Water Crisis: ಬೆಂಗಳೂರು ಮಾತ್ರವಲ್ಲ, ಭಾರತದ ಈ 6 ಮಹಾನಗರಗಳಲ್ಲೂ ಕಾಡಲಿದೆ ನೀರಿನ ಸಮಸ್ಯೆ Photos
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Water Crisis: ಬೆಂಗಳೂರು ಮಾತ್ರವಲ್ಲ, ಭಾರತದ ಈ 6 ಮಹಾನಗರಗಳಲ್ಲೂ ಕಾಡಲಿದೆ ನೀರಿನ ಸಮಸ್ಯೆ Photos

Water Crisis: ಬೆಂಗಳೂರು ಮಾತ್ರವಲ್ಲ, ಭಾರತದ ಈ 6 ಮಹಾನಗರಗಳಲ್ಲೂ ಕಾಡಲಿದೆ ನೀರಿನ ಸಮಸ್ಯೆ Photos

  • ಬೆಂಗಳೂರು ನಗರ  ಒಂದೂವರೆ ತಿಂಗಳಿನಿಂದ ನೀರಿನ ಸಮಸ್ಯೆಯನ್ನುಎದುರಿಸುತ್ತಿದೆ. ಅಂತರ್ಜಲ ಕುಸಿತದ ಪರಿಣಾಮ ಉದ್ಯಾನ ನಗರಿಯಲ್ಲಿ ನೀರಿನ ಸಮಸ್ಯೆಯಾಗಿದೆ.  ಮುಂಗಾರಿನಲ್ಲಿ ಮಳೆ ಕೊರತೆ, ಜಲಾಶಯದಲ್ಲಿ ಕುಸಿದ ನೀರಿನ ಪ್ರಮಾಣವೂ ಸಮಸ್ಯೆಯ ಇತರೆ ಕಾರಣಗಳು. ಇದು ಬೆಂಗಳೂರಿಗೆ ಮಾತ್ರ ಸೀಮಿತವಾಗಿಲ್ಲ. ಹಲವು ನಗರಗಳು ಇದೇ ರೀತಿಯ ಸಮಸ್ಯೆಯನ್ನು ಮುಂದೆ ಎದುರಿಸುವ ಸನ್ನಿವೇಶವಿದೆ.

ದೆಹಲಿ//ಭಾರತದ ರಾಜಧಾನಿ ದೆಹಲಿ ಬರೀ ಪರಿಸರ ಮಾಲಿನ್ಯ ನಗರಿಯಲ್ಲ. ನೀರಿನ ಸಮಸ್ಯೆಯೂ ಆಗಾಗ ಕೆಲವು ಕಡೆ ಕಾಡುತ್ತಲೇ ಇರುತ್ತದೆ. ಈ ಬಾರಿ ಯಮುನಾ ನದಿ ಉಕ್ಕಿ ಹರಿದು ದೆಹಲಿ ನಗರ ದ್ವೀಪವಾದರೂ ನೀರಿನ ಸಮಸ್ಯೆಯೂ ಇಲ್ಲಿದೆ. ಈಗಲೂ ಮಾಲಿನ್ಯಗೊಂಡ ಯಮುನಾ ನದಿಯಿಂದಲೇ ನೀರನ್ನು ಶುದ್ದೀಕರಿಸಿ ದೆಹಲಿ ಜನರಿಗೆ ನೀಡಲಾಗುತ್ತಿದೆ. ದೆಹಲಿಯ ಹಲವಾರು ಬಡಾವಣೆಗಳಲ್ಲಿ ನೀರಿನ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ದೆಹಲಿ ಸರ್ಕಾರ ಸಮಸ್ಯೆ ಬಿಗಡಾಯಿಸದಂತೆ ಹೆಣಗಾಡುತ್ತಿದೆ. 
icon

(1 / 6)

