Hindu Temple:ಅಬುದಾಬಿ ಹಿಂದೂ ದೇವಾಲಯ ಇಂದಿನಿಂದ ಸಾರ್ವಜನಿಕ ದರ್ಶನಕ್ಕೆ ಮುಕ್ತ, ಹೀಗಿದೆ 700 ಕೋಟಿ ರೂ. ದೇಗುಲ ವೈಭವ Photos
- ಭಾರತದಲ್ಲಿ ಅಯೋಧ್ಯೆ ರಾಮಮಂದಿರ ಉದ್ಘಾಟನೆ ಬಳಿಕ ದುಬೈನಲ್ಲೂ ಹಿಂದೂ ದೇವಾಲಯ ನಿರ್ಮಾಣಗೊಂಡಿದೆ. ಬೋಚಸನ್ವಾಸಿ ಶ್ರೀ ಅಕ್ಷರ ಪುರುಷೋತ್ತಮ ಸ್ವಾಮಿನಾರಾಯಣ ಸಂಸ್ಥೆ (BAPS) ಬರೋಬ್ಬರಿ 700 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ಭವ್ಯ ಹಿಂದೂ ದೇಗುಲವಿದು. ವಿಶೇಷ ಅತಿಥಿಗಳ ದರ್ಶನದ ನಂತರ ಮಾರ್ಚ್ 1ರ ಶುಕ್ರವಾರದಿಂದ ಸಾಮಾನ್ಯರಿಗೂ ತೆರೆಯಲಿದೆ. ಇಲ್ಲಿದೆ ಚಿತ್ರ ನೋಟ
- ಭಾರತದಲ್ಲಿ ಅಯೋಧ್ಯೆ ರಾಮಮಂದಿರ ಉದ್ಘಾಟನೆ ಬಳಿಕ ದುಬೈನಲ್ಲೂ ಹಿಂದೂ ದೇವಾಲಯ ನಿರ್ಮಾಣಗೊಂಡಿದೆ. ಬೋಚಸನ್ವಾಸಿ ಶ್ರೀ ಅಕ್ಷರ ಪುರುಷೋತ್ತಮ ಸ್ವಾಮಿನಾರಾಯಣ ಸಂಸ್ಥೆ (BAPS) ಬರೋಬ್ಬರಿ 700 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ಭವ್ಯ ಹಿಂದೂ ದೇಗುಲವಿದು. ವಿಶೇಷ ಅತಿಥಿಗಳ ದರ್ಶನದ ನಂತರ ಮಾರ್ಚ್ 1ರ ಶುಕ್ರವಾರದಿಂದ ಸಾಮಾನ್ಯರಿಗೂ ತೆರೆಯಲಿದೆ. ಇಲ್ಲಿದೆ ಚಿತ್ರ ನೋಟ
(1 / 9)
ಹಿಂದೂ ದೇವಾಲಯಗಳು ಭಾರತದಲ್ಲಿ ಮಾತ್ರವಲ್ಲ. ವಿಶ್ವದ ಹಲವು ದೇಶಗಳಲ್ಲಿವೆ. ಅಮೇರಿಕಾ ಸೇರಿದಂತೆ ಹಲವು ದೇಶಗಳಲ್ಲಿ ಹಿಂದೂ ದೇಗುಲಗಳನ್ನು ನಿರ್ಮಿಸಲಾಗಿದೆ. ಇದಕ್ಕೆ ಹೊಸ ಸೇರ್ಪಡೆ ದುಬೈನ ಅಬುಧಾಬಿಯಲ್ಲಿರುವ ಹಿಂದೂ ದೇಗುಲ ಸೇರ್ಪಡೆ. ಮಾರ್ಚ್ 1ರಿಂದ ಪ್ರವಾಸಿಗರ ಭೇಟಿಗೆ ಮಂದಿರ ಮುಕ್ತವಾಗಿರಲಿದೆ. ಬೆಳಿಗ್ಗೆ 8 ಗಂಟೆಯಿಂದ ರಾತ್ರಿ 8ರವರೆಗೆ ದೇವಾಲಯವು ತೆರೆದಿರಲಿದೆ. ಪ್ರತಿ ಸೋಮವಾರ ಮಂದಿರ ಮುಚ್ಚಿರಲಿದ್ದು, ದರ್ಶನಕ್ಕೆ ಅವಕಾಶವಿಲ್ಲ
(2 / 9)
ಬೋಚಸನ್ವಾಸಿ ಶ್ರೀ ಅಕ್ಷರ ಪುರುಷೋತ್ತಮ ಸ್ವಾಮಿನಾರಾಯಣ ಸಂಸ್ಥೆ (BAPS) ದುಬೈ– ಅಬುಧಾಬಿ ಶೇಖ್ ಜಾಯೆದ್ ಹೆದ್ದಾರಿಯ ಅಬು ಮುರೇಖಾದಲ್ಲಿ 27 ಎಕರೆ ಪ್ರದೇಶದಲ್ಲಿ ಸುಮಾರು 700 ಕೋಟಿ ರೂ. ವೆಚ್ಚದಲ್ಲಿ ಈ ಭವ್ಯವಾದ ದೇವಾಲಯವನ್ನು ನಿರ್ಮಾಣ ಮಾಡಿದೆ.
