ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಅನಂತ್ ರಾಧಿಕಾ ಮದುವೆ; ಅಂಬಾನಿ ಕುಟುಂಬದ ವಿವಾಹ ಕಾರ್ಯಕ್ರಮದಲ್ಲಿ ಮಾಮೇರು ಸಂಭ್ರಮ, ಏನಿದು ಸಮಾರಂಭ- ಚಿತ್ರನೋಟ

ಅನಂತ್ ರಾಧಿಕಾ ಮದುವೆ; ಅಂಬಾನಿ ಕುಟುಂಬದ ವಿವಾಹ ಕಾರ್ಯಕ್ರಮದಲ್ಲಿ ಮಾಮೇರು ಸಂಭ್ರಮ, ಏನಿದು ಸಮಾರಂಭ- ಚಿತ್ರನೋಟ

ಅನಂತ್ ರಾಧಿಕಾ ಮದುವೆ ಮುಂಚಿತವಾಗಿ ಇರುವ ಕಾರ್ಯಕ್ರಮಗಳು ಶುರುವಾಗಿವೆ. ಅಂಬಾನಿ ಕುಟುಂಬದ ವಿವಾಹ ಕಾರ್ಯಕ್ರಮದಲ್ಲಿ ಮಂಗಳವಾರ ಸಾಮೂಹಿಕ ವಿವಾಹ ನಡೆದರೆ, ನಿನ್ನೆ (ಜುಲೈ 3) ಮಾಮೇರು ಸಂಭ್ರಮ ಗಮನಸೆಳೆಯಿತು. ಏನಿದು ಸಮಾರಂಭ, ಇಲ್ಲಿದೆ ಚಿತ್ರನೋಟ. 

ರಿಲಯನ್ಸ್ ಇಂಡಸ್ಟ್ರೀಸ್‌ ಚೇರ್‌ಮನ್ ಮುಕೇಶ್ ಅಂಬಾನಿ, ನೀತಾ ದಂಪತಿಯ ಪುತ್ರ ಅನಂತ್ ಅಂಬಾನಿ ಮತ್ತುರಾಧಿಕಾ ಮರ್ಚೆಂಟ್‌ ವಿವಾಹ ಪೂರ್ವಕಾರ್ಯಕ್ರಮಗಳು ಶುರುವಾಗಿವೆ. ಮುಂಬಯಿಯ ಅವರ ನಿವಾಸ ಆಂಟಿಲಾದಲ್ಲಿ ಬುಧವಾರ (ಜುಲೈ 3) ಮಾಮೇರು ಕಾರ್ಯಕ್ರಮ ನಡೆಯಿತು. ನವಜೋಡಿಯ ಮಾಮೇರು ಸಂಭ್ರಮ ಹೀಗಿತ್ತು.
icon

(1 / 8)

ರಿಲಯನ್ಸ್ ಇಂಡಸ್ಟ್ರೀಸ್‌ ಚೇರ್‌ಮನ್ ಮುಕೇಶ್ ಅಂಬಾನಿ, ನೀತಾ ದಂಪತಿಯ ಪುತ್ರ ಅನಂತ್ ಅಂಬಾನಿ ಮತ್ತುರಾಧಿಕಾ ಮರ್ಚೆಂಟ್‌ ವಿವಾಹ ಪೂರ್ವಕಾರ್ಯಕ್ರಮಗಳು ಶುರುವಾಗಿವೆ. ಮುಂಬಯಿಯ ಅವರ ನಿವಾಸ ಆಂಟಿಲಾದಲ್ಲಿ ಬುಧವಾರ (ಜುಲೈ 3) ಮಾಮೇರು ಕಾರ್ಯಕ್ರಮ ನಡೆಯಿತು. ನವಜೋಡಿಯ ಮಾಮೇರು ಸಂಭ್ರಮ ಹೀಗಿತ್ತು.(ANI Picture Service)

