ಅನಂತ್ ರಾಧಿಕಾ ಮದುವೆ ಕಾರ್ಯಕ್ರಮ, ಹಿಂದುಳಿದ ಕುಟುಂಬಗಳ 50 ಜೋಡಿಗೆ ಸಾಮೂಹಿಕ ವಿವಾಹ, ಚಿನ್ನಾಭರಣ 1 ಲಕ್ಷ ರೂಪಾಯಿ ಉಡುಗೊರೆ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಅನಂತ್ ರಾಧಿಕಾ ಮದುವೆ ಕಾರ್ಯಕ್ರಮ, ಹಿಂದುಳಿದ ಕುಟುಂಬಗಳ 50 ಜೋಡಿಗೆ ಸಾಮೂಹಿಕ ವಿವಾಹ, ಚಿನ್ನಾಭರಣ 1 ಲಕ್ಷ ರೂಪಾಯಿ ಉಡುಗೊರೆ

ಅನಂತ್ ರಾಧಿಕಾ ಮದುವೆ ಕಾರ್ಯಕ್ರಮ, ಹಿಂದುಳಿದ ಕುಟುಂಬಗಳ 50 ಜೋಡಿಗೆ ಸಾಮೂಹಿಕ ವಿವಾಹ, ಚಿನ್ನಾಭರಣ 1 ಲಕ್ಷ ರೂಪಾಯಿ ಉಡುಗೊರೆ

ಭಾರತದ ಪ್ರಮುಖ ವ್ಯಾಪಾರೋದ್ಯಮಿ ಶತ ಕೋಟ್ಯಧಿಪತಿ ಮುಕೇಶ್ ಅಂಬಾನಿ ನೀತಾ ದಂಪತಿಯ ಪುತ್ರ ಅನಂತ್ ಅಂಬಾನಿ - ರಾಧಿಕಾ ಮರ್ಚೆಂಟ್ ವಿವಾಹ ಕಾರ್ಯಕ್ರಮ ಜುಲೈ 12 ರಂದು ನಡೆಯಲಿದೆ. ಅದಕ್ಕೆ ಮುಂಚಿತವಾಗಿ ಪಾಲ್ಘರ್‌ನಲ್ಲಿ ನಡೆದ 50 ಜೋಡಿಗಳ ಸಾಮೂಹಿಕ ವಿವಾಹ ಗಮನಸೆಳೆದಿದೆ. ನವ ದಂಪತಿಗೆ ಚಿನ್ನಾಭರಣ, 1 ಲಕ್ಷ ರೂ ಉಡುಗೊರೆ ಸಿಕ್ಕಿದ್ದು ಅದರ ಸಚಿತ್ರ ವರದಿ ಇಲ್ಲಿದೆ.

ನವಿಮುಂಬಯಿಯಲ್ಲಿ ಹಿಂದುಳಿದ ಕುಟುಂಬಗಳ 50 ಜೋಡಿಗೆ ಸಾಮೂಹಿಕ ವಿವಾಹ ಕಾರ್ಯಕ್ರಮ ಏರ್ಪಡಿಸುವ ಮೂಲಕ ಅಂಬಾನಿ ಕುಟುಂಬದ ಅನಂತ್ ಅಂಬಾನಿ, ರಾಧಿಕಾ ಮರ್ಚೆಂಟ್ ವಿವಾಹ ಕಾರ್ಯಕ್ರಮಕ್ಕೆ ಜುಲೈ 2 ರಂದು ಚಾಲನೆ ಸಿಕ್ಕಿದೆ. ಅಂಬಾನಿ ಕುಟುಂಬದ ಮದುವೆ ಅಂದರೆ ಕೇಳಬೇಕಾ, ಅದು ಅದ್ಧೂರಿ ಕಾರ್ಯಕ್ರಮ. ಚಿನ್ನಾಭರಣ, 1 ಲಕ್ಷ ರೂಪಾಯಿ ಉಡುಗೊರೆ ಹೀಗೆ ಹತ್ತು ಹಲವು ವಿಶೇಷಗಳು. ಅವುಗಳ ವಿವರ ಇಲ್ಲಿದೆ.
icon

(1 / 6)

(ANI)

