ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ತಂಡ ಯಾರ ವಿರುದ್ಧ, ಯಾವಾಗ, ಎಲ್ಲಿ ಆಡಲಿದೆ? ಪಂದ್ಯ ಎಷ್ಟು ಗಂಟೆಗೆ ಆರಂಭ, ವೀಕ್ಷಣೆ ಹೇಗೆ?
- India ICC Champions Trophy 2025 Schedule: ಚಾಂಪಿಯನ್ಸ್ ಟ್ರೋಫಿ 2025 ರ ಸಂಪೂರ್ಣ ವೇಳಾಪಟ್ಟಿ ಹೊರಬಿದ್ದಿದೆ. ಗುಂಪು ಹಂತದಲ್ಲಿ ಭಾರತ ತಂಡವು ಯಾವ ತಂಡದ ವಿರುದ್ಧ, ಯಾವಾಗ, ಎಲ್ಲಿ ಸೆಣಸಾಟ ನಡೆಸಲಿವೆ? ಇಲ್ಲಿದೆ ವಿವರ.
- India ICC Champions Trophy 2025 Schedule: ಚಾಂಪಿಯನ್ಸ್ ಟ್ರೋಫಿ 2025 ರ ಸಂಪೂರ್ಣ ವೇಳಾಪಟ್ಟಿ ಹೊರಬಿದ್ದಿದೆ. ಗುಂಪು ಹಂತದಲ್ಲಿ ಭಾರತ ತಂಡವು ಯಾವ ತಂಡದ ವಿರುದ್ಧ, ಯಾವಾಗ, ಎಲ್ಲಿ ಸೆಣಸಾಟ ನಡೆಸಲಿವೆ? ಇಲ್ಲಿದೆ ವಿವರ.
(1 / 9)
ಐಸಿಸಿ ಚಾಂಪಿಯನ್ಸ್ ಟ್ರೋಫಿ 2025 ಸಂಪೂರ್ಣ ವೇಳಾಪಟ್ಟಿಯನ್ನು ಐಸಿಸಿ ಇಂದು (ಡಿಸೆಂಬರ್ 24) ಪ್ರಕಟಿಸಿದೆ. ಮುಂದಿನ ವರ್ಷ ಫೆಬ್ರವರಿ 19 ರಿಂದ ಮಾರ್ಚ್ 9 ರವರೆಗೆ ಮೆಗಾ ಟೂರ್ನಿ ನಡೆಯಲಿದೆ. 'ಎ' ಗುಂಪಿನಲ್ಲಿ ಟೀಮ್ ಇಂಡಿಯಾ ಸ್ಥಾನ ಪಡೆದಿದೆ. ಹಾಗಾದರೆ ರೋಹಿತ್ ಪಡೆ ಯಾವ ತಂಡಗಳ ವಿರುದ್ಧ ಆಡಲಿದೆ? ದಿನಾಂಕ, ಸಮಯದ ವಿವರ ಇಲ್ಲಿದೆ.
(BCCI)(2 / 9)
ಚಾಂಪಿಯನ್ಸ್ ಟ್ರೋಫಿ ಪಾಕಿಸ್ತಾನ ಮತ್ತು ಯುಎಇಯಲ್ಲಿ ನಡೆಯಲಿದೆ. ಭಾರತ ತನ್ನ ಎಲ್ಲಾ ಪಂದ್ಯಗಳನ್ನು ದುಬೈನಲ್ಲಿ ಆಡಲಿದೆ. ಭಾರತೇತರ ಪಂದ್ಯಗಳು ಪಾಕಿಸ್ತಾನದಲ್ಲಿ ನಡೆಯಲಿವೆ. ಒಂದು ಸೆಮಿಫೈನಲ್ ಸಹ ದುಬೈನಲ್ಲೇ ನಡೆಯಲಿದೆ.