ಸಹೋದರಿ ಇಶಾ ಅಂಬಾನಿಯ ಪುತ್ರಿಯನ್ನು ಎತ್ತಿಕೊಂಡ ಅನಂತ್ ಅಂಬಾನಿ, ರಾಧಿಕಾ ಮರ್ಚೆಂಟ್ ಸಂಭ್ರಮ. ಅನಂತ್ ರಾಧಿಕಾ ಮದುವೆ ಜುಲೈ 12 ರಂದು ಮುಂಬಯಿಯಲ್ಲಿ ನಡೆಯಲಿದೆ. ಅದಕ್ಕೂ ಮುಂಚಿತವಾಗಿ ಜುಲೈ 2 ರಂದು ಹಿಂದುಳಿದ ಕುಟುಂಬಗಳ 50 ಜೋಡಿಗಳ ಸಾಮೂಹಿಕ ವಿವಾಹವನ್ನು ಅಂಬಾನಿ ಕುಟುಂಬ ಪಾಲ್ಘರ್‌ನಲ್ಲಿ ನೆರವೇರಿಸಿತು. ಜುಲೈ 3 ರಂದು ತಮ್ಮ ನಿವಾಸ ಆಂಟಿಲಾದಲ್ಲೇ ಮಾಮೇರು ಕಾರ್ಯಕ್ರಮ ಆಯೋಜಿಸಿತು. 
icon

(2 / 8)

ಸಹೋದರಿ ಇಶಾ ಅಂಬಾನಿಯ ಪುತ್ರಿಯನ್ನು ಎತ್ತಿಕೊಂಡ ಅನಂತ್ ಅಂಬಾನಿ, ರಾಧಿಕಾ ಮರ್ಚೆಂಟ್ ಸಂಭ್ರಮ. ಅನಂತ್ ರಾಧಿಕಾ ಮದುವೆ ಜುಲೈ 12 ರಂದು ಮುಂಬಯಿಯಲ್ಲಿ ನಡೆಯಲಿದೆ. ಅದಕ್ಕೂ ಮುಂಚಿತವಾಗಿ ಜುಲೈ 2 ರಂದು ಹಿಂದುಳಿದ ಕುಟುಂಬಗಳ 50 ಜೋಡಿಗಳ ಸಾಮೂಹಿಕ ವಿವಾಹವನ್ನು ಅಂಬಾನಿ ಕುಟುಂಬ ಪಾಲ್ಘರ್‌ನಲ್ಲಿ ನೆರವೇರಿಸಿತು. ಜುಲೈ 3 ರಂದು ತಮ್ಮ ನಿವಾಸ ಆಂಟಿಲಾದಲ್ಲೇ ಮಾಮೇರು ಕಾರ್ಯಕ್ರಮ ಆಯೋಜಿಸಿತು. (ANI Picture Service)

ಇದೇ ವೇಳೆ, ಅಂಬಾನಿ ಕುಟುಂಬವು ಮಾಮೇರು ಸಮಾರಂಭದ ಸ್ಥಳಕ್ಕೆ ಕಾಲಿಟ್ಟಿತು. ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್‌ ಅವರು ಮಾಮೇರು ಸಮಾರಂಭ ಸ್ಥಳದಲ್ಲಿ ಕಾಣಿಸಿಕೊಂಡದ್ದು ಹೀಗೆ.
icon

(3 / 8)

ಇದೇ ವೇಳೆ, ಅಂಬಾನಿ ಕುಟುಂಬವು ಮಾಮೇರು ಸಮಾರಂಭದ ಸ್ಥಳಕ್ಕೆ ಕಾಲಿಟ್ಟಿತು. ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್‌ ಅವರು ಮಾಮೇರು ಸಮಾರಂಭ ಸ್ಥಳದಲ್ಲಿ ಕಾಣಿಸಿಕೊಂಡದ್ದು ಹೀಗೆ.(PTI)

