Ram Temple Photos: ಅಯೋಧ್ಯೆ ರಾಮ ಮಂದಿರದ ಗರ್ಭಗುಡಿ ಕೆಲಸ ಪೂರ್ಣ, ಫೋಟೋ ಶೇರ್ ಮಾಡಿದ ಟ್ರಸ್ಟ್
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Ram Temple Photos: ಅಯೋಧ್ಯೆ ರಾಮ ಮಂದಿರದ ಗರ್ಭಗುಡಿ ಕೆಲಸ ಪೂರ್ಣ, ಫೋಟೋ ಶೇರ್ ಮಾಡಿದ ಟ್ರಸ್ಟ್

Ram Temple Photos: ಅಯೋಧ್ಯೆ ರಾಮ ಮಂದಿರದ ಗರ್ಭಗುಡಿ ಕೆಲಸ ಪೂರ್ಣ, ಫೋಟೋ ಶೇರ್ ಮಾಡಿದ ಟ್ರಸ್ಟ್

ಅಯೋಧ್ಯೆಯ ರಾಮಮಂದಿರದ ಗರ್ಭ ಗುಡಿಯ ಕೆಲಸ ಬಹುತೇಕ ಪೂರ್ಣಗೊಂಡಿದೆ. ರಾಮಲಲ್ಲಾನ ಮೂರ್ತಿ ಪ್ರತಿಷ್ಠಾಪನೆ ಮಾಡುವ ಗರ್ಭಗುಡಿಯ ಕೆಲವು ಫೋಟೋಗಳನ್ನು ಶ್ರೀ ರಾಮಮಂದಿರ ಟ್ರಸ್ಟ್ ಶೇರ್ ಮಾಡಿದ್ದು, ಸಚಿತ್ರ ವಿವರ ಇಲ್ಲಿದೆ.

ರಾಮಮಂದಿರ ನಿರ್ಮಾಣದ ಪ್ರಗತಿ ಪರಿಶೀಲನೆ ನಡೆಸಿದ ಅಯೋಧ್ಯೆ ರಾಮಮಂದಿರ ನಿರ್ಮಾಣ ಸಮಿತಿಯ ಅಧ್ಯಕ್ಷ ನೃಪೇಂದ್ರ ಮಿಶ್ರಾ ಅವರು, 2024ರ ಜನವರಿ 22 ರಂದು ಭಗವಾನ್ ರಾಮನ ಪ್ರತಿಷ್ಠಾಪನೆ (ಪ್ರಾಣ ಪ್ರತಿಷ್ಠೆ) ನಡೆಯಲಿದೆ ಎಂದು ಭಾನುವಾರ ತಿಳಿಸಿದರು. 
icon

(1 / 8)

ರಾಮಮಂದಿರ ನಿರ್ಮಾಣದ ಪ್ರಗತಿ ಪರಿಶೀಲನೆ ನಡೆಸಿದ ಅಯೋಧ್ಯೆ ರಾಮಮಂದಿರ ನಿರ್ಮಾಣ ಸಮಿತಿಯ ಅಧ್ಯಕ್ಷ ನೃಪೇಂದ್ರ ಮಿಶ್ರಾ ಅವರು, 2024ರ ಜನವರಿ 22 ರಂದು ಭಗವಾನ್ ರಾಮನ ಪ್ರತಿಷ್ಠಾಪನೆ (ಪ್ರಾಣ ಪ್ರತಿಷ್ಠೆ) ನಡೆಯಲಿದೆ ಎಂದು ಭಾನುವಾರ ತಿಳಿಸಿದರು. (File Photo)

ಅಯೋಧ್ಯೆಯ ರಾಮಮಂದಿರದ ಗರ್ಭಗುಡಿ ಬಹುತೇಕ ಪೂರ್ಣಗೊಂಡಿದೆ ಎಂದು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಶನಿವಾರ ಬಹಿರಂಗಪಡಿಸಿದೆ. ಅದರ ಫೋಟೋವನ್ನೂ ಬಿಡುಗಡೆ ಮಾಡಿದೆ.
icon

(2 / 8)

