ಕನ್ನಡ ಸುದ್ದಿ  /  Photo Gallery  /  India Icc Trophy Drought Continues Since 10 Years After Loss To Australia In Odi World Cup 2023 Champions Trophy Jra

10 ವರ್ಷಗಳಲ್ಲಿ 9 ಬಾರಿ ನಾಕೌಟ್ ಹಂತದಲ್ಲಿ ಸೋಲು; ಐಸಿಸಿ ಟೂರ್ನಿಯಲ್ಲಿ ಅಂತಿಮ ಹಂತದಲ್ಲಿ ಎಡವುತ್ತಿರುವ ಭಾರತ

  • ಬರೋಬ್ಬರಿ 10 ವರ್ಷಗಳಾದವು. ಭಾರತಕ್ಕೆ ಐಸಿಸಿ ಟ್ರೋಫಿ ಗೆಲುವು ದೂರ ದಿಗಂತವಾಗಿಯೇ ಉಳಿದಿದೆ. 2023ರ ಏಕದಿನ ವಿಶ್ವಕಪ್‌ ಗೆದ್ದು ಐಸಿಸಿ ಟ್ರೋಫಿ ಬರ ನೀಗಿಸುವ ಕನಸು ಕಮರಿದೆ. ಕಳೆದ ಹತ್ತು ವರ್ಷಗಳಲ್ಲಿ ಭಾರತವು ಅಂತಿಮ ಹಂತದಲ್ಲಿ ಎಡವುತ್ತಿರುವುದೇ ಅಭಿಮಾನಿಗಳ ಜೊತೆಗೆ ಆಟಗಾರರ ಬೇಸರ. ಒಂದು ಅರ್ಥದಲ್ಲಿ ಭಾರತ ಕೂಡಾ ಚೋಕರ್ಸ್ ಹೌದು.

2013ರಲ್ಲಿ ಮಹೇಂದ್ರ ಸಿಂಗ್ ಧೋನಿ ನೇತೃತ್ವದಲ್ಲಿ ಭಾರತವು ಐಸಿಸಿ ಚಾಂಪಿಯನ್ಸ್ ಟ್ರೋಫಿ ಗೆದ್ದಿತ್ತು. ಅಂದಿನಿಂದ ಒಂದೂ ಟ್ರೋಫಿ ಸಿಕ್ಕಿಲ್ಲ. 2023 ರಲ್ಲಿ ತವರು ನೆಲದಲ್ಲಿ ನಡೆಯುವ ಏಕದಿನ ವಿಶ್ವಕಪ್‌ ಟೂರ್ನಿ ಗೆಲ್ಲುವ ನಿರೀಕ್ಷೆ ಇತ್ತು. ಆದರೆ, ಆ ಕನಸಿಇಗೆ ಆಶೀಸ್‌ ಅಡ್ಡಿಪಡಿಸಿತು. 2014ರಿಂದ ವಿವಿಧ ICC ಟ್ರೋಫಿಗಳಲ್ಲಿ ಅಂತಿಮ ಕ್ಷಣದವರೆಗೂ ವೀರೋಚಿತ ಹೋರಾಟ ನಡೆಸಿರುವ ಭಾರತ, ಅಂತಿಮ ಕ್ಷಣದಲ್ಲಿ ಹೊರಬಿದ್ದಿದೆ. 2014 ರಿಂದ ಐಸಿಸಿ ಟ್ರೋಫಿಯಲ್ಲಿ ಭಾರತದ ಪ್ರದರ್ಶನದ ಅಂಕಿಅಂಶಗಳು ಹೀಗಿವೆ.
icon

(1 / 8)

2013ರಲ್ಲಿ ಮಹೇಂದ್ರ ಸಿಂಗ್ ಧೋನಿ ನೇತೃತ್ವದಲ್ಲಿ ಭಾರತವು ಐಸಿಸಿ ಚಾಂಪಿಯನ್ಸ್ ಟ್ರೋಫಿ ಗೆದ್ದಿತ್ತು. ಅಂದಿನಿಂದ ಒಂದೂ ಟ್ರೋಫಿ ಸಿಕ್ಕಿಲ್ಲ. 2023 ರಲ್ಲಿ ತವರು ನೆಲದಲ್ಲಿ ನಡೆಯುವ ಏಕದಿನ ವಿಶ್ವಕಪ್‌ ಟೂರ್ನಿ ಗೆಲ್ಲುವ ನಿರೀಕ್ಷೆ ಇತ್ತು. ಆದರೆ, ಆ ಕನಸಿಇಗೆ ಆಶೀಸ್‌ ಅಡ್ಡಿಪಡಿಸಿತು. 2014ರಿಂದ ವಿವಿಧ ICC ಟ್ರೋಫಿಗಳಲ್ಲಿ ಅಂತಿಮ ಕ್ಷಣದವರೆಗೂ ವೀರೋಚಿತ ಹೋರಾಟ ನಡೆಸಿರುವ ಭಾರತ, ಅಂತಿಮ ಕ್ಷಣದಲ್ಲಿ ಹೊರಬಿದ್ದಿದೆ. 2014 ರಿಂದ ಐಸಿಸಿ ಟ್ರೋಫಿಯಲ್ಲಿ ಭಾರತದ ಪ್ರದರ್ಶನದ ಅಂಕಿಅಂಶಗಳು ಹೀಗಿವೆ.(PTI)