ಏನಿದು ಮಾಮೇರು ಕಾರ್ಯಕ್ರಮ? - ಗುಜರಾತಿ ಸಂಪ್ರದಾಯದ ಆಚರಣೆ ಈ ಮಾಮೇರು. ಇದನ್ನು ಮೊಸಲು ಎಂದೂ ಕರೆಯುತ್ತಾರೆ. ಮದುವೆಗೆ ಕೆಲವು ದಿನ ಮೊದಲು ಆಚರಿಸುವ ಸಾಂಪ್ರದಾಯಿಕ ಆಚರಣೆ ಇದಾಗಿದ್ದು, ವರನ ತಾಯಿಯ ಕುಟುಂಬ ಅಂದರೆ ಇಲ್ಲಿ ನೀತಾ ಅಂಬಾನಿ ಅವರ ತವರು ಮನೆಯವರು. ನೀತಾ ಅಂಬಾನಿ  ತಾಯಿ ಪೂರ್ಣಿಮಾ ದಲಾಲ್ ಮತ್ತು ಅವರ ಸಹೋದರಿ ಮಮತಾ ದಲಾಲ್ ನೇತೃತ್ವದಲ್ಲಿ, ಉಡುಗೊರೆ ಮತ್ತು ಕೊಡುಗೆಗಳೊಂದಿಗೆ ದಂಪತಿಗಳನ್ನು ಆಶೀರ್ವದಿಸಲು ಅಂಬಾನಿ ನಿವಾಸಕ್ಕೆ ಬಂದರು.
icon

(4 / 8)

ಏನಿದು ಮಾಮೇರು ಕಾರ್ಯಕ್ರಮ? - ಗುಜರಾತಿ ಸಂಪ್ರದಾಯದ ಆಚರಣೆ ಈ ಮಾಮೇರು. ಇದನ್ನು ಮೊಸಲು ಎಂದೂ ಕರೆಯುತ್ತಾರೆ. ಮದುವೆಗೆ ಕೆಲವು ದಿನ ಮೊದಲು ಆಚರಿಸುವ ಸಾಂಪ್ರದಾಯಿಕ ಆಚರಣೆ ಇದಾಗಿದ್ದು, ವರನ ತಾಯಿಯ ಕುಟುಂಬ ಅಂದರೆ ಇಲ್ಲಿ ನೀತಾ ಅಂಬಾನಿ ಅವರ ತವರು ಮನೆಯವರು. ನೀತಾ ಅಂಬಾನಿ  ತಾಯಿ ಪೂರ್ಣಿಮಾ ದಲಾಲ್ ಮತ್ತು ಅವರ ಸಹೋದರಿ ಮಮತಾ ದಲಾಲ್ ನೇತೃತ್ವದಲ್ಲಿ, ಉಡುಗೊರೆ ಮತ್ತು ಕೊಡುಗೆಗಳೊಂದಿಗೆ ದಂಪತಿಗಳನ್ನು ಆಶೀರ್ವದಿಸಲು ಅಂಬಾನಿ ನಿವಾಸಕ್ಕೆ ಬಂದರು.(ANI)

ಮಾಮೇರು ಕಾರ್ಯಕ್ರಮದಲ್ಲಿ ಅನಂತ್ ಅಂಬಾನಿ ತಾಯಿ, ರಿಲಯನ್ಸ್ ಫೌಂಡೇಶನ್ ಸಂಸ್ಥಾಪಕಿ ನೀತಾ ಅಂಬಾನಿ ಸಂಭ್ರಮ. 
icon

(5 / 8)

ಮಾಮೇರು ಕಾರ್ಯಕ್ರಮದಲ್ಲಿ ಅನಂತ್ ಅಂಬಾನಿ ತಾಯಿ, ರಿಲಯನ್ಸ್ ಫೌಂಡೇಶನ್ ಸಂಸ್ಥಾಪಕಿ ನೀತಾ ಅಂಬಾನಿ ಸಂಭ್ರಮ. (ANI Picture Service)