ಅಯೋಧ್ಯೆಯ ರಾಮಮಂದಿರದ ಗರ್ಭಗುಡಿ ಬಹುತೇಕ ಪೂರ್ಣಗೊಂಡಿದೆ ಎಂದು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಶನಿವಾರ ಬಹಿರಂಗಪಡಿಸಿದೆ. ಅದರ ಫೋಟೋವನ್ನೂ ಬಿಡುಗಡೆ ಮಾಡಿದೆ.(ANI)

"ಶ್ರೀ ರಾಮಲಲ್ಲಾನ ಗರ್ಭಗುಡಿ ಬಹುತೇಕ ಸಿದ್ಧವಾಗಿದೆ. ಇತ್ತೀಚೆಗೆ, ದೀಪಾಲಂಕಾರದ ಕೆಲಸವೂ ಪೂರ್ಣಗೊಂಡಿದೆ, ನಾನು ಕೆಲವು ಛಾಯಾಚಿತ್ರಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ" ಎಂದು ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರೈ ಅವರು ಎಕ್ಸ್‌ನಲ್ಲಿ ಟ್ವೀಟ್ ಮಾಡಿದ್ದಾರೆ.  
icon

(3 / 8)

"ಶ್ರೀ ರಾಮಲಲ್ಲಾನ ಗರ್ಭಗುಡಿ ಬಹುತೇಕ ಸಿದ್ಧವಾಗಿದೆ. ಇತ್ತೀಚೆಗೆ, ದೀಪಾಲಂಕಾರದ ಕೆಲಸವೂ ಪೂರ್ಣಗೊಂಡಿದೆ, ನಾನು ಕೆಲವು ಛಾಯಾಚಿತ್ರಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ" ಎಂದು ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರೈ ಅವರು ಎಕ್ಸ್‌ನಲ್ಲಿ ಟ್ವೀಟ್ ಮಾಡಿದ್ದಾರೆ.  (Ram Janmabhoomi Teerth Kshetra-X)

ಅಯೋಧ್ಯೆಯಲ್ಲಿ ನಿರ್ಮಾಣ ಹಂತದಲ್ಲಿರುವ ರಾಮಮಂದಿರದ ಇತ್ತೀಚಿನ ಚಿತ್ರಗಳನ್ನು ಟ್ರಸ್ಟ್ ಶನಿವಾರ ಬಿಡುಗಡೆ ಮಾಡಿದ್ದು, ದೇವಾಲಯದ ಗರ್ಭಗುಡಿ ಬಹುತೇಕ ಪೂರ್ಣಗೊಂಡಿದೆ ಎಂಬುದನ್ನು ಆ ಚಿತ್ರಗಳು ತೋರಿಸಿವೆ. 
icon

(4 / 8)

ಅಯೋಧ್ಯೆಯಲ್ಲಿ ನಿರ್ಮಾಣ ಹಂತದಲ್ಲಿರುವ ರಾಮಮಂದಿರದ ಇತ್ತೀಚಿನ ಚಿತ್ರಗಳನ್ನು ಟ್ರಸ್ಟ್ ಶನಿವಾರ ಬಿಡುಗಡೆ ಮಾಡಿದ್ದು, ದೇವಾಲಯದ ಗರ್ಭಗುಡಿ ಬಹುತೇಕ ಪೂರ್ಣಗೊಂಡಿದೆ ಎಂಬುದನ್ನು ಆ ಚಿತ್ರಗಳು ತೋರಿಸಿವೆ. (Ram Janmabhoomi Teerth Kshetra-X)

ರಾಮ ಮಂದಿರದ ಗರ್ಭಗುಡಿಯಲ್ಲಿ ರಾಮಲಲ್ಲಾ ಪ್ರತಿಷ್ಠಾ ಮಹೋತ್ಸವಕ್ಕೆ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್  ದಿನಾಂಕವನ್ನು ನಿಗದಿಪಡಿಸಿದೆ. ಈ ಸಮಾರಂಭವು 2024ರ ಜನವರಿ 22 ರಂದು ಮಧ್ಯಾಹ್ನ 12 ರಿಂದ  12:45 ರ ನಡುವೆ ನಡೆಯಲಿದೆ. ವಿವಿಧ ಪಂಗಡಗಳ 4,000 ಸಂತರನ್ನು ಈ ಕಾರ್ಯಕ್ರಮಕ್ಕೆ ಟ್ರಸ್ಟ್ ಆಹ್ವಾನಿಸಿದೆ.
icon