2014ರಲ್ಲಿ ನಡೆದ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಟೀಮ್ ಇಂಡಿಯಾ ಫೈನಲ್ ಪ್ರವೇಶಿಸಿತ್ತು. ಆದರೆ, ಅಂತಿಮ ಸುತ್ತಿನಲ್ಲಿ ಶ್ರೀಲಂಕಾ ವಿರುದ್ಧ ಸೋತು ಟ್ರೋಫಿ ಕನಸು ಭಗ್ನಗೊಂಡಿತ್ತು. ರನ್ನರ್​ ಅಪ್ ಸ್ಥಾನಕ್ಕೆ ತೃಪ್ತಿಪಟ್ಟಿಕೊಂಡಿತ್ತು. ಆ ಬಳಿಕ 2015ರ ಏಕದಿನ ವಿಶ್ವಕಪ್​ನಲ್ಲೂ ಎಂಎಸ್ ಧೋನಿ ಸಾರಥ್ಯದಲ್ಲಿ ಮೆನ್ ಇನ್ ಬ್ಲೂ ತಂಡವು ಅತ್ಯದ್ಭುತ ಪ್ರದರ್ಶನ ನೀಡಿತ್ತು. ಆದರೆ ಟ್ರೋಫಿ ಕನಸು ಮತ್ತೆ ಕನಸಾಗಲಿಲ್ಲ. ಸೆಮಿಫೈನಲ್​ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಪರಾಭವಗೊಂಡು ಹೊರ ಬಿದ್ದಿತ್ತು.
icon

(2 / 8)

2016ರಲ್ಲಿ ಭಾರತದಲ್ಲೇ ಜರುಗಿದ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡವನ್ನು ಧೋನಿಯೇ ಮುನ್ನಡೆಸಿದರು. ಆದರೆ, ಮತ್ತೆ ಸೆಮಿಫೈನಲ್​ನಲ್ಲೇ ಸೋತು ನಿರಾಸೆಗೆ ಒಳಗಾಯಿತು. ವೆಸ್ಟ್ ಇಂಡೀಸ್​ ಎದುರು ಸೆಮಿ ಕದನದಲ್ಲಿ ಸೋಲಿನೊಂದಿಗೆ ಟೂರ್ನಿಯಿಂದ ಹೊರ ಬಿತ್ತು. 2017ರ ಐಸಿಸಿ ಚಾಂಪಿಯನ್ಸ್​ ಟ್ರೋಫಿ ಫೈನಲ್​ನಲ್ಲಿ ಭಾರತ ತಂಡಕ್ಕೆ ವಿರಾಟ್ ಕೊಹ್ಲಿ ಸಾರಥಿಯಾಗಿದ್ದರು. ಟೂರ್ನಿಯುದ್ದಕ್ಕೂ ಅಮೋಘ ಪ್ರದರ್ಶನ ನೀಡಿದ ಭಾರತ, ಫೈನಲ್​​ನಲ್ಲಿ ಮತ್ತೊಮ್ಮೆ ನಿರಾಸೆಗೆ ಒಳಗಾಯಿತು. ಪಾಕಿಸ್ತಾನದ ಎದುರು ಹೀನಾಯವಾಗಿ ಶರಣಾಯಿತು.
icon

(3 / 8)

2019ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಕೊಹ್ಲಿ ನಾಯಕತ್ವದಲ್ಲಿ ಭಾರತ ತಂಡವು ಟ್ರೋಫಿ ಗೆಲ್ಲುವ ಫೇವರೆಟ್ ತಂಡಗಳಲ್ಲಿ ಒಂದಾಗಿತ್ತು. ಲೀಗ್​​ನಲ್ಲಿ ಅಮೋಘ ಪ್ರದರ್ಶನ ತೋರಿತು. ಆದರೆ ಭಾರತಕ್ಕೆ ಮತ್ತೆ ನಾಕೌಟ್ ಕಂಟಕ ಎದುರಾಯಿತು. ಸೆಮಿಫೈನಲ್​​​ನಲ್ಲಿ ನ್ಯೂಜಿಲೆಂಡ್ ಎದುರು ವಿರೋಚಿತ ಸೋಲು ಅನುಭವಿಸಿತು. 
icon

(4 / 8)

