ರಾಮ ದರ್ಬಾರ್‌ನಿಂದ ಸೀತಾ ಕೂಪದವರೆಗೆ, ಅಯೋಧ್ಯೆ ರಾಮಮಂದಿರದಲ್ಲಿದೆ ನಿಮ್ಮ ಊಹೆಗೆ ನಿಲುಕದ ಹಲವು ವೈಶಿಷ್ಟ್ಯಗಳು
- ಅಯೋಧ್ಯೆ ರಾಮಮಂದಿರ ಲೋಕಾರ್ಪಣೆಗೆ ಸಜ್ಜಾಗಿದ್ದು, ನಾಳೆ ಅಂದರೆ ಜನವರಿ 22 ರಂದು ಪ್ರಧಾನಿ ನರೇಂದ್ರ ಮೋದಿ ರಾಮಮಂದಿರವನ್ನು ಉದ್ಘಾಟಿಸಲಿದ್ದಾರೆ. ಈ ಹೊತ್ತಿನಲ್ಲಿ ರಾಮಮಂದಿರದ ವೈಶಿಷ್ಟ್ಯಗಳ ಬಗ್ಗೆ ಚಿತ್ರ ಸಹಿತ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ. ಇದು ನಿಮ್ಮಲ್ಲಿ ಅಚ್ಚರಿ ಮೂಡಿಸುವುದು ಖಂಡಿತ.
- ಅಯೋಧ್ಯೆ ರಾಮಮಂದಿರ ಲೋಕಾರ್ಪಣೆಗೆ ಸಜ್ಜಾಗಿದ್ದು, ನಾಳೆ ಅಂದರೆ ಜನವರಿ 22 ರಂದು ಪ್ರಧಾನಿ ನರೇಂದ್ರ ಮೋದಿ ರಾಮಮಂದಿರವನ್ನು ಉದ್ಘಾಟಿಸಲಿದ್ದಾರೆ. ಈ ಹೊತ್ತಿನಲ್ಲಿ ರಾಮಮಂದಿರದ ವೈಶಿಷ್ಟ್ಯಗಳ ಬಗ್ಗೆ ಚಿತ್ರ ಸಹಿತ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ. ಇದು ನಿಮ್ಮಲ್ಲಿ ಅಚ್ಚರಿ ಮೂಡಿಸುವುದು ಖಂಡಿತ.
(1 / 13)
ಸದ್ಯ ಭಾರತದಾದ್ಯಂತ ಎಲ್ಲಿ ಕೇಳಿದರೂ ಶ್ರೀರಾಮ, ಅಯೋಧ್ಯೆಯದ್ದೇ ಸದ್ದು. ನಾಳೆ (ಜ.22) ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಉದ್ಘಾಟನೆ ಇದೆ. 75 ಎಕರೆ ವಿಸ್ತೀರ್ಣದಲ್ಲಿ ಬಹೃತ್ ಶ್ರೀರಾಮ ಮಂದಿರವನ್ನು ನಿರ್ಮಾಣ ಮಾಡಲಾಗಿದೆ. ಈ ದೇಗುಲವನ್ನು ಸಂಪೂರ್ಣವಾಗಿ ದೇಶದ ಸಾಂಪ್ರದಾಯಿಕ ಸ್ಥಳೀಯ ತಂತ್ರಜ್ಞಾನಗಳನ್ನು ಬಳಸಿ ನಿರ್ಮಿಸಲಾಗಿದೆ. 1000 ವರ್ಷ ಕಳೆದರೂ ಈ ದೇವಾಲಯಕ್ಕೆ ಯಾವುದೇ ಹಾನಿಯಾಗುವುದಿಲ್ಲ. ಭಾರತದ ಬಹುಕೋಟಿ ಜನರ ಕನಸಾಗಿರುವ ರಾಮಮಂದಿರದ ವೈಶಿಷ್ಟ್ಯದ ಸಚಿತ್ರ ವರದಿ ಇಲ್ಲಿದೆ. (File Photo)
(2 / 13)
ಶ್ರೀ ರಾಮ ಜನ್ಮಭೂಮಿ ಟ್ರಸ್ಟ್‌ನ ಪ್ರಕಾರ, ರಾಮಮಂದಿರವು ಮೂರು ಅಂತಸ್ತಿನ ದೇವಾಲಯವಾಗಿದ್ದು, ಪ್ರತಿ ಮಹಡಿಯು 20 ಅಡಿ ಎತ್ತರದಲ್ಲಿದೆ. ಇದು ಒಟ್ಟು 392 ಕಂಬಗಳು ಮತ್ತು 44 ಬಾಗಿಲುಗಳನ್ನು ಒಳಗೊಂಡಿದೆ. (ANI)
(3 / 13)
ಅಯೋಧ್ಯೆಯ ರಾಮಮಂದಿರದ ಮುಖ್ಯ ದ್ವಾರವು ಆನೆಗಳು, ಸಿಂಹಗಳು, ಭಗವಾನ್ ಹನುಮಾನ್ ಮತ್ತು 'ಗರುಡ'ನ ಪ್ರತಿಮೆಗಳಿಂದ ಅಲಂಕರಿಸಲ್ಪಟ್ಟಿದೆ. ಈ ಪ್ರತಿಮೆಗಳನ್ನು ರಾಜಸ್ಥಾನದ ಬನ್ಸಿ ಪಹಾರ್‌ಪುರ ಪ್ರದೇಶದಿಂದ ಸಂಗ್ರಹಿಸಿದ ಮರಳುಗಲ್ಲಿನಿಂದ ರಚಿಸಲಾಗಿದೆ.(ANI)