(5 / 8)

ರಾಮ ಮಂದಿರದ ಗರ್ಭಗುಡಿಯಲ್ಲಿ ರಾಮಲಲ್ಲಾ ಪ್ರತಿಷ್ಠಾ ಮಹೋತ್ಸವಕ್ಕೆ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್  ದಿನಾಂಕವನ್ನು ನಿಗದಿಪಡಿಸಿದೆ. ಈ ಸಮಾರಂಭವು 2024ರ ಜನವರಿ 22 ರಂದು ಮಧ್ಯಾಹ್ನ 12 ರಿಂದ  12:45 ರ ನಡುವೆ ನಡೆಯಲಿದೆ. ವಿವಿಧ ಪಂಗಡಗಳ 4,000 ಸಂತರನ್ನು ಈ ಕಾರ್ಯಕ್ರಮಕ್ಕೆ ಟ್ರಸ್ಟ್ ಆಹ್ವಾನಿಸಿದೆ.(Ram Janmabhoomi Teerth Kshetra-X)

ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಲಿದ್ದಾರೆ.
icon

(6 / 8)

ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಲಿದ್ದಾರೆ.(Ram Janmabhoomi Teerth Kshetra-X)

ಅಯೋಧ್ಯೆಯಲ್ಲಿ ರಾಮಲಲ್ಲಾನ ಪ್ರಾಣ-ಪ್ರತಿಷ್ಠಾ (ಪ್ರತಿಷ್ಠಾಪನೆ) ಸಮಾರಂಭದ ವೈದಿಕ ಆಚರಣೆಗಳು 2024ರ ಜನವರಿ 16 ರಂದು ಶುರುವಾಗುತ್ತಿದೆ.
icon

(7 / 8)

ಅಯೋಧ್ಯೆಯಲ್ಲಿ ರಾಮಲಲ್ಲಾನ ಪ್ರಾಣ-ಪ್ರತಿಷ್ಠಾ (ಪ್ರತಿಷ್ಠಾಪನೆ) ಸಮಾರಂಭದ ವೈದಿಕ ಆಚರಣೆಗಳು 2024ರ ಜನವರಿ 16 ರಂದು ಶುರುವಾಗುತ್ತಿದೆ.(PTI)

ಅಯೋಧ್ಯೆಯಲ್ಲಿ ಜನವರಿ 14 ರಿಂದ ಜನವರಿ 22 ರವರೆಗೆ ಅಮೃತ ಮಹೋತ್ಸವ ಆಚರಿಸಲಾಗುತ್ತಿದೆ. ಹೆಚ್ಚುವರಿಯಾಗಿ 1008 ಹುಂಡಿ ಮಹಾಯಜ್ಞವನ್ನು ಆಯೋಜಿಸಲಾಗಿದ್ದು, ಈ ಸಂದರ್ಭದಲ್ಲಿ ಸಾವಿರಾರು ಭಕ್ತರಿಗೆ ಅನ್ನಸಂತರ್ಪಣೆಯನ್ನೂ ಏರ್ಪಡಿಸಲಾಗಿದೆ.
icon

(8 / 8)

ಅಯೋಧ್ಯೆಯಲ್ಲಿ ಜನವರಿ 14 ರಿಂದ ಜನವರಿ 22 ರವರೆಗೆ ಅಮೃತ ಮಹೋತ್ಸವ ಆಚರಿಸಲಾಗುತ್ತಿದೆ. ಹೆಚ್ಚುವರಿಯಾಗಿ 1008 ಹುಂಡಿ ಮಹಾಯಜ್ಞವನ್ನು ಆಯೋಜಿಸಲಾಗಿದ್ದು, ಈ ಸಂದರ್ಭದಲ್ಲಿ ಸಾವಿರಾರು ಭಕ್ತರಿಗೆ ಅನ್ನಸಂತರ್ಪಣೆಯನ್ನೂ ಏರ್ಪಡಿಸಲಾಗಿದೆ.(PTI)


ಇತರ ಗ್ಯಾಲರಿಗಳು