Old Parliament Building: ಹಳೆಯ ಸಂಸತ್ ಭವನಕ್ಕೆ ವಿದಾಯ ಹೇಳುವ ಸಮಯ, 10 ಮಹಿಳಾ ಸಂಸದರ ನೆನಪುಗಳ ಮೆರವಣಿಗೆ ಹೀಗಿದೆ ನೋಡಿ, ಇಲ್ಲಿವೆ ಫೋಟೋಸ್
ಸಂಸತ್ತಿನ ವಿಶೇಷ ಅಧಿವೇಶನ ಸೆ.18ರಿಂದ ಶುರುವಾಗುತ್ತಿದೆ. ಹಳೆಯ ಸಂಸತ್ ಭವನದಲ್ಲಿ ಈ ಅಧಿವೇಶನ ಶುರುವಾಗಿ, ಮಂಗಳವಾರದಿಂದ ಹೊಸ ಸಂಸತ್ ಭವನದಲ್ಲಿ ಮುಂದುವರಿಯುವ ನಿರೀಕ್ಷೆ ಇದೆ. ಹೀಗಾಗಿ ಹಳೆಯ ಸಂಸತ್ ಭವನದ ಜತೆಗಿನ ನೆನಪುಗಳನ್ನು, ಸಂದೇಶಗಳನ್ನು ಹಂಚಿಕೊಂಡಿದ್ದಾರೆ 10 ಮಹಿಳಾ ಸಂಸದರು.
(1 / 10)
ಹಳೆಯ ಸಂಸತ್ ಭವನದಲ್ಲಿ ಈ ಸಲದ ಅಧಿವೇಶನ ಕೊನೆಯದಾಗಲಿದೆ. ಹೊಸ ಸಂಸತ್ ಭವನ ಸಿದ್ಧವಾಗಿದ್ದು, ನಿನ್ನೆ ಉಪರಾಷ್ಟ್ರಪತಿಯವರು ಧ್ವಜಾರೋಹಣ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಹಳೆಯ ಸಂಸತ್ ಭವನದಲ್ಲಿ 10 ಮಹಿಳಾ ಸಂಸದರು ತಮ್ಮ ನೆನಪುಗಳನ್ನು ಹಂಚಿಕೊಂಡಿದ್ದಾರೆ. ಕೇಂದ್ರ ಸಚಿವೆ ಸ್ಮೃತಿ ಇರಾನಿ ಬೆಸ್ಟ್ ವಿಶಸ್ ಶೇರ್ ಮಾಡಿದ್ದಾರೆ.(PTI)
(2 / 10)
ಸ್ವತಂತ್ರ ಸಂಸದೆ ನವನೀತ್ ಕೌರ್ ರಾಣಾ ಅವರು ಹಳೆಯ ಸಂಸತ್‌ನ ಗೇಟ್ ನಂಬರ್ 4ರಲ್ಲಿ ಮಳೆಯ ನಡುವೆ ಆಗಮಿಸಿದ್ದು, ಅವರು ತಮ್ಮ ಅನುಭವ ಹಂಚಿಕೊಂಡಿರುವುದು ಹೀಗೆ. ಸಂಸತ್ ಭವನದ ಸ್ಮರಣೀಯ ನೆನಪುಗಳನ್ನು ಹಂಚಿಕೊಂಡ ಅವರು ಸಂಸತ್ ಭವನವನ್ನು ನಿಜವಾಗಿಯೂ ಪ್ರಜಾಪ್ರಭುತ್ವದ ದೇಗುಲ ಇದು ಎಂದು ಹೇಳಿಕೊಂಡಿದ್ದಾರೆ.(PTI)
(3 / 10)
ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ) ಸಂಸದೆ ಸುಪ್ರಿಯಾ ಸುಳೆ ಅವರು ರಾಷ್ಟ್ರಪತಿ ಚುನಾವಣೆ ಸಂದರ್ಭದಲ್ಲಿ ಮತ ಚಲಾಯಿಸಿದ ನೆನಪು. ಮಹಾರಾಷ್ಟ್ರ ಮತ್ತು ಬಾರಾಮತಿ ಕ್ಷೇತ್ರದ ಮತದಾರರನ್ನು ಸ್ಮರಿಸಿಕೊಂಡು ಸಂಸತ್ ಭವನದ ನೆನಪುಗಳನ್ನು ಸುಪ್ರಿಯಾ ಅವರು ಶೇರ್ ಮಾಡಿದ್ದಾರೆ.(PTI)
(4 / 10)
ರಾಜ್ಯಸಭಾ ಸದಸ್ಯರಾಗಿರುವ ಪಿ.ಟಿ. ಉಷಾ ಅವರು ಸುದೀರ್ಘ ನೆನಪುಗಳನ್ನು ಶೇರ್ ಮಾಡಿದ್ದಾರೆ. ಇದರಲ್ಲಿ ಅವರು ಹಳೆಯ ಸಂಸತ್ ಭವನದ ಗೇಟ್ ನಂಬರ್ 12 ಎದುರು ಅವರು ಬರುತ್ತಿರುವ ಫೋಟೋ ಇದೆ. 1986ರಲ್ಲಿ ಮೊದಲ ಬಾರಿಗೆ ಸಂಸತ್ ಭವನಕ್ಕೆ ಆಗಮಿಸಿದ ನೆನಪಿನೊಂದಿಗೆ ಅವರ ಬರವಣಿಗೆ ಶುರುವಾಗಿದೆ. ಈ ಪ್ರಜಾಪ್ರಭುತ್ವದ ದೇಗುಲದ ಮೂಲಕ ದೇಶವಾಸಿಗಳಿಗೆ ಸೇವೆ ಸಲ್ಲಿಸುವ ಭಾಗ್ಯ ಸಿಕ್ಕಿರುವುದು ಹೆಮ್ಮೆಯ ವಿಚಾರ ಎಂದು ಹೇಳಿಕೊಂಡಿದ್ದಾರೆ.(PTI)