(4 / 13)
ಸಾಂಪ್ರದಾಯಿಕ ನಾಗರ ಶೈಲಿಯಲ್ಲಿ ನಿರ್ಮಿಸಲಾದ ದೇವಾಲಯದ ಸಂಕೀರ್ಣವು 380 ಅಡಿ ಉದ್ದ (ಪೂರ್ವ-ಪಶ್ಚಿಮ ದಿಕ್ಕು), 250 ಅಡಿ ಅಗಲ ಮತ್ತು 161 ಅಡಿ ಎತ್ತರವನ್ನು ಹೊಂದಿದೆ, (ANI)
(5 / 13)
ದೇವಾಲಯದ ಪ್ರತಿಯೊಂದು ಮಹಡಿಯು 20 ಅಡಿ ಎತ್ತರವನ್ನು ಹೊಂದಿರುತ್ತದೆ ಮತ್ತು ಒಟ್ಟು 392 ಕಂಬಗಳು ಮತ್ತು 44 ದ್ವಾರಗಳನ್ನು ರಾಮಮಂದಿರ ಹೊಂದಿದೆ. (ANI)
(6 / 13)
ದೇವಾಲಯವು ಐದು ಮಂಟಪಗಳನ್ನು (ಹಾಲ್‌ಗಳು) ಒಳಗೊಂಡಿದೆ. ನೃತ್ಯ ಮಂಟಪ, ರಂಗ ಮಂಟಪ, ಸಭಾ ಮಂಟಪ, ಪ್ರಾರ್ಥನಾ ಮಂಟಪ ಮತ್ತು ಕೀರ್ತನ ಮಂಟಪಗಳು ಇಲ್ಲಿವೆ. (PTI)
(7 / 13)
ಗರ್ಭಗೃಹ ಅಥವಾ ದೇವಾಲಯದ ಒಳಗಿನ ಗರ್ಭಗುಡಿಯಲ್ಲಿ ದೇವರನ್ನು ಪ್ರತಿಷ್ಠಾಪಿಸಲಾಗುತ್ತದೆ. ಈ ಗರ್ಭಗುಡಿಯು ಬಾಲರಾಮ ಪ್ರತಿಮೆಯನ್ನು ಹೊಂದಿರುತ್ತದೆ, ಮೊದಲ ಮಹಡಿಯಲ್ಲಿ ಶ್ರೀ ರಾಮ ದರ್ಬಾರ್ ಇರುತ್ತದೆ.(Shri Ram Janmbhoomi Teerth Kshet)
(8 / 13)
ಈ ದೇವಾಲಯದ ಸ್ತಂಭಗಳು ಮತ್ತು ಗೋಡೆಗಳಲ್ಲಿ ದೇವತೆಗಳು, ದೇವರುಗಳು ಅತ್ಯಾಕರ್ಷಕ ಕೆತ್ತನೆಗಳನ್ನು ನೋಡಬಹುದಾಗಿದೆ. (Shri Ram Janmbhoomi Teerth Kshet)
(9 / 13)
ದೇಗುಲದ ಮುಖ್ಯ ದ್ವಾರವು ಪೂರ್ವ ಭಾಗದಲ್ಲಿದೆ. 32 ಮೆಟ್ಟಿಲುಗಳನ್ನು ಏರಿ ಸಿಂಗ್ ದ್ವಾರದ ಮೂಲಕ ಇಲ್ಲಿಗೆ ಪ್ರವೇಶಿಸಬಹುದು. ಹೆಚ್ಚುವರಿಯಾಗಿ, ವಿಕಲಚೇತನರು ಮತ್ತು ವಯಸ್ಸಾದ ಸಂದರ್ಶಕರ ಅನುಕೂಲಕ್ಕಾಗಿ ಎಸ್ಕಲೇಟರ್‌ಗಳು ಮತ್ತು ಲಿಫ್ಟ್‌ಗಳನ್ನು ಒದಗಿಸಲಾಗಿದೆ.(HT Photo/Deepak Gupta)
(10 / 13)
ಮಂದಿರವು 732 ಮೀಟರ್ ಉದ್ದ ಮತ್ತು 14 ಅಡಿ ಅಗಲವನ್ನು ಹೊಂದಿರುವ ಪಾರ್ಕೋಟಾ (ಆಯತಾಕಾರದ ಸಂಯುಕ್ತ ಗೋಡೆ) ಯಿಂದ ಸುತ್ತುವರಿದಿದೆ.(PTI)
(11 / 13)
ಮಂದಿರದ ಅಡಿಪಾಯವನ್ನು 14-ಮೀಟರ್ ದಪ್ಪದ ರೋಲರ್-ಕಾಂಪ್ಯಾಕ್ಟ್ ಕಾಂಕ್ರೀಟ್ (RCC) ಪದರದಿಂದ ನಿರ್ಮಿಸಲಾಗಿದೆ, ಇದು ಕೃತಕ ಬಂಡೆಯ ನೋಟವನ್ನು ನೀಡುತ್ತದೆ.(AP)
(12 / 13)
ಮಂದಿರದ ಸಮೀಪದಲ್ಲಿ ಐತಿಹಾಸಿಕ ಪ್ರಸಿದ್ಧವಾದ ಸೀತಾ ಕೂಪ (ಬಾವಿ) ಇದೆ, ಇದು ಪ್ರಾಚೀನ ಯುಗಕ್ಕೂ ಹಿಂದಿನದು ಎಂದು ನಂಬಲಾಗಿದೆ. (AP)
ಇತರ ಗ್ಯಾಲರಿಗಳು