(AFP)(3 / 9)
ಚಾಂಪಿಯನ್ಸ್ ಟ್ರೋಫಿ-2025ರಲ್ಲಿ ಭಾರತ ತನ್ನ ಅಭಿಯಾನವನ್ನು ಫೆಬ್ರವರಿ 20ರಿಂದ ಆರಂಭ ಮಾಡಲಿದೆ. ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಭಾರತ ಸೆಣಸಾಟ ನಡೆಸಲಿದೆ. ಇದು ದುಬೈನಲ್ಲಿ ನಡೆಯಲಿದೆ. ಪಂದ್ಯದ ಆರಂಭದ ಸಮಯ ಮಧ್ಯಾಹ್ನ 2.30ಕ್ಕೆ.
(PTI)(4 / 9)
ಭಾರತ ಮತ್ತು ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ಪಂದ್ಯ ಫೆಬ್ರವರಿ 23 ರಂದು ದುಬೈ ಕ್ರೀಡಾಂಗಣದಲ್ಲಿ ನಡೆಯಲಿದೆ. ಪಂದ್ಯ ಆರಂಭದ ಸಮಯ ಮಧ್ಯಾಹ್ನ 2.30ಕ್ಕೆ.
(5 / 9)
ಭಾರತ ತಂಡ ತನ್ನ ಕೊನೆಯ ಲೀಗ್ ಪಂದ್ಯವನ್ನು ಮಾರ್ಚ್ 2ರಂದು ನ್ಯೂಜಿಲೆಂಡ್ ವಿರುದ್ಧ ಸೆಣಸಲಿದೆ. ಭಾರತ ಆಡುವ ಎಲ್ಲಾ ಪಂದ್ಯಗಳು ಮಧ್ಯಾಹ್ನ 2.30ರಿಂದ ಪ್ರಸಾರವಾಗಲಿವೆ.
(6 / 9)
ಚಾಂಪಿಯನ್ಸ್ ಟ್ರೋಫಿ 2025ರ ಎ ಗುಂಪಿನಲ್ಲಿ ಭಾರತ, ಬಾಂಗ್ಲಾದೇಶ, ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ತಂಡಗಳಿವೆ. 'ಬಿ' ಗುಂಪಿನಲ್ಲಿ ಆಸ್ಟ್ರೇಲಿಯಾ, ಇಂಗ್ಲೆಂಡ್, ಅಫ್ಘಾನಿಸ್ತಾನ ಮತ್ತು ದಕ್ಷಿಣ ಆಫ್ರಿಕಾ ತಂಡಗಳಿವೆ.
(7 / 9)
ಗ್ರೂಪ್ ಹಂತದಲ್ಲಿ ಅಗ್ರ 2 ಸ್ಥಾನ ಪಡೆಯುವ ತಂಡಗಳು ಸೆಮಿಫೈನಲ್ ಪ್ರವೇಶಿಸಲಿವೆ. ಮಾರ್ಚ್ 4 ಮತ್ತು 5 ರಂದು ಸೆಮಿಫೈನಲ್ ಮತ್ತು ಮಾರ್ಚ್ 9 ರಂದು ಫೈನಲ್ ಪಂದ್ಯಗಳು ನಡೆಯಲಿವೆ.
(8 / 9)
ಚಾಂಪಿಯನ್ಸ್ ಟ್ರೋಫಿ 2025 ಪಂದ್ಯಗಳನ್ನು ಸ್ಟಾರ್ ಸ್ಪೋರ್ಟ್ಸ್ ಟಿವಿ ಚಾನೆಲ್ಗಳಲ್ಲಿ ಪ್ರಸಾರ ಮಾಡಲಾಗುತ್ತದೆ. ಲೈವ್ ಸ್ಟ್ರೀಮಿಂಗ್ ಅನ್ನು ಡಿಸ್ನಿ + ಹಾಟ್ಸ್ಟಾರ್ನಲ್ಲಿ ವೀಕ್ಷಿಸಬಹುದು.
ಇತರ ಗ್ಯಾಲರಿಗಳು