(3 / 9)
ರಾಜಸ್ಥಾನದಿಂದ ತರಿಸಿದ 18 ಲಕ್ಷ ಇಟ್ಟಿಗೆಗಳು ಮತ್ತು 1.8 ಲಕ್ಷ ಕ್ಯೂಬಿಕ್ ಮೀಟರ್ ಮರಳುಗಲ್ಲಿನಿಂದ ನಿರ್ಮಿಸಲಾದ ಈ ವಿಶಾಲ ದೇಗುಲವನ್ನು ನಾಗರ ವಾಸ್ತುಶಿಲ್ಪದ ಶೈಲಿಯಲ್ಲಿ ನಿರ್ಮಿಸಲಾಗಿದೆ. ಈ ದೇವಾಲಯವು ಅಯೋಧ್ಯೆಯಲ್ಲಿ ಉದ್ಘಾಟನೆಗೊಂಡ ರಾಮಮಂದಿರದ ವಾಸ್ತು ಶಿಲ್ಪದಂತೆಯೇ ನಿರ್ಮಿಸಿರುವುದು ವಿಶೇಷ.
(4 / 9)
ಯುಎಇಯ ಏಳು ಎಮಿರೇಟ್‌ಗಳನ್ನು ಪ್ರತಿನಿಧಿಸುವ ಏಳು ಗೋಪುರಗಳು ಇಲ್ಲಿವೆ. ಇದರೊಟ್ಟಿಗೆ ಒಂಟೆಗಳ ಕೆತ್ತನೆಗಳು. ದುಬೈನ ರಾಷ್ಟ್ರೀಯ ಪಕ್ಷಿ ಫಾಲ್ಕನ್ ಕೂಡ ಇಲ್ಲಿ ಅರಳಿದೆ, ಆತಿಥೇಯ ದೇಶಕ್ಕೆ ಸಮಾನ ಪ್ರಾತಿನಿಧ್ಯವನ್ನು ದೇವಾಲಯದ ವಾಸ್ತುಶಿಲ್ಪದ ಮೂಲಕ ನೀಡಲಾಗಿದೆ.
(5 / 9)
ಇಡೀ ದೇಗುಲ ವಿಭಿನ್ನ ಕೆತ್ತನೆಗಳಿಂದ ಕೂಡಿದೆ. ರಾಮಾಯಣ ಮತ್ತು ಮಹಾಭಾರತ ಸೇರಿದಂತೆ ಭಾರತದ 15 ಕಥೆಗಳಲ್ಲದೇ, ಮಾಯನ್, ಅಜ್ಟೆಕ್, ಈಜಿಪ್ಟ್, ಅರೇಬಿಕ್, ಯುರೋಪಿಯನ್, ಚೈನೀಸ್ ಮತ್ತು ಆಫ್ರಿಕನ್ ನಾಗರಿಕತೆಗಳ ಕಥೆಗಳನ್ನು ಸಹ ದೇವಾಲಯದಲ್ಲಿ ರೂಪಿಸಿರುವುದು ಗಮನ ಸೆಳೆಯುತ್ತದೆ.
(6 / 9)
ಭಾರತೀಯ ಪುರಾಣಗಳಲ್ಲಿ ಪ್ರಮುಖ ಸ್ಥಾನವನ್ನು ಹೊಂದಿರುವ ಆನೆಗಳು, ಒಂಟೆಗಳು ಮತ್ತು ಸಿಂಹಗಳಂತಹ ಪ್ರಾಣಿಗಳ ಜೊತೆಗೆ, ಯುಎಇಯ ರಾಷ್ಟ್ರೀಯ ಪಕ್ಷಿ, ಫಾಲ್ಕನ್ ಅನ್ನು ಸಹ ದೇವಾಲಯದ ವಿನ್ಯಾಸದಲ್ಲಿ ಸೇರಿಸಲಾಗಿದೆ. ಆತಿಥೇಯ ದೇಶಕ್ಕೆ ಸಮಾನ ಪ್ರಾತಿನಿಧ್ಯವನ್ನು ಅಲ್ಲಿ ನಿರ್ಮಿಸಿರುವ ದೇಗುಲದಲ್ಲಿ ನೀಡಲಾಗಿದೆ.
(7 / 9)
ಏಳು ಗೋಪುರಗಳಲ್ಲಿ ರಾಮ, ಶಿವ, ಜಗನ್ನಾಥ, ಕೃಷ್ಣ, ಸ್ವಾಮಿನಾರಾಯಣ, ತಿರುಪತಿ ಬಾಲಾಜಿ ಮತ್ತು ಅಯಪ್ಪ ಸೇರಿದಂತೆ ದೇವತೆಗಳ ವಿಗ್ರಹಗಳಿವೆ. ಏಳು ಶಿಖರ್‌ಗಳು ಯುಎಇಯ ಏಳು ಎಮಿರೇಟ್‌ಗಳನ್ನು ಪ್ರತಿನಿಧಿಸುತ್ತವೆ ಎನ್ನುವುದು ವಾಸ್ತು ಶಿಲ್ಪಿಗಳ ವಿವರಣೆ.
(8 / 9)
5,000 ಕ್ಕೂ ಹೆಚ್ಚು ಆಹ್ವಾನಿತರು ಭಾಗವಹಿಸಿದ್ದ ಸಮರ್ಪಣಾ ಸಮಾರಂಭದಲ್ಲಿ ಪ್ರಧಾನಿ ಮೋದಿ ಅವರು ಫೆಬ್ರವರಿ 14 ರಂದು ಭವ್ಯವಾದ ದೇವಾಲಯವನ್ನು ಉದ್ಘಾಟನೆ ಮಾಡಿದ್ದರು.
ಇತರ ಗ್ಯಾಲರಿಗಳು