ಮುಂಬೈ //ಮುಂಬೈ ಮಹಾನಗರದಲ್ಲೂ ನೀರಿನ ಬೇಡಿಕೆ ಅಧಿಕವಾಗಿದೆ.  ಅನಿಮಿಯತ ಮಳೆ, ನೀರಿನ ಮೂಲಗಳು ಹಾಳಾಗಿರುವುದರಿಂದ ಮುಂಬೈ ಮಹಾ ನಗರದಲ್ಲೂ ನೀರಿನ ಸಮಸ್ಯೆ ನಿಧಾನವಾಗಿ ಕಾಣತೊಡಗಿದೆ. ಈಗಾಗಲೇ ಬೃಹತ್‌ ಮುಂಬೈ ಮಹಾನಗರ ಪಾಲಿಕೆ ಆಗಾಗ ನೀರು ಕಡಿತದಂತಹ ಅನಿವಾರ್ಯ ಸನ್ನಿವೇಶಕ್ಕೂ ಮುಂದಾಗಿದೆ. ನೀರಿನ ನಿರ್ವಹಣೆ ವಿಚಾರದಲ್ಲಿ 1.25 ಕೋಟಿ ಜನಸಂಖ್ಯೆಯ ಬೇಡಿಕೆ ನೀಗಿಸಲು ಹೆಣಗಾಡುತ್ತಿದೆ. 
icon

(2 / 6)

ಚೆನ್ನೈ//ದಕ್ಷಿಣ ಭಾರತದ ಚೆನ್ನೈ ಮಹಾನಗರದಲ್ಲಿ ಈ ಬಾರಿ ದಾಖಲೆಯ ಮಳೆ ಸುರಿಯಿತು. ಅದೂ 1,400 ಮಿ.ಮಿ. ನಷ್ಟು ಮಳೆಯಾದರೂ ಚೆನ್ನೈನಲ್ಲೂ ನೀರಿನ ಸಮಸ್ಯೆಯಿದೆ.  ಐದು ವರ್ಷದ ಹಿಂದೆ ಚೆನ್ನೈನಲ್ಲಿ ನೀರಿನ ಸಮಸ್ಯೆ ಮಿತಿ ಮೀರಿತ್ತು. ಚೆನ್ನೈನ ಜನಸಂಖ್ಯೆಗೆ ಅನುಗುಣವಾಗಿ ನೀರು ಒದಗಿಸುವುದು ಸವಾಲೇ.ನಗರೀಕರಣ ಹಾಗೂ ಕೈಗಾರಿಕಾಕರಣವು ನೀರಿನ ಸಮಸ್ಯೆಗೆ ಕೊಡುಗೆ ನೀಡಿದೆ. ಆದರೆ ಚೆನ್ನೈ ಬೃಹತ್‌ ಮಹಾನಗರ ಪಾಲಿಕೆಯು ನೀರಿನ ಸಮಸ್ಯೆಯಾಗದಂತೆ ನೋಡಿಕೊಳ್ಳಲು ಹೆಣಗಾಡುತ್ತಿದೆ.
icon

(3 / 6)

ಲಕ್ನೋ//ಉತ್ತರ ಪ್ರದೇಶದ ರಾಜಧಾನಿ ಲಕ್ನೋದ ನೀರಿನ ಪರಿಸ್ಥಿತಿಯೇನೂ ಭಿನ್ನವಾಗಿಲ್ಲ. ಈಗಾಗಲೇ ಪರಿಸರವಾದಿಗಳು ಲಕ್ನೋದ ನೀರಿನ ಪರಿಸ್ಥಿತಿ ಬಗ್ಗೆ ಆತಂಕವನ್ನು ಹೊರ ಹಾಕುತ್ತಲೇ ಇದ್ಧಾರೆ. ಈ ನಿಟ್ಟಿನಲ್ಲಿ ಲಕ್ನೋ ಮಹಾನಗರ ಪಾಲಿಕೆ ಕೂಡ ಮುಂದಿನ ದಶಕವನ್ನು ಗುರಿಯಾಗಿಟ್ಟುಕೊಂಡು ನೀರಿನ ಯೋಜನೆ ರೂಪಿಸುತ್ತಿದೆ. ಮಳೆ ನೀರು ಬಳಕೆ, ಅಂತರ್ಜಲ ವೃದ್ದಿಯಂತ ಹತ್ತು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಭಾಕ್ರಾ ನಂಗಲ್‌ ಜಲಾಶಯದಿಂದಲೇ ಈ ನಗರಕ್ಕೆ ನೀರು ಬರುತ್ತಿದ್ದು, ಪರ್ಯಾಯಗಳ ಯೋಜನೆಗಳೂ ಆಗುತ್ತಿವೆ.
icon

