಾಕ್ ಮಾಡಬೇಕಿದೆ.(REUTERS)
ಇತರ ಗ್ಯಾಲರಿಗಳು