2021ರ ಚೊಚ್ಚಲ ವಿಶ್ವ ಟೆಸ್ಟ್​ ಚಾಂಪಿಯನ್​ ಟೂರ್ನಿಯಲ್ಲೇ ವಿರಾಟ್ ನೇತೃತ್ವದ ತಂಡವು ಫೈನಲ್ ಪ್ರವೇಶಿಸಿ ಟ್ರೋಫಿ ಬರ ನೀಗಿಸುವ ನಿರೀಕ್ಷೆಯಲ್ಲಿತ್ತು. ಆದರೆ ಮತ್ತೆ ನ್ಯೂಜಿಲೆಂಡ್ ತಂಡವೇ ಶಾಕ್ ನೀಡಿತು. ಫೈನಲ್​ನಲ್ಲಿ ಭಾರತ ಸೋತು ರನ್ನರ್​​ಅಪ್​ಗೆ ತೃಪ್ತಿಯಾಯಿತು.
icon

(5 / 8)

2021ರಲ್ಲೇ ನಡೆದ ಟಿ20 ವಿಶ್ವಕಪ್​​​ನಲ್ಲಿ ಲೀಗ್​​ನಿಂದಲೇ ಹೊರಬಿದ್ದ ಭಾರತ, ಮರುವರ್ಷ (2022) ನಡೆದ ಟಿ20 ವಿಶ್ವಕಪ್​ನಲ್ಲಿ ಪುಟಿದೆದ್ದು ಭರ್ಜರಿ ಪ್ರದರ್ಶನ ನೀಡಿತು. ಆದರೆ ಮತ್ತೆ ಸೆಮಿಫೈನಲ್​ನಲ್ಲೇ ಕಂಟಕ ಎದುರಾಯಿತು. ಇಂಗ್ಲೆಂಡ್​ ವಿರುದ್ಧ ಹೊರಬೀಳಬೇಕಾಯಿತು.
icon

(6 / 8)

2021ರಲ್ಲೇ ನಡೆದ ಟಿ20 ವಿಶ್ವಕಪ್​​​ನಲ್ಲಿ ಲೀಗ್​​ನಿಂದಲೇ ಹೊರಬಿದ್ದ ಭಾರತ, ಮರುವರ್ಷ (2022) ನಡೆದ ಟಿ20 ವಿಶ್ವಕಪ್​ನಲ್ಲಿ ಪುಟಿದೆದ್ದು ಭರ್ಜರಿ ಪ್ರದರ್ಶನ ನೀಡಿತು. ಆದರೆ ಮತ್ತೆ ಸೆಮಿಫೈನಲ್​ನಲ್ಲೇ ಕಂಟಕ ಎದುರಾಯಿತು. ಇಂಗ್ಲೆಂಡ್​ ವಿರುದ್ಧ ಹೊರಬೀಳಬೇಕಾಯಿತು.(PTI)

2023ರಲ್ಲಿ ನಡೆದ 2ನೇ ಆವೃತ್ತಿ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ಗೇರಿದ ಭಾರತಕ್ಕೆ ಮತ್ತೆ ಐಸಿಸಿ ಟ್ರೋಫಿ ಕನಸು ಕನಸಾಗಿಯೇ ಉಳಿಯಿತು. ಫೈನಲ್​ನಲ್ಲಿ ಭಾರತವನ್ನು ಸೋಲಿಸಿದ ಆಸ್ಟ್ರೇಲಿಯಾ ಚಾಂಪಿಯನ್ ಪಟ್ಟ ಅಲಂಕರಿಸಿತು.
icon

(7 / 8)

2023ರಲ್ಲಿ ನಡೆದ 2ನೇ ಆವೃತ್ತಿ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ಗೇರಿದ ಭಾರತಕ್ಕೆ ಮತ್ತೆ ಐಸಿಸಿ ಟ್ರೋಫಿ ಕನಸು ಕನಸಾಗಿಯೇ ಉಳಿಯಿತು. ಫೈನಲ್​ನಲ್ಲಿ ಭಾರತವನ್ನು ಸೋಲಿಸಿದ ಆಸ್ಟ್ರೇಲಿಯಾ ಚಾಂಪಿಯನ್ ಪಟ್ಟ ಅಲಂಕರಿಸಿತು.(PTI)

ಇದೀಗ 2023ರ ವಿಶ್ವಕಪ್‌ ಪಂದ್ಯಾವಳಿಯಲ್ಲಿ ಮತ್ತೆ ಭಾರತದ ಐಸಿಸಿ ಟ್ರೋಫಿ ಕನಸಿಗೆ ಆಸೀಸ್‌ ಅಡ್ಡಿಪಡಿಸಿದೆ.
icon

(8 / 8)

ಇದೀಗ 2023ರ ವಿಶ್ವಕಪ್‌ ಪಂದ್ಯಾವಳಿಯಲ್ಲಿ ಮತ್ತೆ ಭಾರತದ ಐಸಿಸಿ ಟ್ರೋಫಿ ಕನಸಿಗೆ ಆಸೀಸ್‌ ಅಡ್ಡಿಪಡಿಸಿದೆ.(PTI)

ಇತರ ಗ್ಯಾಲರಿಗಳು