(4 / 6)

ಜೈಪುರ//ರಾಜಸ್ಥಾನದ ರಾಜಧಾನಿ, ದೇಶದ ಪಿಂಕ್‌ ಸಿಟಿ ಎಂದು ಕರೆಯಿಸಿಕೊಳ್ಳುವ ಜೈಪುರದಲ್ಲೂ ನೀರಿನ ಸಮಸ್ಯೆ ಹೆಚ್ಚಿದೆ. ಇಲ್ಲಿಯೂ ನೀರಿನ ಬೇಡಿಕೆ ಅಧಿಕವಾಗಿದೆ. ಪ್ರವಾಸಿ ಹಾಗೂ ಪಾರಂಪರಿಕ ನಗರಿಯಾಗಿರುವ ಜೈಪುರಕ್ಕೆ ನೀರು ಒದಗಿಸುತಿದ್ದ ಮೂಲಗಳಲ್ಲಿ ವ್ಯತ್ಯಯವಾಗಿ ಹೊಸ ಮೂಲಗಳತ್ತ ಸ್ಥಳೀಯಾಡಳಿತ ಗಮನ ನೀಡುತ್ತಿದೆ. ಸದ್ಯ ಜೈಪುರ ನಗರವು ರಾಮಘರ್‌ ಜಲಾಶಯವನ್ನೇ ನೀರಿಗಾಗಿ ಅವಲಂಬಿಸಿದೆ.
icon

(5 / 6)

ಬಟಿಂಡ//ಪಂಜಾಬ್‌ನ ಬಟಿಂಡ ನಗರವೂ ಕೂಡ ನೀರಿನ ಸಮಸ್ಯೆಯನ್ನು ಎದುರಿಸಲು ಆರಂಭಿಸಿದೆ. ಈ ಭಾಗದಲ್ಲಿ ಕೃಷಿಗೆ ಹೆಚ್ಚಿನ ನೀರು ಬಳಕೆಯಾಗುತ್ತಿದೆ.  ಇರುವುದರಲ್ಲೇ ಕುಡಿಯುವ ನೀರಿಗೂ ಜಲಾಶಯದಿಂದ ಬಳಕೆ ಮಾಡಿಕೊಳ್ಳಬೇಕು. ಅದರಲ್ಲೂ ಅಂತರ್ಜಲವನ್ನು ಅತಿಯಾಗಿ ಬಳಕೆ ಮಾಡುತ್ತಿರುವುದು ಕೂಡ ಸಮಸ್ಯೆಯನ್ನು ತಂದೊಡ್ಡುತ್ತಿದೆ. ಈ ಕಾರಣದಿಂದ ಬಟಿಂಡ ಸ್ಥಳೀಯಾಡಳಿತವೂ ಕೂಡ ನೀರಿನ ಸಮಸ್ಯೆ ಹೆಚ್ಚದಂತೆ ಗಮನ ಹರಿಸುತ್ತಲೇ ಇದೆ.  
icon

(6 / 6)

ಇತರ ಗ್ಯಾಲರಿಗಳು