(5 / 10)
ರಾಜ್ಯಸಭಾ ಸದಸ್ಯೆ ಪ್ರಿಯಾಂಕಾ ಚತುರ್ವೇದಿ ಅವರು ಹಳೆಯ ಸಂಸತ್‌ನ ಗೇಟ್ ನಂಬರ್ 12 ಎದುರು ನಿಂತ ಫೋಟೋ ಇದು. ನೀತಿ ನಿರೂಪಣೆ, ಗೆಳೆತನ ಮತ್ತು ಕಲಿಕೆಯ ನೆನಪನ್ನು ಕೊಟ್ಟಿದೆ ಈ ಸಂಸತ್ ಭವನ. 75 ವರ್ಷಗಳ ಪ್ರಯಾಣದ ನೆನಪು ಹಚ್ಚ ಹಸಿರಾಗಿ ಉಳಿದಿದೆ. ಶುಭವಾಗಲಿ ಎಂದು ಅವರು ಹಾರೈಸಿದ್ದಾರೆ.(PTI)
(6 / 10)
ಶಿರೋಮಣಿ ಅಕಾಲಿದಳದ ಸಂಸದೆ ಹರ್‌ಸಿಮ್ರತ್ ಕೌರ್ ಬಾದಲ್ ಅವರು ಸಂಸತ್ ಭವನದಿಂದ ಹೋಗುವ ಫೋಟೋ ಇದು. ಅವರು 2006ರಲ್ಲಿ ವಿಸಿಟರ್ ಆಗಿ ಹೋಗಿದ್ದ ನೆನಪುಗಳೊಂದಿಗೆ ತಮ್ಮ ಅನುಭವ ಹಂಚಿಕೊಂಡಿದ್ದಾರೆ.(PTI)
(7 / 10)
ಅಪ್ನಾ ದಳ್ ಎಸ್ ಸಂಸದೆ, ಕೇಂದ್ರ ಸಚಿವೆ ಅನುಪ್ರಿಯಾ ಪಟೇಲ್ ಅವರು ಮಹಾತ್ಮ ಗಾಂಧಿ ಪ್ರತಿಮೆಗೆ ನಮಿಸುತ್ತಿರುವ ಚಿತ್ರ ಇದು. ಸುದೀರ್ಘ ನೆನಪುಗಳನ್ನು ಹಂಚಿಕೊಂಡಿರುವ ಅವರು, ಮೊದಲ ಬಾರಿಗೆ ಲೋಕಸಭೆ ಸದಸ್ಯಳಾದ ನೆನಪಿನೊಂದಿಗೆ ಬರವಣಿಗೆ ಶುರುಮಾಡಿದ್ದಾರೆ. ಐತಿಹಾಸಿಕ ಭವನ ಹಲವು ಇತಿಹಾಸಗಳನ್ನು ಸೃಷ್ಟಿಸಿದೆ ಎಂದು ಬರೆದುಕೊಂಡಿದ್ದಾರೆ.
(8 / 10)
ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಅವರು ಸಂಸತ್ ಭವನದ ಸ್ತಂಭಗಳ ಹಿನ್ನೆಲೆಯ ಫೋಟೋ ಶೇರ್ ಮಾಡಿದ್ದಾರೆ. ಅವರು ತಮ್ಮ ನೆನಪುಗಳನ್ನು ಶೇರ್ ಮಾಡುತ್ತ, ನಾನು ಮೊದಲ ಸಲ ಸಂಸತ್ ಸದಸ್ಯೆಯಾಗಿ ಪ್ರವೇಶಿದ ಭವನ ಇದು. ಇದು ನನಗೆ ಮನೆಯೇ ಆಗಿಬಿಟ್ಟಿದೆ. ನನ್ನ ಹೃದಯದಲ್ಲಿ ಇದಕ್ಕೆ ವಿಶೇಷ ಸ್ಥಾನವಿದೆ ಎಂದು ಬರೆದುಕೊಂಡಿದ್ದಾರೆ.
(9 / 10)
ಲೋಕಸಭಾ ಸದಸ್ಯೆ ರಮ್ಯಾ ಹರಿದಾಸ್ ಅವರು ಹಳೆಯ ಸಂಸತ್ ಭವನದ ಎದುರು ನಿಂತಿರುವ ಫೋಟೋ ಇದಾಗಿದ್ದು, ಪ್ರಜಾಪ್ರಭುತ್ವದ ಅರಮನೆ ಇದು. ಕಠಿಣ ನಿರ್ಧಾರ ತೆಗೆದುಕೊಳ್ಳುವ, ಐತಿಹಾಸಿಕ ಭಾಷಣದ, ಗಂಭೀರ ಚರ್ಚೆಗಳ ತವರು ಇದು. ಇಲ್ಲಿನ ನೆನಪುಗಳು ಅವಿಸ್ಮರಣೀಯ ಎಂದು ಅವರು ಹೇಳಿಕೊಂಡಿದ್ದಾರೆ.
ಇತರ ಗ್ಯಾಲರಿಗಳು