Tulip Festival 2024: ಶ್ರೀನಗರದಲ್ಲಿರುವ ಏಷ್ಯಾದ ಅತಿದೊಡ್ಡ ಟ್ಯುಲಿಪ್ ಉದ್ಯಾನ ಈಗ ಸಾರ್ವಜನಿಕರ ಪ್ರವೇಶಕ್ಕೆ ಮುಕ್ತ; ಚಿತ್ರನೋಟ
ಶ್ರೀನಗರದಲ್ಲಿರುವ ಏಷ್ಯಾದ ಅತಿದೊಡ್ಡ ಟ್ಯುಲಿಪ್ ಉದ್ಯಾನ ಈಗ ಪ್ರವಾಸಿಗರ ಗಮನಸೆಳೆದಿದೆ. 55 ಹೆಕ್ಟೇರ್ ಪ್ರದೇಶದಲ್ಲಿ ವ್ಯಾಪಿಸಿರುವ ಈ ಉದ್ಯಾನದಲ್ಲಿ ಈ ವರ್ಷ 73 ಬಗೆಯ ಟ್ಯುಲಿಪ್ ಹೂವುಗಳು ಅರಳತೊಡಗಿವೆ. ಇದರ ಚಿತ್ರನೋಟ ಇಲ್ಲಿದೆ.
(1 / 10)
ಶ್ರೀನಗರದಲ್ಲಿರುವ ಏಷ್ಯಾದ ಅತಿದೊಡ್ಡ ಟುಲಿಪ್ ಉದ್ಯಾನವನ್ನು ವೀಕ್ಷಿಸುವುದಕ್ಕೆ ಶನಿವಾರ ಸಾರ್ವಜನಿಕರಿಗೆ ತೆರೆದುಬಿಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಉದ್ಯಾನವು ದಾಲ್ ಸರೋವರ ಮತ್ತು ಜಬರ್ವಾನ್ ಬೆಟ್ಟಗಳ ನಡುವೆ ನೆಲೆಗೊಂಡಿದೆ. (ANI)
(2 / 10)
ಇಂದಿರಾ ಗಾಂಧಿ ಸ್ಮಾರಕ ಟುಲಿಪ್ ಉದ್ಯಾನದಲ್ಲಿ 68 ವಿವಿಧ ಬಣ್ಣಗಳ ಟುಲಿಪ್ ಹೂವುಗಳು ಅರಳುತ್ತಿವೆ. ಈ ವರ್ಷ ಇದಕ್ಕೆ ಇನ್ನೂ 5 ಬಗೆಯ ಹೂವುಗಳು ಸೇರಿದ್ದು, ಸಾರ್ವಜನಿಕರಿಗೆ ವೀಕ್ಷಣೆಗಾಗಿ ತೆರೆಯಲಾಗಿದೆ ಎಂದು ಪುಷ್ಪ ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಈ ಹಿಂದೆ ಈ ಉದ್ಯಾನವನ್ನು ಸಿರಾಜ್ ಬಾಗ್ ಎಂದು ಕರೆಯಲಾಗುತ್ತಿತ್ತು.(HT Photo/Waseem Andrabi)
(3 / 10)
ಈ ವರ್ಷ, ಉದ್ಯಾನದಲ್ಲಿ 5 ಹೊಸ ಟುಲಿಪ್ ಪ್ರಭೇದಗಳ ಸೇರ್ಪಡೆಯಾಗಿದೆ. ಇದರೊಂದಿಗೆ ಒಟ್ಟು 68 ಪ್ರಭೇದಗಳ ಟ್ಯುಲಿಪ್ ಹೂವುಗಳನ್ನು ಇಲ್ಲಿ ಕಾಣಬಹುದು.(ANI)
(4 / 10)
