Quad Meet 2023: ಭಾರತವಿಲ್ಲದ ಇಂಡೋ-ಪೆಸಿಫಿಕ್ ಊಹಿಸಲೂ ಸಾಧ್ಯವಿಲ್ಲ: ಕ್ವಾಡ್ ಸಭೆಯಲ್ಲಿ ಮೂಡಿದ ಒಮ್ಮತದ ಅಭಿಪ್ರಾಯ
- ನವದೆಹಲಿ: ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಕ್ವಾಡ್ ಸದಸ್ಯ ರಾಷ್ಟ್ರಗಳ ವಿದೇಶಾಂಗ ಸಚಿವರ ಸಭೆ ನಡೆಯುತ್ತಿದ್ದು, ಈ ಸಭೆಯಲ್ಲಿ ಭಾರತದ ವಿದೇಶಾಂಗ ಸಚಿವ ಡಾ.ಎಸ್. ಜೈಶಂಕರ್,ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್, ಜಪಾನ್ ವಿದೇಶಾಂಗ ಸಚಿವ ಯೋಶಿಮಾಸಾ ಹಯಾಶಿ ಹಾಗೂ ಆಸ್ಟ್ರೇಲಿಯಾದ ವಿದೇಶಾಂಗ ಸಚಿವೆ ಪೆನ್ನಿ ವಾಂಗ್ ಭಾಗವಹಿಸಿದ್ದಾರೆ. ಈ ಕುರಿತು ಇಲ್ಲಿದೆ ಮಾಹಿತಿ..

(1 / 5)
ದೆಹಲಿಯ ರೈಸಿನಾ ಸಂವಾದ ಕ್ವಾಡ್ ವಿದೇಶಾಂಗ ಸಚಿವರ ಸಭೆಯಲ್ಲಿ, ಭಾರತವನ್ನು ಹೊರಗೊಟ್ಟು ಇಂಡೋ-ಪೆಸಿಫಿಕ್‌ನ್ನು ಮರುರೂಪಿಸುವುದು ಸಾಧ್ಯವಿಲ್ಲ ಎಂಬ ಒಮ್ಮತದ ಅಭಿಪ್ರಾಯವನ್ನೂ ಎಲ್ಲ ಸದಸ್ಯ ರಾಷ್ಟ್ರಗಳ ವಿದೇಶಾಂಗ ಸಚಿವರೂ ಹೊರಹಾಕಿದರು.(ANI)
(2 / 5)
ಈ ಕುರಿತು ಮಾತನಾಡಿದ ಆಸ್ಟ್ರೇಲಿಯಾದ ವಿದೇಶಾಂಗ ಸಚಿವೆ ಪೆನ್ನಿ ವಾಂಗ್, ಭಾರತವು ನಿರ್ಣಾಯಕ ಶಕ್ತಿಯಾಗಿದೆ. ಭಾರತವಿಲ್ಲದೆ ಇಂಡೋ ಪೆಸಿಫಿಕ್ ಅನ್ನು ಮರುರೂಪಿಸಲಾಗುವುದಿಲ್ಲ. ಭಾರತವು ನಾಗರಿಕತೆಯ ಶಕ್ತಿಯಾಗಿದ್ದು, ಈ ಕಾಲದ ಕೆಲವು ಸವಾಲುಗಳಿಗೆ ವಿಭಿನ್ನ ದೃಷ್ಟಿಕೋನವನ್ನು ಹೊಂದಿದೆ ಎಂದು ಹೇಳಿದರು.(ANI)
(3 / 5)
ಸಭೆಯನ್ನು ಉದ್ದೇಶಿಸಿ ಮಾತನಾಡಿದ ಯುಎಸ್ ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್, ಇಂಡೋ-ಪೆಸಿಫಿಕ್ ನಮ್ಮ ಭವಿಷ್ಯವಾಗಿದೆ. ಭಾರತ ಈ ಪ್ರದೇಶದಲ್ಲಿ ನಿರ್ವಹಿಸಬಹುದಾದ ನಿರ್ಣಾಯಕ ಪಾತ್ರದ ಬಗ್ಗೆ ನಮಗೆ ಸ್ಪಷ್ಟ ಅರಿವಿದೆ ಎಂದು ಹೇಳಿದರು.(ANI)
(4 / 5)
ಇದೇ ವೇಳೆ ಮಾತನಾಡಿದ ಭಾರತದ ವಿದೇಶಾಂಗ ಸಚಿವ ಡಾ.ಎಸ್. ಜೈಶಂಕರ್, ಕ್ವಾಡ್ ಓಕ್ಕೂಟ ಜಾಗತಿಕ ಪರಿಣಾಮಗಳನ್ನು ಬೀರುತ್ತಿದೆ ಎಂದು ಹೇಳಿದರು.(ANI)
(5 / 5)
ಸಭೆ ಆರಂಭಕ್ಕೂ ಮುನ್ನ ಟ್ವೀಟ್ ಮಾಡಿದ್ದ ಆಂಟೋನಿ ಬ್ಲಿಂಕೆನ್, 'ಕ್ವಾಡ್ ವಿದೇಶಾಂಗ ಸಚಿವರೊಂದಿಗೆ ಬೆಳಗಿನ ಉಪಹಾರ ಸೇವಿಸುತ್ತಿರುವುದು ಸಂತಸ ತಂದಿದೆ. ಇಂಡೋ-ಪೆಸಿಫಿಕ್ ಪ್ರದೇಶವು 21 ನೇ ಶತಮಾನದಲ್ಲಿ ಪ್ರಪಂಚದ ಪಥವನ್ನು ರೂಪಿಸುತ್ತದೆ ಮತ್ತು ಅದರ ಶಾಂತಿ, ಸ್ಥಿರತೆ ಮತ್ತು ಬೆಳೆಯುತ್ತಿರುವ ಸಮೃದ್ಧಿಯನ್ನು ಕಾಪಾಡಲು ಬದ್ಧವಾಗಿದೆ..' ಎಂದು ಹೇಳಿದ್ದರು.(ANI)
ಇತರ ಗ್ಯಾಲರಿಗಳು