ವರನ ತಾಯಿಯ ಅಂದರೆ ನೀತಾ ಅಂಬಾನಿಯವರ ತವರುಮನೆಯವರು ವಧು ಮತ್ತು ವರರಿಗೆ "ಮಾಮೇರು" ಎಂದು ಕರೆಯಲ್ಪಡುವ ಸಾಂಪ್ರದಾಯಿಕ ಉಡುಗೊರೆಗಳನ್ನು ನೀಡಿ ಆಶೀರ್ವದಿಸಿದರು. ಆ ಸಂಭ್ರಮದ ಕ್ಷಣಗಳನ್ನು ಕಣ್ತುಂಬಿಕೊಂಡ ಮುಕೇಶ್ ಅಂಬಾನಿ ನೀತಾ ದಂಪತಿ.
icon

(6 / 8)

ವರನ ತಾಯಿಯ ಅಂದರೆ ನೀತಾ ಅಂಬಾನಿಯವರ ತವರುಮನೆಯವರು ವಧು ಮತ್ತು ವರರಿಗೆ "ಮಾಮೇರು" ಎಂದು ಕರೆಯಲ್ಪಡುವ ಸಾಂಪ್ರದಾಯಿಕ ಉಡುಗೊರೆಗಳನ್ನು ನೀಡಿ ಆಶೀರ್ವದಿಸಿದರು. ಆ ಸಂಭ್ರಮದ ಕ್ಷಣಗಳನ್ನು ಕಣ್ತುಂಬಿಕೊಂಡ ಮುಕೇಶ್ ಅಂಬಾನಿ ನೀತಾ ದಂಪತಿ.(ANI Picture Service)

ಮಾಮೇರು ಸಮಾರಂಭದಲ್ಲಿ ರಿಲಯನ್ಸ್ ಜಿಯೋ ಅಧ್ಯಕ್ಷ ಆಕಾಶ್ ಅಂಬಾನಿ ಮತ್ತು ಅವರ ಪತ್ನಿ ಶ್ಲೋಕಾ ಮೆಹ್ತಾ ಅಂಬಾನಿ.
icon

(7 / 8)

ಮಾಮೇರು ಸಮಾರಂಭದಲ್ಲಿ ರಿಲಯನ್ಸ್ ಜಿಯೋ ಅಧ್ಯಕ್ಷ ಆಕಾಶ್ ಅಂಬಾನಿ ಮತ್ತು ಅವರ ಪತ್ನಿ ಶ್ಲೋಕಾ ಮೆಹ್ತಾ ಅಂಬಾನಿ.(PTI)

ಮೊಸಲು ಅಥವಾ ಮಾಮೇರು ಸಮಾರಂಭವು ಕುಟುಂಬದ ದೂರದ ಸಂಬಂಧಿಕರನ್ನು ಬೆಸೆಯುವುದಕ್ಕೆ ಮತ್ತು ಕುಟುಂಬದ ಕಷ್ಟ ಸುಖದಲ್ಲಿ ಅವರ ಪ್ರಾಮುಖ್ಯತೆಯನ್ನು ತೋರಿಸುವುದಕ್ಕೆ ಇರುವ ಕ್ಷಣಗಳು. ಎಲ್ಲರನ್ನು ಒಗ್ಗೂಡಿಸುವುದಕ್ಕೆ, ಬೆಸೆಯುವುದಕ್ಕೆ ಇದು ಒಂದು ವೇದಿಕೆ.
icon

(8 / 8)

ಮೊಸಲು ಅಥವಾ ಮಾಮೇರು ಸಮಾರಂಭವು ಕುಟುಂಬದ ದೂರದ ಸಂಬಂಧಿಕರನ್ನು ಬೆಸೆಯುವುದಕ್ಕೆ ಮತ್ತು ಕುಟುಂಬದ ಕಷ್ಟ ಸುಖದಲ್ಲಿ ಅವರ ಪ್ರಾಮುಖ್ಯತೆಯನ್ನು ತೋರಿಸುವುದಕ್ಕೆ ಇರುವ ಕ್ಷಣಗಳು. ಎಲ್ಲರನ್ನು ಒಗ್ಗೂಡಿಸುವುದಕ್ಕೆ, ಬೆಸೆಯುವುದಕ್ಕೆ ಇದು ಒಂದು ವೇದಿಕೆ.(PTI)


ಇತರ ಗ್ಯಾಲರಿಗಳು