ಮುಕೇಶ್ ಅಂಬಾನಿ - ನೀತಾ ದಂಪತಿಯ ಪುತ್ರ ಅನಂತ್ ಅಂಬಾನಿ ಅವರ ವಿವಾಹ ಜುಲೈ 12ಕ್ಕೆ ರಾಧಿಕಾ ಮರ್ಚೆಂಟ್ ಅವರ ಜೊತೆಗೆ ನಡೆಯಲಿದೆ. ಇದಕ್ಕೆ ಪೂರ್ವಭಾವಿಯಾಗಿ ಪಾಲ್ಘರ್ ಪ್ರದೇಶದಲ್ಲಿರುವ ರಿಲಯನ್ಸ್ ಕಾರ್ಪೊರೇಟ್ ಪಾರ್ಕ್‌ನಲ್ಲಿ ಜುಲೈ 2 ರಂದು ಹಿಂದುಳಿದ ಕುಟುಂಬಗಳ 50 ಜೋಡಿಗಳ ಸಾಮೂಹಿಕ ವಿವಾಹವನ್ನು ಅಂಬಾನಿ ಕುಟುಂಬ ನಡೆಸಿತು. 
icon

(2 / 6)

ಅನಂತ್- ರಾಧಿಕಾ ಮದುವೆಯ ಕಾರ್ಯಕ್ರಮದ ಮೊದಲ ಕಾರ್ಯಕ್ರಮವೇ ಸಾಮೂಹಿಕ ವಿವಾಹ. ಅಂಬಾನಿ ಕುಟುಂಬ ಆಯೋಜಿಸಿ ಸಾಮೂಹಿಕ ವಿವಾಹ ಸಮಾರಂಭದಲ್ಲಿ ವಧುವರರ ಕುಟುಂಬದವರು ಸೇರಿ 800ಕ್ಕೂ ಹೆಚ್ಚು ಅತಿಥಿಗಳು ಭಾಗವಹಿಸಿದ್ದರು.
icon

(3 / 6)

(PTI)

ಅಂಬಾನಿ ಕುಟುಂಬವು ಸಾಮೂಹಿಕ ವಿವಾಹದ ಪ್ರತಿ ಜೋಡಿಗೂ ಮಂಗಳಸೂತ್ರ, ಮದುವೆಯ ಉಂಗುರಗಳು, ಮೂಗುತಿ ಸೇರಿ ಚಿನ್ನಾಭರಣ, ಕಾಲುಂಗುರ, ಕಾಲ್ಗೆಜ್ಜೆಯಂಥ ಬೆಳ್ಳಿ ಆಭರಣಗಳನ್ನು ಉಡುಗೊರೆಯಾಗಿ ನೀಡಿದೆ. ಅದೇ ರೀತಿ ಸಂಪ್ರದಾಯದಂತೆ,  ಪ್ರತಿ ವಧುವಿಗೆ ರೂ. 1.01 ಲಕ್ಷ (ಒಂದು ಲಕ್ಷದ ಒಂದು ಸಾವಿರ) ರೂಪಾಯಿಯನ್ನು ತವರು ಮನೆಯಿಂದ ನೀಡುವಂಥ ಸ್ತ್ರೀಧನದ ರೂಪದಲ್ಲಿ ನೀಡಿದೆ. 
icon

(4 / 6)

ಇದಲ್ಲದೆ, ಪ್ರತಿ ದಂಪತಿಗೂ ಒಂದು ವರ್ಷಕ್ಕೆ ಸಾಕಾಗುವಷ್ಟು ದಿನಸಿ, ಇದಲ್ಲದೆ, 36 ಅಗತ್ಯ ವಸ್ತುಗಳು ಮತ್ತು ಪಾತ್ರೆಗಳು, ಗ್ಯಾಸ್ ಸ್ಟೌ, ಮಿಕ್ಸರ್ ಮತ್ತು ಫ್ಯಾನ್, ಹಾಗೆಯೇ ಹಾಸಿಗೆ ಮತ್ತು ದಿಂಬುಗಳನ್ನು ಒಳಗೊಂಡ ಗೃಹೋಪಯೋಗಿ ವಸ್ತುಗಳನ್ನೂ ಸಂಪ್ರದಾಯದ ಪ್ರಕಾರ ಉಡುಗೊರೆಯಾಗಿ ಅಂಬಾನಿ ಕುಟುಂಬ ನೀಡಿದೆ.
icon

(5 / 6)

(AFP)

ಸಾಮೂಹಿಕ ವಿವಾಹ ಸಮಾರಂಭದಲ್ಲಿ ವರ್ಲಿ ಬುಡಕಟ್ಟು ಜನಾಂಗದವರು ಪ್ರದರ್ಶಿಸಿದ ಸಾಂಪ್ರದಾಯಿಕ ತಾರ್ಪ ನೃತ್ಯವನ್ನು ಆಹ್ವಾನಿತರು ವೀಕ್ಷಿಸಿದರು.ಮುಕೇಶ್ ಅಂಬಾನಿ ಕುಟುಂಬದ ಜೊತೆಗೆ ಸಾಮೂಹಿಕ ವಿವಾಹದ 50 ನವದಂಪತಿಗಳ ಫೋಟೋ ಸೆಷನ್‌.
icon

(6 / 6)

ಇತರ ಗ್ಯಾಲರಿಗಳು