ಪುಷ್ಪ ಕೃಷಿ ಇಲಾಖೆಯು ಈ ಉದ್ಯಾನದಲ್ಲಿ ಎರಡು ಲಕ್ಷ ಟ್ಯುಲಿಪ್ ಗಿಡಗಳನ್ನು ನೆಡುವ ಮೂಲಕ ಉದ್ಯಾನದ ಪ್ರದೇಶವನ್ನು ವಿಸ್ತರಿಸಿದೆ, ಇದರ ಪರಿಣಾಮವಾಗಿ 55 ಹೆಕ್ಟೇರ್ ಭೂಮಿಯಲ್ಲಿ 17 ಲಕ್ಷ ಟುಲಿಪ್ ಹೂವುಗಳು ಅರಳಿ ದಾಖಲೆ ಬರೆದಿವೆ.(ANI)
(5 / 10)
ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರವಾಸಿ ಸೀಸನ್ ಅನ್ನು ಬೇಸಿಗೆ ಮತ್ತು ಚಳಿಗಾಲವನ್ನು ಮೀರಿ ವಿಸ್ತರಿಸುವ ಗುರಿಯನ್ನು ಇಂದಿರಾ ಗಾಂಧಿ ಸ್ಮಾರಕ ಟುಲಿಪ್ ಗಾರ್ಡನ್ ಹೊಂದಿದೆ.(ANI)
(6 / 10)
ಇಂದಿರಾಗಾಂಧಿ ಟ್ಯುಲಿಪ್ ಗಾರ್ಡನ್ 2007ರಲ್ಲಿ ಸ್ಥಾಪನೆಯಾಯಿತು. ಆರಂಭದಲ್ಲಿ ಹಾಲೆಂಡ್‌ನಿಂದ ಆಮದು ಮಾಡಿಕೊಂಡ 50,000 ಟುಲಿಪ್ ಗಿಡಗೊಳಿಂದಿಗೆ ಪ್ರಾರಂಭವಾದ ಉದ್ಯಾನವು ಪ್ರವಾಸಿಗರನ್ನು ಬೇಗನೆ ಆಕರ್ಷಿಸಿತು. ಜನಪ್ರಿಯತೆಯನ್ನು ಗಳಿಸಿತು, (ANI)
(7 / 10)
ಇಂದಿರಾ ಗಾಂಧಿ ಸ್ಮಾರಕ ಟುಲಿಪ್ ಗಾರ್ಡನ್‌ಗೆ ನಿತ್ಯ ಬೆಳಿಗ್ಗೆ 8 ರಿಂದ ಸಂಜೆ 7 ರವರೆಗೆ ಸಾರ್ವಜನಿಕರು ಪ್ರವೇಶಿಸಬಹುದು, ಕಳೆದ ವರ್ಷ ಇಲ್ಲಿನ ಪ್ರವೇಶ ಶುಲ್ಕ ವಯಸ್ಕರಿಗೆ 60 ರೂ., ಮಕ್ಕಳಿಗೆ 25 ರೂಪಾಯಿ ಇತ್ತು.(PTI)
(8 / 10)
ಇಂದಿರಾ ಗಾಂಧಿ ಟ್ಯುಲಿಪ್ ಉದ್ಯಾನವು ಶ್ರೀನಗರದ ಶೇಖ್ ಉಲ್ ಆಲಂ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ 22 ಕಿಲೋಮೀಟರ್ ಅಂತರದಲ್ಲಿದೆ.(PTI)
(9 / 10)
ಟ್ಯುಲಿಪ್ ಉದ್ಯಾನವು ಶ್ರೀನಗರ ರೈಲು ನಿಲ್ದಾಣದಿಂದ 18 ಕಿಲೋಮೀಟರ್ ಮತ್ತು ಶ್ರೀನಗರದಿಂದ ಲಾಲ್‌ಚೌಕ್‌ನಿಂದ 8 ಕಿಲೋಮೀಟರ್ ದೂರದಲ್ಲಿದೆ,(PTI)
ಇತರ ಗ್ಯಾಲರಿಗಳು